ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 5

ಚಿತ್ರದಿಂದ ನನಗೆ ಏನು ಸಿಗುತ್ತದೆ ಎಂಬುದಲ್ಲ ; ಸದಾ ಚಿತ್ರದ ಯಶಸ್ಸಿಗೆ ಕೊಡುಗೆ ನೀಡುವ ಬಗ್ಗೆ ಗಮನ ಬೇಕು: ನಿತ್ಯಾ ಮೆನನ್


ಜನರಿಗೆ ಮತ್ತು ಅನುಭವಗಳಿಗೆ ನಮ್ಯತೆ ಮತ್ತು ಮುಕ್ತತೆ ಹೊಂದಿರುವುದು ನಟಿಗೆ ನಿರ್ಣಾಯಕ: ನಿತ್ಯಾ ಮೆನನ್

55ನೇ ಐಎಫ್ಎಫ್ಐನಲ್ಲಿ ನಿತ್ಯಾ ಮೆನನ್ ಅವರೊಂದಿಗೆ ಸಂವಾದ ಅಧಿವೇಶನ

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿತ್ಯಾ ಮೆನನ್ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ನಟನಾ ಕಲೆಯ ಬಗ್ಗೆ ತಮ್ಮ ಆಳವಾದ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಗೋವಾದ ಪಣಜಿಯ ಐಎಫ್ಎಫ್ಐನ ಕಲಾ ಅಕಾಡೆಮಿಯಲ್ಲಿ ನಡೆದ 'ಪಾತ್ರ ಮತ್ತು ನಟ: ಸೂಕ್ಷ್ಮತೆಯ ಶಕ್ತಿ' ಕುರಿತ ಸಂವಾದ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ತಿರುಚಿತ್ರಂಬಲಂ ಮತ್ತು ಓಕೆ ಕಣ್ಮಣಿಯಂತಹ ಚಿತ್ರಗಳಲ್ಲಿನ ಸೂಕ್ಷ್ಮ ಅಭಿನಯಕ್ಕೆ ಹೆಸರುವಾಸಿಯಾದ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಸೂಕ್ಷ್ಮತೆಯ ಶಕ್ತಿ, ಭಾವನಾತ್ಮಕ ಸತ್ಯಾಸತ್ಯತೆಯ ಪ್ರಾಮುಖ್ಯತೆ ಮತ್ತು ಸಂಕೀರ್ಣ, ನೈಜ-ಪ್ರಪಂಚದ ಪಾತ್ರಗಳನ್ನು ಚಿತ್ರಿಸುವಲ್ಲಿ ಎದುರಾಗುವ  ಸವಾಲುಗಳ ಬಗ್ಗೆ ಮಾತನಾಡಿದರು.

ಆಂತರ್ಯದ (ಕರುಳಿನ) ಪ್ರವೃತ್ತಿ ಮತ್ತು ಚಲನಚಿತ್ರ ಆಯ್ಕೆ: ಪ್ರಕ್ರಿಯೆಯನ್ನು ನಂಬುವುದು

ನಿತ್ಯಾ ಅವರು ಚಲನಚಿತ್ರಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ವಿವರಿಸುವ ಮೂಲಕ ಪ್ರಾರಂಭ ಮಾಡಿದರು  ಮತ್ತು ಈ ಹಿಂದೆ "ಹಗುರವಾದ" ಪಾತ್ರಗಳನ್ನು ತೆಗೆದುಕೊಂಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ್ದನ್ನೂ ಉಲ್ಲೇಖಿಸಿದರು. ಔಪಚಾರಿಕ ವಿಧಾನದ ನಟನಾ ವಿಧಾನವನ್ನು ಅನುಸರಿಸದಿದ್ದರೂ, ತನ್ನ ಸಿದ್ಧತೆಯು ಸುತ್ತಲಿನ ಜಗತ್ತನ್ನು ಗಮನಿಸುವುದು, ದೃಶ್ಯಗಳನ್ನು ದೃಶ್ಯೀಕರಿಸುವುದು ಮತ್ತು ಪಾತ್ರಗಳೊಂದಿಗೆ ತಲ್ಲೀನವಾಗಿ ಅಂತರ್ಬೋಧೆಯಿಂದ ಸಂಪರ್ಕ ಸಾಧಿಸುವುದನ್ನು ಒಳಗೊಂಡಿರುತ್ತದೆ. ತನಗೆ, ನಟನೆ ಎಂದರೆ ಅದು  ಭಾವನಾತ್ಮಕ ಸಂಪರ್ಕ ಹೊರತು, ಅದು ವೈಯಕ್ತಿಕ ಅನುಭವವೇ ಆಗಬೇಕಾಗಿಲ್ಲ ಎಂದರಲ್ಲದೆ, ಉದಾಹರಣೆಗೆ, ಅಮ್ಮನನ್ನು/ತಾಯಿಯನ್ನು ಚಿತ್ರಿಸಲು ಜೀವಂತ ಅನುಭವಕ್ಕಿಂತ ಅನುಭೂತಿ ಮತ್ತು ಭಾವನಾತ್ಮಕ ಅಂಶ (ಇಕ್ಯೂ) ಅಗತ್ಯವಿದೆ ಎಂದವರು ಪ್ರತಿಪಾದಿಸಿದರು. 

