ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

‘ಜಮ್ಮು ಕಾಶ್ಮೀರ ಮತ್ತು ಲಡಾಖ್: ಅನಾದಿಕಾಲದಿಂದ(ಥ್ರೂ ದಿ ಏಜಸ್)' ಎಂಬ ಪುಸ್ತಕವನ್ನು ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಬಿಡುಗಡೆ ಮಾಡಲಿದ್ದಾರೆ


ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ

Posted On: 01 JAN 2025 2:31PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2ನೇ ಜನವರಿ 2025 ರಂದು ಹೊಸದಿಲ್ಲಿಯಲ್ಲಿ ನಡೆಯುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.  ಖ್ಯಾತ ಲೇಖಕರು, ಶಿಕ್ಷಣ ತಜ್ಞರು, ಸಚಿವಾಲಯದ ಅಧಿಕಾರಿಗಳು ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು.

'ಜಮ್ಮು ಕಾಶ್ಮೀರ ಮತ್ತು ಲಡಾಖ್: ಅನಾದಿಕಾಲದಿಂದ (ಥ್ರೂ ದಿ ಏಜಸ್)' ಎಂಬ ಶೀರ್ಷಿಕೆಯ ಪುಸ್ತಕವು ಜಮ್ಮು ಕಾಶ್ಮೀರ ಮತ್ತು ಲಡಾಖ್‌ ನ ಕಥೆಯನ್ನು ಶತಶತಮಾನಗಳಿಂದ ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೆ.  ಶೀರ್ಷಿಕೆಯು ಜಮ್ಮು ಕಾಶ್ಮೀರ ಮತ್ತು ಲಡಾಖ್‌ ನ ಕಥೆಯನ್ನು ಶತಶತಮಾನಗಳ ದೃಷ್ಟಿಕೋನ ಮತ್ತು ಸ್ವರೂಪದಿಂದ ಅನಾದಿಕಾಲದಿಂದ ಇತಿಹಾಸ ರೂಪದಲ್ಲಿ ದಾಖಲಿಸಲು ಪ್ರಯತ್ನಿಸುತ್ತದೆ, ಇದು ವಿಷಯ ತಜ್ಞರು, ಅವಲೋಕನ ಮಾಡ ಬಯಸುವವರಿಗೆ ಮತ್ತು ಈ ಕುರಿತು ಮಾತನಾಡುವವರಿಗೆ ಅವಲೋಕನವನ್ನು ಅಧ್ಯಯನ ಗ್ರಂಥವಾಗಿ ಮಾಹಿತಿಯನ್ನು ಶಕ್ತಗೊಳಿಸುತ್ತದೆ. ಇದರಲ್ಲಿ  ಈ ಪ್ರದೇಶದ ಇತಿಹಾಸದ ಮೂರು ಸಾವಿರ ವರ್ಷಗಳವರೆಗಿನ ಆಳವಾದ ಮಾಹಿತಿ ಒಳಗೊಂಡಿರುವ ಏಳು ವಿಭಾಗಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಗ್ರಂಥದಲ್ಲಿ ಸೇರ್ಪಡೆಗಾಗಿ ಆಯ್ಕೆಮಾಡಲಾದ ಪ್ರತಿಯೊಂದು ವಿವರಣೆಯನ್ನು ಬಹಳಷ್ಟು ಎಚ್ಚರಿಕೆಯಿಂದ ಮಾಡಲಾಗಿದೆ, ಒಂದು ವಯಸ್ಸಿನ ಪ್ರತಿನಿಧಿಯಾಗಿ, ಅದರ ಪ್ರಾಮುಖ್ಯತೆ ಮತ್ತು ಭಾರತೀಯ ಇತಿಹಾಸದ ದೊಡ್ಡ ಐತಿಹಾಸಿಕ ಅವಲೋಕನಕ್ಕೆ ದೊಡ್ಡ ಕೊಡುಗೆಯಾಗಿದೆ. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಕಟವಾದ ಈ ಪುಸ್ತಕವು ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‌ ಸಂಸ್ಥೆಯ ಸಂಯುಕ್ತ ಸಹಯೋಗದ ಪ್ರಯತ್ನವಾಗಿದೆ.

 

*****
.


(Release ID: 2089507) Visitor Counter : 27