ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪಿಬಿ-ಶಬ್ದ: 24/7 ಸುದ್ದಿ, 1500+ ವರದಿಗಾರರು, ತಕ್ಸಮಯ ನೇರ ಪ್ರಸಾರಗಳು ಮತ್ತು ಹಳೆ ಸಂಗ್ರಹಗಳ ಲಭ್ಯತೆ
ಪಿಬಿ-ಶಬ್ದ ಮೂಲಕ ದೂರದರ್ಶನ ಮತ್ತು ಆಕಾಶವಾಣಿಗಳ ವಿಶ್ವಾಸಾರ್ಹ ಸಂಗ್ರಹ ಕೋಶವು ಈಗ ಡಿಜಿಟಲ್ ನ್ಯೂಸ್ ಪೋರ್ಟಲ್ ಗಳಿಗೆ ಲಭ್ಯವಾಗಿದೆ – ಈ ಮೂಲಕ ನ್ಯಾಯೋಚಿತ, ಉದ್ದೇಶಿತ ಮತ್ತು ಭಾರತದ ಅತಿ ದೂರದ ಮೂಲೆ-ಮೂಲೆಗಳನ್ನು ತಲುಪುತ್ತದೆ
ಪಿಬಿ-ಶಬ್ದ ಸೇವೆ ಪಡೆಯಲು ಮಾಧ್ಯಮ ಸಂಸ್ಥೆಗಳಿಗೆ ಮಾರ್ಚ್ 2025 ರವರೆಗೆ ಉಚಿತ ನೋಂದಣಿ (ಸೈನ್ ಅಪ್) ಅವಕಾಶ ಲಭ್ಯವಿರುತ್ತದೆ
ಭಾರತದಾದ್ಯಂತ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಪಠ್ಯ/ಬರಹ, ವಿಡಿಯೊ, ಚಿತ್ರ ಮತ್ತು ಆಡಿಯೊ ರೂಪದಲ್ಲಿ ಲಾಂಛನ ರಹಿತ ವಿಷಯಗಳು ಲಭ್ಯವಿರುತ್ತದೆ
Posted On:
24 OCT 2024 7:04PM by PIB Bengaluru
ಭಾರತದಾದ್ಯಂತ ಡಿಜಿಟಲ್ ನ್ಯೂಸ್ ಪೋರ್ಟಲ್ ಗಳು ಸರಳ ನೋಂದಣಿ (ಸೈನ್ ಅಪ್) ಅರ್ಜಿ ಹಾಳೆಯಲ್ಲಿ ತಮ್ಮ ಮಾಹಿತಿ ಭರ್ತಿ ಮಾಡುವ ಮೂಲಕ ಪಿಬಿ-ಶಬ್ದ ಜಾಲತಾಣದಲ್ಲಿ https://shabd.prasarbharati.org/register ಸುಲಭವಾಗಿ ಹಾಗೂ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಭಾರತದಾದ್ಯಂತ ಡಿಜಿಟಲ್ ನ್ಯೂಸ್ ಪೋರ್ಟಲ್ ಗಳು ಸುಲಭವಾಗಿ ಪಿಬಿ-ಶಬ್ದ ಜಾಲತಾಣದಲ್ಲಿ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಪಠ್ಯ/ಬರಹ, ವಿಡಿಯೊ, ಚಿತ್ರ ಮತ್ತು ಆಡಿಯೊ ರೂಪದಲ್ಲಿ ಲಾಂಛನ ಮುಕ್ತ ವಿಷಯವನ್ನು ಪಡೆಯ ಬಹುದು. ಮಾರ್ಚ್ 2025 ರವರೆಗೆ ನೋಂದಣಿ (ಸೈನ್ ಅಪ್) ಮಾಡಲು ಮತ್ತು ಮಾಹಿತಿಗಳನ್ನು ಉಚಿತವಾಗಿ ಬಳಸಿಕೊಳ್ಳಲು ಭಾರತದಾದ್ಯಂತ ಡಿಜಿಟಲ್ ನ್ಯೂಸ್ ಪೋರ್ಟಲ್ ಗಳು ಸೇರಿದಂತೆ ಮಾಧ್ಯಮ ಸಂಸ್ಥೆಗಳಿಗೆ ಅವಕಾಶ ಲಭ್ಯವಿರುತ್ತದೆ.
