ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಐ ಸಿ ಎಫ್ ಟಿ - ಯುನೆಸ್ಕೋ ಗಾಂಧಿ ಪದಕವನ್ನು ಗೆದ್ದ ಸ್ವೀಡಿಷ್ ಚಲನಚಿತ್ರ ನಿರ್ಮಾಪಕ ಲೆವಾನ್ ಅಕಿನ್ ಅವರ 'ಕ್ರಾಸಿಂಗ್' ಚಿತ್ರ


'ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಕ್ರಾಸಿಂಗ್ ನ ಪ್ರಭಾವವು ಈ ಐಎಫ್ ಎಫ್ ಐನಲ್ಲಿಅದು  ಎದ್ದು ಕಾಣುವಂತೆ ಮಾಡಿದೆ

ಸ್ವೀಡನ್ ಚಲನಚಿತ್ರ ನಿರ್ಮಾಪಕ ಲೆವಾನ್ ಅಕಿನ್ ಅವರ ’ಕ್ರಾಸಿಂಗ್” ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ಪ್ರತಿಷ್ಠಿತ ಐ ಸಿ ಎಫ್ ಟಿ - ಯುನೆಸ್ಕೋ ಗಾಂಧಿ ಪದಕವನ್ನು ಗೆದ್ದಿದೆ. ಶಾಂತಿ, ಅಹಿಂಸೆ ಮತ್ತು ಮಾನವ ಹಕ್ಕುಗಳ ಪ್ರಚಾರದ ಮೌಲ್ಯಗಳನ್ನು ಪ್ರತಿಬಿಂಬಿಸುವ ಚಿತ್ರಕ್ಕೆ ನೀಡುವ ಪ್ರಶಸ್ತಿ ಇದಾಗಿದೆ.   ವಿಷಯಗಳ ಶಕ್ತಿಯುತ ಅನ್ವೇಷಣೆಗಾಗಿ “ಕ್ರಾಸಿಂಗ್ “ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಜೇತರು ಯುನೆಸ್ಕೋ ಗಾಂಧಿ ಪದಕ ಮತ್ತು ಪ್ರಮಾಣಪತ್ರವನ್ನು ಪಡೆಯುತ್ತಾರೆ.

ಅದ್ಭುತ ಸಿನಿಮೀಯ ಗುಣಗಳು ಮತ್ತು ಲಿಂಗ ಸಮಾನತೆ ಹಾಗು ಸಾಮಾಜಿಕ ತಿಳುವಳಿಕೆಯ ಚಿಂತನಶೀಲ ಅನ್ವೇಷಣೆಗಾಗಿ “ಕ್ರಾಸಿಂಗ್” ಚಿತ್ರವನ್ನು ತೀರ್ಪುಗಾರರು ಶ್ಲಾಘಿಸಿದರು. "ಪ್ರೀತಿ ಮತ್ತು ತಿಳುವಳಿಕೆಯ ಬಗ್ಗೆ ಅದ್ಭುತವಾದ ಸಿನೆಮಾ" ಇದು ಎಂದು ತೀರ್ಪುಗಾರರು ಉಲ್ಲೇಖಿಸಿದ್ದಾರೆ.

ಇಂಟರ್ನ್ಯಾಷನಲ್ ಕೌನ್ಸಿಲ್ ಫಾರ್ ಫಿಲ್ಮ್, ಟೆಲಿವಿಷನ್ ಮತ್ತು ಆಡಿಯೊವಿಶುವಲ್ ಕಮ್ಯುನಿಕೇಷನ್ (ಐಸಿಎಫ್ಟಿ) ಮತ್ತು ಯುನೆಸ್ಕೋ ಸಹಯೋಗದೊಂದಿಗೆ ಸ್ಥಾಪಿಸಲಾದ ಪ್ರಶಸ್ತಿಯು ಸಹಿಷ್ಣುತೆ, ಅಂತರ್-ಸಾಂಸ್ಕೃತಿಕ ಸಂವಾದ ಮತ್ತು ಶಾಂತಿ ಸಂಸ್ಕೃತಿಯ ಆದರ್ಶಗಳನ್ನು ಪ್ರತಿಬಿಂಬಿಸುವ ಚಲನಚಿತ್ರಗಳನ್ನು ಗೌರವಿಸುತ್ತದೆ.

“ಕ್ರಾಸಿಂಗ್” ಅನೇಕ ವರ್ಷಗಳ ಹಿಂದೆ ಕಣ್ಮರೆಯಾದ ತನ್ನ ಸೋದರ ಸೊಸೆಯನ್ನು ಹುಡುಕಲು ಜಾರ್ಜಿಯಾದಿಂದ ಇಸ್ತಾಂಬುಲ್ ಗೆ ಯುವಕನೊಂದಿಗೆ ಪ್ರಯಾಣವನ್ನು ಪ್ರಾರಂಭಿಸುವ ವಯಸ್ಸಾದ ಮಹಿಳೆಯ ಕಥೆಯನ್ನು ಹೇಳುತ್ತದೆ. ಮಹಿಳೆಯ ಪಾತ್ರವನ್ನು ನಿರ್ವಹಿಸಿದ, ಅಸಾಧಾರಣ ಪ್ರತಿಭಾವಂತ ಮಜಿಯಾ ಅರಬುಲಿ, ಲಿಂಗ ಸಮಸ್ಯೆಗಳು ಮತ್ತು ಸಮಾನತೆಗೆ ಸಂಬಂಧಿಸಿ ಅನಿರೀಕ್ಷಿತ ಸಂಪರ್ಕಗಳನ್ನು ಅನಾವರಣಗೊಳಿಸುತ್ತಾಳೆ. ಈ ಚಿತ್ರವು ಪ್ರೀತಿ, ತಿಳುವಳಿಕೆ/ಅರ್ಥ ಮಾಡಿಕೊಳ್ಳುವಿಕೆ ಮತ್ತು ತಲೆಮಾರುಗಳನ್ನು ಮೀರಿದ ಸಂಪರ್ಕಗಳ ಬಗ್ಗೆ ನಿರೂಪಣೆಯನ್ನು ಬಹಳ ಸುಂದರವಾಗಿ ಹೆಣೆಯುತ್ತದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಮಾರ್ಮಿಕ ವ್ಯಾಖ್ಯಾನವನ್ನು ನೀಡುತ್ತದೆ.

ವರ್ಷ, ಹತ್ತು ಗಮನಾರ್ಹ ಚಲನಚಿತ್ರಗಳನ್ನು ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಮಾಡಲಾಯಿತು, ಪ್ರತಿಯೊಂದೂ ವಿಭಿನ್ನ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಪ್ರಕಾರಗಳನ್ನು ಪ್ರತಿನಿಧಿಸುತ್ತದೆ, ಗಾಂಧಿ ತತ್ವಗಳಿಗೆ ಅವುಗಳ ಬದ್ಧತೆ ಅದರಲ್ಲಿ  ಒಂದು ಪ್ರಮುಖಾಂಶವಾಗಿದೆ. ನಾಮನಿರ್ದೇಶಿತರನ್ನು ಇಲ್ಲಿ ನೋಡಿ:

ಐಎಫ್ಎಫ್ಐನಲ್ಲಿ ಗಾಂಧಿ ಪದಕದ ತೀರ್ಪುಗಾರ ಮಂಡಳಿ ಕೆಳಗಿನ ಸದಸ್ಯರನ್ನು ಒಳಗೊಂಡಿದೆ:

  • ಇಸಾಬೆಲ್ಲೆ ಡೇನೆಲ್, ಫಿಪ್ರೆಸ್ಸಿ- ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್ನ ಗೌರವ ಅಧ್ಯಕ್ಷರು,
  • ಸರ್ಜ್ ಮೈಕೆಲ್, ಸಿಐಸಿಟಿ-ಐಸಿಎಫ್ಟಿ ಉಪಾಧ್ಯಕ್ಷರು
  • ಮಾರಿಯಾ ಕ್ರಿಸ್ಟಿನಾ ಇಗ್ಲೇಷಿಯಸ್, ಯುನೆಸ್ಕೋದ ಸಾಂಸ್ಕೃತಿಕ ವಲಯದ ಕಾರ್ಯಕ್ರಮದ ಮಾಜಿ ಮುಖ್ಯಸ್ಥರು,
  • ಡಾ.ಅಹ್ಮದ್ ಬೆಡ್ಜೌಯಿ, ಅಲ್ಜಿಯರ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನ ಕಲಾತ್ಮಕ ನಿರ್ದೇಶಕರು,
  • ಕ್ಸುಯುವಾನ್ ಹುನ್, ಸಿಐಸಿಟಿ-ಐಸಿಎಫ್ಟಿ ಯುವ ಶಾಖೆಯ ಸೃಜನಶೀಲತೆ ಮತ್ತು ನಾವೀನ್ಯತೆ ವೇದಿಕೆಯ ನಿರ್ದೇಶಕರು.

