iffi banner
ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಆಸ್ಟ್ರೇಲಿಯಾದ ಚಲನಚಿತ್ರ ನಿರ್ಮಾಪಕ ಫಿಲಿಪ್ ನೋಯ್ಸ್ ಗೆ  ಐಎಫ್ಎಫ್ಐ 2024ರಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಖ್ಯಾತ ಚಲನಚಿತ್ರ ನಿರ್ಮಾಪಕ ಫಿಲಿಪ್ ನೊಯ್ಸ್ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2024ರ ಐಎಫ್ಎಫ್ಐನ ಸಮಾರೋಪ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ನಿಂದ ಅವರು ಏನು ಹೇಳುತ್ತಾರೆಂದು ನೋಡೋಣ.

ಏಂಜಲೀನಾ ಜೋಲೀ ಅಭಿನಯದ ಸಾಲ್ಟ್, ಹ್ಯಾರಿಸನ್ ಫೋರ್ಡ್ ನಟಿಸಿದ ಪೇಟ್ರಿಯಾಟ್ ಗೇಮ್ಸ್ ಮತ್ತು ಡೆನ್ಝೆಲ್ ವಾಷಿಂಗ್ಟನ್ ಅಭಿನಯದ ದಿ ಬೋನ್ ಕಲೆಕ್ಟರ್ ನಂತಹ ಚಿತ್ರಗಳಿಗೆ ನೊಯ್ಸ್ ಹೆಸರುವಾಸಿಯಾಗಿದ್ದಾರೆ.

ಈ ಪ್ರಶಸ್ತಿಯು ಬೆಳ್ಳಿ ನವಿಲು ಪದಕ, ಪ್ರಮಾಣಪತ್ರ, ಶಾಲು, ಸ್ಕ್ರಾಲ್ ಮತ್ತು 10,00,000 ರೂ.ಗಳ ನಗದು ಬಹುಮಾನವನ್ನು ಒಳಗೊಂಡಿದೆ.

ಉತ್ಸವದ ಸಮಯದಲ್ಲಿ ಗೋವಾದ ಕಲಾ ಅಕಾಡೆಮಿಯಲ್ಲಿ ನಡೆದ ಐಎಫ್ಎಫ್ಐ 2024ರಲ್ಲಿ "ಹೊಸ ಹಾಲಿವುಡ್ ನಲ್ಲಿ ಯಶಸ್ವಿಯಾಗುವುದು ಹೇಗೆ" ಎಂಬ ವಿಷಯದ ಬಗ್ಗೆ ಮಾಸ್ಟರ್ ಕ್ಲಾಸ್ ನೀಡಿದರು. ಮಾಸ್ಟರ್ ಕ್ಲಾಸ್ ನಿಂದ ವಿವರಗಳನ್ನು ಇಲ್ಲಿ ಹುಡುಕಿ.

 

*****

iffi reel

(रिलीज़ आईडी: 2078953) आगंतुक पटल : 55
इस विज्ञप्ति को इन भाषाओं में पढ़ें: English , Malayalam , Khasi , Urdu , Marathi , हिन्दी , Konkani , Gujarati , Tamil , Telugu