ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ವರ್ಷಾಂತ್ಯದ ಪರಾಮರ್ಶೆ 2024- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪ್ರಧಾನ ಮಂತ್ರಿಗಳ ಉಜ್ವಲ್ ಯೋಜನೆಯಡಿ 10.33 ಕೋಟಿ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲಾಗಿದೆ
ಎಲ್ ಪಿ ಜಿ ಸಂಪರ್ಕಗಳ ಸಂಖ್ಯೆ 2014ರಲ್ಲಿ ಇದ್ದ 14.52 ಕೋಟಿಗಳಿಂದ 2024ರಲ್ಲಿ 32.83 ಕೋಟಿಗಳಿಗೆ ಹೆಚ್ಚಾಗಿದೆ, ಇದು 100%ಗಿಂತ ಹೆಚ್ಚಿನ ಬೆಳವಣಿಗೆಯಾಗಿದೆ
ದೇಶದಲ್ಲಿ ಕಾರ್ಯಾಚರಣೆ ಆಗಿರುವ ನೈಸರ್ಗಿಕ ಅನಿಲ ಪೈಪ್‌ಲೈನ್ ಉದ್ದವು 2014ರಲ್ಲಿ ಇದ್ದ 15,340 ಕಿಮೀಗಳಿಂದ 2024ರಲ್ಲಿ 24,945 ಕಿಮೀಗಳಿಗೆ ಹೆಚ್ಚಾಗಿದೆ
ಎಥೆನಾಲ್-20 ಪೆಟ್ರೋಲ್ ಅನ್ನು ದೇಶಾದ್ಯಂತ 17,400ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳಲ್ಲಿ ವಿತರಿಸಲಾಗುತ್ತಿದೆ
Posted On:
07 JAN 2025 1:24PM by PIB Bengaluru
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತೈಲ ಮತ್ತು ನೈಸರ್ಗಿಕ ಅನಿಲದ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ವಿತರಣೆ ಮತ್ತು ಮಾರುಕಟ್ಟೆ, ಆಮದು, ರಫ್ತು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆಗೆ ಸಂಬಂಧಿಸಿದೆ. ತೈಲ ಮತ್ತು ಅನಿಲವು ನಮ್ಮ ಆರ್ಥಿಕತೆಗೆ ಪ್ರಮುಖ ಆಮದು ಆಗಿರುವುದರಿಂದ, ಇಂಧನ ಪ್ರವೇಶ, ಇಂಧನ ದಕ್ಷತೆ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆಯಂತಹ ಆದ್ಯತೆಗಳನ್ನು ಪರಿಹರಿಸಲು ಎಲ್ಲಾ ದೇಶೀಯ ಪೆಟ್ರೋಲಿಯಂ ಸಂಪನ್ಮೂಲಗಳ ಉತ್ಪಾದನೆ ಮತ್ತು ಪರಿಶೋಧನೆ ಹೆಚ್ಚಿಸಲು ಸಚಿವಾಲಯವು ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ 1 ವರ್ಷದಲ್ಲಿ ಸಚಿವಾಲಯವು ಕೈಗೊಂಡ ವಿವಿಧ ಯೋಜನೆಗಳ ಪ್ರಗತಿಯನ್ನು ಈ ಕೆಳಗಿನಂತೆ ಹಂಚಿಕೊಳ್ಳಲಾಗಿದೆ:
1. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY)
• ಉಜ್ವಲಾ ಇಂದು 10.33 ಕೋಟಿ ಬಲಿಷ್ಠ ಕುಟುಂಬ ತಲುಪಿದೆ
• ಯೋಜನೆಯ ಪ್ರಾರಂಭದಿಂದ ಸುಮಾರು 222 ಕೋಟಿ ಎಲ್ ಪಿ ಜಿ ಸಿಲಿಂಡರ್ ಗಳನ್ನು ಪಿಎಂಯುವೈ ಮನೆಗಳಿಗೆ ತಲುಪಿಸಲಾಗಿದೆ. ಅಲ್ಲದೆ ನಿತ್ಯ ಸುಮಾರು 13 ಲಕ್ಷ ಸಿಲಿಂಡರ್ ಗಳನ್ನು ಒದಗಿಸಲಾಗುತ್ತಿದೆ.
• ಎಲ್ಲಾ ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಗೆ 300 ರೂ. ಉದ್ದೇಶಿತ ಸಬ್ಸಿಡಿ ನೀಡಲಾಗುತ್ತಿದೆ.
• ಸರ್ಕಾರದ ಪ್ರಯತ್ನಗಳು ಉಜ್ವಲ ಕುಟುಂಬಗಳಿಗೆ ಎಲ್ಪಿಜಿ ಬಳಕೆ ಹೆಚ್ಚಿಸಲು ಕಾರಣವಾಗಿವೆ. 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ತಲಾ ಬಳಕೆ, ಸಂಖ್ಯೆ 2019-20ರಲ್ಲಿ ಇದ್ದ 3.01ಯಿಂದ 2023-24ರಲ್ಲಿ 3.95 ಕ್ಕೆ ಏರಿದೆ. ಪ್ರಸ್ತುತ ವರ್ಷದಲ್ಲಿ, ಇದು ಇನ್ನೂ ಪ್ರಗತಿಯಲ್ಲಿದೆ, ಪಿಸಿಸಿ(ತಲಾವಾರು ಬಳಕೆ) 4.34 ತಲುಪಿದೆ (ಅಕ್ಟೋಬರ್ 2024ರ ವರೆಗೆ ಅನುಪಾತದ ಆಧಾರದ ಸಿಲಿಂಡರ್).
2. ಎಲ್ ಪಿ ಜಿ ವಿತರಣೆ
• 2014 ಏಪ್ರಿಲ್ ನಿಂದ ಎಲ್ ಪಿ ಜಿ ಸಂಪರ್ಕಗಳ ಸಂಖ್ಯೆ 14.52 ಕೋಟಿಗಳಿಂದ 32.83 ಕೋಟಿಗಳಿಗೆ (01.11.2024ರಂತೆ) ಅಂದರೆ 100%ಗಿಂತ ಹೆಚ್ಚಿನ ಬೆಳವಣಿಗೆಯಾಗಿದೆ.
• 01.11.2024ರಂತೆ, ಅಂದಾಜು. 30.43 ಕೋಟಿ ಎಲ್‌ಪಿಜಿ ಗ್ರಾಹಕರು ಪಹಲ್ ಯೋಜನೆಯಡಿ ದಾಖಲಾಗಿದ್ದಾರೆ. ಇಲ್ಲಿಯವರೆಗೆ, 'ಗಿವ್ ಇಟ್ ಅಪ್' ಅಭಿಯಾನದ ಅಡಿ 1.14 ಕೋಟಿಗೂ ಹೆಚ್ಚು ಗ್ರಾಹಕರು ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ತ್ಯಜಿಸಿದ್ದಾರೆ.
• 2014ರಿಂದ, 01.11.2024ರ ವರೆಗೆ ಎಲ್ ಪಿ ಜಿ ವಿತರಕರ ಸಂಖ್ಯೆ 13,896ರಿಂದ 25,532 ಕ್ಕೆ ಏರಿಕೆ ಆಗಿದ್ದು, ಎಲ್ಪಿಜಿ ಪ್ರವೇಶ ಮತ್ತು ಲಭ್ಯತೆ ಹೆಚ್ಚಿಸಿದ್ದಾರೆ. 90%ಗಿಂಚ ಹೆಚ್ಚು ಹೊಸ ವಿತರಕರು ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಉಲ್ಲೇಖನೀಯ.
3. ಸೌಲಭ್ಯಗಳು
• ಚಿಲ್ಲರೆ ಮಳಿಗೆ(ಆರ್ ಒ)ಗಳಲ್ಲಿ ಡಿಜಿಟಲ್ ಪಾವತಿ ಮೂಲಸೌಕರ್ಯದ ಪ್ರಚಾರದ ಅಡಿ, 01.12.2024ರಂತೆ, ದೇಶಾದ್ಯಂತ 84,203 ಚಿಲ್ಲರೆ ಮಳಿಗೆಗಳಲ್ಲಿ 1,03,224 ಇ-ವ್ಯಾಲೆಟ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಭೀಮ್ ಯುಪಿಐ ಜೊತೆಗೆ 84,203 ಆರ್ ಒಗಳನ್ನು ಸಕ್ರಿಯಗೊಳಿಸಲಾಗಿದೆ.
• ಸ್ವಚ್ಛ ಭಾರತ್ ಮಿಷನ್ ಅಡಿ, ಪ್ರತಿ ಚಿಲ್ಲರೆ ಮಳಿಗೆಯಲ್ಲಿ ಶೌಚಾಲಯ ಸೌಲಭ್ಯಗಳನ್ನು ಖಾತ್ರಿಪಡಿಸಲಾಗಿದೆ. 01.12.2024ರಂತೆ, 83618 ಆರ್ ಒಗಳು ಶೌಚಾಲಯ ಸೌಲಭ್ಯವನ್ನು ಹೊಂದಿವೆ, ಇದರಲ್ಲಿ 66026 ಆರ್ ಒಗಳು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಹೊಂದಿವೆ.
• 01.12.2024ರಂತೆ, ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿಗಳು) ಡೀಲರ್‌ಗಳು ಮತ್ತು ಸ್ಟಾರ್ಟಪ್‌ಗಳ ಮೂಲಕ ಒಟ್ಟು 3,097 ಡೋರ್ ಟು ಡೋರ್ ಡೆಲಿವರಿ(ಡಿಡಿಡಿ) ಬೌಸರ್‌ಗಳನ್ನು ನಿಯೋಜಿಸಿವೆ.
• ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು(ಇವಿಸಿ) ತೈಲ ಮಾರುಕಟ್ಟೆ ಕಂಪನಿಗಳಲ್ಲಿ(ಒಎಂಸಿ) ಒದಗಿಸಲಾಗುತ್ತಿದೆ. 01.12.2024ರಂತೆ, ಒಎಂಸಿಗಳು ಭಾರತದಾದ್ಯಂತ 17,939 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮತ್ತು 206 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿವೆ.
