ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐ ಎಫ್ ಎಫ್ ಐ ಭಾರತೀಯ ಚಿತ್ರರಂಗದ ನಾಲ್ವರು ಶ್ರೇಷ್ಠರ ಶತಮಾನೋತ್ಸವವನ್ನು ಆಚರಿಸಲಿದೆ
ಈ ವರ್ಷ ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಮೊಹಮ್ಮದ್ ರಫಿ ಅವರ ಮರುಸ್ಥಾಪಿತ ಸಿನಿಮಾಗಳು ಜೀವ ಪಡೆಯಲಿವೆ
55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ಭಾರತೀಯ ಸಿನಿಮಾದ ಹಲವು ಮುಖಗಳನ್ನು ರೂಪಿಸಿದ ನಾಲ್ವರು ದಂತಕಥೆಗಳನ್ನು ಗೌರವಿಸುತ್ತದೆ. ಈ ವರ್ಷ ಐ ಎಫ್ ಎಫ್ ಐ ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ (ಎ ಎನ್ ಆರ್) ಮತ್ತು ಮೊಹಮ್ಮದ್ ರಫಿ ಅವರ ಅಸಾಧಾರಣ ಪರಂಪರೆಗಳಿಗೆ ಶ್ರದ್ಧಾಂಜಲಿ, ಪ್ರದರ್ಶನಗಳು ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳ ಮೂಲಕ ಗೌರವ ಸಲ್ಲಿಸುತ್ತದೆ, ಸಿನಿಮಾ ಜಗತ್ತಿಗೆ ಈ ಶ್ರೇಷ್ಠ ಚಲನಚಿತ್ರ ವ್ಯಕ್ತಿಗಳ ಕೊಡುಗೆಗಳನ್ನು ಪ್ರತಿನಿಧಿಗಳು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
NFDC-NFAI ನಿಂದ ಟೈಮ್‌ಲೆಸ್ ಕ್ಲಾಸಿಕ್ ಗಳ ಆವೃತ್ತಿಗಳನ್ನು ಮರುಸ್ಥಾಪಿಸಲಾಗಿದೆ
ಈ ಐಕಾನ್ ಗಳಿಗೆ ವಿಶೇಷ ಗೌರವವನ್ನು ಸಲ್ಲಿಸಲು ಐ ಎಫ್ ಎಫ್ ಐ NFDC-NFAI ನಿಂದ ಮರುಸ್ಥಾಪಿಸಲಾದ ಅವರ ಟೈಮ್‌ಲೆಸ್ ಕ್ಲಾಸಿಕ್ ಗಳ ಆವೃತ್ತಿಗಳನ್ನು ಪ್ರಸ್ತುತಪಡಿಸುತ್ತದೆ, ಇದು ಭಾರತೀಯ ಚಿತ್ರರಂಗದ ಕೆಲವು ಪ್ರಸಿದ್ಧ ಚಲನಚಿತ್ರಗಳ ಶ್ರೀಮಂತ ಅನುಭವವನ್ನು ಪ್ರೇಕ್ಷಕರಿಗೆ ಒದಗಿಸುತ್ತದೆ. ಮರುಸ್ಥಾಪಿಸಲಾದ ಆವೃತ್ತಿಗಳು ವಿವರಗಳಿಗೆ ಸೂಕ್ಷ್ಮವಾಗಿ ಗಮನ ಹರಿಸುವುದರಿಂದ ಈ ಚಲನಚಿತ್ರಗಳ ಭವ್ಯತೆ ಮತ್ತು ಕಲಾತ್ಮಕತೆಯನ್ನು ಅನುಭವಿಸಲು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುತ್ತವೆ.
