ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಸ್ವಾಮಿತ್ವ” ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು
Posted On:
18 JAN 2025 5:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 230 ಕ್ಕೂ ಹೆಚ್ಚು ಜಿಲ್ಲೆಗಳ ಸುಮಾರು 50000 ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ “ಸ್ವಾಮಿತ್ವ”(ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ನಕ್ಷೆ ರಚನೆ) ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ವಿಡಿಯೊ ಸಮಾವೇಶ ಮೂಲಕ ವಿತರಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ, “ಸ್ವಾಮಿತ್ವ” ಯೋಜನೆಗೆ ಸಂಬಂಧಿಸಿದ ಅನುಭವಗಳನ್ನು ತಿಳಿದುಕೊಳ್ಳಲು ಅವರು ಐದು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಮಧ್ಯಪ್ರದೇಶದ ಸೆಹೋರ್ ನ “ಸ್ವಾಮಿತ್ವ” ಫಲಾನುಭವಿ ಶ್ರೀ ಮನೋಹರ್ ಮೇವಾಡ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, “ಸ್ವಾಮಿತ್ವ” ಯೋಜನೆಗೆ ಸಂಬಂಧಿಸಿದ ತಮ್ಮ ಅನುಭವವನ್ನು ಹಂಚಿಕೊಳ್ಳಲು ಅವರನ್ನು ಕೇಳಿಕೊಂಡರು. “ಆಸ್ತಿ ದಾಖಲೆಗಳನ್ನು ಬಳಸಿ ಪಡೆದ ಸಾಲವು ಅವರಿಗೆ ಹೇಗೆ ಸಹಾಯ ಮಾಡಿದೆ ಮತ್ತು ಅದು ಅವರ ಜೀವನದಲ್ಲಿ ಯಾವ ಬದಲಾವಣೆಗಳನ್ನು ತಂದಿದೆ” ಎಂದು “ಸ್ವಾಮಿತ್ವ” ಫಲಾನುಭವಿ ಶ್ರೀ ಮನೋಹರ್ ಮೇವಾಡ ಅವರನ್ನು ಪ್ರಧಾನಮಂತ್ರಿಯವರು ಕೇಳಿದರು. “ತಮ್ಮ ಡೈರಿ ಫಾರ್ಮ್‌ಗಾಗಿ 10 ಲಕ್ಷ ಸಾಲವನ್ನು ತೆಗೆದುಕೊಂಡರು, ಅದು ವ್ಯವಹಾರವನ್ನು ಪ್ರಾರಂಭಿಸಲು ಸಹಾಯ ಮಾಡಿತು” ಎಂದು ಶ್ರೀ ಮನೋಹರ್ ಅವರು ವಿವರಿಸಿದರು. ಅವರು, ಅವರ ಮಕ್ಕಳು ಮತ್ತು ಅವರ ಪತ್ನಿ ಕೂಡ ಡೈರಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತದ್ದಾರೆ, ಮತ್ತು ಅದು ಹೆಚ್ಚುವರಿ ಆದಾಯವನ್ನು ತಂದಿದೆ ಎಂದು ಅವರು ಪ್ರಯೋಜನವನ್ನು ಉಲ್ಲೇಖಿಸಿ ಹೇಳಿದರು. “ಆಸ್ತಿ ದಾಖಲೆಗಳನ್ನು ಹೊಂದಿರುವ ಕಾರಣದಿಂದಾಗಿ ಬ್ಯಾಂಕಿನಿಂದ ಸಾಲ ಪಡೆಯುವುದು ಸುಲಭವಾಯಿತು” ಎಂದು ಶ್ರೀ ಮನೋಹರ್ ಅವರು ವಿವರಿಸಿದರು. “ಕೇಂದ್ರ ಸರ್ಕಾರದ ಯೋಜನೆಗಳು ಜನರ ಜೀವನದಲ್ಲಿನ ಕಷ್ಟಗಳನ್ನು ಕಡಿಮೆ ಮಾಡಿವೆ” ಎಂದು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಹೇಳಿದರು. ಸ್ವಾಮಿತ್ವ ಯೋಜನೆಯು ಲಕ್ಷಾಂತರ ಕುಟುಂಬಗಳ ಆದಾಯವನ್ನು ಹೆಚ್ಚಿಸಿರುವುದನ್ನು ನೋಡಿ ಪ್ರಧಾನಮಂತ್ರಿಯವರು ಸಂತೋಷ ವ್ಯಕ್ತಪಡಿಸಿದರು. ಪ್ರತಿಯೊಬ್ಬ ನಾಗರಿಕನು ಹೆಮ್ಮೆಯಿಂದ ತಲೆ ಎತ್ತಿ ಜೀವನ ಸಾಗಿಸುವಂತೆ ಮತ್ತು ಅವರ ಜೀವನದಲ್ಲಿ ನೆಮ್ಮದಿಯನ್ನು ಅನುಭವಿಸುವಂತೆ ಮಾಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಸ್ವಾಮಿತ್ವ ಯೋಜನೆಯು ಈ ದೃಷ್ಟಿಕೋನದ ವಿಸ್ತರಣೆಯಾಗಿದೆ “ ಎಂದು ಪ್ರಧಾನಮಂತ್ರಿಯವರು ಹೇಳಿದರು.