ಯುಟ್ಯೂಬ್ ಆಧಾರಿತ ಆಧಾರಿತ ಡಿಜಿಟಲ್ ನ್ಯೂಸ್ ಪೋರ್ಟಲ್:
1. ಇಂಗ್ಲಿಷ್/ಹಿಂದಿಯಲ್ಲಿ ಪೋರ್ಟಲ್ ಗಳು ಕನಿಷ್ಠ 1,00,000 ಚಂದಾದಾರರನ್ನು ಹೊಂದಿರಬೇಕು.
2. ಪ್ರಾದೇಶಿಕ ಭಾಷಾ ಸುದ್ದಿ ಪೋರ್ಟಲ್ ಗಳು ಕನಿಷ್ಠ 50000 ಚಂದಾದಾರರನ್ನು ಹೊಂದಿರಬೇಕು.
3. ಯುಟ್ಯೂಬ್ ಖಾತೆಯನ್ನು ಪರಿಶೀಲಿಸಲಾಗುವುದು.
4. ಪೋರ್ಟಲ್ ಕನಿಷ್ಟ ಒಂದು ವರ್ಷದಿಂದ ಅಸ್ತಿತ್ವದಲ್ಲಿರಬೇಕು.
5. ಪೋರ್ಟಲ್ ಪ್ರತಿ ತಿಂಗಳು ಕನಿಷ್ಠ 1 ವೀಡಿಯೊವನ್ನು ಅಪ್ ಲೋಡ್ ಮಾಡಿರಬೇಕು ಮತ್ತು ಅರ್ಜಿ ಹಾಕುವ ಸಮಯದಲ್ಲಿ ಕಳೆದ ಒಂದು ತಿಂಗಳಲ್ಲಿ ಕನಿಷ್ಠ 5 ವೀಡಿಯೊಗಳನ್ನು ಅಪ್ ಲೋಡ್ ಮಾಡಿರಬೇಕು.
ಡಿಜಿಟಲ್ ನ್ಯೂಸ್ ಪೋರ್ಟಲ್ ಗಳು ತಮ್ಮ ಡಿಜಿಟಲ್ ಸುದ್ದಿ ಮಾದರಿ ವಿವರಗಳನ್ನು ಡಿಜಿಟಲ್ ಅರ್ಜಿ ಹಾಳೆಯಲ್ಲಿ ತುಂಬಿ ಕಳುಹಿಸಿಕೊಡಬಹುದು. ನಂತರ, ಆ ಮಾಹಿತಿ ವಿವರಗಳನ್ನು ಪ್ರಸಾರ ಭಾರತಿಯಲ್ಲಿ ಆಂತರಿಕವಾಗಿ ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರವೇ, ಡಿಜಿಟಲ್ ನ್ಯೂಸ್ ಪೋರ್ಟಲ್ ಗಳು ಪಿಬಿ-ಶಬ್ದ ಜಾಲತಾಣದಲ್ಲಿ ತಮ್ಮನ್ನು ಅಧಿಕೃತವಾಗಿ ನೋಂದಾಯಿಸಲು ಸಾಧ್ಯವಾಗುತ್ತದೆ.
