ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಡಾ.ಮನ್ಸುಖ್ ಮಾಂಡವಿಯಾ ಅವರು ಫಿಟ್ ಇಂಡಿಯಾ ಸೈಕ್ಲಿಂಗ್ ಅಭಿಯಾನಕ್ಕೆ ಚಾಲನೆ ನೀಡಿದರು. ಭಾರತದ 1000 ಸ್ಥಳಗಳಲ್ಲಿ ಕಾರ್ಯಕ್ರಮಗಳು ಆಯೋಜನೆ
Posted On:
17 DEC 2024 3:33PM by PIB Bengaluru
ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿಇಂದು ಬೆಳಗ್ಗೆ ‘ಫಿಟ್ ಇಂಡಿಯಾ ಸೈಕ್ಲಿಂಗ್ ಅಭಿಯಾನ’ವನ್ನು ಪ್ರಾರಂಭಿಸುವ ಮೂಲಕ ಫಿಟ್ ಇಂಡಿಯಾ ಆಂದೋಲನವು ಆರೋಗ್ಯಕರ ಮತ್ತು ಹಸಿರು ಭಾರತದತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ನಿಖಿಲ್ ಖಾಡ್ಸೆ, ಗೌರವಾನ್ವಿತ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಿಮ್ರಾನ್ ಶರ್ಮಾ, 2022ರ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ನೀತು ಘಂಗಾಸ್ ಮತ್ತು ಏಷ್ಯನ್ ಗೇಮ್ಸ್‌ನ 2022ರ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಸೇರಿದಂತೆ ಗಣ್ಯ ಕ್ರೀಡಾಪಟುಗಳ ಉಪಸ್ಥಿತಿಯಲ್ಲಿಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸೈಕ್ಲಿಂಗ್‌ಅನ್ನು ಸುಸ್ಥಿರ ಮತ್ತು ಆರೋಗ್ಯಕರ ಸಾರಿಗೆ ವಿಧಾನವಾಗಿ ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಕ್ರೀಡಾಂಗಣದಿಂದ ರೈಸಿನಾ ಹಿಲ್ಸ್ ಮತ್ತು ಹಿಂತಿರುಗುವ 3 ಕಿಲೋಮೀಟರ್ ಸವಾರಿಗೆ ಸುಮಾರು 500 ಸೈಕ್ಲಿಂಗ್ ಉತ್ಸಾಹಿಗಳು ಸೇರಿಕೊಂಡರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಪುನರುಚ್ಚರಿಸಿದ ಡಾ.ಮಾಂಡವೀಯ, ನಾವು 2047ರಲ್ಲಿ ನಾವು 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಗೌರವಾನ್ವಿತ ಪ್ರಧಾನಿ ಅವರ ವಿಕಸಿತ ಭಾರತದ ದೃಷ್ಟಿಕೋನವನ್ನು ನನಸಾಗಿಸಬೇಕು ಮತ್ತು ಇದು ಸೂಕ್ತವಾಗಿದೆ, ನಾವು ಪೂರ್ಣ ಪ್ರಮಾಣದ ಆರೋಗ್ಯಕರ ಮತ್ತು ಸದೃಢ ರಾಷ್ಟ್ರವಾಗಬೇಕು ಎಂದು ಹೇಳಿದರು.
ಸೈಕ್ಲಿಂಗ್‌ನ ಮಹತ್ವವನ್ನು ಬಿಂಬಿಸಿದ ಅವರು, ನಾವು ಈ ಕಾರ್ಯಕ್ರಮವನ್ನು ‘ಫಿಟ್ ಇಂಡಿಯಾ ಸೈಕ್ಲಿಂಗ್ ಮಂಗಳವಾರಗಳು’ ಎಂದು ಪ್ರಾರಂಭಿಸಿದ್ದೇವೆ ಆದರೆ ಸೈಕ್ಲಿಂಗ್ ಉತ್ಸಾಹಿಗಳ ಅನುಕೂಲಕ್ಕಾಗಿ, ಇದನ್ನು ಈಗ ಭಾನುವಾರ ನಡೆಸಲಾಗುವುದು ಮತ್ತು ಈಗ ‘ಸೈಕಲ್‌ನಲ್ಲಿ ಭಾನುವಾರ’ ಎಂದು ಕರೆಯಲಾಗುತ್ತದೆ. ವೈದ್ಯರು, ಪತ್ರಕರ್ತರು, ಶಿಕ್ಷಕರು, ಕಾರ್ಪೊರೇಟ್ ವೃತ್ತಿಪರರು ಮತ್ತು ಯುವಕರು ಭಾನುವಾರದಂದು ನವದೆಹಲಿಯಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿಒಂದು ಗಂಟೆಯ ಸೈಕ್ಲಿಂಗ್ ಸವಾರಿಯಲ್ಲಿಸೇರಲಿದ್ದಾರೆ. ಸೈಕ್ಲಿಂಗ್ ಪರಿಸರಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತದೆ, ಇದು ಮಾಲಿನ್ಯಕ್ಕೆ ಪರಿಹಾರವಾಗಿದೆ ಮತ್ತು ಸುಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದರು.
ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್‌ಐ), ಮೈ ಭಾರತ್ ಮತ್ತು ವಿವಿಧ ಕ್ರೀಡಾ ಪ್ರಾಧಿಕಾರಗಳ ಸಹಯೋಗದೊಂದಿಗೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಫಿಟ್ ಇಂಡಿಯಾ ಆಂದೋಲನವು ದೇಶಾದ್ಯಂತ 1000ಕ್ಕೂ ಹೆಚ್ಚು ಸ್ಥಳಗಳಲ್ಲಿಏಕಕಾಲದಲ್ಲಿ ನಡೆದ ಇಂದಿನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾದ ಪ್ರಾದೇಶಿಕ ಕೇಂದ್ರಗಳು, ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಎನ್‌ಸಿಒಇ) ಮತ್ತು ದೇಶಾದ್ಯಂತ ಖೇಲೋ ಇಂಡಿಯಾ ಕೇಂದ್ರಗಳಲ್ಲಿ(ಕೆಐಸಿ) ಏಕಕಾಲದಲ್ಲಿನಡೆದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ50,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಎರಡು ಬಾರಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸುಮಿತ್ ಅಂತಿಲ್, ಗಾಂಧಿನಗರದ ಎನ್‌ಸಿಒಇಯಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ನವದೀಪ್, ಭಾರತೀಯ ಮಹಿಳಾ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್, ಒಲಿಂಪಿಯನ್ ಶಾಟ್‌ಪುಟ್ ಪಟು ತಜಿಂದರ್‌ಪಾಲ್ ಸಿಂಗ್ ತೂರ್ ಮತ್ತು ಎನ್‌ಎಸ್‌ಎನ್‌ಐಎಸ್ ಪಟಿಯಾಲದಲ್ಲಿ ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಸೇರಿದಂತೆ ಪ್ರಸಿದ್ಧ ಕ್ರೀಡಾಪಟುಗಳು ರಾಷ್ಟ್ರವ್ಯಾಪಿ ಸೈಕ್ಲಿಂಗ್ ಅಭಿಯಾನದಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿಯುವಕರು ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು. ವ್ಯಾಪಕ ಭಾಗವಹಿಸುವಿಕೆಯ ಬಗ್ಗೆ ಪ್ರತಿಕ್ರಿಯಿಸಿದ 2023ರ ವಿಶ್ವ ಚಾಂಪಿಯನ್‌ಷಿಪ್ ಚಿನ್ನದ ಪದಕ ವಿಜೇತೆ ನೀತು ಘಂಗಾಸ್, ಇದು ಯುವಕರು ಮತ್ತು ಹಿರಿಯರಿಗೆ ಸದೃಢವಾಗಿರಲು ಪ್ರಮುಖ ವೇದಿಕೆಯಾಗಿದೆ ಮತ್ತು ಭಾರತವನ್ನು ಮಾಲಿನ್ಯ ಮುಕ್ತವಾಗಿಡಲು ಸಹ ಕೊಡುಗೆ ನೀಡುತ್ತದೆ. ‘‘ಸವಾರಿಯ ಸಮಯದಲ್ಲಿ ನಾನು ಗೌರವಾನ್ವಿತ ಕ್ರೀಡಾ ಸಚಿವರೊಂದಿಗೆ ಸಂವಹನ ನಡೆಸುತ್ತಿದ್ದೆ ಮತ್ತು ಅವರು ದೇಶದಲ್ಲಿಕ್ರೀಡೆಗಾಗಿ ಏನು ಮಾಡುತ್ತಿದ್ದಾರೆ ಎಂಬುದರಿಂದ ನಾನು ಸೂಧಿರ್ತಿ ಪಡೆದಿದ್ದೇನೆ,’’ ಎಂದು ಹೇಳಿದರು.
*****
(Release ID: 2085324)
Visitor Counter : 20