ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 3

ಒಟಿಟಿ ವಿಭಾಗದಲ್ಲಿ  ಅಲೆಯನ್ನು ಸೃಷ್ಟಿಸಿದ  ಪ್ರಸಾರ ಭಾರತಿ


ಐಎಫ್ಎಫ್ಐನಲ್ಲಿ ಹೊಸ ಒಟಿಟಿ ಪ್ಲಾಟ್ಫಾರ್ಮ್ ವೇವ್ಸ್ ಬಿಡುಗಡೆ

ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಉದ್ಘಾಟನಾ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ರಾಷ್ಟ್ರೀಯ ಸಾರ್ವಜನಿಕ ಪ್ರಸಾರಕ ಸಂಸ್ಥೆಯಾದ ಪ್ರಸಾರ ಭಾರತಿಯ ಒಟಿಟಿ ಪ್ಲಾಟ್ಫಾರ್ಮ್ 'ವೇವ್ಸ್' ಅನ್ನು ಬಿಡುಗಡೆ ಮಾಡಿದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಇತರ ಗಣ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತದ ಅಪ್ರತಿಮ ಸಾರ್ವಜನಿಕ ಪ್ರಸಾರಕ ಸಂಸ್ಥೆಯಾದ ದೂರದರ್ಶನವು ಡಿಜಿಟಲ್ ಸ್ಟ್ರೀಮಿಂಗ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಒಟಿಟಿ (ಓವರ್-ದಿ-ಟಾಪ್) ಪ್ಲಾಟ್ಫಾರ್ಮ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಕ್ಲಾಸಿಕ್ ವಿಷಯ ಮತ್ತು ಸಮಕಾಲೀನ ಕಾರ್ಯಕ್ರಮಗಳ  ಶ್ರೀಮಂತ ಮಿಶ್ರಣವನ್ನು ನೀಡುವ ಮೂಲಕ ಆಧುನಿಕ ಡಿಜಿಟಲ್ ಪ್ರವೃತ್ತಿಗಳನ್ನು ಅಳವಡಿಸಿಕೊಂಡು ಹಿಂದಿನ ಸ್ಮರಣೆಗಳನ್ನು (ನಾಸ್ಟಾಲ್ಜಿಯಾವನ್ನು)  ಪುನರುಜ್ಜೀವನಗೊಳಿಸುವ ಗುರಿಯನ್ನು ಪ್ಲಾಟ್ಫಾರ್ಮ್ ಹೊಂದಿದೆ. ರಾಮಾಯಣ, ಮಹಾಭಾರತ, ಶಕ್ತಿಮಾನ್ ಮತ್ತು ಹಮ್ ಲೋಗ್ ನಂತಹ ಕಾಲಾತೀತ ಪ್ರದರ್ಶನಗಳನ್ನು ಒಳಗೊಂಡಿರುವ ಗ್ರಂಥಾಲಯದೊಂದಿಗೆ, ಈ ವೇದಿಕೆಯು ಭಾರತದ ಗತಕಾಲದೊಂದಿಗೆ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಪರ್ಕಗಳನ್ನು ಹುಡುಕುವ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಜೊತೆಗೆ, ಇದು ಸುದ್ದಿ, ಸಾಕ್ಷ್ಯಚಿತ್ರಗಳು ಮತ್ತು ಪ್ರಾದೇಶಿಕ ವಿಷಯವನ್ನು ನೀಡುತ್ತದೆ, ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಗೆ ಅದರ ಬದ್ಧತೆಯನ್ನು ಬಲಪಡಿಸುತ್ತದೆ. ದೂರದರ್ಶನದ ಒಟಿಟಿ ಪ್ಲಾಟ್ಫಾರ್ಮ್ ತನ್ನ ದಶಕಗಳ ಪರಂಪರೆಯನ್ನು ಅನುಸರಿಸಿ ಮತ್ತು ರಾಷ್ಟ್ರೀಯ ನಂಬಿಕೆಯನ್ನು ಹೆಚ್ಚಿಸುವ ಮೂಲಕ, ಸಾಂಪ್ರದಾಯಿಕ ದೂರದರ್ಶನ ಮತ್ತು ಆಧುನಿಕ ಸ್ಟ್ರೀಮಿಂಗ್ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ, ತಂತ್ರಜ್ಞಾನ-ಪ್ರಿಯ ಯುವಜನರು ಮತ್ತು ಹಳೆಯ ಪೀಳಿಗೆಯನ್ನು ಸಮಾನವಾಗಿ ತಲುಪುತ್ತದೆ.

