ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಸರ್ಕಾರವು ಮೊದಲ ಮಹಿಳಾ ಸಿ ಐ ಎಸ್ ಎಫ್ ಬೆಟಾಲಿಯನ್ ಅನ್ನು ಅನುಮೋದಿಸಿದೆ ಎಂದು ಹೇಳಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ರಾಷ್ಟ್ರ ನಿರ್ಮಾಣದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮುಂದಿನ ದೃಢ ಹೆಜ್ಜೆಯಾಗಿ, ಸಿ ಐ ಎಸ್ ಎಫ್ ನ ಮೊದಲ ಮಹಿಳಾ ಬೆಟಾಲಿಯನ್ ಸ್ಥಾಪನೆಗೆ ಮೋದಿ ಸರ್ಕಾರ ಅನುಮೋದನೆ ನೀಡಿದೆ
ಗಣ್ಯ ಪಡೆಯಾಗಿ ಬೆಳೆಯುವ ಮಹಿಳಾ ಬೆಟಾಲಿಯನ್ ವಿಮಾನ ನಿಲ್ದಾಣಗಳು ಮತ್ತು ಮೆಟ್ರೋ ರೈಲುಗಳಂತಹ ರಾಷ್ಟ್ರದ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವ ಮತ್ತು ಕಮಾಂಡೋಗಳಾಗಿ ವಿಐಪಿ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ
ಸರ್ಕಾರದ ಈ ನಿರ್ಧಾರವು ರಾಷ್ಟ್ರವನ್ನು ರಕ್ಷಿಸುವ ನಿರ್ಣಾಯಕ ಕಾರ್ಯದಲ್ಲಿ ಭಾಗವಹಿಸಲು ಹೆಚ್ಚಿನ ಮಹಿಳೆಯರ ಆಸೆ-ಆಕಾಂಕ್ಷೆಗಳನ್ನು ಖಂಡಿತವಾಗಿಯೂ ಈಡೇರಿಸಲಿದೆ
प्रविष्टि तिथि:
13 NOV 2024 3:27PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿ ಐ ಎಸ್ ಎಫ್) ಮೊದಲ ಮಹಿಳಾ ಬೆಟಾಲಿಯನ್ ಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ ಎಂದು ಹೇಳಿದರು.
"ರಾಷ್ಟ್ರ ನಿರ್ಮಾಣದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮುಂದಿನ ದೃಢ ಹೆಜ್ಜೆಯಾಗಿ, ಮೋದಿ ಸರ್ಕಾರವು ಸಿ ಐ ಎಸ್ ಎಫ್ ನ ಮೊದಲ ಮಹಿಳಾ ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡಿದೆ. ಇದನ್ನು ಗಣ್ಯ ಪಡೆಯಾಗಿ ಬೆಳೆಸಲು, ಮಹಿಳಾ ಬೆಟಾಲಿಯನ್ ವಿಮಾನ ನಿಲ್ದಾಣಗಳು ಮತ್ತು ಮೆಟ್ರೋ ರೈಲುಗಳಂತಹ ರಾಷ್ಟ್ರದ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವುದರ ಜೊತೆಗೆ ಕಮಾಂಡೋಗಳಾಗಿ ವಿಐಪಿ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ಕೂಡಾ ಹೊತ್ತಿರುತ್ತದೆ. ಈ ನಿರ್ಧಾರವು ಖಂಡಿತವಾಗಿಯೂ ರಾಷ್ಟ್ರವನ್ನು ರಕ್ಷಿಸುವ ನಿರ್ಣಾಯಕ ಕಾರ್ಯದಲ್ಲಿ ಭಾಗವಹಿಸುವ ಹೆಚ್ಚಿನ ಮಹಿಳೆಯರ ಆಸೆ-ಆಕಾಂಕ್ಷೆಗಳನ್ನು ಈಡೇರಿಸುತ್ತದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸುವ ಮಹಿಳೆಯರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ಆದ್ಯತೆಯ ಆಯ್ಕೆಯಾಗಲಿದೆ. ಪ್ರಸ್ತುತ ಸಿಐಎಸ್ಎಫ್ ನಲ್ಲಿ ಮಹಿಳೆಯರ ಸಂಖ್ಯೆ 7% ಕ್ಕಿಂತ ಹೆಚ್ಚಾಗಿದೆ. ಮಹಿಳಾ ಬೆಟಾಲಿಯನ್ ಸೇರ್ಪಡೆಯು ದೇಶಾದ್ಯಂತ ಹೆಚ್ಚಿನ ಮಹತ್ವಾಕಾಂಕ್ಷಿ ಯುವತಿಯರನ್ನು ಸಿ ಐ ಎಸ್ ಎಫ್ ಗೆ ಸೇರಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಸದವಕಾಶ ನೀಡಿ ಪ್ರೋತ್ಸಾಹಿಸುವ ಭರವಸೆಯನ್ನು ಹೊಂದಿದೆ. ಇದು ಸಿ ಐ ಎಸ್ ಎಫ್ ನಲ್ಲಿ ಮಹಿಳೆಯರಿಗೆ ಹೊಸ ಗುರುತನ್ನು ನೀಡಲಿದೆ.
ಸಿ ಐ ಎಸ್ ಎಫ್ ನ ಪ್ರಧಾನ ಕಚೇರಿಗಳು ಹೊಸ ಬೆಟಾಲಿಯನ್ ನ ಪ್ರಧಾನ ಕಚೇರಿಗಳಿಗೆ ಶೀಘ್ರ ನೇಮಕಾತಿ ಮತ್ತು ತರಬೇತಿ ಸ್ಥಳದ ಆಯ್ಕೆಗೆ ಸಿದ್ಧತೆಗಳನ್ನು ಪ್ರಾರಂಭಿಸಿವೆ. ವಿಐಪಿ ಭದ್ರತೆ ಮತ್ತು ವಿಮಾನ ನಿಲ್ದಾಣಗಳ ಭದ್ರತೆ, ದೆಹಲಿ ಮೆಟ್ರೋ ರೈಲು ಕರ್ತವ್ಯಗಳಲ್ಲಿ ಕಮಾಂಡೋಗಳಾಗಿ ಬಹುಮುಖಿ ಪಾತ್ರವನ್ನು ನಿರ್ವಹಿಸುವ ಸಾಮರ್ಥ್ಯವಿರುವ ಗಣ್ಯ ಬೆಟಾಲಿಯನ್ ಅನ್ನು ರಚಿಸಲು ತರಬೇತಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
53ನೇ ಸಿ ಐ ಎಸ್ ಎಫ್ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ನಿರ್ದೇಶನಕ್ಕೆ ಅನುಸಾರವಾಗಿ ಸಿಐಎಸ್ಎಫ್ ನಲ್ಲಿ ಎಲ್ಲಾ ಮಹಿಳಾ ಬೆಟಾಲಿಯನ್ ಗಳನ್ನು ರಚಿಸುವ ಪ್ರಸ್ತಾಪವನ್ನು ಮುಂದಿಡಲಾಗಿತ್ತು.
*****
(रिलीज़ आईडी: 2073241)
आगंतुक पटल : 100