ನಂತರ, ರಾಜಸ್ಥಾನದ ಶ್ರೀ ಗಂಗಾನಗರದ “ಸ್ವಾಮಿತ್ವ”ಯೋಜನೆಯ ಫಲಾನುಭವಿ ಶ್ರೀಮತಿ ರಚನಾ ಅವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಯೋಜನೆಯ ಅನುಭವದ ಬಗ್ಗೆ ಪ್ರಧಾನಮಂತ್ರಿಯವರು ಕೇಳಿದಾಗ, “ಅವರು ಕಳೆದ 20 ವರ್ಷಗಳಿಂದ ಯಾವುದೇ ಆಸ್ತಿ ದಾಖಲೆಗಳಿಲ್ಲದೆ ಅವರ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ” ಎಂದು “ಸ್ವಾಮಿತ್ವ” ಯೋಜನೆಯ ಫಲಾನುಭವಿ ಶ್ರೀಮತಿ ರಚನಾ ಅವರು ಹೇಳಿದರು. ಸ್ವಾಮಿತ್ವ ಯೋಜನೆಯಡಿಯಲ್ಲಿ 7.45 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡು ಅಂಗಡಿಯನ್ನು ಪ್ರಾರಂಭಿಸಿದ್ದೇನೆ, ಅದು ಹೆಚ್ಚುವರಿ ಆದಾಯವನ್ನು ತಂದಿದೆ ಎಂದು ಅವರು “ಸ್ವಾಮಿತ್ವ” ಯೋಜನೆಯನ್ನು ಉಲ್ಲೇಖಿಸಿದರು. ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ, “ಸುಮಾರು 20 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಆಸ್ತಿ ದಾಖಲೆಗಳನ್ನು ಪಡೆಯುತ್ತೇನೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ” ಎಂದು ಶ್ರೀಮತಿ ರಚನಾ ಅವರು ಹೇಳಿದರು. “ಸ್ವಾಮಿತ್ವ” ಯೋಜನೆಯಡಿಯಲ್ಲಿ ಪಡೆದ ಇತರ ಪ್ರಯೋಜನಗಳ ಬಗ್ಗೆ ವಿವರಿಸಲು ಕೇಳಿಕೊಂಡಾಗ, ಅವರು ಸ್ವಚ್ಛ ಭಾರತ ಯೋಜನೆಯ ಫಲಾನುಭವಿಯಾಗಿದ್ದು, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ 8 ಲಕ್ಷ ರೂ. ಸಾಲವನ್ನು ಪಡೆದಿದ್ದಾರೆ ಮತ್ತು ಆಜೀವಿಕ ಯೋಜನೆಯಡಿಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ ಮತ್ತು ಕುಟುಂಬವು ಆಯುಷ್ಮಾನ್ ಯೋಜನೆಯ ಲಾಭವನ್ನು ಕೂಡಾ ಪಡೆದುಕೊಂಡಿದ್ದಾರೆ ಎಂದು “ಸ್ವಾಮಿತ್ವ” ಯೋಜನೆಯ ಫಲಾನುಭವಿ ಶ್ರೀಮತಿ ರಚನಾ ಅವರು ತಿಳಿಸಿದರು. ಅವರು ತಮ್ಮ ಮಗಳನ್ನು ಆಸ್ಟ್ರೇಲಿಯಾಕ್ಕೆ ಉನ್ನತ ಶಿಕ್ಷಣಕ್ಕಾಗಿ ಕಳುಹಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರು ಅವರಿಗೆ ಶುಭ ಹಾರೈಸಿದರು ಮತ್ತು ಅವರ ಮಗಳ ಕನಸುಗಳು ನನಸಾಗಲಿ ಎಂದು ಹಾರೈಸಿದರು. ಸ್ವಾಮಿತ್ವ ಯೋಜನೆಯು ಕೇವಲ ಮೂಲಭೂತ ಅಗತ್ಯಗಳನ್ನು