4. ನೈಸರ್ಗಿಕ ಅನಿಲ ಪೈಪ್‌ಲೈನ್‌ಗಳು
• ದೇಶದಲ್ಲಿ ಕಾರ್ಯಾಚರಣೆ ಆಗಿರುವ ನೈಸರ್ಗಿಕ ಅನಿಲ ಪೈಪ್‌ಲೈನ್‌ನ ಉದ್ದವು 2014 ರಲ್ಲಿ ಇದ್ದ 15,340 ಕಿಮೀಗಳಿಂದ 30.09.2024ರ ವರೆಗೆ 24,945 ಕಿಮೀಗಳಿಗೆ ಹೆಚ್ಚಾಗಿದೆ. ಇದಲ್ಲದೆ, ಸುಮಾರು 10,805 ಕಿಮೀ ನೈಸರ್ಗಿಕ ಅನಿಲ ಪೈಪ್‌ಲೈನ್‌ನ ಅಭಿವೃದ್ಧಿ ಕಾರ್ಯಗತಗೊಳ್ಳುತ್ತಿದೆ. ಪಿಎನ್ ಜಿಆರ್ ಬಿ/ಜಿಒಐನಿಂದ ಅಧಿಕೃತಗೊಂಡ ಈ ಪೈಪ್‌ಲೈನ್‌ಗಳನ್ನು ಪೂರ್ಣಗೊಳಿಸುವುದರೊಂದಿಗೆ, ರಾಷ್ಟ್ರೀಯ ಗ್ಯಾಸ್ ಗ್ರಿಡ್ ಪೂರ್ಣಗೊಳ್ಳುತ್ತದೆ, ಭಾರತದ ಎಲ್ಲಾ ಪ್ರಮುಖ ಬೇಡಿಕೆ ಮತ್ತು ಪೂರೈಕೆ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಇದು ಎಲ್ಲಾ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲದ ಸುಲಭ ಲಭ್ಯತೆಯನ್ನು ಖಚಿತಪಡಿಸುತ್ತದೆ, ಏಕರೂಪದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ.
5. ಏಕೀಕೃತ ಪೈಪ್‌ಲೈನ್ ಸುಂಕ
• ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ("ಪಿ ಎನ್ ಜಿ ಆರ್ ಬಿ") "ಒಂದು ರಾಷ್ಟ್ರ, ಒಂದು ಗ್ರಿಡ್ ಮತ್ತು ಒಂದು ಸುಂಕದ ಧ್ಯೇಯದೊಂದಿಗೆ ನೈಸರ್ಗಿಕ ಅನಿಲ ಪೈಪ್‌ಲೈನ್‌ಗಳಿಗೆ ಏಕೀಕೃತ ಸುಂಕಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಸಂಯೋಜಿಸಲು ಪಿಎನ್ ಜಿಆರ್ ಬಿ(ನೈಸರ್ಗಿಕ ಅನಿಲ ಪೈಪ್‌ಲೈನ್ ಸುಂಕ ನಿರ್ಣಯ) ನಿಯಮಗಳಿಗೆ ತಿದ್ದುಪಡಿ ಮಾಡಿದೆ”.
• ಪಿಎನ್ ಜಿಆರ್ ಬಿ 80.97 ರೂ./ಎಂಎಂಬಿಟಿಯು ಅನ್ವಯವಾಗುವಂತೆ ಸಮತಟ್ಟಾದ ಏಕೀಕೃತ ಸುಂಕವನ್ನು ಸೂಚಿಸಿದೆ. 01.07.2024 ಮತ್ತು ಏಕರೂಪದ ಸುಂಕ ವ್ಯವಸ್ಥೆಗಾಗಿ 3 ಸುಂಕ ವಲಯಗಳನ್ನು ರಚಿಸಲಾಗಿದೆ, ಅಲ್ಲಿ ಮೊದಲ ವಲಯವು ಅನಿಲ ಮೂಲದಿಂದ 300 ಕಿಮೀ ದೂರದಲ್ಲಿದೆ, ಎರಡನೇ ವಲಯವು 300 - 1200 ಕಿಮೀಗಳು ಮತ್ತು ಮೂರನೇ ವಲಯವು 1200 ಕಿಮೀ ಮೀರಿದೆ.
• ರಾಷ್ಟ್ರೀಯ ಅನಿಲ ಗ್ರಿಡ್ ಎಲ್ಲಾ ಅಂತರ್ ಸಂಪರ್ಕಿತ ಪೈಪ್‌ಲೈನ್ ನೆಟ್‌ವರ್ಕ್‌ಗಳನ್ನು ಒಡೆತನದ ಮತ್ತು ನಿರ್ವಹಿಸುವ ಘಟಕಗಳನ್ನು ಒಳಗೊಂಡಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್, ಜಿಎಐಎಲ್(ಇಂಡಿಯಾ) ಲಿಮಿಟೆಡ್, ಪೈಪ್‌ಲೈನ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಗುಜರಾತ್ ಸ್ಟೇಟ್ ಪೆಟ್ರೋನೆಟ್ ಲಿಮಿಟೆಡ್, ಗುಜರಾತ್ ಗ್ಯಾಸ್ ಲಿಮಿಟೆಡ್, ರಿಲಯನ್ಸ್ ಗ್ಯಾಸ್ ಪೈಪ್‌ಲೈನ್ಸ್ ಲಿಮಿಟೆಡ್, ಜಿಎಸ್ ಪಿಎಲ್ ಇಂಡಿಯಾ ಗ್ಯಾಸ್ನೆಟ್ ಲಿಮಿಟೆಡ್ ಮತ್ತು ಜಿಎಸ್ ಪಿಎಲ್ ಇಂಡಿಯಾ ಟ್ರಾನ್ಸ್‌ಕೋ ಲಿಮಿಟೆಡ್.
• ಸುಧಾರಣೆಯು ಪ್ರಸ್ತುತ ಸಂಯೋಜಕ ಸುಂಕವು ಅನ್ವಯವಾಗುವ ದೂರದ ಪ್ರದೇಶಗಳಲ್ಲಿ ನೆಲೆಗೊಂಡಿರುವ ಗ್ರಾಹಕರಿಗೆ ವಿಶೇಷವಾಗಿ ಪ್ರಯೋಜನ ನೀಡುತ್ತದೆ, ದೇಶದಲ್ಲಿ ಅನಿಲ ಬಳಕೆ ಹೆಚ್ಚಿಸುವ ಸರ್ಕಾರದ ದೂರದೃಷ್ಟಿ ಮತ್ತು ಅನಿಲ ಮಾರುಕಟ್ಟೆಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ.
6. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ವ್ಯಾಪ್ತಿ
• ಪಿ ಎನ್ ಜಿ ಆರ್ ಬಿ 307 ಭೌಗೋಳಿಕ ಪ್ರದೇಶಗಳನ್ನು ಸಿಜಿಡಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಅಧಿಕೃತಗೊಳಿಸಿದೆ, ಇದು ದೇಶದ ಭೌಗೋಳಿಕ ಪ್ರದೇಶದ ಸುಮಾರು 100% ಮತ್ತು ಜನಸಂಖ್ಯೆಯ 100%ರಷ್ಟು ಸಂಭಾವ್ಯ ವ್ಯಾಪ್ತಿಯನ್ನು ಹೊಂದಿದೆ. 30.09.2024ರಂತೆ, ದೇಶದಲ್ಲಿ ಪಿಎನ್ ಜಿ(ಡಿ) ಸಂಪರ್ಕಗಳು ಮತ್ತು ಸಿಎನ್ ಜಿ ಕೇಂದ್ರಗಳ ಒಟ್ಟು ಸಂಖ್ಯೆ ಕ್ರಮವಾಗಿ 1.36 ಕೋಟಿ ಮತ್ತು 7,259 ಆಗಿದೆ.
7. ಕೈಗೆಟುಕುವ ಸಾರಿಗೆ ಕಡೆಗೆ ಸುಸ್ಥಿರ ಪರ್ಯಾಯ ವ್ಯವಸ್ಥೆ(SATAT) ಉಪಕ್ರಮ
• ಸಾಂದ್ರಿತ(ಸಂಕುಚಿತ) ಜೈವಿಕ ಅನಿಲ(ಸಿಬಿಜಿ) ಉತ್ಪಾದನೆ ಮತ್ತು ಬಳಕೆಯಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಸತಾತ್(SATAT) ಉಪಕ್ರಮವನ್ನು 2018 ಅಕ್ಟೋಬರ್ 1ರಂದು ಪ್ರಾರಂಭಿಸಲಾಯಿತು.
· 30.11.2024ರಂತೆ, 80 ಸಿಬಿಜಿ ಘಟಕಗಳನ್ನು ಕಾರ್ಯಾರಂಭ ಮಾಡಲಾಗಿದೆ, 72 ಸಿಬಿಜಿ ಘಟಕಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.
· ಸಿಜಿಡ ಜಾಲದಲ್ಲಿ ಸಿಎನ್ ಜಿಯೊಂದಿಗೆ ಸಿಬಿಜಿಯ ಸಂಯೋಜನೆಗಾಗಿ ಸಚಿವಾಲಯವು ಮಾರ್ಗಸೂಚಿಗಳನ್ನು ನೀಡಿದೆ;
· ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್(ಸಿಜಿಡಿ) ಜಾಲಕ್ಕೆ ಸಿಬಿಜಿಯನ್ನು ಸೇರಿಸಲು ಪೈಪ್ ಲೈನ್ ಮೂಲಸೌಕರ್ಯ(ಡಿಪಿಐ) ಅಭಿವೃದ್ಧಿಯ ಯೋಜನೆಯನ್ನು ಸಿಬಿಜಿ ಘಟಕ(ಸ್ಥಾವರ)ದಿಂದ ನಗರ ಅನಿಲ ವಿತರಣಾ ಗ್ರಿಡ್ ಗೆ ಪೈಪ್ ಲೈನ್ ಸಂಪರ್ಕವನ್ನು ವಿಸ್ತರಿಸಲು ಹಣಕಾಸಿನ ನೆರವು ನೀಡಲು ಪ್ರಾರಂಭಿಸಲಾಗಿದೆ.
