ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
1 1

55ನೇ ಐ ಎಫ್‌ ಎಫ್‌ ಐ ನ ಸಮಾರೋಪ ಸಮಾರಂಭ: ಕರ್ಟನ್ ರೈಸರ್


55ನೇ ಐ ಎಫ್‌ ಎಫ್‌ ಐ ತಾರೆಯರ ಸಂಗಮದ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳುತ್ತದೆ: ಸಿನಿಮಾದ ಮಾಂತ್ರಿಕತೆ ಮುಂದುವರಿಯುತ್ತದೆ

ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ಸಿನಿಮಾದ ಸಂತೋಷವನ್ನು ಆಚರಿಸುವ ಮತ್ತು ಭವಿಷ್ಯವನ್ನು ಪೋಷಿಸುವ ಆಕರ್ಷಕ ಪ್ರಯಾಣಕ್ಕೆ ತೆರೆ ಎಳೆದು, ನವೆಂಬರ್ 28, 2024 ರಂದು ಗೋವಾದ ಡಾ. ಶ್ಯಾಮ ಪ್ರಸಾದ್‌ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಭುತವಾದ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ.

ಈ ಅದ್ದೂರಿ ಸಮಾರೋಪ ಸಮಾರಂಭವು ಒಂಬತ್ತು ದಿನಗಳ ಸಿನಿಮೀಯ ಪ್ರಖರತೆಯ ಪರಾಕಾಷ್ಠೆಯಾಗಿದೆ, ಕಥೆ ಹೇಳುವ ಕಲೆ ಮತ್ತು ಜಾಗತಿಕ ಸಿನಿಮಾದ ಉತ್ಸಾಹವನ್ನು ಆಚರಿಸುತ್ತದೆ. 75 ದೇಶಗಳ 200 ಕ್ಕೂ ಹೆಚ್ಚು ಚಲನಚಿತ್ರಗಳು, ಉದ್ಯಮದ ದಿಗ್ಗಜರ ಮಾಸ್ಟರ್‌ ಕ್ಲಾಸ್‌ ಗಳು ಮತ್ತು ಸ್ಪೂರ್ತಿದಾಯಕ ಪ್ಯಾನಲ್ ಚರ್ಚೆಗಳೊಂದಿಗೆ, ಈ ವರ್ಷದ ಐ ಎಫ್‌ ಎಫ್‌ ಐ ಸಿನಿಮಾದ ಏಕೀಕರಣದ ಶಕ್ತಿಯನ್ನು ಪ್ರದರ್ಶಿಸಿತು.

ಕಾರ್ಯಕ್ರಮದ ಮುಖ್ಯಾಂಶಗಳು

ಭಾರತೀಯ ಚಿತ್ರರಂಗದ ಸಂಭ್ರಮ

ಸಮಾರೋಪ ಸಮಾರಂಭವು ಭಾರತದ ಸಿನಿಮಾ ಜಗತ್ತಿನ ಚೈತನ್ಯ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಚಲನಚಿತ್ರಗಳ ಕಲಾತ್ಮಕತೆ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಗೌರವ ಸಲ್ಲಿಸುವ ಮೂಲಕ ಉತ್ಸವದ ಅತ್ಯುತ್ತಮ ಕ್ಷಣಗಳನ್ನು ಒಟ್ಟಿಗೆ ಹೆಣೆಯುತ್ತದೆ. ಈ ಸಮಾರಂಭವು ಎಲ್ಲೆಗಳನ್ನು ಮೀರಿದ ಮತ್ತು ಸಂಸ್ಕೃತಿಗಳನ್ನು ಒಂದುಗೂಡಿಸುವ ಮಾಧ್ಯಮವಾಗಿ ಸಿನಿಮಾದ ಸಾರವನ್ನು ಪ್ರತಿಬಿಂಬಿಸುತ್ತದೆ.