ರಾಜ್ ಕಪೂರ್ ಅವರ ಆವಾರಾ ಚಲನಚಿತ್ರವನ್ನು ಡಿಜಿಟಲ್ ಮರುಸ್ಥಾಪಿತ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ, ಕಪೂರ್ ಅವರು ಜನಸಾಮಾನ್ಯರ ಪ್ರಯಾಣಕ್ಕೆ ತಂದ ಆತ್ಮೀಯತೆ, ಹಾಸ್ಯ ಮತ್ತು ಸಹಾನುಭೂತಿಯನ್ನು ಪುನರುಜ್ಜೀವನಗೊಳಿಸುತ್ತದೆ. ಈ ಮರುಸ್ಥಾಪನೆಯು ಭಾರತೀಯ ಚಿತ್ರರಂಗಕ್ಕೆ ಕಪೂರ್ ಅವರ ಅನನ್ಯ ಕೊಡುಗೆಯನ್ನು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಆಳ ಮತ್ತು ಸಹಾನುಭೂತಿಯೊಂದಿಗೆ ಚಿತ್ರಿಸುವ ಅವರ ಕಲಾತ್ಮಕ ಬದ್ಧತೆಯನ್ನು ಆಚರಿಸುತ್ತದೆ.
ತಪನ್ ಸಿನ್ಹಾ ನಿರ್ದೇಶಿಸಿದ ಕ್ಲಾಸಿಕ್ ಹಾರ್ಮೋನಿಯಂ ಅನ್ನು ಪ್ರದರ್ಶಿಸಲಾಗುವುದು, ಸಿನ್ಹಾ ಅವರ ಸಂಕೀರ್ಣವಾದ ಕಥೆ ಹೇಳುವ ಕಲೆಯನ್ನು ಮರುಶೋಧಿಸಲು ಪ್ರೇಕ್ಷಕರಿಗೆ ಅವಕಾಶ ದೊರೆಯುತ್ತದೆ. ತನ್ನ ಬಲವಾದ ವಿಷಯ ಮತ್ತು ನಿರೂಪಣೆಗೆ ಹೆಸರುವಾಸಿಯಾಗಿರುವ ಹಾರ್ಮೋನಿಯಂ ಚಲನಚಿತ್ರವು ಸಿನ್ಹಾ ಅವರ ಕಲಾತ್ಮಕ ಪರಂಪರೆ ಮತ್ತು ಸಿನಿಮಾ ದೃಷ್ಟಿಗೆ ಉದಾಹರಣೆಯಾಗಿದೆ.
ಐ ಎಫ್ ಎಫ್ ಐ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸುವುದು ದೇವದಾಸು ಚಿತ್ರದ ಮರು-ಸೃಷ್ಟಿಯಾಗಿದೆ, ಇದು ಸಿನಿಮಾ ಇತಿಹಾಸದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಅವರ (ಎ ಎನ್ ಆರ್) ಸ್ಥಾನವನ್ನು ಭದ್ರಪಡಿಸಿದ ಮಹತ್ವದ ಚಲನಚಿತ್ರವಾಗಿದೆ. ಮರುಮಾದರಿ ಆವೃತ್ತಿಯು ದೇವದಾಸ್‌ಆಗಿ ಅಕ್ಕಿನೇನಿ ನಾಗೇಶ್ವರ ರಾವ್ ಅವರ ತೀವ್ರವಾದ ಚಿತ್ರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ, ಭಾರತೀಯ ಸಾಂಸ್ಕೃತಿಕ ಗುರುತಿನೊಂದಿಗೆ ಆಳವಾಗಿ ಅನುರಣಿಸುವ ಪಾತ್ರದಲ್ಲಿ ಅವರ ಭಾವನಾತ್ಮಕ ಅಭಿನಯವು ಸಮಕಾಲೀನ ಪ್ರೇಕ್ಷಕರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.