· ಡಿಪಿಐ ಯೋಜನೆಯಡಿ ಅರ್ಜಿ ಸ್ವೀಕರಿಸಲು 2024.ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ, ಆನ್‌ಲೈನ್ ಪೋರ್ಟಲ್ ಸಕ್ರಿಯಗೊಳಿಸಲಾಗಿದೆ.
· 2024ರ ಫೆಬ್ರವರಿ 2ರಂದು ಬಯೋಮಾಸ್ ಒಗ್ಗೂಡಿಸುವಿಕೆ ಯಂತ್ರೋಪಕರಣಗಳ (ಬಿಎಎಂ) ಸಂಗ್ರಹಣೆಗಾಗಿ ಸಚಿವಾಲಯವು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ಸಿಬಿಜಿ ಉತ್ಪಾದಕರಿಗೆ ಬಯೋಮಾಸ್ ಒಟ್ಟುಗೂಡಿಸುವ ಯಂತ್ರೋಪಕರಣಗಳನ್ನು ಸಂಗ್ರಹಿಸಲು ಹಣಕಾಸಿನ ನೆರವು ನೀಡುತ್ತದೆ.
· ಸಿಬಿಜಿಯ ಉತ್ಪಾದನೆ ಮತ್ತು ಬಳಕೆ ಉತ್ತೇಜಿಸಲು ಸಿಜಿಡಿ ಜಾಲದ ಸಿಎನ್ ಜಿ(ಟಿ) ಮತ್ತು ಪಿಎನ್ ಜಿ(ಡಿ) ವಿಭಾಗದಲ್ಲಿ ಸಿಬಿಜಿಯ ಹಂತವಾರು ಕಡ್ಡಾಯ ಮಾರಾಟವನ್ನು ಸರ್ಕಾರ ಘೋಷಿಸಿದೆ. ಸಿಬಿಜಿ ಬಾಧ್ಯತೆ(ಸಿಬಿಒ) ಪ್ರಸ್ತುತ 2024-2025ರ ವರೆಗೆ ಸ್ವಯಂಪ್ರೇರಿತವಾಗಿದೆ ಮತ್ತು ಕಡ್ಡಾಯ ಮಾರಾಟದ ಬಾಧ್ಯತೆಯಾಗಿದೆ, ಇದು 2025-26 ರಿಂದ ಪ್ರಾರಂಭವಾಗುತ್ತದೆ. ಸಿಬಿಒ ಅನ್ನು 2025-26, 2026-27 ಮತ್ತು 2027-28 ಕ್ಕೆ ಕ್ರಮವಾಗಿ ಒಟ್ಟು ಸಿಎನ್ ಜಿ/ಪಿಎನ್ ಜಿ ಬಳಕೆಯ 1%, 3% ಮತ್ತು 4%ರಂತೆ ಇರಿಸಬೇಕು. 2028-29ರಿಂದ ಸಿಬಿಒ 5% ಆಗಿರುತ್ತದೆ.
8. ಸಿಜಿಡಿ ಘಟಕಗಳಿಗೆ ಗೃಹಬಳಕೆಯ ಅನಿಲ ಹಂಚಿಕೆ ಪರಿಶೀಲಿಸಿ
• ಸಿಜಿಡಿ ವಲಯದ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಮತ್ತು ಬೆಲೆ ಏರಿಳಿತದಿಂದ ಸಾಮಾನ್ಯ ಜನರನ್ನು ರಕ್ಷಿಸಲು, ಸರ್ಕಾರವು ಹೊಸ ಸಿಜಿಡಿ ವಲಯದ ಗ್ಯಾಸ್ ಹಂಚಿಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಪಿಎನ್ ಜಿ(ದೇಶೀಯ) ವಿಭಾಗದ ಹಂಚಿಕೆಯನ್ನು ಹೆಚ್ಚಿಸಲಾಗಿದೆ(ಅಂದರೆ ಹಿಂದಿನ PNGD ಬಳಕೆಯ 105% ತ್ರೈಮಾಸಿಕ) ಮತ್ತು ಬ್ಯಾಲೆನ್ಸ್ ಲಭ್ಯವಿರುವ ಪರಿಮಾಣವನ್ನು ಸಿಎನ್‌ಜಿ(ಟಿ) ವಿಭಾಗಕ್ಕೆ ಪ್ರಮಾಣಿತ(ಪ್ರೋರೇಟ್) ಆಧಾರದ ಮೇಲೆ ಪೂರೈಸಬೇಕು.
• ಹೆಚ್ಚು ವಾಸ್ತವಿಕ ಬಳಕೆಯ ದತ್ತಾಂಶವನ್ನು ಪ್ರತಿಬಿಂಬಿಸುವ ಹಂಚಿಕೆ ಮತ್ತು ಉಲ್ಲೇಖದ ಅವಧಿಯ ನಡುವಿನ ವಿಳಂಬವನ್ನು ಸರಾಸರಿ 6 ತಿಂಗಳಿಂದ ಸರಾಸರಿ 3 ತಿಂಗಳಿಗೆ ಕಡಿಮೆ ಮಾಡಿರುವುದರಿಂದ ಪರಿಷ್ಕೃತ ವಿಧಾನವು ಸಿಜಿಡಿ ಘಟಕಕ್ಕೆ ಸಹಾಯಕವಾಗಿದೆ.
9. ದೇಶೀಯ ಅನಿಲ ಬೆಲೆ
• ಒಎನ್ ಜಿಸಿ/ಒಐಎಲ್, ಹೊಸ ಎಕ್ಸ್‌ಪ್ಲೋರೇಶನ್ ಲೈಸೆನ್ಸಿಂಗ್ ಪಾಲಿಸಿ(ಎನ್ಇಎಲ್ ಪಿ) ಬ್ಲಾಕ್‌ಗಳು ಮತ್ತು ಪ್ರಿ-ಎನ್‌ಇಎಲ್‌ಪಿ ಬ್ಲಾಕ್‌ಗಳ ನಾಮನಿರ್ದೇಶನ ಕ್ಷೇತ್ರಗಳಿಂದ ಉತ್ಪಾದಿಸಲಾದ ಗ್ಯಾಸ್‌ಗೆ 2023 ಏಪ್ರಿಲ್ ನಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡಲಾಗಿದೆ, ಅಲ್ಲಿ ಉತ್ಪಾದನಾ ಹಂಚಿಕೆ ಒಪ್ಪಂದ(ಪಿಎಸ್ ಸಿ) ಸರ್ಕಾರದ ಬೆಲೆಗಳ ಅನುಮೋದನೆಯನ್ನು ಒದಗಿಸುತ್ತದೆ.
• ಅಂತಹ ನೈಸರ್ಗಿಕ ಅನಿಲದ ಬೆಲೆಯು ಭಾರತೀಯ ಕಚ್ಚಾ ಬ್ಯಾಸ್ಕೆಟ್‌ನ ಮಾಸಿಕ ಸರಾಸರಿಯ 10% ಆಗಿರಬೇಕು ಮತ್ತು ಮಾಸಿಕ ಆಧಾರದ ಮೇಲೆ ಸೂಚಿಸಲಾಗುತ್ತದೆ ಮತ್ತು ವಾಸ್ತವ ಮಿತಿ ಹೊಂದಿರಬೇಕು.
• ಕಡಿಮೆಯಾದ ಅನಿಲ ಬೆಲೆಯು ದೇಶೀಯ, ರಸಗೊಬ್ಬರ ಮತ್ತು ವಿದ್ಯುತ್ ಗ್ರಾಹಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
10. ಜೈವಿಕ ಇಂಧನಗಳು ಮತ್ತು ಎಥೆನಾಲ್ ಮಿಶ್ರಣ
• ಎಥೆನಾಲ್ ಮಿಶ್ರಿತ ಪೆಟ್ರೋಲ್(ಇಬಿಪಿ) ಕಾರ್ಯಕ್ರಮದ ಅಡಿ, ಎಥೆನಾಲ್ ಪೂರೈಕೆ ವರ್ಷದಲ್ಲಿ(ಇಎಸ್ ವೈ) 2013-14ರಲ್ಲಿ 38 ಕೋಟಿ ಲೀಟರ್‌ಗಳಿಂದ 2023-24 ರಲ್ಲಿ 707.40 ಕೋಟಿ ಲೀಟರ್‌ಗಳಿಗೆ ಏರಿಕೆಯಾಗಿದೆ, ಇದರಿಂದಾಗಿ ಸರಾಸರಿ 14%ರಷ್ಟು ಮಿಶ್ರಣವನ್ನು ಸಾಧಿಸಲಾಗಿದೆ. ನಡೆಯುತ್ತಿರುವ ಇಎಸ್ ವೈ(2024-2025)ಗಾಗಿ, ಎಥೆನಾಲ್ ಮಿಶ್ರಣವು 29.12.2024ರಂತೆ 16.23%ಗೆ ಸುಧಾರಿಸಿದೆ. ಸಾರ್ವಜನಿಕ ವಲಯದ ಒಎಂಸಿಗಳು ಇ-20 ಪೆಟ್ರೋಲ್(ಪೆಟ್ರೋಲ್‌ನಲ್ಲಿ 20% ಎಥೆನಾಲ್) ಅನ್ನು ದೇಶಾದ್ಯಂತ 17,400ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ವಿತರಿಸಲು ಪ್ರಾರಂಭಿಸಿವೆ.
• ಕಳೆದ 10 ವರ್ಷಗಳಲ್ಲಿ ಇಬಿಪಿ ಕಾರ್ಯಕ್ರಮವು 1,08,600 ಕೋಟಿ ರೂ. ಗಿಂತ ಹೆಚ್ಚಿನ ವಿದೇಶಿ ವಿನಿಮಯ ಪ್ರಭಾವಕ್ಕೆ ಅನುವಾದಿಸಿದೆ, 557 ಲಕ್ಷ ಮೆಟ್ರಿಕ್ ಟನ್‌ಗಳ ನಿವ್ವಳ ಇಂಗಾಲ ಕಡಿತ ಮತ್ತು ರೈತರಿಗೆ ತ್ವರಿತ ಪಾವತಿಗೆ 92,400 ಕೋಟಿ ರೂ. ಒದಗಿಸಿದೆ.