ಈ ಸಮಾರಂಭದಲ್ಲಿ ಹಲವಾರು ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. ಸುಕುಮಾರ್, ದಿಲ್ ರಾಜು, ಆನಂದ್ ತಿವಾರಿ, ಅಮೃತಪಾಲ್ ಸಿಂಗ್ ಬಿದ್ರಾ ಮತ್ತು ಆಸ್ಟ್ರೇಲಿಯಾದ ನಿರ್ಮಾಪಕ ಸ್ಟೀಫನ್ ವೋಲಿ ಅವರಂತಹ ಅಪ್ರತಿಮ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ಮಾತೃಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಖ್ಯಾತ ನಟರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಜಯಪ್ರದಾ, ಶ್ರೇಯಾ ಸರಣ್, ಪ್ರತೀಕ್ ಗಾಂಧಿ, ಸಮೀರ್ ಕೊಚ್ಚರ್, ಶ್ರೇಯಾ ಚೌಧರಿ, ಋತ್ವಿಕ್ ಭೌಮಿಕ್ ಮತ್ತು ನವೀನ್ ಕೊಹ್ಲಿ ಅವರು ಖ್ಯಾತ ಸಂಗೀತಗಾರರಾದ ಅಮಲ್ ಮಲಿಕ್ ಮತ್ತು ಮಾಮ್ ಖಾನ್ ಅವರೊಂದಿಗೆ ಭಾಗವಹಿಸಲಿದ್ದಾರೆ. ಸಿನಿಮಾ ಜಗತ್ತಿನ ಖ್ಯಾತನಾಮರ ಈ ಅದ್ಭುತ ಕೂಟವು ಭಾರತೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರ ಪ್ರತಿಭೆಗಳನ್ನು ಒಟ್ಟುಗೂಡಿಸುವ ಉತ್ಸವದ ಸಾಮರ್ಥ್ಯವನ್ನು ಪ್ರತಿಧ್ವನಿಸುತ್ತದೆ.

ಸಂಜೆ ಖ್ಯಾತ ಕಲಾವಿದರು ಮತ್ತು ಪ್ರದರ್ಶಕರು ಸಂಗೀತ, ನೃತ್ಯ ಮತ್ತು ಸಿನಿಮಾ ಆಕರ್ಷಣೆಗಳನ್ನು ಪ್ರಸ್ತುತಪಡಿಸುತ್ತಾರೆ. ಉತ್ಸವದಲ್ಲಿ ಖ್ಯಾತ ಗಾಯಕರಾದ ಸ್ಟೆಬಿನ್ ಬೆನ್, ಭೂಮಿ ತ್ರಿವೇದಿ ಮತ್ತು ಅಮಲ್ ಮಲಿಕ್ ಮತ್ತು ನಟಿ ಶ್ರೇಯಾ ಸರಣ್ ಅವರ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು, ನಿಕಿತಾ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ಪರಿಯಾರ್ ಅವರ ಸಂಗೀತ ಕಥಾಹಂದರವು ಪ್ರೇಕ್ಷಕರನ್ನು ಮನಮುಟ್ಟುವ ನಿರೂಪಣೆ ಮತ್ತು ಶಕ್ತಿಯುತ ಪ್ರದರ್ಶನಗಳೊಂದಿಗೆ ಆಕರ್ಷಿಸುತ್ತದೆ.

ಸಿನಿಮಾದ ಶ್ರೇಷ್ಠತೆಯನ್ನು ಗೌರವಿಸುವುದು

ಸಂಜೆ ಪ್ರತಿಷ್ಠಿತ ಪ್ರಶಸ್ತಿಗಳ ಪ್ರದಾನದೊಂದಿಗೆ ಚಲನಚಿತ್ರ ನಿರ್ಮಾಣದಲ್ಲಿ ಅಸಾಧಾರಣ ಸಾಧನೆಗಳನ್ನು ಸಂಭ್ರಮಿಸಲಾಗುತ್ತದೆ.

