ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜನವರಿ 9 ರಿಂದ 10 ರವರೆಗೆ ಮೇಘಾಲಯ ಮತ್ತು ಒಡಿಶಾಕ್ಕೆ ಭೇಟಿ ನೀಡಲಿರುವ ಭಾರತದ ರಾಷ್ಟ್ರಪತಿ

Posted On: 08 JAN 2025 4:56PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಜನವರಿ 9 ರಿಂದ 10, 2025 ರವರೆಗೆ ಮೇಘಾಲಯ ಮತ್ತು ಒಡಿಶಾ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.

ಜನವರಿ 9, 2025 ರಂದು, ಮೇಘಾಲಯದ ಉಮಿಯಂನಲ್ಲಿ ಈಶಾನ್ಯ ಗುಡ್ಡಗಾಡು ಪ್ರದೇಶಕ್ಕಾಗಿ ಮೀಸಲಿಟ್ಟ ಐಸಿಎಆರ್ ಸಂಶೋಧನಾ ಸಂಕೀರ್ಣದ ಸುವರ್ಣ ಮಹೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಯವರು ಭಾಗವಹಿಸಲಿದ್ದಾರೆ.

ಜನವರಿ 10, 2025 ರಂದು, ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 18 ನೇ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಯವರು ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

 

*****


(Release ID: 2091319) Visitor Counter : 7