ಪಿಬಿ-ಶಬ್ದ ಕುರಿತು:
ಸಾವರ್ಜನಿಕವಾಗಿ ಪ್ರಸಾರ ಮಾಡಲು ಪ್ರಸಾರ ಭಾರತಿ-ಹಂಚಿಕೊಂಡ ಶ್ರವ್ಯ-ದೃಶ್ಯ-ಶಬ್ದ ಮಾಹಿತಿಗಳ ಹಂಚುವಿಕೆ ವ್ಯವಸ್ಥೆ (ಪ್ರಸಾರ ಭಾರತಿ-ಶೇರ್ಡ್ ಆಡಿಯೊ-ವಿಷುಲ್ಸ್ ಫಾರ್ ಬ್ರಾಡ್‌ಕಾಸ್ಟ್ ಮತ್ತು ಡಿಸ್ಮಿಮಿನೇಷನ್ - ಪಿಬಿ-ಶಬ್ದ) ಮೂಲಕ ಮಾಧ್ಯಮ ಸಂಸ್ಥೆಗಳಿಗೆ ವಿಡಿಯೊ, ಆಡಿಯೋ, ಪಠ್ಯ/ಬರಹ ಮತ್ತು ಛಾಯಾಚಿತ್ರಗಳು ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ದೈನಂದಿನ ಸುದ್ದಿ ಪೂರೈಕೆಯನ್ನು ಸಕಾಲಿಕವಾಗಿ ತಕ್ಸಮಯದಲ್ಲಿ ನೇರವಾಗಿ ಒದಗಿಸಲು ವಿನ್ಯಾಸಗೊಳಿಸಿ ಮಾರ್ಚ್ 13, 2024 ರಂದು ಪ್ರಾರಂಭಿಸಲಾಗಿದೆ. ಇದನ್ನು ನೇರ ಪ್ರಸಾರದ ಸುದ್ದಿ ಹಂಚಿಕೆ ಸೇವೆಯಾಗಿ ಪ್ರಾರಂಭಿಸಲಾಗಿದೆ.
ಸಮಗ್ರ ವ್ಯಾಪ್ತಿಗಾಗಿ ವಿಸ್ತೃತ ಸಂಪರ್ಕ ಜಾಲ
1500 ಕ್ಕೂ ಹೆಚ್ಚು ವರದಿಗಾರರು, ಕರೆಸ್ಪಾಂಡೆಂಟ್ಸ್ ಗಳು ಮತ್ತು ಹವ್ಯಾಸಿ ಪತ್ರಕರ್ತರುಗಳ ಬಲವಾದ ಸಂಪರ್ಕ ಜಾಲವನ್ನು ಪಿಬಿ-ಶಬ್ದ ಜಾಲತಾಣ ಹೊಂದಿದೆ. 60 ಮೀಸಲಾದ ಎಡಿಟ್ ಡೆಸ್ಕ್ ಗಳು ದಿನ-ರಾತ್ರಿ ಕಾರ್ಯನಿರ್ವಹಿಸುತ್ತಿವೆ. ಭಾರತದ ಪ್ರತಿಯೊಂದು ಮೂಲೆಗಳಿಂದ ಇತ್ತೀಚಿನ ತಾಜಾ ಸುದ್ದಿಗಳನ್ನು ಸಕಾಲಿಕವಾಗಿ ಪಿಬಿ-ಶಬ್ದ ನೀಡುತ್ತದೆ. ಕೃಷಿ, ತಂತ್ರಜ್ಞಾನ, ವಿದೇಶಾಂಗ ವ್ಯವಹಾರಗಳು ಮತ್ತು ರಾಜಕೀಯ ಬೆಳವಣಿಗೆಗಳಂತಹ 50 ಕ್ಕೂ ಹೆಚ್ಚು ಸುದ್ದಿ ವಿಭಾಗಗಳನ್ನು ಪಿಬಿ-ಶಬ್ದ ಒಳಗೊಂಡಿದೆ. ಪ್ರಾದೇಶಿಕ ಸುದ್ದಿ ಘಟಕಗಳು (ಆರ್..ಎನ್..ಯು.) ಮತ್ತು ಪ್ರಧಾನ ಕಛೇರಿಯಿಂದ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ 1000 ಕ್ಕೂ ಹೆಚ್ಚು ಸುದ್ದಿ ವಿಷಯಗಳನ್ನು ಪ್ರತಿದಿನ ಅಪ್ ಲೋಡ್ ಮಾಡಲಾಗುತ್ತದೆ.