ಉತ್ಸವದ ಅತ್ಯುತ್ತಮ ಚಲನಚಿತ್ರ, ಐ ಎಫ್‌ ಎಫ್‌ ಐ ನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಗೋಲ್ಡನ್ ಪೀಕಾಕ್ ಅನ್ನು ಪಡೆಯಲಿದೆ. ಆ ಚಿತ್ರದ ನಿರ್ದೇಶಕ-ನಿರ್ಮಾಪಕ ಜೋಡಿಯ ವಿಜೇತ ತಂಡವು ಗೋಲ್ಡನ್ ಪೀಕಾಕ್ ಟ್ರೋಫಿ, ಪ್ರಮಾಣಪತ್ರ ಮತ್ತು ನಗದು ಬಹುಮಾನ ಸ್ವೀಕರಿಸುತ್ತದೆ.

ಸಮಾರಂಭದಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಪುರುಷ ಮತ್ತು ಮಹಿಳೆ) ಮತ್ತು ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರಕ್ಕೆ ಸಿಲ್ವರ್‌ ಪೀಕಾಕ್‌ ಪ್ರಶಸ್ತಿಗಳನ್ನು ಸಹ ಸಮಾರಂಭದಲ್ಲಿ ನೀಡಲಾಗುವುದು, ವಿಜೇತರು ಸಿಲ್ವರ್‌ ಪೀಕಾಕ್‌ ಟ್ರೋಫಿ, ಪ್ರಮಾಣಪತ್ರ ಮತ್ತು ನಗದು ಬಹುಮಾನಗಳನ್ನು ಸ್ವೀಕರಿಸುತ್ತಾರೆ. ಇವುಗಳಲ್ಲದೆ, ಚಲನಚಿತ್ರ ನಿರ್ಮಾಣದ ಯಾವುದೇ ಅಂಶದಲ್ಲಿ ಶ್ರೇಷ್ಠತೆಯನ್ನು ಗೌರವಿಸುವ ವಿಶೇಷ ತೀರ್ಪುಗಾರರ ಪ್ರಶಸ್ತಿ ವಿಜೇತರಿಗೆ ಸಿಲ್ವರ್‌ ಪೀಕಾಕ್‌ ಟ್ರೋಫಿ, ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ಸಹ ನೀಡಲಾಗುತ್ತದೆ.

ಭಾರತದ ಚೊಚ್ಚಲ ಚಲನಚಿತ್ರಗಳನ್ನು ಗುರುತಿಸಲು ಈ ವರ್ಷ ಪ್ರಾರಂಭಿಸಲಾದ ಭಾರತೀಯ ಚಲನಚಿತ್ರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯು ಸಮಾರಂಭದಲ್ಲಿ ಉದಯೋನ್ಮುಖ ಚಲನಚಿತ್ರ ನಿರ್ಮಾತೃಗಳ ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಗುರುತಿಸುತ್ತದೆ.

ಇಂಟರ್‌ನ್ಯಾಶನಲ್ ಕೌನ್ಸಿಲ್ ಫಾರ್ ಫಿಲ್ಮ್, ಟೆಲಿವಿಷನ್ ಮತ್ತು ಆಡಿಯೋವಿಶುವಲ್ ಕಮ್ಯುನಿಕೇಷನ್ (ICFT) ಸಹಯೋಗದೊಂದಿಗೆ, ಸಹಿಷ್ಣುತೆ, ಅಂತರ್ಸಾಂಸ್ಕೃತಿಕ ಸಂವಾದ ಮತ್ತು ಶಾಂತಿಯ ಆದರ್ಶಗಳನ್ನು ಪ್ರತಿಬಿಂಬಿಸುವ ಚಲನಚಿತ್ರಗಳಿಗೆ ICFT-UNESCO ಗಾಂಧಿ ಪದಕವನ್ನು ಯುನೆಸ್ಕೋ ಗಾಂಧಿ ಪದಕ ಮತ್ತು ಪ್ರಮಾಣಪತ್ರದೊಂದಿಗೆ ಸಮಾರಂಭದಲ್ಲಿ ನೀಡಲಾಗುತ್ತದೆ.