 

ಪಿಐಬಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗಿನ ತೀರ್ಪುಗಾರರ ಸಂವಾದವನ್ನು ನೀವು ಇಲ್ಲಿ ಕೇಳಬಹುದು.

 

ಐ ಸಿ ಎಫ್ ಟಿ ಯುನೆಸ್ಕೋ ಗಾಂಧಿ ಪದಕದ ಬಗ್ಗೆ

46ನೇ ಐಎಫ್ಎಫ್ಐ ಯಲ್ಲಿ ಪ್ರಾರಂಭಿಸಲಾದ ಐ ಸಿ ಎಫ್ ಟಿ-ಯುನೆಸ್ಕೋ ಗಾಂಧಿ ಪದಕವು ಉನ್ನತ ಕಲಾತ್ಮಕ ಮತ್ತು ಸಿನಿಮೀಯ ಮಾನದಂಡಗಳನ್ನು ಹೊಂದಿರುವ ಚಲನಚಿತ್ರಗಳನ್ನು ಗೌರವಿಸುತ್ತದೆ ಮಾತ್ರವಲ್ಲದೆ ಸಮಾಜವನ್ನು  ಅತ್ಯಂತ ತೀವ್ರವಾಗಿ ಕಾಡುವ ವಿಷಯಗಳ ಬಗ್ಗೆ ನೈತಿಕ ಪ್ರತಿಬಿಂಬವನ್ನು ಪ್ರೋತ್ಸಾಹಿಸುತ್ತದೆ. ಸಿನೆಮಾದ ಪರಿವರ್ತಕ ಶಕ್ತಿಯ ಮೂಲಕ ಮಾನವೀಯತೆಯ ಹಂಚಿಕೆಯ ಮೌಲ್ಯಗಳ ಆಳವಾದ ತಿಳುವಳಿಕೆಯನ್ನು ಬೆಳೆಸಲು ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ಐ ಸಿ ಎಫ್ ಟಿ ಯುನೆಸ್ಕೋ ಗಾಂಧಿ ಪದಕ ಕೇವಲ ಒಂದು ಪ್ರಶಸ್ತಿ ಎನ್ನುವುದಕ್ಕಿಂತ ಹೆಚ್ಚಿನದಾಗಿದೆ; ಇದು ಸ್ಫೂರ್ತಿ ನೀಡುವ, ಶಿಕ್ಷಣ ನೀಡುವ ಮತ್ತು ಒಗ್ಗೂಡಿಸುವ ಚಲನಚಿತ್ರದ ಶಕ್ತಿಯ ಸಂಭ್ರಮಾಚರಣೆಯೂ ಆಗಿದೆ.

ದಂತಕಥೆಯೊಂದರ ಪ್ರಕಾರ, ಐಎಫ್ಎಫ್ಐ ಅಂತ್ಯ ಕಾಣಬಹುದು, ಆದರೆ ಅದು ನಿಜವಾಗಿ ಎಂದಿಗೂ ಕೊನೆಗೊಳ್ಳುವುದಿಲ್ಲ! ಈ ಒಂಬತ್ತು ದಿನಗಳ ಸಿನಿಮೀಯ ವೈಭವಕ್ಕೆ ತೆರೆ ಬೀಳುತ್ತಿದ್ದಂತೆ, ಗೋವಾದ ಐಎಫ್ಎಫ್ಐನಿಂದ ಐಎಫ್ಎಫ್ಐ ಕಥೆಗಳು, ಚಲನಚಿತ್ರ ನಿರ್ಮಾಪಕರ ಸಂವಾದಗಳು ಮತ್ತು ಪ್ರಾಮಾಣಿಕ ಕ್ಷಣಗಳನ್ನು ನೋಡಲು/ಅನುಭವಿಸಲು  ನಮ್ಮ ಸಂಗ್ರಹಕ್ಕೆ ಭೇಟಿ ನೀಡಿ. (https://pib.gov.in/iffi/55/

 

*****

iffi reel

(Release ID: 2078842) Visitor Counter : 37