ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರವಾಸೋದ್ಯಮಕ್ಕೆ ಅನೇಕರ ಜೀವನದಲ್ಲಿ ಸಮೃದ್ಧಿ ತರುವ ಸಾಮರ್ಥ್ಯವಿದೆ : ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 29 NOV 2024 11:45AM by PIB Bengaluru

ಪ್ರವಾಸೋದ್ಯಮಕ್ಕೆ ಅನೇಕರ ಜೀವನದಲ್ಲಿ ಸಮೃದ್ಧಿ ತರುವ ಸಾಮರ್ಥ್ಯವಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. ಜನರು ಅಪಾರ ಸಂಖ್ಯೆಯಲ್ಲಿ ಅಸಾಧಾರಣ ಭಾರತದ ಅದ್ಭುತಗಳ ಅನುಭೂತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಭಾರತದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸಲು ಗಮನಹರಿಸುವುದನ್ನು ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

“ಪ್ರವಾಸೋದ್ಯಮವು ಅನೇಕರ ಜೀವನದಲ್ಲಿ ಸಮೃದ್ಧಿಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಅದ್ಭುತಗಳ ಅನುಭೂತಿಯನ್ನು ಹೆಚ್ಚಿನ ಜನರು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಭಾರತದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ವರ್ಧಿಸುವತ್ತ ಗಮನಹರಿಸುತ್ತದೆ.” #IncredibleIndia

 

 

*****


(ಪ್ರಕಟಣೆ ಐ.ಡಿ.: 2078970) ವಿಸಿಟರ್ ಕೌಂಟರ್ : 82