ಆಸ್ಟ್ರೇಲಿಯಾದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಫಿಲಿಪ್ ನೋಯ್ಸ್ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು, ಇದರಲ್ಲಿ ಬೆಳ್ಳಿ ನವಿಲು ಪದಕ, ಪ್ರಮಾಣಪತ್ರ, ಶಾಲು, ಸ್ಕ್ರಾಲ್ ಮತ್ತು ನಗದು ಬಹುಮಾನವನ್ನು ಅವರ ಅದ್ಭುತ ಮತ್ತು ವ್ಯಾಪಕವಾದ ಸಿನಿಮೀಯ ಪ್ರಯಾಣಕ್ಕೆ ಗೌರವವಾಗಿ ನೀಡಲಾಗುತ್ತದೆ.

ಆಸ್ಟ್ರೇಲಿಯಾದ ಪ್ರಸಿದ್ಧ ಚಲನಚಿತ್ರ ನಿರ್ಮಾತೃ ಫಿಲಿಪ್ ನೋಯ್ಸ್ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು, ಇದರಲ್ಲಿ ಸಿಲ್ವರ್‌ ಪೀಕಾಕ್‌ ಪದಕ, ಪ್ರಮಾಣಪತ್ರ, ಶಾಲು ಮತ್ತು ನಗದು ಬಹುಮಾನವನ್ನು ಅವರ ಅದ್ಭುತ ಮತ್ತು ವ್ಯಾಪಕವಾದ ಸಿನಿಮೀಯ ಪ್ರಯಾಣಕ್ಕೆ ಗೌರವವಾಗಿ ನೀಡಲಾಗುತ್ತದೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಗೌರವವನ್ನು ನಟ ಅಲ್ಲು ಅರ್ಜುನ್ ಅವರಿಗೆ ನೀಡಲಾಗುವುದು, ಅವರನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಗೌರವಿಸಲಾಗುವುದು. ಅವರ ಬ್ಲಾಕ್‌ ಬಸ್ಟರ್ ಚಿತ್ರ ಪುಷ್ಪ 2 ವಿಶೇಷ ಮನ್ನಣೆಯನ್ನು ಪಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ವೆಬ್ ಸೀರೀಸ್ (ಒಟಿಟಿ) ಪ್ರಶಸ್ತಿಯನ್ನು ಸಹ ನೀಡಲಾಗುವುದು.

ಸಮಾರೋಪ ಸಮಾರಂಭವು ಭಾರತೀಯ ದಿಗ್ಗಜ ನಿರ್ದೇಶಕ ರಮೇಶ್ ಸಿಪ್ಪಿ, ನಟ-ನಿರ್ಮಾಪಕ ನಿವಿನ್ ಪಾಲಿ ಮತ್ತು ನಟ ಪ್ರತೀಕ್ ಗಾಂಧಿಯಂತಹ ಉದ್ಯಮದ ದಂತಕಥೆಗಳೊಂದಿಗೆ ಆತ್ಮೀಯ ಸಂವಾದಗಳನ್ನು ಒಳಗೊಂಡಿರುತ್ತದೆ.