ಹೊಂದಾಣಿಕೆ ಇಲ್ಲದಿರುವುದು ಕಠಿಣ ಸ್ವಭಾವ ಮತ್ತು ಆತ್ಮವಿಶ್ವಾಸದ ಕೊರತೆಯು ನಟರ ಅಭಿನಯಕ್ಕೆ ಅಡ್ಡಿಯಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜನರು ಮತ್ತು ಅನುಭವಗಳಿಗೆ ನಮ್ಯತೆ ಮತ್ತು ಮುಕ್ತತೆ ನಿರ್ಣಾಯಕವಾಗಿದೆ, ಹಾಗೆಯೇ ಸ್ವಯಂ ಭರವಸೆಯೂ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ವೇಗದ ವೇಳಾಪಟ್ಟಿಯ ಒತ್ತಡ ಇರಬಾರದು ಮತ್ತು   ನಟರು ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು  ಸಹಾಯ ಮಾಡಲು ಶಾಂತ ವಾತಾವರಣ ಅಗತ್ಯ ಎಂದವರು ಪ್ರತಿಪಾದಿಸಿದರಲ್ಲದೆ ಶಾಂತ ಪರಿಸರದ  ಮಹತ್ವವನ್ನು ಒತ್ತಿಹೇಳಿದರು. ಸಂಸ್ಕೃತಿಗಳು ಮತ್ತು ವಿವಿಧ ಪ್ರದೇಶಗಳಾದ್ಯಂತ ಪ್ರೇಕ್ಷಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುವ ಸಾಮರ್ಥ್ಯದ ಹಿಂದೆ ಅವರು ತಮ್ಮ ಹೃದಯ-ಕೇಂದ್ರಿತ ವಿಧಾನ ಮತ್ತು ಭಾವನಾತ್ಮಕ ಮುಕ್ತತೆಯ ಪಾಲು ದೊಡ್ಡದಿದೆ , ಇದರಿಂದ ತನ್ನ ಪ್ರದರ್ಶನಗಳು  ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆಯುತ್ತಿವೆ ಎಂದರು. 

 

ನಟರ  ಆಂತರಿಕ ಭಾವನೆಗಳು ಅಥವಾ ಗುಣವು  ಅವರು ನಿರ್ವಹಿಸುವ ಪಾತ್ರಗಳ ಮೇಲೆ ಹೇಗೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತನಾಡಿದ ಅವರು, "ಈ ಮೊದಲು ನನ್ನಲ್ಲಿ ತುಂಬಾ ಯಾತನೆ ಇದೆ ಎಂದು ನಾನು ನಂಬುವುದರಿಂದ ದುಃಖವನ್ನು ವ್ಯಕ್ತಪಡಿಸುವುದು ಅಥವಾ ಅಳುವುದು ನನಗೆ ಸುಲಭವಾಗಿತ್ತು. ಕೆಲವು ಭಾವನಾತ್ಮಕ ದೃಶ್ಯಗಳು ಪ್ರಚೋದನಕಾರಿಯಾಗಿದ್ದವು ಮತ್ತು ಶಾಟ್ ಅಥವಾ ದೃಶ್ಯ ಮುಗಿದ ನಂತರ ನಾನು ತುಂಬಾ ನಿರಾಳತೆಯನ್ನು ಅನುಭವಿಸುತ್ತಿದ್ದೆ. ಇಂದು, ನಾನು ಹಿಂತಿರುಗಿ ನೋಡಿದಾಗ ನನಗೆ ಅಳಲು ಕಷ್ಟವಾಗುತ್ತದೆ. ಬಹುಶಃ ನಾನು ಬೆಳೆದಂತೆ ಸಂತೋಷದ ವ್ಯಕ್ತಿಯಾಗುತ್ತಿದ್ದೇನೆ."ಎಂದರು. ಭಾವನಾತ್ಮಕ ಸತ್ಯಾಸತ್ಯತೆ ಹೆಚ್ಚು ಮುಖ್ಯವಾಗುತ್ತದೆ, ಭಾವನೆಗಳ ಪ್ರಾಮಾಣಿಕತೆಯೇ ತನ್ನ ಕೆಲಸವನ್ನು ಪ್ರೇರೇಪಿಸುತ್ತದೆ, ಪಾತ್ರದ ಸುತ್ತಲಿನ ಬಾಹ್ಯ ಸಂದರ್ಭಗಳಲ್ಲ ಎಂದು ಅವರು ಹಂಚಿಕೊಂಡರು.

ಚಿತ್ರರಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಗೌರವದೊಂದಿಗೆ ಉದ್ಯಮವು ನಟಿಯರನ್ನು ಸ್ವೀಕರಿಸುತ್ತಿದೆ ಎಂದು ಅವರು ಹೇಳಿದರು. ಕೊನೆಯಲ್ಲಿ, ಚಿತ್ರದ ಉದ್ದೇಶವು ಪ್ರೇಕ್ಷಕರ ಪ್ರಜ್ಞೆಯನ್ನು ಪ್ರಚೋದಿಸುವುದು ಎಂಬುದನ್ನು  ನಿತ್ಯಾ ಅವರು  ಒತ್ತಿ ಹೇಳಿದರು. "ಒಂದು ಚಲನಚಿತ್ರವು ಭಾವನಾತ್ಮಕವಾಗಿ ಅಥವಾ ಬೌದ್ಧಿಕವಾಗಿ ತೊಡಗಿಸಿಕೊಳ್ಳಲು ವಿಫಲವಾದರೆ, ಅದು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ" ಎಂದು ಅವರು ನುಡಿದರು.

 

*****
 

iffi reel

(Release ID: 2075875) Visitor Counter : 6