ಪೂರೈಸುವುದಲ್ಲದೆ, ನಾಗರಿಕರ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡುವ ಮೂಲಕ ಸಬಲೀಕರಣಗೊಳಿಸುತ್ತಿದೆ ಎಂಬ ಭಾವನೆಯನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸುತ್ತಾ “ಸ್ವಾಮಿತ್ವ” ಯೋಜನೆಯ ಫಲಾನುಭವಿ ಶ್ರೀಮತಿ ರಚನಾ ಅವರ ಸಾಧನೆಯನ್ನು ಶ್ಲಾಘಿಸಿದರು. ಯಾವುದೇ ಯೋಜನೆಯ ನಿಜವಾದ ಯಶಸ್ಸು ಜನರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಅವರನ್ನು ಬಲಪಡಿಸುವ ಸಾಮರ್ಥ್ಯದಲ್ಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ತಮ್ಮ ಕಥೆಯನ್ನು ಹಂಚಿಕೊಂಡಿದ್ದಕ್ಕಾಗಿ ಶ್ರೀಮತಿ ರಚನಾ ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು ಮತ್ತು ಸರ್ಕಾರವು ಒದಗಿಸಿದ ಅವಕಾಶಗಳಿಂದ ಪ್ರಯೋಜನ ಪಡೆಯುವಂತೆ ಇತರ ಗ್ರಾಮಸ್ಥರನ್ನು ಪ್ರೋತ್ಸಾಹಿಸಿ ಪ್ರೇರೇಪಿಸಿದರು.
ನಂತರ ಶ್ರೀ ಮೋದಿ ಅವರು, ಮಹಾರಾಷ್ಟ್ರದ ನಾಗ್ಪುರದ “ಸ್ವಾಮಿತ್ವ” ಫಲಾನುಭವಿ ಶ್ರೀ ರೋಶನ್ ಸಂಭಾ ಪಾಟೀಲ್ ಅವರೊಂದಿಗೆ ಸಂವಹನ ನಡೆಸಿದರು. ಅವರು ಕಾರ್ಡ್ ಅನ್ನು ಹೇಗೆ ಪಡೆದರು, ಅದು ಅವರಿಗೆ ಹೇಗೆ ಸಹಾಯ ಮಾಡಿತು ಮತ್ತು ಅದರಿಂದ ಅವರು ಯಾವ ಪ್ರಯೋಜನಗಳನ್ನು ಗಳಿಸಿದ್ದಾರೆ ಎಂಬುದನ್ನು ವಿವರಿಸಲು ಶ್ರೀ ರೋಶನ್ ಅವರನ್ನು ಪ್ರಧಾನಮಂತ್ರಿಯವರು ಕೇಳಿಕೋಡರು. ಗ್ರಾಮದಲ್ಲಿ ತಮ್ಮ ಹಳೆಯ ದೊಡ್ಡ ಮನೆಯನ್ನು ಹೊಂದಿದ್ದಾರೆಂದು ಪ್ರಧಾನಮಂತ್ರಿಯವರಿಗೆ ಶ್ರೀ ರೋಷನ್ ಅವರು ತಿಳಿಸಿದರು, ಮತ್ತು ಆಸ್ತಿ ಕಾರ್ಡ್ ಅವರಿಗೆ 9 ಲಕ್ಷ ರೂಪಾಯಿ ಸಾಲವನ್ನು ಪಡೆಯಲು ಸಹಾಯ ಮಾಡಿತು, ಅದನ್ನು ಅವರು ತಮ್ಮ ಮನೆಯನ್ನು ಪುನರ್ನಿರ್ಮಿಸಲು ಮತ್ತು ಕೃಷಿಗಾಗಿ ನೀರಾವರಿಯನ್ನು ಸುಧಾರಿಸಲು ಬಳಸಿದರು. ಆದ ಕಾರಣ ಅವರ ಆದಾಯ ಮತ್ತು ಬೆಳೆ ಇಳುವರಿಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ ಎಂದು ಶ್ರೀ ರೋಷನ್ ಅವರು ಪ್ರಧಾನಮಂತ್ರಿಯವರಿಗೆ ಉತ್ತರಿಸುತ್ತಾ ಹೇಳಿದರು. ಇದು ಅವರ ಜೀವನದ ಮೇಲೆ ಸ್ವಾಮಿತ್ವ ಯೋಜನೆಯ ಸಕಾರಾತ್ಮಕ ಪರಿಣಾಮವನ್ನು ಎತ್ತಿ ತೋರಿಸುತ್ತದೆ. “ಸ್ವಾಮಿತ್ವ” ಕಾರ್ಡ್‌ನೊಂದಿಗೆ ಸಾಲವನ್ನು ಪಡೆಯುವುದು ಸುಲಭವೇ? ಎಂಬ ಬಗ್ಗೆ ಪ್ರಧಾನಮಂತ್ರಿಯವರ ವಿಚಾರಣೆಗೆ, ದಾಖಲೆಗಳೊಂದಿಗೆ ಬಹಳಷ್ಟು ತೊಂದರೆಗಳಿವೆ ಮತ್ತು ಸಾಲವನ್ನು ಪಡೆಯುವುದು ಕಠಿಣ ಕೆಲಸವಾಗಿದೆ. ಸಾಲವನ್ನು ಪಡೆಯಲು ಇತರ ದಾಖಲೆಗಳ ಅಗತ್ಯವಿಲ್ಲದೆ ಕೇವಲ ಸ್ವಾಮಿತ್ವ ಕಾರ್ಡ್ ಮಾತ್ರ ಸಾಕು ಎಂದು ಎಂದು ಶ್ರೀ ರೋಷನ್ ಅವರು ಹೇಳಿದರು. ಅವರು ತರಕಾರಿಗಳು ಮತ್ತು ಮೂರು ಬೆಳೆಗಳನ್ನು ಬೆಳೆಯುತ್ತಾರೆ, ಇದು ಅವರಿಗೆ ಲಾಭವನ್ನು ನೀಡುತ್ತದೆ, ಸಾಲವನ್ನು ಸುಲಭವಾಗಿ ಮರುಪಾವತಿಸಲು ಅನುವು ಮಾಡಿಕೊಡುತ್ತದೆ ಎಂದು ಶ್ರೀ ರೋಷನ್, ಅವರು ಹೇಳುತ್ತಾ, “ಸ್ವಾಮಿತ್ವ” ಯೋಜನೆಗಾಗಿ ಶ್ರೀ ಮೋದಿಯವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಇತರ ಯೋಜನೆಗಳಿಂದ ಪ್ರಯೋಜನಗಳ ಕುರಿತು ಪ್ರಧಾನಮಂತ್ರಿಯವರು ಶ್ರೀ ರೋಷನ್ ಅವರಲ್ಲಿ ವಿಚಾರಿಸಿದಾಗ, ಶ್ರೀ ರೋಷನ್ ಅವರು ಪ್ರಧಾನಮಂತ್ರಿ ಉಜ್ವಲ ಯೋಜನೆ, ಪ್ರಧಾನಮಂತ್ರಿ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯ ಫಲಾನುಭವಿಯಾಗಿದ್ದಾರೆ ಎಂದು ಹೇಳಿದರು. ತಮ್ಮ ಗ್ರಾಮದ ಅನೇಕ ಜನರು ಸ್ವಾಮಿತ್ವ ಯೋಜನೆಯಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು ತಮ್ಮದೇ ಆದ ಸಣ್ಣ ವ್ಯವಹಾರಗಳು ಮತ್ತು ಕೃಷಿ ಮಾಡಲು ಸುಲಭವಾಗಿ ಸಾಲ ಪಡೆಯುತ್ತಿದ್ದಾರೆ ಎಂದು ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ಸ್ವಾಮಿತ್ವ ಯೋಜನೆ ಜನರಿಗೆ ಎಷ್ಟು ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಬಹಳ ಸಂತಸವಾಗುತ್ತಿದೆ, ಇದು ಹೃದಯಸ್ಪರ್ಶಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಜನರು ತಮ್ಮ ಮನೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಸಾಲದ ಹಣವನ್ನು ಕೃಷಿಗೆ ಬಳಸುತ್ತಿದ್ದಾರೆ. ತಲೆಯ ಮೇಲೆ ಸೂರು ಹೊಂದಿರುವುದು ಹಳ್ಳಿಗಳಲ್ಲಿ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ಜನರು ಈಗ ತಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಸಮೃದ್ಧಿಯತ್ತ ಗಮನಹರಿಸಬಹುದಾಗಿದೆ. ಈ ಚಿಂತೆಗಳಿಂದ ಮುಕ್ತರಾಗಿರುವುದು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.