• 2023 ಏಪ್ರಿಲ್ -ನವೆಂಬರ್ ಅವಧಿಯಲ್ಲಿ 29.25 ಕೋಟಿ ಲೀಟರ್‌ಗಳಿಗೆ ಹೋಲಿಸಿದರೆ, 2024 ಏಪ್ರಿಲ್-ನವೆಂಬರ್ ಅವಧಿಯಲ್ಲಿ ಒಎಂಸಿಗಳು, ಜೈವಿಕ ಡೀಸೆಲ್ ಮಿಶ್ರಣ ಕಾರ್ಯಕ್ರಮಕ್ಕಾಗಿ 36.68 ಕೋಟಿ ಲೀಟರ್ ಜೈವಿಕ ಡೀಸೆಲ್ ಸಂಗ್ರಹಿಸಿವೆ.
• ಹಸಿರು ಹೈಡ್ರೋಜನ್: ತೈಲ ಮತ್ತು ಅನಿಲ ಪಿಎಸ್ ಯು 900 ಕೆಟಿಪಿಎ ಗ್ರೀನ್ ಹೈಡ್ರೋಜನ್ ಯೋಜನೆಗಳಿಗೆ(ಇಪಿಸಿ & ಬಿಒಒ ವ್ಯವಸ್ಥೆ) 2030ರ ವೇಳೆಗೆ ಯೋಜಿಸಿದೆ. ಪಿಎಸ್ ಯು ಸಂಸ್ಕರಣಾಗಾರಗಳು 42 ಕೆಟಿಪಿಎ ಟೆಂಡರ್‌ಗಳನ್ನು ಕರೆದಿವೆ. ಇವುಗಳನ್ನು 2025 ಮಾರ್ಚ್ ವೇಳೆಗೆ ನೀಡಲಾಗುವುದು. ಸರಿಸುಮಾರು 128 ಕೆಟಿಪಿಎ ಟೆಂಡರ್‌ಗಳು ಫಲಿತಾಂಶದ ಆಧಾರದ ಮೇಲೆ ಪಿಎಸ್ ಯು ಸಂಸ್ಕರಣಾಗಾರಗಳಿಂದ ನೀಡಲಾಗುವುದು.
• ಸರ್ಕಾರವು 2027, 2028 ಮತ್ತು 2030ರಿಂದ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ವಿಮಾನಗಳಿಗೆ ಆರಂಭದಲ್ಲಿ ಏವಿಯೇಷನ್ ಟರ್ಬೈನ್ ಇಂಧನದಲ್ಲಿ(ಎಟಿಎಫ್) ಎಸ್ಎಎಫ್ ನ 1%, 2% ಮತ್ತು 5% ಮಿಶ್ರಣವನ್ನು ಸೂಚಿಸುವ ಗುರಿ ನಿಗದಿಪಡಿಸಿದೆ.
• ಪಿಎಂ ಜಿ-ವ್ಯಾನ್ ಯೋಜನೆಯನ್ನು 21.08.2024ರ ಅಧಿಸೂಚನೆಯ ಮೂಲಕ ತಿದ್ದುಪಡಿ ಮಾಡಲಾಗಿದೆ, "2ಜಿ ಎಥೆನಾಲ್" ಬದಲಿಗೆ ಮುಂಗಡ ಜೈವಿಕ ಇಂಧನಗಳ ಸೇರ್ಪಡೆ, ಬೋಲ್ಟ್-ಆನ್ ಮತ್ತು ಬ್ರೌನ್‌ಫೀಲ್ಡ್ ಯೋಜನೆಗಳಿಗೆ 2028-29ರ ವರೆಗೆ ಅರ್ಹತೆ ಮತ್ತು ಯೋಜನೆಯ ಕಾಲಮಿತಿ ವಿಸ್ತರಣೆಯಂತಹ ಪ್ರಮುಖ ಬದಲಾವಣೆಗಳನ್ನು ಒಳಗೊಂಡಿದೆ.
11. ಸಂಸ್ಕರಣಾ ಸಾಮರ್ಥ್ಯ
• ದೇಶವು 22 ಆಪರೇಟಿಂಗ್ ಸಂಸ್ಕರಣಾಗಾರ(ರಿಫೈನರಿ)ಗಳನ್ನು ಹೊಂದಿದ್ದು, ಪ್ರತಿ ವರ್ಷ ಒಟ್ಟು 256.8 ದಶಲಕ್ಷ ಮೆಟ್ರಿಕ್ ಟನ್ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ.
• 18 ಸಂಸ್ಕರಣಾಗಾರಗಳು ಸಾರ್ವಜನಿಕ ವಲಯದಲ್ಲಿವೆ, 3 ಖಾಸಗಿ ವಲಯದಲ್ಲಿ ಮತ್ತು 1 ಜಂಟಿ ಉದ್ಯಮವಾಗಿದೆ. 256.8 ಎಂಎಂಟಿಪಿಎ ಒಟ್ಟು ಸಂಸ್ಕರಣಾ ಸಾಮರ್ಥ್ಯದ ಪೈಕಿ 157.3 ಎಂಎಂಟಿಪಿಎ ಸಾರ್ವಜನಿಕ ವಲಯದಲ್ಲಿದೆ, 11.3 ಎಂಎಂಟಿಪಿಎ ಜಂಟಿ ಉದ್ಯಮದಲ್ಲಿದೆ ಮತ್ತು ಉಳಿದ 88.2 ಎಂಎಂಟಿಪಿಎ ಖಾಸಗಿ ವಲಯದಲ್ಲಿದೆ.
• ಇದಲ್ಲದೆ, 11 ಪಿಎಸ್ ಯು ಸಂಸ್ಕರಣಾಗಾರಗಳಲ್ಲಿ ಮತ್ತು ಹೊಸ ತಳಮಟ್ಟದ ಸಂಸ್ಕರಣಾಗಾರಗಳನ್ನು ಸ್ಥಾಪಿಸುವ ಮೂಲಕ ಸಂಸ್ಕರಣಾಗಾರ ಸಾಮರ್ಥ್ಯದ ವಿಸ್ತರಣೆಯ ಯೋಜನೆಗಳ ಮೂಲಕ 2028ರ ವೇಳೆಗೆ ಸಂಸ್ಕರಣಾ ಸಾಮರ್ಥ್ಯವು 256.80 ಎಂಎಂಟಿಪಿಎನಿಂದ 309.50 ಎಂಎಂಟಿಪಿಎಗೆ ಹೆಚ್ಚಾಗುವ ಸಾಧ್ಯತೆಯಿದೆ.
12. ಪರಿಶೋಧನೆ ಮತ್ತು ಉತ್ಪಾದನೆ
• ಹೈಡ್ರೋಕಾರ್ಬನ್ ಎಕ್ಸ್‌ಪ್ಲೋರೇಶನ್ ಲೈಸೆನ್ಸಿಂಗ್ ಪಾಲಿಸಿ (ಹೆಲ್ಪ್): ಭಾರತೀಯ ಸೆಡಿಮೆಂಟರಿ ಬೇಸಿನ್‌ಗಳಲ್ಲಿ ತೈಲ ಮತ್ತು ಅನಿಲದ ಬೃಹತ್ ಸಾಮರ್ಥ್ಯ ಬಳಸಿಕೊಳ್ಳಲು, ಸರ್ಕಾರವು 2016 ಮಾರ್ಚ್ ನಲ್ಲಿ ಹೈಡ್ರೋಕಾರ್ಬನ್ ಎಕ್ಸ್‌ಪ್ಲೋರೇಶನ್ ಲೈಸೆನ್ಸಿಂಗ್ ಪಾಲಿಸಿಯ(ಹೆಲ್ಪ್) ಭಾಗವಾಗಿ ಓಪನ್ ಏಕ್ರೇಜ್ ಲೈಸೆನ್ಸಿಂಗ್ ಪ್ರೋಗ್ರಾಂ(ಒಎಎಲ್ ಪಿ) ಪ್ರಾರಂಭಿಸಿತು. ಹೊಸ ಪರಿಶೋಧನೆ ನೀತಿಯು ಉತ್ಪಾದನಾ ಹಂಚಿಕೆ ಒಪ್ಪಂದವು ಮಾದರಿ ಬದಲಾವಣೆಯನ್ನು ಒದಗಿಸುತ್ತದೆ. ಪಿಎಸ್ ಸಿ ಆಡಳಿತದಿಂದ ಆದಾಯ ಹಂಚಿಕೆ ತನಕ ಒಪ್ಪಂದ ಇದಾಗಿದೆ. 2,42,056 ಚದರಕ್ಕಿಂತ ಹೆಚ್ಚು ವ್ಯಾಪ್ತಿಯ ಒಟ್ಟು 144 ಬ್ಲಾಕ್‌ಗಳು, 3.137 ಶತಕೋಟಿ ಡಾಲರ್ ಹೂಡಿಕೆಯೊಂದಿಗೆ 8 ತೀರ್ಮಾನಿಸಿದ ಒಎಎಲ್ ಪಿ ಹರಾಜು ಸುತ್ತುಗಳಲ್ಲಿ ಕಂಪನಿಗಳಿಗೆ ಪ್ರದೇಶ ಹಂಚಲಾಗಿದೆ. ಇಲ್ಲಿಯವರೆಗೆ, ಒಎಎಲ್ ಪಿ ಅಡಿ, ನೀಡಲಾದ ಬ್ಲಾಕ್‌ಗಳಲ್ಲಿ 13 ಹೈಡ್ರೋಕಾರ್ಬನ್ ಆವಿಷ್ಕಾರಗಳನ್ನು ಮಾಡಲಾಗಿದೆ ಮತ್ತು ಒಂದು ಆವಿಷ್ಕಾರವು ಈಗಾಗಲೇ ಗುಜರಾತ್‌ನಲ್ಲಿ ಅನಿಲವನ್ನು(0.44 MMSCMD) ಉತ್ಪಾದಿಸುತ್ತಿದೆ. ಆದರೆ ಇತರೆ ಆವಿಷ್ಕಾರಗಳು ಮೌಲ್ಯಮಾಪನ ಹಂತದಲ್ಲಿವೆ. ಒಎಎಲ್ ಪಿಯ 11ರ ಸುತ್ತಿನಲ್ಲಿ, ಸರಿಸುಮಾರು 1,36,596 ಚದರ ವಿಸ್ತೀರ್ಣವು 8 ಕಿ.ಮೀ. ಸೆಡಿಮೆಂಟರಿ ಬೇಸಿನ್‌ಗಳಲ್ಲಿ ಹರಡಿದೆ, ಹರಾಜುದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆಯಲಾಗಿದೆ. ಸ್ವೀಕರಿಸಿದ ಬಿಡ್‌ಗಳು ಮೌಲ್ಯಮಾಪನದಲ್ಲಿವೆ ಮತ್ತು ಶೀಘ್ರದಲ್ಲೇ ಯಶಸ್ವಿ ಬಿಡ್‌ದಾರರಿಗೆ ಬ್ಲಾಕ್‌ಗಳನ್ನು ನೀಡಲಾಗುವುದು. ಅದರ ನಂತರ, 1,91,986.21 ಚದರ ವಿಸ್ತೀರ್ಣ ಕಿ.ಮೀ. ಒಎಎಲ್ ಪಿ ಹರಾಜು ಸುತ್ತು 10 ಅನ್ನು ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ಡಿಂಗ್‌ಗಾಗಿ ಅಂತಿಮಗೊಳಿಸಲಾಗಿದೆ.
