ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

75ನೇ ಸಂವಿಧಾನ ದಿನದ ಹಿನ್ನೆಲೆಯಲ್ಲಿ ಮೈ ಭಾರತ್ ಯುವ ಸ್ವಯಂ ಸೇವಕರಿಂದ ಆಯೋಜಿಸಲಾದ “ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ” ಪಾದಯಾತ್ರೆಯಲ್ಲಿ ಪಾಲ್ಗೊಂಡ ಡಾ. ಮನ್ಸುಖ್ ಮಾಂಡವೀಯ


“ವಿಕಸಿತ ಭಾರತ” ನಿರ್ಮಿಸುವ ಪ್ರಕ್ರಿಯೆಯಲ್ಲಿ ನವಭಾರತದ ಯುವ ಸಮೂಹ ಭಾಗಿ: ಡಾ. ಮಾಂಡವೀಯ

ದೆಹಲಿಯಲ್ಲಿ ಆಯೋಜನೆಗೊಂಡ “ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ” ಪಾದಯಾತ್ರೆಯಲ್ಲಿ 10,000 ಕ್ಕೂ ಅಧಿಕ ಮೈ ಭಾರತ್ ಯುವ ಸಂಘಟನೆಯ ಯುವ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು

ಇಂಡಿಯಾ ಗೇಟ್ ಬಳಿ 75ನೇ ಸಂವಿಧಾನ ದಿನದ ಹಿನ್ನೆಲೆಯಲ್ಲಿ ಸಂವಿಧಾನ ಪೀಠಿಕೆ ಓದುವ ಮೈ ಭಾರತ್ ಯುವ ಸ್ವಯಂ ಸೇವಕರ ಜೊತೆಗೂಡಿದ ಕೇಂದ್ರ ಸಚಿವರು

ಪ್ರಧಾನಮಂತ್ರಿಯವರ ಸ್ವಚ್ಛ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ, ಮೈ ಭಾರತ್ ಯುವ ಸ್ವಯಂಸೇವಕರು ಸಂವಿಧಾನ ದಿನದ ಪಾದಯಾತ್ರೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಮುನ್ನಡೆಸಿದರು

Posted On: 25 NOV 2024 2:45PM by PIB Bengaluru

ನವದೆಹಲಿಯಲ್ಲಿಂದು ಮೈ ಭಾರತ್ ಸ್ವಯಂ ಸೇವಕರು 75ನೇ ಸಂವಿಧಾನ ದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ 6 ಕಿಲೋಮೀಟರ್ ಪಾದಯಾತ್ರೆ[ನಡಿಗೆ]ಯಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಪಾಲ್ಗೊಂಡಿದ್ದರು. ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ ಪ್ರಾರಂಭವಾದನಮ್ಮ ಸಂವಿಧಾನ ನಮ್ಮ ಹೆಮ್ಮೆ ಪಾದಯಾತ್ರೆ  ಕರ್ತವ್ಯ ಪಥ್ ಮತ್ತು ಇಂಡಿಯಾ ಗೇಟ್ ಮೂಲಕ ಸಾಗಿತು. ಪಾದಯಾತ್ರೆ 10,000 ಕ್ಕೂ ಅಧಿಕ ಮೈ ಭಾರತ್ ಯುವ ಸ್ವಯಂ ಸೇವಕರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದ್ದು, ಯುವ ಸಮೂಹದ ಕಣ್ಮಣಿಗಳು, ಕೇಂದ್ರ ಸಚಿವರು ಮತ್ತು ಸಂಸದರು ಸಹ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.   

ಸಂದರ್ಭದಲ್ಲಿ “ಒಂದು ಸಸಿ ತಾಯಿಯ ಹೆಸರಿನಲ್ಲಿ” ಅಭಿಯಾನದಡಿ ಸಂಸದೀಯ ಸಹಯೋಗಿಗಳೊಂದಿಗೆ ಡಾ. ಮನ್ಸುಖ್ ಮಾಂಡವೀಯ ಅವರು ಗಿಡ ನೆಟ್ಟರು. ಕೇಂದ್ರ ಸಚಿವರಾದ ಶ್ರೀ ಪಿಯೂಶ್ ಗೋಯಲ್, ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ಕಿರೆಣ್ ರಿಜಿಜು, ಶ್ರೀ ಅರ್ಜುನ್ ರಾಮ್ ಮೇಘ್ವಾಲ್, ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ, ಸಂಸದರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಒಲಿಂಪಿಕ್ ಪದಕ ವಿಜೇತರಾದ ಯೋಗೇಶ್ವರ್ ದತ್ತ್, ಮೀರಾಬಾಯಿ ಚಾನು, ರವಿ ದಹಿಯಾ, ಯೋಗೇಶ್ ಕಥುನಿಯಾ ಮತ್ತಿತರ ಯುವ ಸಮೂಹದ ರಾಯಭಾರಿಗಳು ಭಾಗವಹಿಸಿದ್ದರು.

ಪಾದಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮಾಂಡವೀಯಾ, 10,000 ಕ್ಕೂ ಹೆಚ್ಚು 'ಮೈ ಭಾರತ್' ಯುವ ಸ್ವಯಂಸೇವಕರು ಭಾಗವಹಿಸಿರುವುದು ಸಂತಸ ತಂದಿದೆ. ದೇಶದ ಯುವಜನತೆ ಸಂವಿಧಾನದ ಪೀಠಿಕೆಯನ್ನು ಓದಿದ್ದಲ್ಲದೇ, ಅದಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ಅವರು ಹೇಳಿದರು. ನವಭಾರತದ ಯುವಕರು ‘ಅಭಿವೃದ್ಧಿ ಹೊಂದಿದ ಭಾರತ’ ನಿರ್ಮಾಣವನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಪಾದಯಾತ್ರೆ ಪ್ರಾರಂಭಗೊಳ್ಳುವ ಸ್ಥಳದಲ್ಲಿ ಭಾರತದ ಸಂವಿಧಾನ ರಚನೆಯ ದಿನಗಳನ್ನು ಪ್ರತಿಬಿಂಬಿಸುವ ಮತ್ತು ಪ್ರಮುಖ ಹೋರಾಟಗಾರರ ಸಾಧನೆಗಳನ್ನು ಅನಾವರಣಗೊಳಿಸುವ ಸಮಗ್ರ ಪ್ರದರ್ಶವನ್ನು ಏರ್ಪಡಿಸಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್  ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಾಲದ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮವನ್ನು ಯುವ ಜನರು ಸ್ಮರಣೀಯಗೊಳಿಸಿದರು. ಪಾದಯಾತ್ರೆಯುದ್ದಕ್ಕೂ ವಿವಿಧೆಡೆ ಉಜ್ವಲ ಸಾಂಸ್ಕೃತಿಕ ಪ್ರದರ್ಶನ ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಪ್ರದರ್ಶನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರನ್ನು ಮಂತ್ರಮುಗ್ದಗೊಳಿಸಿತು. ಗುಜರಾತ್ ನೃತ್ಯ, ರಾಜಸ್ಥಾನದ ಜಾನಪದ ನೃತ್ಯ ಮತ್ತು ಪಂಜಾಬಿ ಭಾಂಗ್ರಾ ನೃತ್ಯ ಗಮನಸೆಳೆಯಿತು.   

