ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 4

ಮಹಾತ್ಮಾ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶದ ಪುನರುಚ್ಚರಣೆ: 55ನೇ ಐ.ಎಫ್.ಎಫ್.ಐನಲ್ಲಿ ಪ್ರತಿಷ್ಠಿತ ಐಸಿಎಫ್ ಟಿ-ಯುನೆಸ್ಕೊ ಗಾಂಧಿ ಪದಕಕ್ಕಾಗಿ ಹತ್ತು ಚಲನಚಿತ್ರಗಳ ಸ್ಪರ್ಧೆ


ಐ.ಎಫ್.ಎಫ್.ಐನಲ್ಲಿ ಐಸಿಎಫ್ ಟಿ-ಯುನೆಸ್ಕೊ ಗಾಂಧಿ ಪದಕ: ಶಾಂತಿ ಮತ್ತು ಮಾನವೀಯತೆಗೆ ಸಿನಿಮಾದ ಗೌರವ

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದ (ಐ.ಎಫ್.ಎಫ್.ಐ) 55 ನೇ ಆವೃತ್ತಿಯು ಪ್ರತಿಷ್ಠಿತ ಐಸಿಎಫ್ ಟಿ-ಯುನೆಸ್ಕೊ ಗಾಂಧಿ ಪದಕಕ್ಕೆ ನಾಮನಿರ್ದೇಶಿತರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಜಾಗತಿಕ ಪ್ರಶಸ್ತಿಯನ್ನು ಪ್ಯಾರಿಸ್ ನಲ್ಲಿರುವ ಇಂಟರ್ನ್ಯಾಷನಲ್ ಕೌನ್ಸಿಲ್ ಫಾರ್ ಫಿಲ್ಮ್, ಟೆಲಿವಿಷನ್ ಮತ್ತು ಆಡಿಯೋವಿಶುವಲ್ ಕಮ್ಯುನಿಕೇಷನ್ (ಇ.ಸಿ.ಎಫ್.ಟಿ.) ಮತ್ತು ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ಸಹಯೋಗದೊಂದಿಗೆ ನೀಡಲಾಗುತ್ತದೆ. ಈ ಪುರಸ್ಕಾರವನ್ನು ಅಂತರ್-ಸಾಂಸ್ಕೃತಿಕ ಸಂಭಾಷಣೆ ಮತ್ತು ಶಾಂತಿಯನ್ನು ಉತ್ತೇಜಿಸುವ ಮತ್ತು ಮಹಾತ್ಮ ಗಾಂಧಿಯವರ ಆದರ್ಶಗಳೊಂದಿಗೆ, ವಿಶೇಷವಾಗಿ ಅಹಿಂಸೆ, ಸಹಿಷ್ಣುತೆ ಮತ್ತು ಸಾಮಾಜಿಕ ಸಾಮರಸ್ಯದಿಂದ ತುಂಬಿದ ಚಲನಚಿತ್ರಗಳಿಗೆ ನೀಡಲಾಗುತ್ತದೆ.

ಈ ವರ್ಷ, ಹತ್ತು ಗಮನಾರ್ಹ ಚಲನಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಪ್ರತಿಯೊಂದೂ ವಿಭಿನ್ನ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಪ್ರಕಾರಗಳನ್ನು ಪ್ರತಿನಿಧಿಸುತ್ತದೆ, ಆದರೂ ಗಾಂಧೀಜಿ ತತ್ವಗಳಿಗೆ ಸಂಬಂಧ ಹೊಂದಿವೆ. ಗಣ್ಯ ತೀರ್ಪುಗಾರರಾದ ಇಸಾಬೆಲ್ಲೆ ಡೇನೆಲ್ (ಫಿಪ್ರೆಸ್ಸಿಯ ಗೌರವ ಅಧ್ಯಕ್ಷರು - ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್), ಸೆರ್ಗೆ ಮೈಕೆಲ್ (ಸಿಐಸಿಟಿ-ಐಸಿಎಫ್ಟಿಯ ಉಪಾಧ್ಯಕ್ಷರು), ಮಾರಿಯಾ ಕ್ರಿಸ್ಟಿನಾ ಇಗ್ಲೇಷಿಯಸ್ (ಯುನೆಸ್ಕೋದ ಸಾಂಸ್ಕೃತಿಕ ವಲಯದ ಕಾರ್ಯಕ್ರಮದ ಮಾಜಿ ಮುಖ್ಯಸ್ಥರು), ಡಾ. ಅಹ್ಮದ್ ಬೆಡ್ಜೌಯಿ (ಅಲ್ಜಿಯರ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನ ಕಲಾತ್ಮಕ ನಿರ್ದೇಶಕ), ಮತ್ತು ಕ್ಸುಯಾನ್ ಹನ್ (ಪ್ಲಾಟ್ಫಾರ್ಮ್ ಫಾರ್ ಕ್ರಿಯೇಟಿವಿಟಿ ಮತ್ತು ಇನ್ನೋವೇಶನ್, ಸಿ.ಐ.ಸಿ.ಟಿ-ಐ.ಸಿ.ಎಫ್.ಟಿ ಯುವ ಶಾಖೆ),  ಅವರು ಈ ಚಲನಚಿತ್ರಗಳನ್ನು ಅವುಗಳ ನೈತಿಕ ಮಟ್ಟ, ಕಲಾತ್ಮಕ ಶ್ರೇಷ್ಠತೆ ಮತ್ತು  ಪ್ರೇಕ್ಷಕರನ್ನು ಪ್ರೇಕ್ಷಕರು, ವಿಶೇಷವಾಗಿ ಯುವಕರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಶಿಕ್ಷಣ ನೀಡುವ ಸಾಮರ್ಥ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಾರೆ. 

