ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ಎಫ್ಐ – 2024ನಲ್ಲಿ ಮರಾಠಿ ವೆಬ್ ಸರಣಿ 'ಲಂಪಾನ್' ಗೆ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿ : "ಕಥೆಯ ನಿರೂಪಣೆ, ನಿರ್ಮಾಣದ ಮೌಲ್ಯಗಳು ಅದಕ್ಕಿಂತ ಹೆಚ್ಚಾಗಿ ತಾರಾಗಣದ ಅದ್ಭುತ ಅಭಿನಯಕ್ಕಾಗಿ ಗೌರವ’’
ಅದ್ಭುತ ಕಥಾ ನಿರೂಪಣೆ, ಉತ್ತಮ ನಿರ್ಮಾಣ ಮೌಲ್ಯಗಳು ಹಾಗೂ ಅತ್ಯುತ್ತಮ ಅಭಿನಯಕ್ಕಾಗಿ ಮರಾಠಿ ವೆಬ್ ಸರಣಿ ‘ಲಂಪಾನ್’ 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ವೆಬ್ ಸರಣಿ(ಒಟಿಟಿ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ನಿಪುಣ್ ಅವಿನಾಶ್ ಧರ್ಮಾಧಿಕಾರಿ ನಿರ್ದೇಶನದ ಈ ಸರಣಿಗೆ ಪ್ರಕಾಶ್ ನಾರಾಯಣ್ ಸಂತ್ ಅವರು ಕಥೆಯನ್ನು ಬರೆದಿದ್ದಾರೆ. ಲಂಪಾನ್' ಅಪರಿಮಿತ ಕುತೂಹಲದಿಂದ ಕನಸು ಕಾಣುವ ಮಗುವಿನ ಕಥೆಯಾಗಿದೆ.
ಈ ಪ್ರಶಸ್ತಿ ಡಿಜಿಟಲ್ ಕಂಟೆಟ್ ನಲ್ಲಿ ನಾವಿನ್ಯತೆಯನ್ನು ಹೊಂದಿರುವವರಿಗೆ ಮತ್ತು ಉತ್ತಮ ನಿರ್ಮಾಪಕರಿಗೆ ನೀಡಲಾಗುವುದು ಮತ್ತು ಲಂಪಾನ್ ಹಿಂದಿರುವ ಒಟಿಟಿ ಪ್ಲಾಟ್ ಫಾರಂಗೆ ಆಕರ್ಷಕ ಮತ್ತು ಚಿಂತನೆ ಹುಟ್ಟಿಸುವ ನಿರೂಪಣೆಯನ್ನು ಹೊಂದಿದೆ.
ಡಿಜಿಟಲ್ ಕಂಟೆಂಟ್ ನಲ್ಲಿ ಸೃಜನಶೀಲತೆಗೆ ಬೇಡಿಕೆ ಇರುವುದನ್ನು ಗುರುತಿಸಿ, 54ನೇ ಆವೃತ್ತಿಯಲ್ಲಿ ಉತ್ತಮ ವೆಬ್ ಸರಣಿ ‘ಒಟಿಟಿ’ ಪ್ರಶಸ್ತಿಯನ್ನು ಆರಂಭಿಸಲಾಯಿತು. ಇದು ಒಟಿಟಿ ವೇದಿಕೆಯಲ್ಲಿ ಅತ್ಯುತ್ತಮವಾಗಿ ಕಥೆ ಹೇಳುವವರನ್ನು ಗೌರವಿಸುವ ಒಂದು ಮಹತ್ವದ ಮೈಲಿಗಲ್ಲಾಗಿ ಮಾರ್ಪಟ್ಟಿದೆ. ಜಾಗತಿಕ ಮನರಂಜಾ ವಲಯದಲ್ಲಿ ಒಟಿಟಿ ವೇದಿಕೆ ಅತಿ ಹೆಚ್ಚು ಪ್ರಭಾವ ಬೀರುವುದನ್ನು ಗುರುತಿಸಲಾಗಿದೆ.
ಈ ವರ್ಷ ಐದು ವೆಬ್ ಸರಣಿಗಳು ತಮ್ಮ ಕ್ರಿಯಾಶೀಲತೆ, ನವಿರಾಗಿ ಕಥೆ ಹೇಳುವ ವಿಧಾನ, ತಾಂತ್ರಿಕ ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಪರಿಣಾಮದಿಂದಾಗಿ ಕಿರುಪಟ್ಟಿಗೆ ಆಯ್ಕೆಯಾಗಿದ್ದವು.