ಯುವ ಸಮೂಹದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪಾದಯಾತ್ರೆ ಆರಂಭಕ್ಕೂ ಮುನ್ನ ಇಂಡಿಯಾ ಗೇಟ್‌ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿ ಯುವ ಜನ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯನ್ನು ಓದಿದರು. ಈ ಚಟುವಟಿಕೆಯು ಭಾರತದ ಸಂವಿಧಾನದ ಅಡಿಪಾಯ ಮತ್ತು ಅದರ ಪ್ರಮುಖ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಪಾತ್ರವನ್ನು ಎತ್ತಿ ತೋರಿಸಿತು. ಕೇಂದ್ರ ಸಚಿವರು ಮತ್ತು ಸಂಸದರು ಉಪಸ್ಥಿತರಿದ್ದ ಕಾರ್ಯಕ್ರಮವು ಭಾರತೀಯ ಪ್ರಜಾಪ್ರಭುತ್ವದಲ್ಲಿ ತತ್ವಗಳ ಮಹತ್ವವನ್ನು ಒತ್ತಿ ಹೇಳಿತು. ರಾಷ್ಟ್ರೀಯ ಏಕತೆಯ ಸಂಕೇತವಾದ ಇಂಡಿಯಾ ಗೇಟ್‌ನ ಸ್ಥಳವು ಸಮಾರಂಭದ ಪ್ರಭಾವವನ್ನು ಇನ್ನಷ್ಟು ಪ್ರಕಾಶಮಾನಗೊಳಿಸಿತು. ಮುನ್ನುಡಿ ವಾಚನದ ನಂತರ, ಡಾ. ಮಾಂಡವೀಯ ಅವರು ತಮ್ಮ ಸಂಸದೀಯ ಸಹೋದ್ಯೋಗಿಗಳೊಂದಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಯುವ ಸಮೂಹ ಪಾಲ್ಗೊಂಡಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಮೈ ಭಾರತ್ ಯುವ ಸಂಘಟನೆಗೆ ನೋಂದಣಿ ಪ್ರಕ್ರಿಯೆ ಸಂದರ್ಭದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಡೆಯಿತು. ಸಂವಿಧಾನದ ಪೀಠಿಕೆ ಇರುವ ಸೆಲ್ಪಿ ಕೇಂದ್ರದಲ್ಲಿ ಪಾಲ್ಗೊಂಡಿದ್ದವರು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು. ಮಾರ್ಗದುದ್ದಕ್ಕೂ, ಮೈ ಭಾರತ್ ಸ್ವಯಂಸೇವಕರು ಭಾಗವಹಿಸುವವರಿಗೆ ಉಪಹಾರ ಮಳಿಗೆ ತೆರೆದು ಉಪಹಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರುಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಗಮನಾರ್ಹವಾಗಿ ಕೊಡುಗೆ ನೀಡಿದರು. ಪಾದಯಾತ್ರೆಯ ಮಾರ್ಗದ ಉದ್ದಕ್ಕೂ ಸ್ವಚ್ಛತೆಯನ್ನು ಕಾಪಾಡಿಕೊಂಡರು.

ಎನ್.ಸಿ.ಆರ್ ವಲಯದಿಂದ 125 ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಎನ್.ವೈ.ಕೆ.ಎಸ್, ಎನ್.ಎಸ್.ಎಸ್, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಒಳಗೊಂಡಂತೆ ವಿವಿಧ ಯುವ ಸಂಘಟನೆಗಳ ಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಪಾಲ್ಗೊಮಡಿದ್ದರು. 75ನೇ ಸಂವಿಧಾನ ದಿನದ ಆಚರಣೆಗೆ ಕಾರ್ಯಕ್ರಮ ಪ್ರಮುಖ ಮೈಲಿಗಲ್ಲಾಗಿ ಪರಿಣಮಿಸಿತು. ವಿಕಸಿತ ಭಾರತ್‌ಗಾಗಿ ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಯುವಕರ ಪಾತ್ರವನ್ನು ಕಾರ್ಯಕ್ರಮ ಪ್ರಧಾನಪಾತ್ರ ವಹಿಸಿತು.

ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನಪಾದಯಾತ್ರೆ ವೀಕ್ಷಣೆ

 

*****

 


(Release ID: 2077752) Visitor Counter : 5