ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಪ್ಯಾನ್ 2.0 ಯೋಜನೆಗೆ ಸಂಪುಟ ಅನುಮೋದನೆ

Posted On: 25 NOV 2024 8:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ), ಆದಾಯ ತೆರಿಗೆ ಇಲಾಖೆಯ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. 

ಪ್ಯಾನ್ 2.0 ಯೋಜನೆಗೆ ಹಣಕಾಸು ವೆಚ್ಚ ರೂ.1435 ಕೋಟಿ.

ಪ್ಯಾನ್ 2.0 ಯೋಜನೆಯು ತೆರಿಗೆದಾರರ ನೋಂದಣಿ ಸೇವೆಗಳ ತಂತ್ರಜ್ಞಾನ ಚಾಲಿತ ರೂಪಾಂತರವನ್ನು ಸಾಧ್ಯವಾಗಿಸುತ್ತಾ ಈ ಕೆಳಗಿನವನ್ನು ಒಳಗೊಂಡಂತೆ ಗಮನಾರ್ಹ ಅನುಕೂಲಗಳನ್ನು ಹೊಂದಿದೆ: 


 i.         ಸುಧಾರಿತ ಗುಣಮಟ್ಟದೊಂದಿಗೆ ಸುಲಭ ಲಭ್ಯತೆ ಮತ್ತು ತ್ವರಿತ ಸೇವಾ ವಿತರಣೆ;
ii.        ಸತ್ಯಾಂಶ ಮತ್ತು ದತ್ತಾಂಶ ಸ್ಥಿರತೆಯ ಏಕಮೂಲ
iii.       ಪರಿಸರ ಸ್ನೇಹಿ ಪ್ರಕ್ರಿಯೆಗಳು ಮತ್ತು ಪರಿಣಾಮಕಾರಿ ವೆಚ್ಚ  ಹಾಗೂ
iv.        ಹೆಚ್ಚಿನ ಗ್ರಹಿಕೆ/ಚಲನಶೀಲತೆಗಾಗಿ ಮೂಲಭೂತ ಸೌಕರ್ಯಗಳ ಭದ್ರತೆ ಮತ್ತು ಪರಿಣಾಮಕಾರಿ ಬಳಕೆ 


ಪ್ಯಾನ್ 2.0 ಯೋಜನೆಯು ತೆರಿಗೆದಾರರ ಡಿಜಿಟಲ್ ಅನುಭವ ವರ್ಧಿಸಲು ಪ್ಯಾನ್/ಟ್ಯಾನ್ ಸೇವೆಗಳ ತಂತ್ರಜ್ಞಾನ ಚಾಲಿತ ರೂಪಾಂತರದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳ ವ್ಯಾಪಾರ ಪ್ರಕ್ರಿಯೆಗಳನ್ನು ಮರುವಿನ್ಯಾಸಗೊಳಿಸುವ ಇ-ಆಡಳಿತ ಯೋಜನೆಯಾಗಿದೆ.  ಇದು ಪ್ರಸ್ತುತ PAN/TAN 1.0 ಪರಿಸರ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಾಗಿದ್ದು, ತಾಂತ್ರಿಕ/ಕೇಂದ್ರ ಮತ್ತು ದೈನಂದಿನ/ಸಾಮಾನ್ಯ ಪ್ಯಾನ್/ಟ್ಯಾನ್‌ ಚಟುವಟಿಕೆಗಳನ್ನು ಹಾಗೂ ಶ್ವಾಶ್ವತ ಖಾತೆ ಸಂಖ್ಯೆ – ಪಿಎಎನ್‌ ನ ದೃಢೀಕರಣ ಸೇವೆಯನ್ನು ಸಮಗ್ರಗೊಳಿಸುತ್ತದೆ.

ನಿರ್ದಿಷ್ಟಪಡಿಸಿದ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತಾಗಿ ಪ್ಯಾನ್ ಬಳಕೆಯನ್ನು ಸಾಧ್ಯವಾಗಿಸುತ್ತಾ ಸರ್ಕಾರದ ಡಿಜಿಟಲ್ ಇಂಡಿಯಾ ದೃಷ್ಟಿಕೋನದೊಂದಿಗೆ ಪ್ಯಾನ್ 2.0 ಯೋಜನೆಯು ಅನುರಣಿಸುತ್ತದೆ.

 

*****


(Release ID: 2077206) Visitor Counter : 13