ಅಂತಿಮವಾಗಿ, ಕ್ಲಾಸಿಕ್ ಹಮ್ ದೋನೋ ಚಿತ್ರವನ್ನು ಅದರ ವರ್ಧಿತ ಧ್ವನಿ ಮತ್ತು ದೃಶ್ಯ ಮರುಸ್ಥಾಪನೆಯಲ್ಲಿ ಪ್ರದರ್ಶಿಸಲಾಗುತ್ತದೆ. ಐಕಾನಿಕ್ ಮೊಹಮ್ಮದ್ ರಫಿಯವರಿಂದ ಅಮರವಾದ ಹಾಡುಗಳೊಂದಿಗೆ, ಈ ಆವೃತ್ತಿಯು ಭಾರತೀಯ ಸಂಗೀತ ಮತ್ತು ಸಿನೆಮಾಕ್ಕೆ ರಫಿಯವರ ಅಸಾಧಾರಣ ಕೊಡುಗೆಯನ್ನು ಆಚರಿಸುತ್ತದೆ, ಎಲ್ಲಾ ತಲೆಮಾರುಗಳಿಗೆ ಅವರ ಧ್ವನಿಯ ಮಾಂತ್ರಿಕತೆಯನ್ನು ಪುನರುಜ್ಜೀವನಗೊಳಿಸುತ್ತದೆ.
ಐಕಾನ್ ಗಳನ್ನು ಸಂಭ್ರಮಿಸಲಾಗುತ್ತಿದೆ
ಮರುಸ್ಥಾಪಿಸಲಾದ ಕ್ಲಾಸಿಕ್ ಗಳ ಪ್ರದರ್ಶನದ ಜೊತೆಗೆ, ಐ ಎಫ್ ಎಫ್ ಐ ಈ ನಾಲ್ಕು ದಂತಕಥೆಗಳ ಪರಂಪರೆಯನ್ನು ಉತ್ಸವದ ಮೂಲಕ ಆಚರಿಸುತ್ತದೆ. ಉದ್ಘಾಟನಾ ಸಮಾರಂಭವು ಈ ದಂತಕಥೆಗಳ ಜೀವನ ಮತ್ತು ಸಾಧನೆಗಳಿಗೆ ಗೌರವ ಸಲ್ಲಿಸುವ ಅದ್ಭುತ ಪ್ರದರ್ಶನವನ್ನು ಹೊಂದಿರುತ್ತದೆ, ಜೊತೆಗೆ ಅವರ ಸಿನಿಮೀಯ ಪ್ರಯಾಣಕ್ಕೆ ಜೀವ ತುಂಬುವ ಧ್ವನಿ-ದೃಶ್ಯ ಪ್ರಸ್ತುತಿ ಇರುತ್ತದೆ.
ಪ್ಯಾನೆಲ್ ಚರ್ಚೆಗಳು ಮತ್ತು ಸಂವಾದಾತ್ಮಕ ಅಧಿವೇಶನಗಳು: ಗೌರವಾನ್ವಿತ ಅತಿಥಿಗಳು ಮತ್ತು ಕುಟುಂಬದ ಸದಸ್ಯರೊಂದಿಗೆ ಆಳವಾದ ಚರ್ಚೆಗಳು ಮತ್ತು ಸಂವಾದಾತ್ಮಕ ಅಧಿವೇಶನಗಳು ಅವರ ಜೀವನದ ಅನನ್ಯ ಒಳನೋಟಗಳನ್ನು ಒದಗಿಸುತ್ತವೆ. ಈ ಸಂವಾದಗಳು ಚಲನಚಿತ್ರೋದ್ಯಮದಲ್ಲಿ ಅವರ ಕೆಲಸದ ಮೇಲೆ ಅವರ ವೈಯಕ್ತಿಕ ಮತ್ತು ವೃತ್ತಿಪರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತವೆ.
