ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಸುದರ್ಶನ್ ಪಟ್ನಾಯಕ್ ಅವರ, 200 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನದ ಮೈಲಿಗಲ್ಲನ್ನು ಗೌರವಿಸುವ ಮರಳು ಕಲಾಕೃತಿಯನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ಹಂಚಿಕೊಂಡಿದ್ದಾರೆ
प्रविष्टि तिथि:
15 NOV 2024 9:52AM by PIB Bengaluru
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿಯವರು ಒಡಿಶಾದ ಪುರಿ ಬೀಚ್ ನಲ್ಲಿ ಖ್ಯಾತ ಮರಳು ಕಲಾವಿದರಾದ ಶ್ರೀ ಸುದರ್ಶನ್ ಪಟ್ನಾಯಕ್ ಅವರ ಕಲಾಕೃತಿಯನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಜೋಶಿಯವರು Xನಲ್ಲಿ ಪೋಸ್ಟ್ ಮಾಡಿ, "ನವೀಕರಿಸಬಹುದಾದ ಇಂಧನವನ್ನು ತಯಾರಿಸುವಲ್ಲಿ 200 ಗಿಗಾವ್ಯಾಟ್ ಮೈಲಿಗಲ್ಲನ್ನು ಮೀರಿದ ಭಾರತದ ಗಮನಾರ್ಹ ಸಾಧನೆಯನ್ನು ಗೌರವಿಸುತ್ತೇನೆ, @sudarsansand #RenewablesPeChintan #REChintanShivir" ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಪಂಚಾಮೃತ' ಗುರಿಗೆ ಅನುಗುಣವಾಗಿ ಭಾರತವು ಅಕ್ಟೋಬರ್ ನಲ್ಲಿ ನವೀಕರಿಸಬಹುದಾದ ಇಂಧನ ತಯಾರಿಕೆಯಲ್ಲಿ 200 ಗಿಗಾವ್ಯಾಟ್ ಮೈಲಿಗಲ್ಲನ್ನು ಸಾಧಿಸಿದೆ. ಈ ಗಮನಾರ್ಹ ಬೆಳವಣಿಗೆಯು 2030ರ ವೇಳೆಗೆ ಪಳೆಯುಳಿಕೆಯೇತರ ಮೂಲಗಳಿಂದ 500 ಗಿಗಾವ್ಯಾಟ್ ಸಾಧಿಸುವ ದೇಶದ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ತಯಾರಿಕೆಯ ಗುರಿಯೊಂದಿಗೆ ಹೊಲಿಕೆಯಾಗುತ್ತದೆ.
*****
(रिलीज़ आईडी: 2073709)
आगंतुक पटल : 59