• ಇದಲ್ಲದೆ, 2023-24ರಲ್ಲಿ ಒಟ್ಟು 741(132 ಪರಿಶೋಧನಾತ್ಮಕ ಮತ್ತು 609 ಅಭಿವೃದ್ಧಿ) ಬಾವಿಗಳನ್ನು ಕೊರೆಯಲಾಗಿದೆ. 2022-23ರಲ್ಲಿ ಇದ್ದ 34.45 ಬಿಸಿಎಂ ಅನಿಲ ಉತ್ಪಾದನೆಯು 2023-24ರಲ್ಲಿ 36.44 ಬಿಸಿಎಂಗೆ ಹೆಚ್ಚಾಗಿದೆ. 2023-24ರಲ್ಲಿ ನಾಮನಿರ್ದೇಶನ ಮತ್ತು ಒಪ್ಪಂದದ ಆಡಳಿತದಲ್ಲಿ ಒಟ್ಟು 12 ಆವಿಷ್ಕಾರಗಳನ್ನು ಮಾಡಲಾಗಿದೆ. 2023-24ರಲ್ಲಿ ಒಟ್ಟು 16645.31 ಎಲ್ ಕೆಎಂ 2ಡಿ ಭೂಕಂಪನ ಮತ್ತು 15701.17 ಎಸ್ ಕೆಎಂ 3ಡಿ ಭೂಕಂಪನ ಸಮೀಕ್ಷೆಗಳನ್ನು ನಡೆಸಲಾಗಿದೆ. ಇದಲ್ಲದೆ, 2023-24ರ ಅವಧಿಯಲ್ಲಿ ಏರ್‌ಬೋರ್ನ್ ಗ್ರಾವಿಟಿ ಗ್ರ್ಯಾಡಿಯೊಮೆಟ್ರಿ ಮತ್ತು ಗ್ರಾವಿಟಿ ಮ್ಯಾಗ್ನೆಟಿಕ್ ಸರ್ವೆ ಅಡಿ, ಒಟ್ಟು 42,944 ಫ್ಲೈಟ್ ಎಲ್ ಕೆಎಂ 2ಡಿ ಭೂಕಂಪನ ಡೇಟಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
• ಡಿಸ್ಕವರ್ಡ್ ಸ್ಮಾಲ್ ಫೀಲ್ಡ್ ಪಾಲಿಸಿ (ಡಿಎಸ್ಎಫ್) ನೀತಿ: ಸರ್ಕಾರವು 2015ರಲ್ಲಿ ಡಿಎಸ್ಎಫ್ ನೀತಿ ಪರಿಚಯಿಸಿದೆ. ಇಲ್ಲಿಯವರೆಗೆ 3 ಸುತ್ತಿನ ಡಿಎಸ್ಎಫ್ ಬಿಡ್ಡಿಂಗ್ ಮುಕ್ತಾಯಗೊಂಡಿದ್ದು, 85 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ, 55 ಒಪ್ಪಂದಗಳು ಪ್ರಸ್ತುತ ಸಕ್ರಿಯವಾಗಿವೆ. 5 ಕ್ಷೇತ್ರಗಳು ಉತ್ಪಾದನೆಯಲ್ಲಿವೆ ಮತ್ತು ಮಾರ್ಚ್ 2024ರ ವರೆಗೆ ಸಂಚಿತ ಉತ್ಪಾದನೆಯು 520 ಎಂಬಿಬಿಎಲ್ ತೈಲ ಮತ್ತು 138 ಎಂಎಂಎಸ್ ಸಿಎಂ ಗ್ಯಾಸ್ ಆಗಿದೆ. ಡಿಎಸ್ಎಫ್ 15ನೇ ಸುತ್ತು ಹೊಸ ಹೂಡಿಕೆದಾರರನ್ನು (ಉದ್ಯಮಿಗಳು) ತಂದಿದೆ.
• ಭಾರತದಲ್ಲಿ ಸಿಬಿಎಂ: 15 ಬ್ಲಾಕ್‌ಗಳು ಮತ್ತು 1.8 ಎಂಎಂಎಸ್ ಸಿಎಂಡಿಯ ಉತ್ಪಾದನಾ ದರದೊಂದಿಗೆ, ಸಿಬಿಎಂ~6.38 ಬಿಸಿಎಂ ಸಂಚಿತ ಉತ್ಪಾದನೆ ಸಾಧಿಸಿದೆ, ಇಲ್ಲಿಯವರೆಗೆ 2.46 ಶತಕೋಟಿ ಡಾಲರ್ ಹೂಡಿಕೆ ಸ್ವೀಕರಿಸಲಾಗಿದೆ. ಭವಿಷ್ಯದ ಬಿಡ್ ಸುತ್ತುಗಳಲ್ಲಿ ಕೊಡುಗೆಗಾಗಿ ಹೆಚ್ಚಿನ ಬ್ಲಾಕ್‌ಗಳನ್ನು ಗುರುತಿಸಲಾಗುತ್ತಿದೆ.
• ಹೋಗದ(ನೋ-ಗೋ) ಪ್ರದೇಶಗಳನ್ನು ಇ&ಪಿಗಾಗಿ ತೆರೆಯಲಾಗಿದೆ: ದಶಕಗಳಿಂದ ಅನ್ವೇಷಣೆಯನ್ನು ನಿರ್ಬಂಧಿಸಲಾಗಿದ್ದ ವಿಶೇಷ ಆರ್ಥಿಕ ವಲಯದ ಹಿಂದಿನ 'ನೋ-ಗೋ'-ಪ್ರವೇಶಿಸದ ಪ್ರದೇಶದ ಸುಮಾರು 99% ಅನ್ನು ಪರಿಶೋಧನೆ & ಉತ್ಪಾದನೆ(ಇ & ಪಿ)ಗಾಗಿ ತೆರೆಯಲಾಗಿದೆ. 'ನೋ-ಗೋ' ಪ್ರದೇಶಗಳ ಬಿಡುಗಡೆಯ ನಂತರ, ಇಲ್ಲಿಯವರೆಗೆ 1,52,325 ಚದರ ಕಿ.ಮೀ. ಪ್ರದೇಶವನ್ನು ಬಿಡ್‌ಗಳು/ಆಸಕ್ತಿಗಳ ಅಭಿವ್ಯಕ್ತಿಗಾಗಿ ಸ್ವೀಕರಿಸಲಾಗಿದೆ. ಇತ್ತೀಚೆಗೆ ಮಹಾನದಿ ಕಡಲಾಚೆಯ 'ನೋ-ಗೋ' ಪ್ರದೇಶದಲ್ಲಿ 94% ಪ್ರದೇಶವನ್ನು ಹೊಂದಿರುವ ಬ್ಲಾಕ್‌ನಲ್ಲಿ ಒಎನ್ ಜಿಸಿಯಿಂದ 2 ಅನಿಲ ಆವಿಷ್ಕಾರಗಳನ್ನು ಮಾಡಲಾಗಿದೆ. ರಕ್ಷಣಾ ಮತ್ತು ಬಾಹ್ಯಾಕಾಶ ಏಜೆನ್ಸಿಗಳು ಹೇರಿದ ನಿರ್ಬಂಧಗಳನ್ನು ದೀರ್ಘ ಕಾಲದವರೆಗೆ ತೆಗೆದುಹಾಕುವ ನಂತರ ಅಂಡಮಾನ್ ಕಡಲಾಚೆಯ ಪ್ರದೇಶವನ್ನು ಪರಿಶೋಧನೆ ಮತ್ತು ಉತ್ಪಾದನಾ ಚಟುವಟಿಕೆಗಳಿಗೆ ತೆರೆಯಲಾಗಿದೆ.
• ಇ&ಪಿಗಾಗಿ ಸರ್ಕಾರದ ಅನುದಾನಿತ ಕಾರ್ಯಕ್ರಮಗಳು: ಭಾರತೀಯ ಸೆಡಿಮೆಂಟರಿ ಬೇಸಿನ್‌ಗಳಲ್ಲಿ ಅನ್ವೇಷಣೆ(ಪರಿಶೋಧನೆ) ಹೆಚ್ಚಿಸಲು ಸರ್ಕಾರವು ಬದ್ಧವಾಗಿದೆ. ಸುಮಾರು 7,500 ಕೋಟಿ ರೂ. ವಿಶೇಷ ಆರ್ಥಿಕ ವಲಯ (EEZ), ಸ್ಟ್ರಾಟಿಗ್ರಾಫಿಕ್ ಬಾವಿಗಳಿಗೆ ಹಣಕಾಸು ಒದಗಿಸುವುದು ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಮಿಷನ್ ಅನ್ವೇಶನ್ ಮತ್ತು ವಿಸ್ತೃತ ಕಾಂಟಿನೆಂಟಲ್ ಶೆಲ್ಫ್ ಸಮೀಕ್ಷೆ ಯೋಜನೆಗಳಲ್ಲಿ ಕಷ್ಟಕರವಾದ ಭೂಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಡೇಟಾವನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಹೊಸ ಭೂಕಂಪನ ದತ್ತಾಂಶವನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಲಾಗಿದೆ.
