ಪ್ರಧಾನ ಮಂತ್ರಿಯವರ ಕಛೇರಿ
ಮೌಲಾನಾ ಆಜಾದ್ ಅವರ ಜನ್ಮದಿನದಂದು ಪ್ರಧಾನಮಂತ್ರಿ ಅವರಿಗೆ ಗೌರವ ಸಲ್ಲಿಸಿದರು
प्रविष्टि तिथि:
11 NOV 2024 9:24AM by PIB Bengaluru
ಮೌಲಾನಾ ಆಜಾದ್ ಅವರ ಜನ್ಮಜಯಂತಿ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದರು. ಆಜಾದ್ ಅವರು ಜ್ಞಾನದ ದಾರಿದೀಪವಾಗಿದ್ದು, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶ್ಲಾಘಿಸಿದರು.
ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು,
“ಇಂದು ಮೌಲಾನಾ ಆಜಾದ್ ಅವರ ಜನ್ಮಜಯಂತಿ ಅಂಗವಾಗಿ ನಾವು ಮೌಲಾನಾ ಆಜಾದ್ ಅವರಿಗೆ ಗೌರವ ಸಲ್ಲಿಸುತ್ತೇವೆ. ಅವರು ಜ್ಞಾನದ ದಾರಿದೀಪ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ವಹಿಸಿದ್ದ ಪಾತ್ರಕ್ಕಾಗಿ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ಅವರು ಆಳವಾದ ಚಿಂತಕ ಮತ್ತು ಸಮೃದ್ಧ ಬರಹಗಾರರಾಗಿದ್ದರು. ಅಭಿವೃದ್ಧಿ ಹೊಂದಿದ ಮತ್ತು ಸಶಕ್ತ ಭಾರತಕ್ಕಾಗಿ ಅವರ ದೃಷ್ಟಿಕೋನದಿಂದ ನಾವು ಪ್ರೇರೇಪಿಸಲ್ಪಟ್ಟಿದ್ದೇವೆ.'' ಎಂದು ಬರೆದುಕೊಂಡಿದ್ದಾರೆ.
*****
(रिलीज़ आईडी: 2072324)
आगंतुक पटल : 59
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam