ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ


ರಾಷ್ಟ್ರಪತಿಯವರು ಜನವರಿ17, 2025 ರಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ

Posted On: 02 JAN 2025 2:26PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಇಂದು 2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. 17ನೇ ಜನವರಿ, 2025 ರಂದು (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರು ರಾಷ್ಟ್ರಪತಿಯವರಿಂದ ಪ್ರಶಸ್ತಿಗಳನ್ನು ಸ್ವೀಕರಿಸುತ್ತಾರೆ.

ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸರಿಯಾದ ಪರಿಶೀಲನೆಯ ನಂತರ, ಸರ್ಕಾರವು ಈ ಕೆಳಗಿನ ಕ್ರೀಡಾಪಟುಗಳು, ತರಬೇತುದಾರರು, ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದೆ:

i. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2024

ಕ್ರ.ಸಂ.

ಕ್ರೀಡಾಪಟುವಿನ ಹೆಸರು

ವಿಭಾಗ

1

ಶ್ರೀ ಗುಕೇಶ್ ಡಿ

ಚದುರಂಗ

2

ಶ್ರೀ ಹರ್ಮನ್‌ ಪ್ರೀತ್ ಸಿಂಗ್

ಹಾಕಿ

3

ಶ್ರೀ ಪ್ರವೀಣ್ ಕುಮಾರ್

ಪ್ಯಾರಾ-ಅಥ್ಲೆಟಿಕ್ಸ್

4

ಕುಮಾರಿ ಮನು ಭಾಕರ್

ಶೂಟಿಂಗ್

 

ii. ಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಗಳು 2024

ಕ್ರ.ಸಂ.

ಕ್ರೀಡಾಪಟುವಿನ ಹೆಸರು

ವಿಭಾಗ

  1.  

ಕುಮಾರಿ ಜ್ಯೋತಿ ಯರ್ರಾಜಿ

ಅಥ್ಲೆಟಿಕ್ಸ್

  1.  

ಕುಮಾರಿ ಅಣ್ಣು ರಾಣಿ

ಅಥ್ಲೆಟಿಕ್ಸ್

  1.  

ಕುಮಾರಿ ನೀತು

ಬಾಕ್ಸಿಂಗ್

  1.  

ಕುಮಾರಿ ಸ್ವೀಟಿ

ಬಾಕ್ಸಿಂಗ್

  1.  

ಕುಮಾರಿ ವಂತಿಕಾ ಅಗರವಾಲ್

ಚದುರಂಗ

  1.  

ಕುಮಾರಿ ಸಲೀಮಾ ಟೆಟೆ

ಹಾಕಿ

  1.  

ಶ್ರೀ ಅಭಿಷೇಕ್

ಹಾಕಿ

  1.  

ಶ್ರೀ ಸಂಜಯ್

ಹಾಕಿ

  1.  

ಶ್ರೀ ಜರ್ಮನ್ಪ್ರೀತ್ ಸಿಂಗ್

ಹಾಕಿ

  1.  

ಶ್ರೀ ಸುಖಜೀತ್ ಸಿಂಗ್

ಹಾಕಿ

  1.  

ಶ್ರೀ ರಾಕೇಶ್ ಕುಮಾರ್

ಪ್ಯಾರಾ-ಆರ್ಚರಿ

  1.  

ಕುಮಾರಿ ಪ್ರೀತಿ ಪಾಲ್

ಪ್ಯಾರಾ-ಅಥ್ಲೆಟಿಕ್ಸ್

  1.  

ಕುಮಾರಿ ಜೀವಾಂಜಿ ದೀಪ್ತಿ

ಪ್ಯಾರಾ-ಅಥ್ಲೆಟಿಕ್ಸ್

  1.  

ಶ್ರೀ ಅಜೀತ್ ಸಿಂಗ್

ಪ್ಯಾರಾ-ಅಥ್ಲೆಟಿಕ್ಸ್

  1.  

ಶ್ರೀ ಸಚಿನ್ ಸರ್ಜೆರಾವ್ ಖಿಲಾರಿ

ಪ್ಯಾರಾ-ಅಥ್ಲೆಟಿಕ್ಸ್

  1.  

ಶ್ರೀ ಧರಂಬೀರ್

ಪ್ಯಾರಾ-ಅಥ್ಲೆಟಿಕ್ಸ್

  1.  

ಶ್ರೀ ಪ್ರಣವ್ ಸೂರ್ಮ

ಪ್ಯಾರಾ-ಅಥ್ಲೆಟಿಕ್ಸ್

  1.  

ಶ್ರೀ ಹೆಚ್ ಹೊಕಾಟೊ ಸೆಮಾ

ಪ್ಯಾರಾ-ಅಥ್ಲೆಟಿಕ್ಸ್

  1.  