• ಸ್ಟ್ರಾಟಿಗ್ರಾಫಿಕ್ ವೆಲ್ಸ್: ಪ್ರವರ್ಗ-II ಮತ್ತು ವರ್ಗ-III ಜಲಾನಯನ ಪ್ರದೇಶಗಳಾದ ಮಹಾನದಿ, ಬಂಗಾಳ, ಸೌರಾಷ್ಟ್ರ ಮತ್ತು ಅಂಡಮಾನ್‌ಗಳಲ್ಲಿ 4 ಕಡಲಾಚೆಯ ಸ್ಟ್ರಾಟಿಗ್ರಾಫಿಕ್ ಬಾವಿಗಳು 3,200 ಕೋಟಿ ರೂ.ಗಳ ವೆಚ್ಚದೊಂದಿಗೆ ಈ ಜಲಾನಯನ ಪ್ರದೇಶಗಳ ಉಪ ಮೇಲ್ಮೈ ಭೂವಿಜ್ಞಾನವನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ[ಮೇಲಿನ ಹಂತದಲ್ಲಿ ಉಲ್ಲೇಖಿಸಿರುವ ರೂ.7500 ಕೋಟಿಯ ಅಂಕಿ ಅಂಶದಲ್ಲಿ.3200 ಕೋಟಿ ರೂ ಸೇರಿಸಲಾಗಿದೆ].
• ರಾಷ್ಟ್ರೀಯ ದತ್ತಾಂಶ ಭಂಡಾರ: 2017 ಜುಲೈ ರಲ್ಲಿ ಭಾರತ ಸರ್ಕಾರವು ಇ&ಪಿ ಡೇಟಾ ಬ್ಯಾಂಕ್, ರಾಷ್ಟ್ರೀಯ ಡೇಟಾ ರೆಪೊಸಿಟರಿ(ಎನ್ ಡಿಆರ್) ಸ್ಥಾಪಿಸಿದೆ, ಭವಿಷ್ಯದ ಪರಿಶೋಧನೆ ಮತ್ತು ಅಭಿವೃದ್ಧಿಗಾಗಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಅದರ ವ್ಯವಸ್ಥಿತವಾಗಿ ಸಕ್ರಿಯಗೊಳಿಸಲು ದತ್ತಾಂಶದ ಸಂರಕ್ಷಣೆ, ನಿರ್ವಹಣೆ ಮತ್ತು ಪ್ರಸರಣಕ್ಕಾಗಿ ಇದನ್ನು ಸ್ಥಾಪಿಸಿದೆ. ಪೆಟ್ರೋಲಿಯಂ ಪರಿಶೋಧನೆಯ ನಿರೀಕ್ಷೆಗಳನ್ನು ಹೆಚ್ಚಿಸಲು ಮತ್ತು ಗುಣಮಟ್ಟದ ಡೇಟಾ ಲಭ್ಯತೆಯನ್ನು ಸುಧಾರಿಸುವ ಮೂಲಕ ಬಿಡ್ಡಿಂಗ್ ಸುತ್ತುಗಳನ್ನು ಸುಗಮಗೊಳಿಸಲು ಎನ್ ಡಿಆರ್ ಸಹಾಯ ಮಾಡಿದೆ. ರಾಷ್ಟ್ರೀಯ ಡೇಟಾ ರೆಪೊಸಿಟರಿ (ಎನ್‌ಡಿಆರ್) ಅನ್ನು ಪರಿಷ್ಕರಿಸಲಾಗುತ್ತಿದೆ.
13. ಅಂತಾರಾಷ್ಟ್ರೀಯ ಸಹಕಾರ
• ತೈಲ ಮತ್ತು ಅನಿಲ ಮೂಲಗಳ ವೈವಿಧ್ಯೀಕರಣ:
• 2023-24ರ ಹಣಕಾಸು ವರ್ಷದಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಭಾರತದ ಇಂಧನ ಭದ್ರತೆ ಬಲಪಡಿಸಲು ದೃಢವಾದ ಕ್ರಮಗಳನ್ನು ಕೈಗೊಂಡಿತು. ನಾವು ನಮ್ಮ ಕಚ್ಚಾ ತೈಲ ಮೂಲಗಳನ್ನು ವಿಸ್ತರಿಸಿದ್ದೇವೆ, ನಿರ್ದಿಷ್ಟ ಭೌಗೋಳಿಕತೆಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿದ್ದೇವೆ.
• ಅನಿಲ-ಆಧಾರಿತ ಆರ್ಥಿಕತೆ ಮತ್ತು ವೈವಿಧ್ಯೀಕರಣದ ಕಡೆಗೆ ಪರಿವರ್ತನೆ ಮಾಡಲು, ಭಾರತೀಯ ಪಿಎಸ್ ಯುಗಳಾದ ಐಒಸಿಎಲ್ ಮತ್ತು ಯುಎಇಯ ಜಿಎಐಎಲ್ ಎಡಿಎನ್ಒಸಿನೊಂದಿಗೆ ದೀರ್ಘಕಾಲೀನ ಎಲ್ಎನ್ ಜಿ ಪೂರೈಕೆ ಒಪ್ಪಂದಗಳನ್ನು ಕಾರ್ಯಗತಗೊಳಿಸಲಾಗಿದೆ, ವಾರ್ಷಿಕವಾಗಿ ಸರಿಸುಮಾರು 2.7 ದಶಲಕ್ಷ ಮೆಟ್ರಿಕ್ ಟನ್ ಎಲ್ಎನ್ ಜಿ ಪಡೆಯಲಾಗುತ್ತದೆ.
• ಜಾಗತಿಕ ಜೈವಿಕ ಇಂಧನ ಒಕ್ಕೂಟ:
• ಜಿ-20 ಶೃಂಗಸಭೆಯ ಸಮಯದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಅವರು 2023 ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಾದ ಜಾಗತಿಕ ಜೈವಿಕ ಇಂಧನ ಒಕ್ಕೂಟ(ಜಿಬಿಎ) ಗಮನಾರ್ಹ ಬೆಳವಣಿಗೆ ಕಂಡಿದೆ, 28 ಸದಸ್ಯ ರಾಷ್ಟ್ರಗಳು ಮತ್ತು 12 ಅಂತಾರಾಷ್ಟ್ರೀಯ ಸಂಸ್ಥೆಗಳು ಮೈತ್ರಿಗೆ ಸೇರ್ಪಡೆಗೊಂಡಿವೆ ಮತ್ತು ವಿಸ್ತರಿಸುವುದನ್ನು ಮುಂದುವರೆಸಿದೆ.
• ಹೆಚ್ಚುವರಿಯಾಗಿ, ಜಿಬಿಎ ಭಾರತದಲ್ಲಿ ಕಾರ್ಯಾಲಯ ಸ್ಥಾಪನೆಗಾಗಿ 2024 ಅಕ್ಟೋಬರ್ ನಲ್ಲಿ ಭಾರತ ಸರ್ಕಾರದೊಂದಿಗೆ ಹೆಡ್ ಕ್ವಾರ್ಟರ್ಸ್ ಒಪ್ಪಂದಕ್ಕೆ ಸಹಿ ಹಾಕಿದೆ, ಶುದ್ಧ ಇಂಧನದಲ್ಲಿ ಜಾಗತಿಕ ನಾಯಕತ್ವಕ್ಕೆ ನಮ್ಮ ಬದ್ಧತೆಯನ್ನು ಇದು ಒತ್ತಿಹೇಳುತ್ತದೆ.
• ನೆರೆಯ ದೇಶಗಳೊಂದಿಗೆ ತೊಡಗಿಸಿಕೊಳ್ಳುವಿಕೆ:
• ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಇಂಧನ ಸಂಪರ್ಕವನ್ನು ಪೂರ್ವಭಾವಿಯಾಗಿ ಬೆಳೆಸಿದೆ. ಉದಾಹರಣೆಗೆ, ನೇಪಾಳದೊಂದಿಗೆ, ಪೆಟ್ರೋಲಿಯಂ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರವು 2023 ಮೇ ನಲ್ಲಿ ಜಿ2ಜಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು, ನಂತರ ಐಒಸಿಎಲ್ ಮತ್ತು ನೇಪಾಳದ ಎನ್ಒಸಿ ನಡುವೆ ವಾಣಿಜ್ಯ ಬಿ2ಬಿ ಒಪ್ಪಂದವನ್ನು 2024 ಅಕ್ಟೋಬರ್ ನಲ್ಲಿ ಮಾಡಿಕೊಂಡಿದೆ.
• ಹೆಚ್ಚುವರಿಯಾಗಿ, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಗಾಗಿ ಭಾರತ ಸರ್ಕಾರವು ಭೂತಾನ್‌ನೊಂದಿಗೆ ಒಂದು ಹೆಗ್ಗುರುತಾಗಿರುವ ಎಂಒಯುಗೆ ಸಹಿ ಹಾಕಿದೆ.
• ಸ್ವಚ್ಛ ಇಂಧನ, ಹೈಡ್ರೋಕಾರ್ಬನ್ ವಲಯದಲ್ಲಿ ಅಂತಾರಾಷ್ಟ್ರೀಯ ಪಾಲುದಾರಿಕೆ:
• ಭಾರತ ಮತ್ತು ಅಮೆರಿಕ ಕಾರ್ಯತಂತ್ರ ಸ್ವಚ್ಛ ಇಂಧನ ಪಾಲುದಾರಿಕೆ(SCEP) ಮೂಲಕ ತಮ್ಮ ಪಾಲುದಾರಿಕೆಯನ್ನು ಆಳವಾಗಿ ಮುಂದುವರೆಸಿವೆ, ಇದುಭಾರತ-ಅಮೆರಿಕ ಹವಾಮಾನ ಮತ್ತು ಸ್ವಚ್ಛ ಇಂಧನ ಕಾರ್ಯಸೂಚಿ-2030ರೊಂದಿಗೆ ಹೊಂದಿಕೆಯಾಗುತ್ತವೆ. 2024 ಸೆಪ್ಟೆಂಬರ್ ನಲ್ಲಿ ಜರುಗಿದ ಸಚಿವರ ಸಭೆಯು ಸ್ವಚ್ಛ ಇಂಧನ ಸಹಯೋಗದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಿದೆ.