ಒಡಿಶಾದ ರಾಯಗಢದ “ಸ್ವಾಮಿತ್ವ” ಫಲಾನುಭವಿ ಶ್ರೀಮತಿ ಗಜೇಂದ್ರ ಸಂಗೀತ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, “ಸ್ವಾಮಿತ್ವ” ಯೋಜನೆಗೆ ಸಂಬಂಧಿಸಿದ ಅನುಭವವನ್ನು ಹಂಚಿಕೊಳ್ಳಲು ಅವರನ್ನು ಕೇಳಿಕೊಂಡರು. ಕಳೆದ 60 ವರ್ಷಗಳಿಂದ ಸರಿಯಾದ ದಾಖಲೆಗಳಿಲ್ಲದ ಕಾರಣ ಸಮಸ್ಯೆಗಳಿದ್ದವು, ಈಗ ದೊಡ್ಡ ಬದಲಾವಣೆಯಾಗಿದೆ ಮತ್ತು ಈಗ “ಸ್ವಾಮಿತ್ವ” ಕಾರ್ಡ್‌ಗಳೊಂದಿಗೆ ಅವರ ಆತ್ಮವಿಶ್ವಾಸ ಹೆಚ್ಚಿದೆ ಮತ್ತು ೀ ಯೋಜನೆಯಿಂದ ಅವರು ಬಹಳಷ್ಟು ಸಂತೋಷಪಟ್ಟಿದ್ದಾರೆ ಎಂದು ಶ್ರೀಮತಿ ಗಜೇಂದ್ರ ಸಂಗೀತ ಅವರು ಹೇಳಿದರು. ಸಾಲ ತೆಗೆದುಕೊಂಡು ತಮ್ಮ ಟೈಲರಿಂಗ್ ವ್ಯವಹಾರವನ್ನು ವಿಸ್ತರಿಸಲು ಅವರು ಬಯಸಿದ್ದಾರೆ ಮತ್ತು ಪ್ರಧಾನಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಕೆಲಸ ಮತ್ತು ಮನೆಯ ವಿಸ್ತರಣೆಗೆ ಶುಭ ಹಾರೈಸಿದ ಶ್ರೀ ಮೋದಿ ಅವರು, ಆಸ್ತಿ ದಾಖಲೆಗಳನ್ನು ಒದಗಿಸುವ ಮೂಲಕ ಸ್ವಾಮಿತ್ವ ಯೋಜನೆಯು ಒಂದು ಪ್ರಮುಖ ಕಳವಳವನ್ನು ನಿವಾರಿಸಿದೆ ಎಂದು ಆಸ್ತಿ ದಾಖಲೆ ರಹಿತ ಜೀವನದ ಕ್ಷಿಷ್ಟತೆಯನ್ನು ವಿವರಿಸಿದರು. ಅವರು ಸ್ವಸಹಾಯ ಗುಂಪಿನ (ಎಸ್.ಹೆಚ್.ಜಿ.) ಸದಸ್ಯರೂ ಆಗಿದ್ದರು ಮತ್ತು ಸರ್ಕಾರವು ಮಹಿಳಾ ಸ್ವಸಹಾಯ ಗುಂಪನ್ನು (ಎಸ್.ಹೆಚ್.ಜಿ.) ಬೆಂಬಲಿಸುವುದನ್ನು ಮುಂದುವರೆಸಿದೆ. ಸ್ವಾಮಿತ್ವ ಯೋಜನೆಯು ಇಡೀ ಗ್ರಾಮಗಳನ್ನು ಪರಿವರ್ತಿಸಲು ಸಜ್ಜಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಸಂಭಾದ “ಸ್ವಾಮಿತ್ವ” ಫಲಾನುಭವಿ ಶ್ರೀ ವರೀಂದರ್ ಕುಮಾರ್ ಅವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಈ ಸ್ವಾಮಿತ್ವ ಯೋಜನೆಯ ಅನುಭವದ ಬಗ್ಗೆ ಪ್ರಧಾನಮಂತ್ರಿಯವರು ಕೇಳಿದಾಗ, ತಾವು ಒಬ್ಬ ರೈತ ಎಂದು ಮತ್ತು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಆಸ್ತಿ ಕಾರ್ಡ್ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಶ್ರೀ ವರೀಂದರ್ ಕುಮಾರ್ ಅವರು ಹೇಳಿದರು. ಹಲವು ತಲೆಮಾರುಗಳಿಂದ ತಮ್ಮ ಭೂಮಿಯಲ್ಲಿ ವಾಸಿಸುತ್ತಿದ್ದೇವೆ ಮತ್ತು ಈಗ ದಾಖಲೆಗಳು ಸಿಕ್ಕಿರುವುದು ತಮಗೆ ಹೆಮ್ಮೆ ತಂದಿದೆ ಎಂದು ಶ್ರೀ ವರೀಂದರ್ ಕುಮಾರ್ ಅವರು