ಹಿಂದಿ, ಇಂಗ್ಲಿಷ್, ಬಂಗಾಳಿ, ಮರಾಠಿ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಗುಜರಾತಿ, ಪಂಜಾಬಿ, ಅಸ್ಸಾಮಿ ಸೇರಿದಂತೆ 12+ ಭಾಷೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಸ್ವೀಕರಿಸುವ ಅಂತರ್ಗತ ಭಾರತದ ಕಥೆಗಳೊಂದಿಗೆ 'ವೇವ್ಸ್' ದೊಡ್ಡ ಅಗ್ರಿಗೇಟರ್ ಒಟಿಟಿಯಾಗಿ ಪ್ರವೇಶಿಸುತ್ತದೆ. ಇದು ಇನ್ಫೋಟೈನ್ ಮೆಂಟ್ ನ 10+ ಪ್ರಕಾರಗಳಲ್ಲಿ ಹರಡಿರುತ್ತದೆ. ಇದು ವೀಡಿಯೊ ಆನ್ ಡಿಮಾಂಡ್, ಫ್ರಿ-ಟು-ಪ್ಲೇ ಗೇಮಿಂಗ್, ರೇಡಿಯೋ ಸ್ಟ್ರೀಮಿಂಗ್, ಲೈವ್ ಟಿವಿ ಸ್ಟ್ರೀಮಿಂಗ್, 65 ಲೈವ್ ಚಾನೆಲ್ಗಳು, ವೀಡಿಯೊ ಮತ್ತು ಗೇಮಿಂಗ್ ವಿಷಯಕ್ಕಾಗಿ ಹಲವಾರು ಅಪ್ಲಿಕೇಶನ್ ಇನ್ ಅಪ್ಲಿಕೇಶನ್ ಏಕೀಕರಣಗಳು ಮತ್ತು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ಬೆಂಬಲಿತ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಮೂಲಕ ಆನ್ಲೈನ್ ಶಾಪಿಂಗ್ ಅನ್ನು ಒದಗಿಸುತ್ತದೆ.

ಸೃಜನಶೀಲ ಆರ್ಥಿಕತೆಯಲ್ಲಿ ಯುವ ಸೃಷ್ಟಿಕರ್ತರ ಸಾಮರ್ಥ್ಯವನ್ನು ಅನ್ಲಾಕ್ ಮಾಡುವ ಪ್ರಜ್ಞಾಪೂರ್ವಕ ಹೆಜ್ಜೆಯಾಗಿ, ವೇವ್ಸ್ ತನ್ನ ವೇದಿಕೆಯನ್ನು ರಾಷ್ಟ್ರೀಯ ಸೃಷ್ಟಿಕರ್ತ ಪ್ರಶಸ್ತಿ ವಿಜೇತರಾದ ಕಾಮಿಯಾ ಜಾನಿ, ಆರ್ ಜೆ ರೌನಾಕ್, ಶ್ರದ್ಧಾ ಶರ್ಮಾ ಮತ್ತು ಇತರರು ಸೇರಿದಂತೆ ವಿಷಯ ಸೃಷ್ಟಿಕರ್ತರಿಗೆ ನೀಡುತ್ತದೆ. ಎಫ್ ಟಿಐಐ, ಅನ್ನಪೂರ್ಣ ಮತ್ತು ಎಎಎಫ್ ಟಿಯಂತಹ ಚಲನಚಿತ್ರ ಮತ್ತು ಮಾಧ್ಯಮ ಕಾಲೇಜುಗಳ ವಿದ್ಯಾರ್ಥಿ ಪದವಿ ಚಲನಚಿತ್ರಗಳಿಗೆ ವೇವ್ಸ್ ತನ್ನ ಪೋರ್ಟಲ್ ಅನ್ನು ಮುಕ್ತವಾಗಿರಿಸಿದೆ.