ಅತ್ಯುತ್ತಮ ಒಟಿಟಿ ವೆಬ್ ಸರಣಿ ಪ್ರಶಸ್ತಿ 10,00,000, ರೂ. ನಗದು ಬಹುಮಾನವಿದ್ದು, ಇದು ನಿರ್ಮಾಪಕರು ಮತ್ತು ಒಟಿಟಿ ವೇದಿಕೆ ಜತೆ ಹಂಚಿಕೆಯಾಗುತ್ತದೆ. ಅಲ್ಲದೆ ಸರಣಿಯ ಯಶಸ್ಸಿಗಾಗಿ ಕೊಡುಗೆ ನೀಡಿದವರಿಗಾಗಿ ವೈಯಕ್ತಿಕ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುವುದು.
ಈ ಪ್ರಶಸ್ತಿ ಮನರಂಜನಾ ವಲಯದಲ್ಲಿ ನಾವಿನ್ಯತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಐಎಫ್ಎಫ್ಐನ ಬದ್ಧತೆಯ ಸಂಕೇತವಾಗಿದೆ. ಭಾರತೀಯ ಭಾಷೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ವಸ್ತು ವಿಷಯ ಸೃಷ್ಟಿ ಮತ್ತು ಜಾಗತಿಕ ನಿರ್ಮಾಪಕರು ಮತ್ತು ವೇದಿಕೆಗಳ ನಡುವೆ ಸಹಭಾಗಿತ್ವಕ್ಕೆ ವೇಗ ನೀಡುವ ಉದ್ದೇಶವಿದೆ. ಆ ಮೂಲಕ ಐಎಫ್ಎಫ್ಐ ಡಿಜಿಟಲ್ ಕಥಾ ನಿರೂಪಣೆಯಲ್ಲಿ ಭಾರತವನ್ನು ಜಾಗತಿಕ ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
ಪಿಐಬಿ ಪತ್ರಿಕಾಗೋಷ್ಠಿಯ ವೇಳೆ ಅತ್ಯುತ್ತಮ ಒಟಿಟಿ ವೆಬ್ ಸರಣಿ ಆಯ್ಕೆ ಮಾಡಿದ ತೀರ್ಪುಗಾರರ ತಂಡದ ಮಾಧ್ಯಮ ಸಂವಾದದ ವಿವರ ಇಲ್ಲಿ ಲಭ್ಯ. PIB Press Conference here
ಲಂಪನ್ ಸೋನಿ ಲೈವ್ ಪ್ರೀಮಿಯರ್ ನಲ್ಲಿ ಪ್ರಸಾರವಾಗುತ್ತಿದ್ದು, ಪ್ರಮುಖ ಒಟಿಟಿ ವೇದಿಕೆಗಳ ನಡುವೆ ಭಾರೀ ಸ್ಪರ್ಧೆಯನ್ನು ಒಡ್ಡಿತ್ತು. ಗ್ರಾಮೀಣ ಭಾರತದಲ್ಲಿ ಆರಂಭವಾದ ಈ ಸರಣಿ ಯುವ ಹುಡುಗನೊಬ್ಬನ ಭಾವನಾತ್ಮಕ ಮತ್ತು ಸಾಮಾಜಿಕ ಹೋರಾಟವನ್ನು ಬಿಂಬಿಸುತ್ತ ತಮ್ಮ ಸಮುದಾಯದ ಸಂಕೀರ್ಣ ಡೈನಾಮಿಕ್ಸ್ ನಡುವೆ ತನ್ನ ಗುರುತು ಮೂಡಿಸುವ ಪ್ರಯತ್ನದಲ್ಲಿ ತೊಡಗಿರುತ್ತಾನೆ. ಸ್ವಯಂ ಸಬಲೀಕರಣ, ಸಮುದಾಯದ ನಡುವಿನ ಬಾಂಧವ್ಯ ಹಾಗೂ ವೈಯಕ್ತಿಕ ಬೆಳವಣಿಗೆಯ ಮೂಲಕ ಲಂಪನ್ ವೀಕ್ಷಕರು ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಪಡೆದಿದೆ.
*****
(ಪ್ರಕಟಣೆ ಐ.ಡಿ.: 2078844)
ವಿಸಿಟರ್ ಕೌಂಟರ್ : 51