ಐ.ಸಿ.ಎಫ್.ಟಿ ಯುನೆಸ್ಕೋ ಗಾಂಧಿ ಪದಕ 2024 ಕ್ಕೆ ನಾಮನಿರ್ದೇಶನಗೊಂಡವರು:

ಕ್ರಾಸಿಂಗ್ 

ಸ್ವೀಡಿಷ್ ನಿರ್ದೇಶಕ ಲೆವನ್ ಅಕಿನ್, ಆಂಡ್ ದೆನ್ ವಿ ಡ್ಯಾನ್ಸ್ಡ್ (2019) ಚಲನಚಿತ್ರಕ್ಕಾಗಿ  ಹೆಸರುವಾಸಿಯಾಗಿದ್ದಾರೆ, ಇಸ್ತಾನ್ ಬುಲ್ ನ ಟ್ರಾನ್ಸ್ ಜೆಂಡರ್ ಸಮುದಾಯವನ್ನು ಅನ್ವೇಷಿಸುವ ಒಂದು ಮಾರ್ಮಿಕವಾದ ಕಥೆಯನ್ನು ಪ್ರಸ್ತುತಪಡಿಸಿದ್ದಾರೆ. ಚಲನಚಿತ್ರವು ವರ್ಗ, ಲಿಂಗ ಮತ್ತು ಲೈಂಗಿಕತೆಯ ವಿಷಯಗಳನ್ನು ಪರಿಶೋಧಿಸುವ ಮೂಲಕ ನಿವೃತ್ತ ಶಿಕ್ಷಕಿಯಾದ ಲಿಯಾ ತನ್ನ ಸೋದರಸೊಸೆ ಟೆಕ್ಲಾಳ ಹುಡುಕಾಟದಲ್ಲಿ ಪ್ರಯಾಣಿಸುತ್ತದೆ. ರಕ್ತಸಂಬಂಧ ಮತ್ತು ರೂಪಾಂತರದ ಮೇಲೆ ಒತ್ತು ನೀಡುವ ಈ ಚಿತ್ರವು ಬರ್ಲಿನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2024 ನಲ್ಲಿ ಟೆಡ್ಡಿ ಜ್ಯೂರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಫಾರ್ ರಾಣಾ

2024ರ ಬುಸಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಥಮ ಪ್ರದರ್ಶನಗೊಂಡ ಇರಾನ್ ಚಲನಚಿತ್ರ ನಿರ್ಮಾಪಕ ಇಮಾನ್ ಯಾಜ್ದಿ ಅವರ ಚೊಚ್ಚಲ ಚಲನಚಿತ್ರವು ತಮ್ಮ ಮಗಳಿಗೆ ಹೃದಯ ಕಸಿ ಮಾಡಲು ಹೆಣಗಾಡುತ್ತಿರುವ ದಂಪತಿಗಳ ಹೃದಯವಿದ್ರಾವಕ ಕಥೆಯನ್ನು ಹೇಳುತ್ತದೆ. ಚಿತ್ರವು ಪ್ರೀತಿ, ನಷ್ಟ ಮತ್ತು ವೈದ್ಯಕೀಯ ಆಯ್ಕೆಗಳ ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ.