• 2024 ನವೆಂಬರ್ ನಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿ ಅವರ ವಿದೇಶ ಭೇಟಿ ಸಂದರ್ಭದಲ್ಲಿ, ಭಾರತ ಮತ್ತು ಗಯಾನಾ ಹೈಡ್ರೋಕಾರ್ಬನ್ ವಲಯದಲ್ಲಿ ಸಹಕಾರ ಬಲಪಡಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ.
• ಸ್ವಚ್ಛ ಇಂಧನವು ಭಾರತದ ಬದ್ಧತೆಯು 2ಜಿ/3ಜಿ ಜೈವಿಕ ಇಂಧನಗಳು, ಹಸಿರು ಜಲಜನಕ ಮತ್ತು ಇತರ ಉದಯೋನ್ಮುಖ ಇಂಧನಗಳಿಗೆ ವಿಸ್ತರಿಸಿದೆ. ಇತ್ತೀಚೆಗೆ 2024 ಜೂನ್ ನಲ್ಲಿ, ಹಸಿರು ಹೈಡ್ರೋಜನ್ ಮತ್ತು ಸುಸ್ಥಿರ ಜೈವಿಕ ಇಂಧನಗಳ ಸಹಯೋಗಕ್ಕಾಗಿ ಭಾರತವು ಇಟಲಿಯೊಂದಿಗೆ ಲೆಟರ್ ಆಫ್ ಇಂಟೆಂಟ್(LOI)ಗೆ ಸಹಿ ಹಾಕಿತು.
• ಗೌರವಾನ್ವಿತ ಪ್ರಧಾನ ಮಂತ್ರಿ ಪಿಎನ್ ಜಿ ಬ್ರೆಜಿಲ್‌ನ ಗಣಿ ಮತ್ತು ಇಂಧನ ಸಚಿವರೊಂದಿಗೆ ಎಸ್ಎಎಫ್ ಉತ್ತೇಜಿಸಲು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಂಘಟಿತ ಸ್ಥಾನಕ್ಕಾಗಿ ಸುಸ್ಥಿರ ವಾಯುಯಾನ ಇಂ ದ ಕುರಿತು ಜಂಟಿ ಹೇಳಿಕೆ ನೀಡಿದರು.
14. ಕಾರ್ಯತಂತ್ರ ಪೆಟ್ರೋಲಿಯಂ ಸಂಗ್ರಹ
• ಗೌರವಾನ್ವಿತ ಪ್ರಧಾನ ಮಂತ್ರಿ ಅವರು 2019 ಫೆಬ್ರವರಿ ಯಲ್ಲಿ ಎಸ್ ಪಿಆರ್ ಹಂತ-I (ಮಂಗಳೂರಿನಲ್ಲಿ 1.5 ದಶಲಕ್ಷ ಮೆಟ್ರಿಕ್ ಟನ್ ಎಸ್ ಪಿಆರ್ ಸೌಲಭ್ಯ ಮತ್ತು ಪಾದೂರಿನಲ್ಲಿ 2.5 ದಶಲಕ್ಷ ಮೆಟ್ರಿಕ್ ಟನ್ ಎಸ್ ಪಿಆರ್ ಸೌಲಭ್ಯ ಮತ್ತು ವಿಶಾಖಪಟ್ಟಣದಲ್ಲಿ 1.3 ದಶಲಕ್ಷ ಮೆಟ್ರಿಕ್ ಟನ್ ಎಸ್ ಪಿಆರ್ ಸೌಲಭ್ಯ) 5.33 ದಶಲಕ್ಷ ಮೆಟ್ರಿಕ್ ಟನ್ ಕಾರ್ಯತಂತ್ರದ ಕಚ್ಚಾ ತೈಲ ಸಂಗ್ರಹವನ್ನು ಸಮರ್ಪಿಸಿದರು.
• ಪೆಟ್ರೋಲಿಯಂ ರಿಸರ್ವ್ ಕಾರ್ಯಕ್ರಮದ ಹಂತ IIರ ಅಡಿ, 6.5 ದಶಲಕ್ಷ ಮೆಟ್ರಿಕ್ ಟನ್ (ಚಂಡಿಖೋಲ್ (4 ದಶಲಕ್ಷ ಮೆಟ್ರಿಕ್ ಟನ್) ಮತ್ತು ಪಾದೂರ್ (2.5 ದಶಲಕ್ಷ ಮೆಟ್ರಿಕ್ ಟನ್) ನಲ್ಲಿನ ಭೂಗತ ಶೇಖರಣಾ ಸಾಮರ್ಥ್ಯದೊಂದಿಗೆ 2 ಹೆಚ್ಚುವರಿ ವಾಣಿಜ್ಯ ಮತ್ತು ಕಾರ್ಯತಂತ್ರ ಸೌಲಭ್ಯಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು 2021 ಜುಲೈ ನಲ್ಲಿ ಸರ್ಕಾರವು ಅನುಮೋದನೆ ನೀಡಿದೆ.
• ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್(ISPRL) ವಿವರವಾದ ಕಾರ್ಯಸಾಧು ವರದಿ(DFR) ಮತ್ತು ಒಡಿಶಾದ ಜಜ್‌ಪುರ್ ಜಿಲ್ಲೆಯ ಚಂಡಿಖೋಲ್‌ನಲ್ಲಿನ ಯೋಜನೆಯ ಸೈಟ್‌ಗಾಗಿ ಜಿಯೋಟೆಕ್ನಿಕಲ್ ಸಮೀಕ್ಷೆಗಳನ್ನು ಪೂರ್ಣಗೊಳಿಸಿದೆ. ಪರಿಸರ ಪರಿಣಾಮದ ಅಂದಾಜು ಮೌಲ್ಯಮಾಪನವನ್ನು ನಾಗ್ಪುರದ ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (NEERI) ಸಹ ನಡೆಸಿದೆ.
• 2022 ಡಿಸೆಂಬರ್ ನಲ್ಲಿ, ಒಡಿಶಾ ಸರ್ಕಾರವು ಒಡಿಶಾದ ಇತರ ಸೈಟ್‌ಗಳನ್ನು ಅನ್ವೇಷಿಸಲು ISPR ಗೆ ಮನವಿ ಮಾಡಿದೆ. ಪರ್ಯಾಯ ಭೂಮಿಯನ್ನು ಅನುಸರಿಸುವಲ್ಲಿ ನಿರೀಕ್ಷಿತ ವಿಳಂಬ ಮತ್ತು ಮತ್ತೊಮ್ಮೆ ಕಾರ್ಯಸಾಧು ಅಧ್ಯಯನ ಕೈಗೊಳ್ಳುವ ಅಗತ್ಯತೆಯ ದೃಷ್ಟಿಯಿಂದ, ISPRL ಈ ಹಿಂದೆ ಅರ್ಜಿ ಸಲ್ಲಿಸಿದ ಮತ್ತು ಕಾರ್ಯಸಾಧು ಅಧ್ಯಯನವನ್ನು ಪೂರ್ಣಗೊಳಿಸಿದ ಅದೇ ಭೂಮಿಯನ್ನು ಚಂಡಿಖೋಲ್‌ನಲ್ಲಿ ನಿಯೋಜಿಸಲು ಒಡಿಶಾ ಸರ್ಕಾರವನ್ನು ವಿನಂತಿಸಲಾಗಿದೆ.
15. ಹೈಡ್ರೋಕಾರ್ಬನ್ ಯೋಜನೆಗಳು ಮತ್ತು ಹೂಡಿಕೆಗಳು
• ತೈಲ ಮತ್ತು ಅನಿಲ ವಲಯವು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾಶಕ್ತಿಯಾಗಿದೆ. ಆದ್ದರಿಂದ, ಮೂಲಸೌಕರ್ಯ ಯೋಜನೆಗಳು ರಾಷ್ಟ್ರೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತವೆ, ಉದ್ಯೋಗ ಸೃಷ್ಟಿ, ವಿಷಯಗಳ ಚಲನೆ ಇತ್ಯಾದಿಗಳಿಗೆ ಕೊಡುಗೆ ನೀಡುತ್ತವೆ. 2024 ಅಕ್ಟೋಬರ್ ಹೊತ್ತಿಗೆ, 283 ಯೋಜನೆಗಳು ಅನುಷ್ಠಾನದಲ್ಲಿದ್ದು, ಒಟ್ಟು 5.70 ಲಕ್ಷ ಕೋಟಿ ರೂ. ವೆಚ್ಚದ 5 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ ತೈಲ ಮತ್ತು ಅನಿಲ ಸಿಪಿಎಸ್ಇಗಳು ಇದರಲ್ಲಿ ಸೇರಿವೆ. 2024-25ರಲ್ಲಿ ಈ ಯೋಜನೆಗಳ ಉದ್ದೇಶಿತ ವೆಚ್ಚವು 79,264 ಕೋಟಿ ರೂ. ಗಳಾಗಿದ್ದು, ಇದಕ್ಕೆ ಪ್ರತಿಯಾಗಿ 2024 ಅಕ್ಟೋಬರ್ ವರೆಗೆ 37,138 ಕೋಟಿ ರೂ. ನಿಜವಾದ ವೆಚ್ಚವಾಗಿದೆ. ಈ ಯೋಜನೆಗಳು, ಅಂತರ್-ವಿಷಯ, ಸಂಸ್ಕರಣಾಗಾರ ಯೋಜನೆಗಳು, ಜೈವಿಕ ಸಂಸ್ಕರಣಾಗಾರಗಳು, ಇ&ಪಿ ಯೋಜನೆಗಳು, ಮಾರುಕಟ್ಟೆ ಮೂಲಸೌಕರ್ಯಗಳನ್ನು ಒಳಗೊಂಡಿವೆ. ಯೋಜನೆಗಳು, ಪೈಪ್‌ಲೈನ್‌ಗಳು, ಸಿಜಿಡಿ ಯೋಜನೆಗಳು, ಕೊರೆಯುವಿಕೆ/ಸಮೀಕ್ಷೆ ಚಟುವಟಿಕೆಗಳು, ಇತ್ಯಾದಿ ಸೇರಿವೆ. 283 ಯೋಜನೆಗಳಲ್ಲಿ 89 ಪ್ರಮುಖ ಯೋಜನೆಗಳು 500 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ 5.51 ಲಕ್ಷ ಕೋಟಿ ರೂ.ಗಳ ನಿರೀಕ್ಷಿತ ವೆಚ್ಚ ಆಗಿದೆ. ಪ್ರಸ್ತುತ 2024-25 ರಲ್ಲಿ 4,519 ಕೋಟಿ ರೂ.ಗಳ ನಿರೀಕ್ಷಿತ ಸಂಚಿತ ವೆಚ್ಚದೊಂದಿಗೆ 50 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.