ಪಿಬಿ-ಶಬ್ದ ನ ಪ್ರಮುಖ ಲಕ್ಷಣಗಳು
ಪಿಬಿ-ಶಬ್ದ ಮೂಲಕ ಒದಗಿಸಲಾದ ವಿಷಯವು ಲಾಂಛನ-ಮುಕ್ತವಾಗಿರುತ್ತದೆ. ಈ ಜಾಲತಾಣದಿಂದ ವಿಷಯವನ್ನು ಬಳಸುವುದಕ್ಕೆ ಯಾವುದೇ ಹಕ್ಕು ಸ್ವಾಮ್ಯದ ಹೆಸರು ಸೂಚಿಸುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ, ಈ ಸೇವೆಯು ಲೈವ್ ಫೀಡ್ ವೈಶಿಷ್ಟ್ಯವನ್ನು ಒಳಗೊಂಡಿದೆ. ರಾಷ್ಟ್ರಪತಿ ಭವನದಿಂದ ರಾಷ್ಟ್ರೀಯ ಪ್ರಶಸ್ತಿ ಸಮಾರಂಭಗಳು, ಚುನಾವಣಾ ಮೆರವಣಿಗೆಗಳು, ಪ್ರಮುಖ ರಾಜಕೀಯ ಘಟನೆಗಳು, ಕಾರ್ಯಕ್ರಮಗಳು ಮತ್ತು ವಿವಿಧ ಪತ್ರಿಕಾಗೋಷ್ಠಿಗಳಂತಹ ಲೈವ್ ಕಾರ್ಯಕ್ರಮಗಳ ಲಾಂಛನ ರಹಿತ ವಿಶೇಷ ನೇರ ಪ್ರಸಾರ ಅವಕಾಶವನ್ನು ನೀಡುತ್ತದೆ.
ಮಾಹಿತಿಗಳ ಅತ್ಯುತ್ತಮ ರೀತಿಯಲ್ಲಿ ಬಳಕೆಗಾಗಿ, ಲಭ್ಯತೆಯ ಅವಕಾಶವನ್ನು ಇನ್ನಷ್ಟು ಹೆಚ್ಚಿಸಲೋಸುಗ, ಮಾಧ್ಯಮ ಕೋಶವನ್ನು (ಮೀಡಿಯಾ ರೆಪೊಸಿಟರಿ) ಹಳೆ ಮಾಹಿತಿಗಳ ಸಂಗ್ರಾಹ್ಯ ಗ್ರಂಥಾಲಯ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಶೇಷ ಕ್ಯುರೇಟೆಡ್ ಪ್ಯಾಕೇಜ್ ಗಳೊಂದಿಗೆ ದೂರದರ್ಶನ ಮತ್ತು ಆಕಾಶವಾಣಿ ಲೈಬ್ರರಿಗಳಿಂದ ಅಪರೂಪದ ಮತ್ತು ಆರ್ಕೈವಲ್ ತುಣುಕುಗಳನ್ನು ಸುಲಭವಾಗಿ ಪಡೆಯಲು ಪಿಬಿ-ಶಬ್ದ ಜಾಲತಾಣವು ಚಂದಾದಾರರಿಗೆ ಅನುವು ಮಾಡಿಕೊಡುತ್ತದೆ.
ಇತ್ತೀಚಿನ ಪರಿಷ್ಕೃತ ನವೀಕರಣಗಳಿಗಾಗಿ ಎಕ್ಸ್ ಮತ್ತು ಇಂಸ್ಟಾಗ್ರಾಮ್ ಗಳಲ್ಲಿ ಪಿಬಿ-ಶಬ್ದ ಜಾಲತಾಣವನ್ನು ಅನುಸರಿಸಿ
ಹೆಚ್ಚಿನ ಪರಿಷ್ಕೃತ ನವೀಕರಣಗಳಿಗಾಗಿ “ಎಕ್ಸ್” (ಹಿಂದಿನ ಟ್ವೀಟರ್ ) ಅನ್ನು https://x.com/PBSHABD ಮತ್ತು “ಇಂಸ್ಟಾಗ್ರಾಮ್” ಅನ್ನು https://www.instagram.com/pbshabd/ ಮೂಲಕ ಸಂಪರ್ಕಿಸಿ
*****
(Release ID: 2068057)
Visitor Counter : 27