ಹೇಳಿದರು. ಪ್ರಧಾನಮಂತ್ರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ವರೀಂದರ್ ಕುಮಾರ್ ಅವರು, ” 100 ವರ್ಷಗಳಿಗೂ ಹೆಚ್ಚು ಕಾಲ ಗ್ರಾಮದಲ್ಲಿ ವಾಸಿಸುತ್ತಿದ್ದರೂ ಕೂಡಾ ತಮ್ಮ ಗ್ರಾಮದಲ್ಲಿ ಯಾರ ಬಳಿಯೂ ಯಾವುದೇ ದಾಖಲೆಗಳಿಲ್ಲ” ಎಂದು ತಿಳಿಸಿದರು. “ತಾವು ಪಡೆದ ಸ್ವಾಮಿತ್ವ ಆಸ್ತಿ ಕಾರ್ಡ್ ತಮ್ಮ ಭೂ ವಿವಾದವನ್ನು ಪರಿಹರಿಸಲು ಸಹಾಯ ಮಾಡಿತು ಮತ್ತು ಈಗ ಅವರು ಭೂಮಿಯನ್ನು ಅಡಮಾನವಿಟ್ಟು ಬ್ಯಾಂಕಿನಿಂದ ಸಾಲ ಪಡೆಯಬಹುದು, ಇದು ಮನೆ ದುರಸ್ತಿಗೆ ಮತ್ತು ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು. ಸ್ವಾಮಿತ್ವ ಯೋಜನೆಯಡಿಯಲ್ಲಿ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ವಿಚಾರಿಸಿದಾಗ, ತಮ್ಮ ಗ್ರಾಮವು ಸ್ವೀಕರಿಸಿದ ಆಸ್ತಿ ಕಾರ್ಡ್‌ಗಳು ಎಲ್ಲರಿಗೂ ಮಾಲೀಕತ್ವದ ಹಕ್ಕುಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿವೆ ಮತ್ತು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಅನೇಕ ವಿವಾದಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಹರಿಸಲಾಗಿದೆ ಎಂದು ಅವರು ಹೇಳಿದರು. ಆದ್ದರಿಂದ, ಇನ್ನು ಮುಂದೆ ಗ್ರಾಮಸ್ಥರು ಸಾಲ ಪಡೆಯಲು ತಮ್ಮ ಭೂಮಿ ಮತ್ತು ಆಸ್ತಿಯನ್ನು ಅಡಮಾನ ಇಡಬಹುದು ಎಂದು ಅವರು ಹೇಳಿದರು. ಅವರು ಗ್ರಾಮಸ್ಥರ ಪರವಾಗಿ ಪ್ರಧಾನಮಂತ್ರಿಗೆ ಪ್ರಾಮಾಣಿಕವಾದ ತಮ್ಮ ಧನ್ಯವಾದಗಳನ್ನು ಅರ್ಪಿಸಿದರು. ಎಲ್ಲರೊಂದಿಗೆ ನೇರವಾಗಿ ಮಾತನಾಡುವುದು ಸಂತೋಷದ ವಿಷಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಜನರು ಸ್ವಾಮಿತ್ವ ಯೋಜನೆ ಕಾರ್ಡ್ ಅನ್ನು ಕೇವಲ ದಾಖಲೆಯಾಗಿ ಪರಿಗಣಿಸದೆ, ಪ್ರಗತಿಗೆ ಒಂದು ಸಾಧನವಾಗಿಯೂ ಬಳಸುತ್ತಿದ್ದಾರೆ ಎಂಬುದನ್ನು ಅರಿತು ಪ್ರಧಾನಮಂತ್ರಿಯವರು ಬಹಳಷ್ಟು ಸಂತೋಷ ವ್ಯಕ್ತಪಡಿಸಿದರು. “ಸ್ವಾಮಿತ್ವ” ಉಪಕ್ರಮವು ಫಲಾನುಭವಿಗಳ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
*****
(Release ID: 2094159)
Visitor Counter : 22
Read this release in:
Malayalam
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Telugu