ಮೈ ಸ್ಟ್ಯಾಂಪ್ ಬಿಡುಗಡೆ: ಗೌರವದ ವಿಶೇಷ ಸೂಚಕವಾಗಿ, ಐ ಎಫ್ ಎಫ್ ಐ ಈ ನಾಲ್ಕು ದಿಗ್ಗಜರಿಗೆ ಮೀಸಲಾಗಿರುವ ವಿಶಿಷ್ಟವಾದ ಮೈ ಸ್ಟ್ಯಾಂಪ್ ಅನ್ನು ಅನಾವರಣಗೊಳಿಸಲಿದ್ದು, ಇದು ಭಾರತೀಯ ಸಂಸ್ಕೃತಿ ಮತ್ತು ಸಿನಿಮಾದಲ್ಲಿ ಅವರು ಮೂಡಿಸಿರುವ ಛಾಪನ್ನು ಸಂಕೇತಿಸುತ್ತದೆ.
ದ್ವಿಭಾಷಾ ಕರಪತ್ರಗಳು: ಪ್ರತಿ ಐಕಾನ್‌ನ ಸಾಧನೆಗಳನ್ನು ಎತ್ತಿ ತೋರಿಸುವ ವಿಶೇಷ ದ್ವಿಭಾಷಾ ಕರಪತ್ರಗಳು ಸ್ಮರಣಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ, ಪಾಲ್ಗೊಳ್ಳುವವರಿಗೆ ಈ ಸಿನಿಮೀಯ ಶ್ರೇಷ್ಠರ ಪರಂಪರೆಯನ್ನು ಆಚರಿಸಲು ಮತ್ತು ಪ್ರಶಂಸಿಸಲು ಅನುವು ಮಾಡಿಕೊಡುತ್ತವೆ.
ಹಾಡುಗಳ ಕಾರವಾನ್: ರಾಜ್ ಕಪೂರ್ ಮತ್ತು ಮೊಹಮ್ಮದ್ ರಫಿ ಅವರಿಗೆ ಸಂಬಂಧಿಸಿದ 150 ಹಾಡುಗಳ ಸಂಗೀತ ಪಯಣ ಮತ್ತು ತಪನ್ ಸಿನ್ಹಾ ಮತ್ತು ಎ ಎನ್ ಆರ್ ಗೆ ಸಂಬಂಧಿಸಿದ 75 ಹಾಡುಗಳು ಪ್ರೇಕ್ಷಕರನ್ನು ಈ ದಂತಕಥೆಗಳ ಸಂಗೀತ ಕೊಡುಗೆಗಳಲ್ಲಿ ಮುಳುಗಿಸುತ್ತವೆ, ಭಾರತೀಯ ಸಿನಿಮಾದ ಸಂಗೀತದಲ್ಲಿ ಅವರ ಪ್ರಭಾವವನ್ನು ಎತ್ತಿ ತೋರಿಸುತ್ತವೆ.
ಕ್ಯುರೇಟೆಡ್ ಪ್ರದರ್ಶನ: ರಾಜ್ ಕಪೂರ್, ತಪನ್ ಸಿನ್ಹಾ, ಎಎನ್‌ಆರ್ ಮತ್ತು ಮೊಹಮ್ಮದ್ ರಫಿ ಅವರ ಜೀವನದ ಅಪರೂಪದ ಸ್ಮರಣಿಕೆಗಳು, ಛಾಯಾಚಿತ್ರಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸುವ ಕ್ಯುರೇಟೆಡ್ ಪ್ರದರ್ಶನವು ಪ್ರೇಕ್ಷಕರಿಗೆ ಅವರ ಗಮನಾರ್ಹ ಕೊಡುಗೆಗಳೊಂದಿಗೆ ಸ್ಪಷ್ಟವಾದ ಸಂಪರ್ಕವನ್ನು ಒದಗಿಸುತ್ತದೆ.