ಐಎಫ್ಎಫ್ಐನಲ್ಲಿ ವೇವ್ನಲ್ಲಿ ಹೊಸ ಚಲನಚಿತ್ರಗಳು ಮತ್ತು ಪ್ರದರ್ಶನಗಳು

ಯುವ ಚಲನಚಿತ್ರ ನಿರ್ಮಾಪಕರ ಮೇಲೆ 55ನೇ ಐಎಫ್ಎಫ್ಐನ ಗಮನವನ್ನು ಕೇಂದ್ರೀಕರಿಸಿ, ವೇವ್ಸ್ ಅನ್ನಪೂರ್ಣ ಫಿಲ್ಮ್ ಮತ್ತು ಮೀಡಿಯಾ ಸ್ಟುಡಿಯೋದಿಂದ ನಾಗಾರ್ಜುನ ಮತ್ತು ಅಮಲಾ ಅಕ್ಕಿನೇನಿ ಅವರ ವಿದ್ಯಾರ್ಥಿ ಪದವಿ ಚಿತ್ರ 'ರೋಲ್ ನಂ.52' ಅನ್ನು ಪ್ರದರ್ಶಿಸಲಿದೆ.

1980 ರ ದಶಕದ ಶಾರುಖ್ ಖಾನ್ ಶೋ ಫೌಜಿಯ ಆಧುನಿಕ ರೂಪಾಂತರವಾದ 'ಫೌಜಿ 2.0', ಆಸ್ಕರ್ ಪ್ರಶಸ್ತಿ ವಿಜೇತ ಗುನೀತ್ ಮೊಂಗಾ ಕಪೂರ್ ಅವರ 'ಕಿಕ್ಕಿಂಗ್ ಬಾಲ್ಸ್', ಕ್ರೈಮ್ ಥ್ರಿಲ್ಲರ್ 'ಜಾಕ್ಸನ್ ಹಾಲ್ಟ್' ಮತ್ತು ಮೊಬೈಲ್ ಶೌಚಾಲಯಗಳ ಮೇಲೆ ಚಿತ್ರೀಕರಿಸಲ್ಪಟ್ಟ 'ಜೈಯೇ ಆಪ್ ಕಹಾನ್ ಜಾಯೆಂಗೆ' ಅನ್ನು ವೇವ್ಸ್ನಲ್ಲಿ ಪ್ರದರ್ಶಿಸಲಾಗುವುದು

ಅಯೋಧ್ಯೆಯ ಪ್ರಭು ಶ್ರೀರಾಮ್ ಲಲ್ಲಾ ಆರತಿ ಲೈವ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಮನ್ ಕಿ ಬಾತ್ ನಂತಹ ಲೈವ್ ಕಾರ್ಯಕ್ರಮಗಳನ್ನು ವೇವ್ಸ್ ಒಳಗೊಂಡಿದೆ. ಮುಂಬರುವ ಯುಎಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2024 ರ ನವೆಂಬರ್ 22 ರಿಂದ ವೇವ್ಸ್ನಲ್ಲಿ ನೇರ ಪ್ರಸಾರವಾಗಲಿದೆ. ಸಿಡಿಎಸಿ, ಎಂಇಐಟಿವೈ ಸಹಭಾಗಿತ್ವದಲ್ಲಿ ವೇವ್ಸ್ ದೈನಂದಿನ ವೀಡಿಯೊ ಸಂದೇಶಗಳೊಂದಿಗೆ ಸೈಬರ್ ಭದ್ರತಾ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದೆ. ಅಭಿಯಾನವನ್ನು ಸೈಬರ್ ಕ್ರೈಮ್ ಕಿ ದುನಿಯಾ (ಕಾಲ್ಪನಿಕ ಸರಣಿ) ಮತ್ತು ಸೈಬರ್ ಅಲರ್ಟ್ (ಡಿಡಿ ನ್ಯೂಸ್ ವೈಶಿಷ್ಟ್ಯಗಳಿಂದ) ನಂತಹ ಕಾರ್ಯಕ್ರಮಗಳು ಬೆಂಬಲಿಸುತ್ತವೆ.

