ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ರೀ ಪಶುಂಪೊನ್ ಮುತ್ತುರಾಮಲಿಂಗ ದೇವರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ
प्रविष्टि तिथि:
30 OCT 2024 3:38PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶ್ರೀ ಪಶುಂಪೊನ್ ಮುತ್ತುರಾಮಲಿಂಗ ದೇವರ್ ಅವರ ಗುರು ಪೂಜೆಯ ಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಶ್ರೀ ಮೋದಿಯವರು ಶ್ರೀ ಪಶುಂಪೊನ್ ಮುತ್ತುರಾಮಲಿಂಗ ದೇವರ್ ಅವರ ಚಿಂತನೆಗಳು ಮತ್ತು ಬೋಧನೆಗಳನ್ನು ಶ್ಲಾಘಿಸಿ, ಅವರು ಸದಾ ಸಮಾಜದ ಉನ್ನತಿಗಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ವ್ಯಾಪಕವಾಗಿ ಗೌರವಿಸಲ್ಪಡುವ ಪಶುಂಪೊನ್ ಮುತ್ತುರಾಮಲಿಂಗ ದೇವರ್ ಜಿ ಅವರ ಗುರು ಪೂಜೆಯ ಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅಸಂಖ್ಯಾತ ಜನರು ಅವರ ಆಲೋಚನೆಗಳು ಮತ್ತು ಬೋಧನೆಗಳಿಂದ ಸ್ಪೂರ್ತಿ ಪಡೆದಿದ್ದಾರೆ. ಬಡತನ ನಿರ್ಮೂಲನೆ, ಆಧ್ಯಾತ್ಮಿಕತೆ ಮತ್ತು ರೈತರ ಕಲ್ಯಾಣವನ್ನು ಮಾಡಿ ನಮ್ಮ ಸಮಾಜವನ್ನು ಉತ್ತಮಗೊಳಿಸಲು ಅವರು ತಮ್ಮನ್ನು ತಾವು ಸಮರ್ಪಿಸಿಕೊಂಡರು. ಅವರ ಧ್ಯೇಯವನ್ನು ಸಾಕಾರಗೊಳಿಸಲು ನಾವು ಸದಾ ಶ್ರಮಿಸಬೇಕು" ಎಂದು ಹೇಳಿದ್ದಾರೆ.
*****
(रिलीज़ आईडी: 2070823)
आगंतुक पटल : 48
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam