ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಬಾಹ್ಯಾಕಾಶದಿಂದ ಮಹಾಕುಂಭ 2025ರ ಅದ್ಭುತ ನೋಟವನ್ನು ಸೆರೆಹಿಡಿದಿದೆ
Posted On:
27 JAN 2025 5:46PM by PIB Bengaluru
ವಿಶ್ವದ ಅತಿದೊಡ್ಡ ಧಾರ್ಮಿಕ ಮತ್ತು ಮಾನವ ಕೂಟವಾದ ಮಹಾಕುಂಭ 2025 ಅನ್ನು ನೆಲದಿಂದ ಮಾತ್ರವಲ್ಲದೇ ಬಾಹ್ಯಾಕಾಶದಿಂದಲೂ ಸೆರೆಹಿಡಿಯಲಾಗುತ್ತಿದೆ. ಭಾನುವಾರ ರಾತ್ರಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಮಹಾಕುಂಭದ ವಿಸ್ಮಯಕಾರಿ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಈ ಚಿತ್ರಗಳು ಕುಂಭ ಮೇಳದ ಮೋಡಿಮಾಡುವ, ಆಕರ್ಷಕ ನೋಟವನ್ನು ಪ್ರದರ್ಶಿಸಿದೆ. ಗಂಗಾ ನದಿಯ ದಡದಲ್ಲಿ ವಿಶ್ವದ ಅತಿದೊಡ್ಡ ಸಭೆಯು ದೀಪಗಳಿಂದ ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಗಗನಯಾತ್ರಿ ಡಾನ್ ಪೆಟ್ಟಿಟ್ ISS ನಿಂದ ತೆಗೆದ ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರಗಳು ಮಹಾ ಕುಂಭಮೇಳದ ದೀಪಾಲಂಕಾರದ ವೈಭವ ಮತ್ತು ಗಂಗಾ ನದಿಯ ದಡವನ್ನು ಒಂದು ಅನನ್ಯ ದೃಶ್ಯವಾಗಿ ಪರಿವರ್ತಿಸುವ ಬೃಹತ್ ಜನಸಮೂಹವನ್ನು ತೋರಿಸುತ್ತವೆ. ಸೆರೆಹಿಡಿಯಲಾದ ಚಿತ್ರಗಳು ಭೂಮಿಯ ಮೇಲಿನ ಈ ಧಾರ್ಮಿಕ ಮೇಳದ ವ್ಯಾಪ್ತಿಯನ್ನು ಪ್ರತಿಬಿಂಬಿಸಿದೆ.
ಮಹಾಕುಂಭವು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿಯವರೆಗೆ 13 ಕೋಟಿಗೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಈ ಆನಂದದಾಯಕ ಮತ್ತು ಧಾರ್ಮಿಕ ಕ್ಷಣವನ್ನು ಅನುಭವಿಸಿದ್ದಾರೆ. ಇಲ್ಲಿಂದ ಹೊರಬರುವ ಚಿತ್ರಗಳು ಇಡೀ ಜಗತ್ತನ್ನು ಬೆರಗುಗೊಳಿಸಿವೆ. ಈ ಬಾಹ್ಯಾಕಾಶ ಫೋಟೋಗಳು ವಿಶ್ವಾದ್ಯಂತ ಜನರ ಗಮನವನ್ನು ಮಹಾಕುಂಭದತ್ತ ಸೆಳೆಯುವುದು ಖಚಿತ. ಡಾನ್ ಪೆಟ್ಟಿಟ್, ಚಿತ್ರಗಳನ್ನು ಹಂಚಿಕೊಳ್ಳುವಾಗ, 2025 ರ ಮಹಾ ಕುಂಭಮೇಳದ ಅದ್ಭುತ ನೋಟವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸೆರೆಹಿಡಿಯಲಾಗಿದೆ ಎಂದು ಬರೆದಿದ್ದಾರೆ. ಪ್ರಪಂಚದ ಅತಿ ದೊಡ್ಡ ಮಹಾ ಕುಂಭ ಮೇಳ ಗಂಗಾ ನದಿಯ ದಡದಲ್ಲಿ ಹೊಳೆಯುತ್ತಿದೆ.
ಡೊನಾಲ್ಡ್ ರಾಯ್ ಪೆಟ್ಟಿಟ್
ಅಮೆರಿಕನ್ ಗಗನಯಾತ್ರಿ ಮತ್ತು ಕೆಮಿಕಲ್ ಇಂಜಿನಿಯರ್ ಡೊನಾಲ್ಡ್ ರಾಯ್ ಪೆಟ್ಟಿಟ್ ಅವರು ಖಗೋಳ ಛಾಯಾಗ್ರಹಣ ಮತ್ತು ಬಾಹ್ಯಾಕಾಶದಲ್ಲಿನ ನಾವೀನ್ಯತೆಗಳಲ್ಲಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಪೆಟ್ಟಿಟ್ ಅವರು ಬಾಹ್ಯಾಕಾಶದಲ್ಲಿ ಮಾಡಿದ ಮೊದಲ ಪೇಟೆಂಟ್ ವಸ್ತುವಾದ 'ಝೀರೋ-ಜಿ ಕಪ್' ನ ಸಂಶೋಧಕರಾಗಿದ್ದಾರೆ. 69 ವರ್ಷದ ಡೊನಾಲ್ಡ್ ರಾಯ್ ಪೆಟ್ಟಿಟ್, ನಾಸಾದ ಅತ್ಯಂತ ಹಳೆಯ ಹಿರಿಯ ಮತ್ತು ಸಕ್ರಿಯ ಗಗನಯಾತ್ರಿಯಾಗಿದ್ದಾರೆ.
*****
(Release ID: 2096827)
Visitor Counter : 25