ಲೆಸನ್ ಲರ್ನ್ಡ್ (ಫೆಕೆಟೆ ಪಾಂಟ್)

ಹಂಗೇರಿಯ ನಿರ್ದೇಶಕ ಬ್ಯಾಲಿಂಟ್ ಸ್ಜಿಮ್ಲರ್ ಅವರ ಪ್ರಬಲ ಚೊಚ್ಚಲ, ಲೆಸನ್ ಲರ್ನ್ಡ್ ಹಂಗೇರಿಯ ಶೈಕ್ಷಣಿಕ ಬಿಕ್ಕಟ್ಟನ್ನು ತೊಂದರೆಗೊಳಗಾದ ಮಗುವಿನ ದೃಷ್ಟಿಯಲ್ಲಿ  ವಿಮರ್ಶಿಸುತ್ತದೆ. ಅದರ ತೀಕ್ಷ್ಣವಾದ ಸಾಮಾಜಿಕ ವ್ಯಾಖ್ಯಾನಕ್ಕಾಗಿ ಪ್ರಶಂಸಿಸಲ್ಪಟ್ಟ ಚಲನಚಿತ್ರವು 2024 ರ ಲೊಕಾರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಂಸೆಯನ್ನು ಪಡೆಯಿತು.

ಮೀಟಿಂಗ್ ವಿದ್ ಪೋಲ್ ಪಾಟ್ (ರೆಂಡೆಜ್-ವೌಸ್ ಅವೆಕ್ ಪೋಲ್ ಪಾಟ್)

ಕಾಂಬೋಡಿಯಾದ ಚಲನಚಿತ್ರ ನಿರ್ಮಾಪಕ ರಿಥಿ ಪ್ಯಾನ್ ಅವರ ಈ ಚಲನಚಿತ್ರವು ಫ್ಯಾಂಟಸಿ ಮತ್ತು ವಾಸ್ತವದ ವಿಶಿಷ್ಟ ಚಿತ್ರಣವಾಗಿದೆ. ಈ ಚಿತ್ರವು ಎಲಿಜಬೆತ್ ಬೇಕರ್ ಅವರ "ವೆನ್ ದಿ ವಾರ್ ವಾಸ್ ಓವರ್" ನಿಂದ ಸ್ಫೂರ್ತಿ ಪಡೆದಿದೆ. ಈ ಚಲನಚಿತ್ರವು 1978 ರ ಕಾಂಬೋಡಿಯಾದಲ್ಲಿ ಪಾಲ್ ಪಾಟ್ ನ ಭಯಾನಕ ಆಡಳಿತವನ್ನು ಎದುರಿಸುತ್ತಿರುವ ಮೂವರು ಫ್ರೆಂಚ್ ಪತ್ರಕರ್ತರನ್ನು ಆಧರಿಸಿದೆ. ಇದನ್ನು 2024 ರಲ್ಲಿ ಕಾನ್ ನಲ್ಲಿ ಪ್ರದರ್ಶಿಸಲಾಯಿತು.   ಭಾವನಾತ್ಮಕ ಆಳ ಮತ್ತು ಐತಿಹಾಸಿಕ ವಾಸ್ತವದ ಚಿತ್ರಣಕ್ಕಾಗಿ ಈ ಚಿತ್ರವು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿದೆ.

ಸತು – ಇಯರ್ ಆಫ್ ದಿ ರ್ಯಾ ಬಿಟ್ 

ರೈನ್ ಡಾನ್ಸ್ ಫಿಲ್ಮ್ ಫೆಸ್ಟಿವಲ್ 2024 ಪ್ರಶಸ್ತಿ ವಿಜೇತ ಜೋಶುವಾ ಟ್ರಿಗ್ ಅವರ ಚೊಚ್ಚಲ ಚಲನಚಿತ್ರವನ್ನು ಲಾವೋಸ್ ನಲ್ಲಿ ಚಿತ್ರೀಕರಿಸಲಾಗಿದೆ. ಪರಿತ್ಯಕ್ತ ಮಗು ತನ್ನ ತಾಯಿಯನ್ನು ಹುಡುಕುವ ಈ ಹೃದಯಸ್ಪರ್ಶಿ ಕಥೆಯು ಬದುಕುಳಿಯುವ ಸಾಮರ್ಥ್ಯ, ಸ್ನೇಹ ಮತ್ತು  ಚೇತರಿಕೆಯ ವಿಷಯಗಳ ಸುತ್ತ ಸುತ್ತುತ್ತದೆ.

ಟ್ರಾನ್ಸ್ಮಜೋನಿಯಾ

ದಕ್ಷಿಣ ಆಫ್ರಿಕಾದ ಚಲನಚಿತ್ರ ನಿರ್ಮಾಪಕ ಪಿಯಾ ಮರೈಸ್ ಬ್ರೆಜಿಲಿಯನ್ ಅಮೆಜಾನ್ ನಲ್ಲಿ ನಡೆದ ಪರಿಸರದ  ನಾಟಕಕ್ಕೆ ಜೀವ ತುಂಬಿದ್ದಾರೆ. ಪರಿಸರ ಮತ್ತು ಸಾಮಾಜಿಕ ನ್ಯಾಯದ ಒಂದನ್ನೊಂದು ಛೇದಿಸುವುದನ್ನು  ಪ್ರದರ್ಶಿಸುವ, ಅಕ್ರಮ ಮರಗಳ್ಳರಿಂದ ತನ್ನ ಸ್ಥಳೀಯ ಸಮುದಾಯವನ್ನು ರಕ್ಷಿಸಲು ಹೋರಾಡುವ ವೈದ್ಯೆಯ ಬಗ್ಗೆ ಚಲನಚಿತ್ರವು ಹೇಳುತ್ತದೆ. ಇದನ್ನು 2024ರ  ಲೊಕಾರ್ನೊ ಮತ್ತು ಟೊರೊಂಟೊ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು.

ಅನಸಿಂಕೆಬಲ್ (ಸಿಂಕೆಫ್ರಿ)

ನಿಜ ಜೀವನದ 1981 ರ ಆರ್ ಎಫ್2 ದುರಂತವನ್ನು ಆಧರಿಸಿದ ಕ್ರಿಶ್ಚಿಯನ್ ಆಂಡರ್ಸನ್ ಅವರ ರೋಮಾಂಚಕ ಡ್ಯಾನಿಶ್ ಚಲನಚಿತ್ರ. ಅನ್ ಸಿಂಕಬಲ್ ದುರಂತದಲ್ಲಿ ತನ್ನ ತಂದೆಯ ಒಳಗೊಳ್ಳುವಿಕೆಯ ಕುರಿತು ಹೆನ್ರಿಕ್ನ ತನಿಖೆಯ ಬಗ್ಗೆ ಇದೆ, ಇದು ದುಃಖ, ಅಪರಾಧ ಮತ್ತು ಕುಟುಂಬದ ಪ್ರಕ್ಷುಬ್ಧತೆಯ ಪ್ರಸ್ತುತಿಯನ್ನು ಹೊಂದಿದೆ. 

ಅಮೊರ್ ಬಾಸ್

ನಂದಿತಾ ರಾಯ್ ಮತ್ತು ಶಿಬೋಪ್ರಸಾದ್ ಮುಖರ್ಜಿಯವರ ಹೃದಯಸ್ಪರ್ಶಿ ಬೆಂಗಾಲಿ ಚಲನಚಿತ್ರ, ಇದು 20 ವರ್ಷಗಳ ನಂತರ  ಪ್ರಖ್ಯಾತ ನಟಿ ರಾಖೀ ಗುಲ್ಜಾರ್ ಅವರ ನಟನೆಗೆ  ಮರಳಿದ ಚಿತ್ರವಾಗಿದೆ. ಈ ಚಿತ್ರವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ತಾಯಿ ಮತ್ತು ಮಗನ ಹೃದಯಸ್ಪರ್ಶಿ ಕಥೆಯನ್ನು ಹೇಳುತ್ತದೆ ಹಾಗು ಕುಟುಂಬ ಮತ್ತು ಮಹತ್ವಾಕಾಂಕ್ಷೆಯ ಸಂಕೀರ್ಣತೆಗಳನ್ನು ಅನ್ವೇಷಿಸುತ್ತದೆ.