• ಇಂಧನ ಅವಲಂಬನೆ ಕಡಿಮೆಗೊಳಿಸುವುದು: ತೈಲ ಮತ್ತು ಅನಿಲದ ಮೇಲಿನ ಆಮದು ಅವಲಂಬನೆ ಕಡಿಮೆ ಮಾಡಲು ಸರ್ಕಾರವು, ಬಹುಮುಖಿ ಕಾರ್ಯತಂತ್ರ ಅಳವಡಿಸಿಕೊಂಡಿದೆ, ಇದರಲ್ಲಿ ನೈಸರ್ಗಿಕ ಅನಿಲದ ಬಳಕೆಯನ್ನು ಇಂಧನ/ಆಹಾರವಾಗಿ ದೇಶಾದ್ಯಂತ ಉತ್ತೇಜಿಸುವ ಮೂಲಕ ಬೇಡಿಕೆಯ ಪರ್ಯಾಯವನ್ನು ಒಳಗೊಂಡಿರುತ್ತದೆ. ಆರ್ಥಿಕತೆಯಲ್ಲಿ ಅನಿಲ ಮತ್ತು ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗುವುದು, ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನಗಳಾದ ಎಥೆನಾಲ್, 2ನೇ ತಲೆಮಾರಿನ ಎಥೆನಾಲ್, ಸಂಕುಚಿತಗೊಳಿಸುವಿಕೆ ಜೈವಿಕ ಅನಿಲ ಮತ್ತು ಜೈವಿಕ ಡೀಸೆಲ್, ಸಂಸ್ಕರಣಾ ಪ್ರಕ್ರಿಯೆ ಸುಧಾರಣೆಗಳು, ಇಂಧನ ದಕ್ಷತೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವುದು, ವಿವಿಧ ನೀತಿ ಉಪಕ್ರಮಗಳ ಮೂಲಕ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಗಳು ಇತ್ಯಾದಿ ಸೇರಿವೆ. ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್(EBP) ಕಾರ್ಯಕ್ರಮದ ಅಡಿ, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ. . ಎಥೆನಾಲ್ ಪೂರೈಕೆ (ESY) 2023-24 ವರ್ಷದಲ್ಲಿ ಪೆಟ್ರೋಲ್ ಮಿಶ್ರಣವು ಸರಿಸುಮಾರು 14.6% ತಲುಪಿದೆ. 30.09.2024ರಂತೆ ಕಳೆದ 10 ವರ್ಷಗಳಲ್ಲಿ, ಇಬಿಪಿ ಕಾರ್ಯಕ್ರಮ ರೈತರಿಗೆ ಸರಿಸುಮಾರು 92,409 ಕೋಟಿ ರೂ ತ್ವರಿತ ಪಾವತಿಗೆ ಸಹಾಯ ಮಾಡಿದೆ.
ಅಂದಾಜು 1,08,655 ಕೋಟಿ ರೂ.ಗಿಂತ ಹೆಚ್ಚಿನ ವಿದೇಶಿ ವಿನಿಮಯ ಉಳಿತಾಯಕ್ಕೂ ಕಾರಣವಾಗಿದೆ. 185 ಲಕ್ಷ ಮೆಟ್ರಿಕ್ ಟನ್‌ಗಳ ಕಚ್ಚಾ ತೈಲ ಉಳಿಸಲು ಮತ್ತು ನಿವ್ವಳ ಇಂಗಾಲ ಹೊರಸೂಸುವಿಕೆ ಸುಮಾರು 557 ಲಕ್ಷ ಮೆಟ್ರಿಕ್ ಟನ್‌ಗಳ ಕಡಿತಕ್ಕೆ ಕಾರಣವಾಗಿದೆ. ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣ ಮಾಡುವುದರಿಂದ 35,000 ಕೋಟಿ ರೂ.ಗಿಂತ ಹೆಚ್ಚು ಪಾವತಿಯಾಗುವ ಸಾಧ್ಯತೆಯಿದೆ. ವಾರ್ಷಿಕವಾಗಿ ರೈತರಿಗೆ. ಸಂಕುಚಿತ ಜೈವಿಕ ಅನಿಲ (CBG) ಬಳಕೆಯನ್ನು ಉತ್ತೇಜಿಸಲು ಆಟೋಮೋಟಿವ್ ಇಂಧನ, ಕೈಗೆಟುಕುವ ಸಾರಿಗೆಯ ಕಡೆಗೆ ಸುಸ್ಥಿರ ಪರ್ಯಾಯ (SATAT) ಉಪಕ್ರಮವನ್ನು ಸಹ ಪ್ರಾರಂಭಿಸಲಾಗಿದೆ.
• ತೈಲ ಪಿಎಸ್‌ಯುಗಳ ಆರ್ಥಿಕ ಕಾರ್ಯಕ್ಷಮತೆ: ತೈಲ ಪಿಎಸ್‌ಯುಗಳ ಹಣಕಾಸಿನ ಕಾರ್ಯಕ್ಷಮತೆ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿ, ಸಿಪಿಎಸ್ಇಗಳಿಗೆ 2024-25ರ ಹಣಕಾಸು ವರ್ಷದಲ್ಲಿ ಒಟ್ಟು ಬಜೆಟ್ ಆಂತರಿಕ ಮತ್ತು ಹೆಚ್ಚುವರಿ ಬಜೆಟ್ ಸಂಪನ್ಮೂಲಗಳು 1,18,4979 ಕೋಟಿ ರೂ. ಆಗಿದ್ದು, ಇದಕ್ಕೆ ಪ್ರತಿಯಾಗಿ 1,18,4979 ಕೋಟಿ ರೂ. ನಿಜವಾದ ವೆಚ್ಚವಾಗಿದೆ 30.11.2024ಕ್ಕೆ ಅನ್ವಯವಾಗುವಂತೆ, ಇದು ಬಜೆಟ್ ಐಇಬಿಆರ್ ನ 82.4% ಆಗಿದೆ. 2023-24ರ ಇದೇ ಅವಧಿಯಲ್ಲಿ, 1,06,401 ಕೋಟಿ ರೂಪಾಯಿಗಳ ಐಇಬಿಆರ್ ಗೆ ಪ್ರತಿಯಾಗಿ, ವಾಸ್ತವಿಕ ವೆಚ್ಚವು 75,418 ಕೋಟಿ ರೂ.ಗಳಷ್ಟಿತ್ತು, ಇದು ಬಜೆಟ್ ಐಇಬಿಆರ್ ನ 70.9% ಆಗಿತ್ತು.
16. ಫ್ಲ್ಯಾಗ್‌ಶಿಪ್ ಕಾರ್ಯಕ್ರಮಗಳು
• ಸ್ಟಾರ್ಟಪ್ ಇಂಡಿಯಾ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿ, ಪಿಎಸ್ ಯುಗಳ ಆರಂಭಿಕ ನಿಧಿ ಒಟ್ಟು 547.35 ಕೋಟಿ ರೂ. ಪ್ರಸ್ತುತ, ಒಟ್ಟು 303 ಸ್ಟಾರ್ಟಪ್‌ಗಳು ತೈಲ ಮತ್ತು ಅನಿಲ ಪಿಎಸ್‌ಯುಗಳಿಂದ ನಿಧಿಯನ್ನು ಪಡೆದಿವೆ, ಅದು ಸುಮಾರು 286.36 ಕೋಟಿ ರೂ. ಆಗಿದೆ.
• ಕೌಶಲ್ಯ ಅಭಿವೃದ್ಧಿ: ಹೈಡ್ರೋಕಾರ್ಬನ್ ವಲಯಕ್ಕಾಗಿ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಕ್ರಮವಾಗಿ ಐಒಸಿಎಲ್, ಎಚ್ ಪಿಸಿಎಲ್, ಬಿಪಿಸಿಎಲ್, ಒಐಎಲ್ ಮತ್ತು ಜಿಎಐಎಲ್ ನಿಂದ ಭುವನೇಶ್ವರ, ವಿಶಾಖಪಟ್ಟಣಂ, ಕೊಚ್ಚಿ, ಅಹಮದಾಬಾದ್, ಗುವಾಹಟಿ ಮತ್ತು ರಾಯ್ಬರೇಲಿ 6 ನಗರಗಳಲ್ಲಿ ಸ್ಥಾಪಿಸಲಾಗಿದೆ. 24 ನವೆಂಬರ್ ವರೆಗೆ, 41,547ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಈ ಎಸ್ ಡಿಐಗಳಲ್ಲಿ ತರಬೇತಿ ಪಡೆದಿದ್ದಾರೆ. ರಾಷ್ಟ್ರೀಯ ಆಕ್ಯುಪೇಷನಲ್ ಸ್ಟ್ಯಾಂಡರ್ಡ್(ಎನ್ಒಎಸ್)/ಕ್ವಾಲಿಫಿಕೇಶನ್ ಪ್ಯಾಕ್(ಕ್ಯುಪಿ) ಅಭಿವೃದ್ಧಿಗಾಗಿ ಉದ್ಯಮದ ಸದಸ್ಯರೊಂದಿಗೆ ಸಮಾಲೋಚಿಸಿ ಹಲವಾರು ಹೆಚ್ಚಿನ ಆದ್ಯತೆಯ ವಹಿವಾಟುಗಳನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ, 55 ಕ್ಯುಪಿಗಳನ್ನು ರಾಷ್ಟ್ರೀಯ ಕೌಶಲ್ಯ ಅರ್ಹತಾ ಸಮಿತಿ(ಎನ್ಎಸ್ ಕ್ಯುಸಿ) ಅನುಮೋದಿಸಿದೆ.
*****
(Release ID: 2091129)
Visitor Counter : 13