ವಿಷಯಾಧಾರಿತ ಚಟುವಟಿಕೆಗಳು: ಪ್ರತಿ ವ್ಯಕ್ತಿತ್ವಕ್ಕೆ ಮೀಸಲಾದ ದಿನಗಳಲ್ಲಿ, ಮನರಂಜನಾ ಅರೆನಾದಲ್ಲಿ ವಿಷಯಾಧಾರಿತ ಚಟುವಟಿಕೆಗಳನ್ನು ಯೋಜಿಸಲಾಗಿದೆ. ಈ ದಂತಕಥೆಗಳೊಂದಿಗೆ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಮತ್ತು ಅವರ ಅನಂತ ಪರಂಪರೆಯ ಬಗ್ಗೆ ಅರಿವು ಮೂಡಿಸಲು ತಲ್ಲೀನಗೊಳಿಸುವ ಚಟುವಟಿಕೆಗಳು, ಡಿಜಿಟಲ್ ಪ್ರದರ್ಶನಗಳು, ರಸಪ್ರಶ್ನೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಮರಳು ಕಲೆ ಚಿತ್ರಣ: ಶತಮಾನೋತ್ಸವದ ಅಂಗವಾಗಿ ಕಲಾ ಅಕಾಡೆಮಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಮರಳು ಕಲಾವಿದ ಶ್ರೀ ಸುದರ್ಶನ್ ಪಟ್ನಾಯಕ್ ಅವರಿಂದ ದಿಗ್ಗಜ ಕಲಾವಿದರಿಗೆ ಗೌರವ ಸಲ್ಲಿಸಲು ಮರಲೂ ಕಲೆ ಚಿತ್ರಣವನ್ನು ರಚಿಸಲಾಗುವುದು.
ಶಾಶ್ವತ ಗೌರವ
ಕಲೆ, ಇತಿಹಾಸ ಮತ್ತು ಸಂವಾದಾತ್ಮಕ ಅನುಭವಗಳನ್ನು ಒಟ್ಟುಗೂಡಿಸುವ ಮೂಲಕ, ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಮೊಹಮ್ಮದ್ ರಫಿ ಅವರ ಪರಂಪರೆ ಮತ್ತು ಸಿನಿಮಾ ಪ್ರಪಂಚದ ಮೇಲೆ ಶಾಶ್ವತವಾದ ಪ್ರಭಾವದ ಮೂಲಕ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲು ಐ ಎಫ್ ಎಫ್ ಐ ಶ್ರಮಿಸುತ್ತದೆ.
ಐ ಎಫ್ ಎಫ್ ಐ ಕೇವಲ ಚಲನಚಿತ್ರಗಳ ಪ್ರದರ್ಶನ ಮತ್ತು ಚಲನಚಿತ್ರ ಪ್ರೇಮಿಗಳ ಒಟ್ಟುಗೂಡುವಿಕೆ ಮಾತ್ರವಲ್ಲ! ಮೂಲಭೂತವಾಗಿ, ಉತ್ಸವವು ತನ್ನ ಕಾಲಾತೀತ ಪರಂಪರೆಯೊಂದಿಗೆ ಪ್ರಪಂಚದಾದ್ಯಂತದ ಪ್ರೇಕ್ಷಕರು ಮತ್ತು ಕಲಾವಿದರನ್ನು ಪ್ರೇರೇಪಿಸುವುದನ್ನು ಮುಂದುವರಿಸುವ ಅನೇಕ ಅಪ್ರತಿಮ ಕಲಾವಿದರನ್ನು ಸಂಭ್ರಮಿಸುವ ಮತ್ತು ಗೌರವಿಸುವ ಮೂಲಕ ಸಿನಿಮಾದ ಸಂತೋಷವನ್ನು ಹಂಚಿಕೊಳ್ಳಲು ಉದ್ದೇಶಿಸಿದೆ.
*****
(Release ID: 2071023)
Visitor Counter : 23
Read this release in:
Punjabi
,
Urdu
,
English
,
Gujarati
,
Marathi
,
Hindi
,
Manipuri
,
Bengali
,
Tamil
,
Telugu
,
Malayalam