ಜೂಫೂಲ್

ಅಸ್ಸಾಮಿ ಚಲನಚಿತ್ರ ನಿರ್ಮಾಪಕ ಮತ್ತು ನಟ ಜಾದುಮೋನಿ ದತ್ತಾ ಅವರ ಈ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರವು ಈಶಾನ್ಯ ಭಾರತದಲ್ಲಿ ಹಿಂಸಾತ್ಮಕ ಗಡಿ ಸಂಘರ್ಷಗಳ ಮಧ್ಯೆ ಇಬ್ಬರು ತಾಯಂದಿರ ನಡುವಿನ ಆಳವಾದ ಬಾಂಧವ್ಯವನ್ನು ಚಿತ್ರಿಸುತ್ತದೆ. ಹೋರಾಟ, ಸಹಾನುಭೂತಿ ಮತ್ತು ತಾಯ್ತನದ ವೈಯಕ್ತಿಕ ಮತ್ತು ಸಾಮಾಜಿಕ ಆಯಾಮಗಳನ್ನು ಚಿತ್ರವು ಪರಿಶೋಧಿಸುತ್ತದೆ.

ಶ್ರೀಕಾಂತ್

ತುಷಾರ್ ಹಿರಾನಂದಾನಿ ನಿರ್ದೇಶನದ, ಜೀವನಚರಿತ್ರೆಯ ಚಲನಚಿತ್ರದಲ್ಲಿ ರಾಜ್ ಕುಮಾರ್ ರಾವ್ ಮತ್ತು ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಎಂಐಟಿಯಲ್ಲಿ ದಾಖಲಾದ ದೃಷ್ಟಿ ವಿಕಲಚೇತನ ಉದ್ಯಮಿ ಶ್ರೀಕಾಂತ್ ಬೊಳ್ಳ ಅವರ ಸ್ಪೂರ್ತಿದಾಯಕ ನೈಜ ಕಥೆಯಾಗಿದೆ.

ಐಸಿಎಫ್ ಟಿ-ಯುನೆಸ್ಕೊ ಗಾಂಧಿ ಪ್ರಶಸ್ತಿಪದಕದ ಬಗ್ಗೆ 

46ನೇ ಐ.ಎಫ್.ಎಫ್.ಐನ ಸಮಯದಲ್ಲಿ ಐಸಿಎಫ್ ಟಿ-ಯುನೆಸ್ಕೊ  ಗಾಂಧಿ ಪದಕವನ್ನು ಪ್ರಾರಂಭಿಸಲಾಯಿತು. ಇದನ್ನು ಉನ್ನತ ಕಲಾತ್ಮಕ ಮತ್ತು ಸಿನಿಮಾದ  ಗುಣಮಟ್ಟವನ್ನು ಹೊಂದಿರುವ ಜೊತೆಗೆ ಸಮಾಜದ ಅತ್ಯಂತ ಪ್ರಮುಖ ಸಮಸ್ಯೆಯ ಮೇಲೆ ನೈತಿಕ ಪ್ರತಿಬಿಂಬವನ್ನು ಬಿಂಬಿಸುವ ಚಲನಚಿತ್ರಗಳನ್ನು ಗೌರವಿಸಲು ಸ್ಥಾಪಿಸಲಾಗಿದೆ.

ಐಸಿಎಫ್ ಟಿ-ಯುನೆಸ್ಕೊ  ಗಾಂಧಿ ಪ್ರಶಸ್ತಿ ಪದಕವು ಕೇವಲ ಪ್ರಶಸ್ತಿಯಾಗಿರದೆ ಅದಕ್ಕಿಂತಲೂ ಹೆಚ್ಚಾಗಿದೆ; ಇದು ಸ್ಫೂರ್ತಿ, ಶಿಕ್ಷಣ ಮತ್ತು ಒಂದುಗೂಡಿಸುವ ಚಲನಚಿತ್ರದ ಸಾಮರ್ಥ್ಯದ  ಆಚರಣೆಯಾಗಿದೆ.  ಐಸಿಎಫ್ ಟಿ-ಯುನೆಸ್ಕೊ  ಗಾಂಧಿ ಪದಕ ವಿಜೇತರನ್ನು ಗೋವಾದಲ್ಲಿ ಐ.ಎಫ್.ಎಫ್.ಐ 2024ರ ಸಮಾರೋಪ ಸಮಾರಂಭದಲ್ಲಿ ಘೋಷಿಸಲಾಗುವುದು. ಪ್ರಶಸ್ತಿ ವಿಜೇತರಿಗೆ ಪ್ರಮಾಣಪತ್ರ ಮತ್ತು ಪ್ರತಿಷ್ಠಿತ ಗಾಂಧಿ ಪದಕವನ್ನು ನೀಡಿ ಗೌರವಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿ https://iffigoa.org/

 

*****

iffi reel

(Release ID: 2073001) Visitor Counter : 28