ಕುಮಾರಿ ಸಿಮ್ರಾನ್

ಪ್ಯಾರಾ-ಅಥ್ಲೆಟಿಕ್ಸ್

  1.  

ಶ್ರೀ ನವದೀಪ್

ಪ್ಯಾರಾ-ಅಥ್ಲೆಟಿಕ್ಸ್

  1.  

ಶ್ರೀ ನಿತೇಶ್ ಕುಮಾರ್

ಪ್ಯಾರಾ-ಬ್ಯಾಡ್ಮಿಂಟನ್

  1.  

ಕುಮಾರಿ ತುಳಸಿಮತಿ ಮುರುಗೇಶನ್

ಪ್ಯಾರಾ-ಬ್ಯಾಡ್ಮಿಂಟನ್

  1.  

ಕುಮಾರಿ ನಿತ್ಯ ಶ್ರೀ ಸುಮತಿ ಶಿವನ್

ಪ್ಯಾರಾ-ಬ್ಯಾಡ್ಮಿಂಟನ್

  1.  

ಕುಮಾರಿ ಮನಿಷಾ ರಾಮದಾಸ್

ಪ್ಯಾರಾ-ಬ್ಯಾಡ್ಮಿಂಟನ್

  1.  

ಶ್ರೀ ಕಪಿಲ್ ಪರ್ಮಾರ್

ಪ್ಯಾರಾ-ಜೂಡೋ

  1.  

ಕುಮಾರಿ ಮೋನಾ ಅಗರ್ವಾಲ್

ಪ್ಯಾರಾ-ಶೂಟಿಂಗ್

  1.  

ಕುಮಾರಿ ರುಬಿನಾ ಫ್ರಾನ್ಸಿಸ್

ಪ್ಯಾರಾ-ಶೂಟಿಂಗ್

  1.  

ಶ್ರೀ ಸ್ವಪ್ನಿಲ್ ಸುರೇಶ ಕುಸಲೆ

ಶೂಟಿಂಗ್

  1.  

ಶ್ರೀ ಸರಬ್ಜೋತ್ ಸಿಂಗ್

ಶೂಟಿಂಗ್

  1.  

ಶ್ರೀ ಅಭಯ್ ಸಿಂಗ್

ಸ್ಕ್ವ್ಯಾಷ್

  1.  

ಶ್ರೀ ಸಾಜನ್ ಪ್ರಕಾಶ್

ಈಜು

  1.  

ಶ್ರೀ ಅಮನ್

ಕುಸ್ತಿ

 

iii. ಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಗಳು 2024 (ಜೀವಮಾನ ಸಾಧನೆ).

ಕ್ರ.ಸಂ.

ಕ್ರೀಡಾಪಟುವಿನ ಹೆಸರು

ವಿಭಾಗ

1

ಶ್ರೀ ಸುಚಾ ಸಿಂಗ್

ಅಥ್ಲೆಟಿಕ್ಸ್

2

ಶ್ರೀ ಮುರಳಿಕಾಂತ್ ರಾಜಾರಾಂ ಪೇಟ್ಕರ್

ಪ್ಯಾರಾ-ಈಜು

 

iv. ಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ 2024

. ಸಾಮಾನ್ಯ ವರ್ಗ:

ಕ್ರ.ಸಂ.

ತರಬೇತುದಾರರ ಹೆಸರು

ವಿಭಾಗ

1

ಶ್ರೀ ಸುಭಾಷ್ ರಾಣಾ

ಪ್ಯಾರಾ-ಶೂಟಿಂಗ್

2

ಕುಮಾರಿ ದೀಪಾಲಿ ದೇಶಪಾಂಡೆ

ಶೂಟಿಂಗ್

3

ಶ್ರೀ ಸಂದೀಪ್ ಸಾಂಗ್ವಾನ್

ಹಾಕಿ

 

ಬಿ. ಜೀವಮಾನ ಸಾಧನೆ ವರ್ಗ:

ಕ್ರ.ಸಂ.

ತರಬೇತುದಾರರ ಹೆಸರು

ವಿಭಾಗ

1

ಶ್ರೀ ಎಸ್ ಮುರಳೀಧರನ್

ಬ್ಯಾಡ್ಮಿಂಟನ್

2

ಶ್ರೀ ಅರ್ಮಾಂಡೋ ಆಗ್ನೆಲೊ ಕೊಲಾಕೊ

ಫುಟ್ಬಾಲ್

 

v. ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹನಾ ಪ್ರಶಸ್ತಿ

ಕ್ರ.ಸಂ.