ದೇಶದ ಶ್ರೀಮಂತ ನೃತ್ಯ ಪರಂಪರೆಯನ್ನು ಕೊಂಡಾಡುವ "ರಿದಮ್ಸ್ ಆಫ್ ಇಂಡಿಯಾ" ಶೀರ್ಷಿಕೆಯ ಆಕರ್ಷಕ ಪ್ರದರ್ಶನವು ಸಂಜೆಯ ಆಕರ್ಷಣೆಯಾಗಿರುತ್ತದೆ. ಈ ಪ್ರದರ್ಶನವು ಕಥಕ್ (ಉತ್ತರ ಭಾರತ), ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ (ದಕ್ಷಿಣ ಭಾರತ), ಮಣಿಪುರಿ ಮತ್ತು ಪುಂಗ್ ಚೋಲಂ ಡ್ರಮ್ಮರ್ಸ್ (ಪೂರ್ವ ಭಾರತ) ಮತ್ತು ಗರ್ಬಾ (ಪಶ್ಚಿಮ ಭಾರತ) ದಂತಹ ಶಾಸ್ತ್ರೀಯ ನೃತ್ಯ ಪ್ರಕಾರಗಳ ಮೂಲಕ ಪ್ರೇಕ್ಷಕರಿಗೆ ಭಾರತದಾದ್ಯಂತದ ಅದ್ಭುತ ಪ್ರಯಾಣದ ಅನುಭವ ನೀಡುತ್ತದೆ.

ಡೈನಾಮಿಕ್ ಎಲ್ ಇ ಡಿ ದೃಶ್ಯಗಳು, ರಂಗೋಲಿಯಂತಹ ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ಸಾಂಪ್ರದಾಯಿಕ ಸಂಗೀತವು ಅನುಭವವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುತ್ತದೆ, ವೈವಿಧ್ಯತೆಯಲ್ಲಿ ಭಾರತದ ಏಕತೆಯನ್ನು ಎತ್ತಿ ತೋರಿಸುವ "ದೇಸ್ ಮೇರಾ ರಂಗೀಲಾ" ಹಾಡಿನೊಂದಿಗೆ ಗ್ರಾಂಡ್ ಫಿನಾಲೆಯು ಕೊನೆಗೊಳ್ಳುತ್ತದೆ.

ಈ ವರ್ಷದ ಐ ಎಫ್‌ ಎಫ್‌ ಐ ಸಿನಿಮಾದ ವೈವಿಧ್ಯತೆ ಮತ್ತು ನಾವೀನ್ಯತೆಗಳ ಆಚರಣೆಯಾಗಿದೆ, ಪ್ರಕಾರಗಳು, ಭಾಷೆಗಳು ಮತ್ತು ಸಂಸ್ಕೃತಿಗಳನ್ನು ವ್ಯಾಪಿಸಿರುವ ವೈವಿಧ್ಯಮಯ ಚಲನಚಿತ್ರಗಳು, ಪ್ರಖ್ಯಾತ ಚಲನಚಿತ್ರ ನಿರ್ಮಾಪಕರ ಮಾಸ್ಟರ್‌ಕ್ಲಾಸ್‌ ಗಳು, ಚಲನಚಿತ್ರ ತಯಾರಿಕೆಯ ಕಲೆ ಮತ್ತು ಕುಶಲತೆಯ ಬಗ್ಗೆ ಅನನ್ಯ ದೃಷ್ಟಿಕೋನಗಳನ್ನು ಒದಗಿಸುವುದು ಮತ್ತು ಸಿನಿಮಾದ ಭವಿಷ್ಯ ಮತ್ತು ಜಾಗತಿಕ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವಲ್ಲಿ ಅದರ ಪಾತ್ರ ಕುರಿತು ಪ್ಯಾನೆಲ್ ಚರ್ಚೆಗಳನ್ನು ಒಳಗೊಂಡಿದೆ.

ಸಿನಿಮಾದ ಮಾಂತ್ರಿಕತೆಯ ಅಳಿಸಲಾಗದ ನೆನಪುಗಳನ್ನು ಪ್ರೇಕ್ಷಕರಿಗೆ ನೀಡುವ ಮೂಲಕ ಮುಂದಿನ ವರ್ಷ ಇನ್ನೂ ಹೆಚ್ಚಿನ ಅದ್ಭುತ ಆವೃತ್ತಿಯೊಂದಿಗೆ ಮರಳುವ ಭರವಸೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ.

 

*****

iffi reel

(Release ID: 2078454) Visitor Counter : 6