ಫ್ಯಾಂಟಸಿ ಆಕ್ಷನ್ ಸೂಪರ್ ಹೀರೋ 'ಮಂಕಿ ಕಿಂಗ್: ದಿ ಹೀರೋ ಈಸ್ ಬ್ಯಾಕ್', ರಾಷ್ಟ್ರೀಯ ಪ್ರಶಸ್ತಿ ವಿಜೇತ ಫೌಜಾ, ಅರ್ಮಾನ್, ವಿಪುಲ್ ಶಾ ಅವರ ಥ್ರಿಲ್ಲರ್ ಶೋ ಭೇಡ್ ಭರಮ್, ಪಂಕಜ್ ಕಪೂರ್ ಅಭಿನಯದ ಕುಟುಂಬ ನಾಟಕ ಥೋಡೆ ದೂರ್ ಥೋಡೆ ಪಾಸ್, ಕೈಲಾಶ್ ಖೇರ್ ಅವರ ಸಂಗೀತ ರಿಯಾಲಿಟಿ ಶೋ ಭಾರತ್ ಕಾ ಅಮೃತ್ ಕಲಶ್, ಸರ್ಪಂಚ್, ಹಾಟ್ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ ಅವರ ಬೆಕ್ಯೂಬ್ಡ್, ಮಹಿಳಾ ಕೇಂದ್ರಿತ ಪ್ರದರ್ಶನಗಳು ಮತ್ತು ಕಾರ್ಪೊರೇಟ್ ಸರಪಂಚ್,  ದಶ್ಮಿ, ಮತ್ತು ಕರಿಯತಿ, ಜಾನಕಿ ಚಲನಚಿತ್ರಗಳು ವೇವ್ಸ್ನಲ್ಲಿನ ಇತರ ಚಲನಚಿತ್ರಗಳು ಮತ್ತು ಪ್ರದರ್ಶನಗಳಲ್ಲಿ (ಶೋ) ಸೇರಿವೆ. ವೇವ್ಸ್ ಡಾಗ್ಗಿ ಅಡ್ವೆಂಚರ್, ಚೋಟಾ ಭೀಮ್, ತೆನಾಲಿರಾಮ್, ಅಕ್ಬರ್ ಬೀರಬಲ್ ಸೇರಿದಂತೆ ಜನಪ್ರಿಯ ಅನಿಮೇಷನ್ ಕಾರ್ಯಕ್ರಮಗಳನ್ನು ಮತ್ತು ಕೃಷ್ಣ ಜಂಪ್, ಫ್ರೂಟ್ ಚೆಫ್, ರಾಮ್ ದಿ ಯೋಧಾ, ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಂತಹ ಆಯ್ಕೆಗಳನ್ನು  ಒಳಗೊಂಡಿದೆ.

ದೂರದರ್ಶನ, ಆಕಾಶವಾಣಿ ಸೇರಿದಂತೆ ಲೈವ್ ಚಾನೆಲ್ ಗಳು ಮತ್ತು ಖಾಸಗಿ ಚಾನೆಲ್ ಗಳು ಸುದ್ದಿ, ಸಾಮಾನ್ಯ ಮನರಂಜನೆ, ಸಂಗೀತ, ಭಕ್ತಿ, ಕ್ರೀಡೆಗಳಂತಹ ಬಹು ವಿಭಾಗಗಳಲ್ಲಿ ವಿಷಯ ಸ್ವರೂಪಗಳು, ಭಾಷೆ, ಪ್ರಕಾರ ಮತ್ತು ಸಿದ್ಧ ಕೃತಿ ಸಂಚಯವನ್ನು  ವಿಸ್ತರಿಸುತ್ತಿವೆ.

ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ರಾಜ್ಯಗಳು ಪ್ರಸಾರ ಭಾರತಿಯೊಂದಿಗೆ ಕೈಜೋಡಿಸಿ, ಅರ್ಥಪೂರ್ಣ ಸಂದೇಶಗಳಿಗೆ ಪರಿಣಾಮಕಾರಿ ಸಾಧನವಾಗಿ ಡಾಕ್ಯುಡ್ರಾಮಾಗಳು, ನಾಟಕೀಯ ಅಥವಾ ಕಾಲ್ಪನಿಕ ಪ್ರದರ್ಶನಗಳು, ಮನರಂಜನಾ ಮೌಲ್ಯದ ರಿಯಾಲಿಟಿ ಶೋಗಳಂತಹ ವೈವಿಧ್ಯಮಯ ವಿಷಯವನ್ನು ಸಹ-ಅಭಿವೃದ್ಧಿಪಡಿಸಲು ಮತ್ತು ಕೊಡುಗೆ ನೀಡಲು ಕೈಜೋಡಿಸುತ್ತಿವೆ. ಭಾರತದ ಸುಪ್ರೀಂ ಕೋರ್ಟಿನ 75 ನೇ ವಾರ್ಷಿಕೋತ್ಸವದ ಸಾಕ್ಷ್ಯಚಿತ್ರ, ಸಿನೆಮಾಸ್ ಆಫ್ ಇಂಡಿಯಾ ಎಂಬ ಎನ್ಎಫ್ಡಿಸಿ ಆರ್ಕೈವ್ಸ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಐತಿಹಾಸಿಕ ಫೋಟೋಗಳು, ನಿಯತಕಾಲಿಕೆಗಳು ಮತ್ತು ಪ್ರಕಟಣೆಗಳಂತಹ ಅಪರೂಪದ ಆರ್ಕೈವಲ್ ವಿಷಯಗಳು ಇದರಲ್ಲಿ ಸೇರಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಹಣಕಾಸು ಸಚಿವಾಲಯ, ಐಜಿಎನ್ಸಿಎ, ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಅಂಚೆ ಸಹ ವೇವ್ಸ್ಗೆ ಮಾಹಿತಿಯುಕ್ತ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನೀಡಿವೆ.

ವೇವ್ಸ್ನ ಡಿಜಿಟಲ್ ಅನುಭವವು ಭಾರತೀಯ ನೀತಿಗಳನ್ನು ಆಧುನಿಕ ನೋಟ ಮತ್ತು ಭಾವನೆ, ಸ್ನೇಹಪರ ಬಳಕೆದಾರ ಇಂಟರ್ಫೇಸ್, ಕ್ರಾಸ್-ಪ್ಲಾಟ್ಫಾರ್ಮ್ ಹೊಂದಾಣಿಕೆ, ವೈಯಕ್ತಿಕಗೊಳಿಸಿದ ಪ್ರೊಫೈಲ್ಗಳು ಮತ್ತು ಕ್ಯುರೇಟೆಡ್ ಪ್ಲೇಪಟ್ಟಿಗಳೊಂದಿಗೆ ಬೆಸೆಯುತ್ತದೆ.

ಬಿಡುಗಡೆಯು ಪ್ರಸಾರ ಭಾರತಿಗೆ ಮಾತ್ರವಲ್ಲದೆ ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ರೇಕ್ಷಕರಿಗೆ ಒಂದು ಪ್ರಮುಖ ಕೊಡುಗೆಯನ್ನು  ಸೂಚಿಸುತ್ತದೆ, ಏಕೆಂದರೆ ಇದು ಸಂಪೂರ್ಣ ಇನ್ಫೋಟೈನ್ಮೆಂಟ್ ಪರಿಸರ ವ್ಯವಸ್ಥೆಯನ್ನು ನೀಡುತ್ತದೆ.

 

*****

iffi reel

(Release ID: 2075380) Visitor Counter : 18