ಸಂಸ್ಥೆಯ ಹೆಸರು

1

ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ

vi. ಮೌಲಾನಾ ಅಬುಲ್ ಕಲಾಂ ಆಜಾದ್ (ಎಂಎಕೆಎ) ಟ್ರೋಫಿ 2024:

ಕ್ರ.ಸಂ.

ವಿಶ್ವವಿದ್ಯಾಲಯದ ಹೆಸರು

1

ಚಂಡೀಗಢ ವಿಶ್ವವಿದ್ಯಾಲಯ

ಒಟ್ಟಾರೆ ವಿಜೇತ ವಿಶ್ವವಿದ್ಯಾಲಯ

2

ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಪಿಬಿ)

ಮೊದಲ ರನ್ನರ್ ಅಪ್ ವಿಶ್ವವಿದ್ಯಾಲಯ

3

ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ

2ನೇ ರನ್ನರ್ ಅಪ್ ವಿಶ್ವವಿದ್ಯಾಲಯ

 

ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಪುರಸ್ಕರಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿʼಯನ್ನು ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿನ ಅದ್ಭುತ ಮತ್ತು ಅತ್ಯುತ್ತಮ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ.

ʼಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಅರ್ಜುನ ಪ್ರಶಸ್ತಿʼಯನ್ನು ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತಮ ಪ್ರದರ್ಶನ ಮತ್ತು ನಾಯಕತ್ವ, ಕ್ರೀಡಾ ಮನೋಭಾವ ಮತ್ತು ಶಿಸ್ತಿನ ಪ್ರಜ್ಞೆಯನ್ನು ಪ್ರದರ್ಶಿಸಿದವರಿಗೆ ನೀಡಲಾಗುತ್ತದೆ.

ತಮ್ಮ ಪ್ರದರ್ಶನದಿಂದ ಕ್ರೀಡೆಗೆ ಕೊಡುಗೆ ನೀಡಿದ ಕ್ರೀಡಾಪಟುಗಳನ್ನು ಗೌರವಿಸಲು ಮತ್ತು ಪ್ರೇರೇಪಿಸಲು ಸಕ್ರಿಯ ಕ್ರೀಡಾ ವೃತ್ತಿಯಿಂದ ನಿವೃತ್ತಿಯ ನಂತರವೂ ಕ್ರೀಡೆಯ ಉತ್ತೇಜನಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸುವ ವ್ಯಕ್ತಿಗಳಿಗೆ ಅರ್ಜುನ ಪ್ರಶಸ್ತಿಯನ್ನು (ಜೀವಮಾನ) ನೀಡಲಾಗುತ್ತದೆ.

ಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ’ಯನ್ನು ಸತತವಾಗಿ ಅತ್ಯುತ್ತಮ ಮತ್ತು ಶ್ರೇಷ್ಠ ಕೆಲಸವನ್ನು ಮಾಡಿದ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ಅನುವು ಮಾಡಿಕೊಡುವ ತರಬೇತುದಾರರಿಗೆ ನೀಡಲಾಗುತ್ತದೆ.

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಒಟ್ಟಾರೆ ಅತ್ಯುತ್ತಮ ಪ್ರದರ್ಶನ ನೀಡಿದ ವಿಶ್ವವಿದ್ಯಾಲಯಕ್ಕೆ ಮೌಲಾನಾ ಅಬುಲ್ ಕಲಾಂ ಆಜಾದ್ (ಎಂಎಕೆಎ) ಟ್ರೋಫಿ ನೀಡಲಾಗುತ್ತದೆ.

ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಆಹ್ವಾನಿಸಲಾಗಿತ್ತು ಮತ್ತು ಕ್ರೀಡಾ ಪಟುಗಳು/ತರಬೇತುದಾರರು/ಸಂಸ್ಥೆಗಳು ಮೀಸಲಾದ ಆನ್‌ಲೈನ್ ಪೋರ್ಟಲ್ ಮೂಲಕ ಸ್ವಯಂ-ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ವರ್ಷ ಪ್ರಶಸ್ತಿಗಳಿಗಾಗಿ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು, ಇದನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ (ನಿವೃತ್ತ) ವಿ. ರಾಮಸುಬ್ರಮಣಿಯನ್ ನೇತೃತ್ವದ ಖ್ಯಾತ ಕ್ರೀಡಾಪಟುಗಳು, ಕ್ರೀಡಾ ಪತ್ರಿಕೋದ್ಯಮ ಮತ್ತು ಕ್ರೀಡಾ ಆಡಳಿತದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡ ಆಯ್ಕೆ ಸಮಿತಿಯು ಪರಿಶೀಲಿಸಿತು.

 

*****

 


(Release ID: 2090032) Visitor Counter : 34