ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಸಂಚಾರಿ ವಾಹನಗಳ ಮೂಲಕ ದೆಹಲಿ-ಎನ್‌ಸಿಆರ್‌ನಲ್ಲಿ ಭಾರತ್ ಕಾಬೂಲ್ ಕಡಲೆ ಹಂತ - II ರ ಚಿಲ್ಲರೆ ಮಾರಾಟ ಪ್ರಕ್ರಿಯೆಗೆ ಚಾಲನೆ
ಕಾಬೂಲು ಕಡಲೆ ಪ್ರತಿ ಕೆಜಿಗೆ 70 ರೂ.ಗೆ ಎಂಆರ್‌ಪಿ ಮತ್ತು ಕಾಬೂಲು ಕಡಲೆ ಪ್ರತಿ ಕೆಜಿಗೆ ರೂ.58 ರಂತೆ 3 ಲಕ್ಷ ಟನ್ ಬೇಳೆ ಸಂಗ್ರಹ ಗ್ರಾಹಕರಿಗೆ ಲಭ್ಯ
ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಅಗತ್ಯ ಆಹಾರ ಪದಾರ್ಥಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಬದ್ಧ: ಶ್ರೀ ಪ್ರಲ್ಹಾದ್ ಜೋಶಿ
Posted On:
23 OCT 2024 1:38PM by PIB Bengaluru
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಸರಬರಾಜು ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಎನ್.ಸಿ.ಸಿ.ಎಫ್, ನಫೆಡ್ ಮತ್ತು ಕೇಂದ್ರೀಯ ಭಂಡಾರ್‌ನ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ದೆಹಲಿ-ಎನ್‌ಸಿಆರ್‌ನಲ್ಲಿ ಭಾರತ್ ಕಾಬೂಲು ಕಡಲೆ ಹಂತ - II ರ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿದರು. ರಾಜ್ಯ ಸಚಿವರುಗಳಾದ ಶ್ರೀ ಬಿ.ಎಲ್. ವರ್ಮಾ ಮತ್ತು ಶ್ರೀಮತಿ ನಿಮುಬೇನ್ ಜಯಂತಿಭಾಯ್ ಬಂಭಾನಿಯಾ ಉಪಸ್ಥಿತರಿದ್ದರು.
ಭಾರತ್ ಕಾಬೂಲು ಕಡಲೆ ಹಂತ - II ರಲ್ಲಿ, ಬೆಲೆ ಸ್ಥಿರೀಕರಣಕ್ಕಾಗಿ ಕಾಯ್ದಿಟ್ಟ ದಾಸ್ತಾನು ಮೂಲಕ 3 ಲಕ್ಷ ಟನ್ ಕಾಬೂಲು ಕಡಲೆ ಚಿಲ್ಲರೆ ಮಾರಾಟಕ್ಕಾಗಿ ಗ್ರಾಹಕರಿಗೆ ಕ್ರಮವಾಗಿ ಕೆಜಿಗೆ ರೂ.70 ಮತ್ತು ರೂ.58 ರಂತೆ ಕಾಬೂಲು ಕಡಲೆ ಹೊರತುಪಡಿಸಿ, ಸರ್ಕಾರವು ಭಾರತ್ ಬ್ರ್ಯಾಂಡ್ ಅನ್ನು ಹೆಸರು ಮತ್ತು ಕೆಂಪು ಬೇಳೆಗಳಿಗೂ ವಿಸ್ತರಿಸಿದೆ. ಭಾರತ್ ಬ್ಯಾಂಡ್ ನ ಹೆಸರು ಬೇಳೆ ಪ್ರತಿ ಕೆಜಿಗೆ ರೂ.107, ಭಾರತ್ ಹೆಸರು ಬೇಳೆ ಸಾಬುಟ್ ರೂ.93 ಮತ್ತು ಭಾರತ್ ಕೆಂಪು ಬೇಳೆಗಳಿಗೆ ಪ್ರತಿ ಕೆಜಿಗೆ ರೂ.89 ನಿಗದಿಪಡಿಸಲಾಗಿದೆ. ಈ ಸಮಯದಲ್ಲಿ ಭಾರತ್ ಕಾಬೂಲು ಕಡಲೆ ಪುನರಾರಂಭವು ಈ ಹಬ್ಬದ ಋತುವಿನಲ್ಲಿ ದೆಹಲಿ-ಎನ್‌ಸಿಆರ್‌ನ ಗ್ರಾಹಕರಿಗೆ ಪೂರೈಕೆಯನ್ನು ಹೆಚ್ಚಿಸುತ್ತದೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ ಅವರು, ಈ ಉಪಕ್ರಮವು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಗತ್ಯ ಆಹಾರದ ಲಭ್ಯತೆಯನ್ನು ಖಾತ್ರಿಪಡಿಸುವ ಭಾರತ ಸರ್ಕಾರದ ಬದ್ಧತೆಯ ದೃಢೀಕರಣವಾಗಿದೆ ಎಂದು ಹೇಳಿದರು. ಅಕ್ಕಿ, ಗೋದಿ, ಬೇಳೆ ಮತ್ತು ಈರುಳ್ಳಿಯಂತಹ ಮೂಲ ಆಹಾರ ಪದಾರ್ಥಗಳ ಚಿಲ್ಲರೆ ಮಾರಾಟದ ಮೂಲಕ ನೇರ ಮಧ್ಯಸ್ಥಿಕೆಗಳು ಸ್ಥಿರ ಬೆಲೆ ಆಡಳಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ.
ಬೇಳೆಕಾಳುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ವಿವಿಧ ನೀತಿ ಕ್ರಮಗಳನ್ನು ಕೈಗೊಂಡಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ, ಸರ್ಕಾರವು ವರ್ಷದಿಂದ ವರ್ಷಕ್ಕೆ ಬೇಳೆಕಾಳುಗಳ ಕನಿಷ್ಠ ಬೆಂಬಲ ಬಲೆಯನ್ನು ಹೆಚ್ಚಿಸಿದೆ ಮತ್ತು 2024-25 ಋತುವಿನಲ್ಲಿ ಮಿತಿ ಇಲ್ಲದೇ ತೊಗರಿ, ಉದ್ದು ಮತ್ತು ಕೆಂಪು ಬೇಳೆಯನ್ನು ಸಂಗ್ರಹಿಸುವ ನೀತಿಯನ್ನು ಪ್ರಕಟಿಸಿದೆ. 2024-25ರ ಮುಂಗಾರು ಬಿತ್ತನೆ ಋತುವಿನಲ್ಲಿ, ಎನ್.ಸಿ.ಸಿ.ಎಫ್ ಮತ್ತು ನಫೆಡ್ ಜಾಗೃತಿ ಅಭಿಯಾನಗಳು, ಬೀಜ ವಿತರಣೆ ಮತ್ತು ಖರೀದಿಯನ್ನು ಖಚಿತಪಡಿಸಿಕೊಳ್ಳಲು ರೈತರ ಪೂರ್ವ-ನೋಂದಣಿಯನ್ನು ನಡೆಸಿತು ಮತ್ತು ಮುಂಬರುವ ಮುಂಗಾರು ಬಿತ್ತನೆ ಋತುವಿನಲ್ಲಿ ಅದೇ ಚಟುವಟಿಕೆಗಳನ್ನು ಮುಂದುವರಿಸಲಾಗುತ್ತದೆ. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ತಡೆರಹಿತ ಆಮದು ಮಾಡಿಕೊಳ್ಳಲು, ಸರ್ಕಾರ 2025 ರ ಮಾರ್ಚ್ 31 ರವರೆಗೆ ತೊಗರಿ, ಉದ್ದು, ಕೆಂಪು ಬೇಳೆ ಮತ್ತು ಕಾಬೂಲು ಕಡಲೆ ಸುಂಕ ರಹಿತ ಆಮದು ಮಾಡಿಕೊಳ್ಳಲು ಮತ್ತು 2024ರ 31 ಡಿಸೆಂಬರ್ ರವರೆಗೆ ಹಳದಿ ಬಟಾಣಿ ಆಮದಿಗೆ ಅನುಮತಿ ನೀಡಿದೆ. ಈ ವರ್ಷ ಮುಂಗಾರು ದ್ವಿದಳ ಧಾನ್ಯಗಳ ಪ್ರದೇಶವನ್ನು ಹೆಚ್ಚಿಸುವ ಜೊತೆಗೆ ಆಮದು ನಿರಂತರ ಒಳಹರಿವು ಜುಲೈ 2024 ರಿಂದ ಹೆಚ್ಚಿನ ಬೇಳೆಕಾಳುಗಳ ಬೆಲೆಯಲ್ಲಿ ಇಳಿಮುಖವಾಗಲು ಕಾರಣವಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆಕಾಳುಗಳ ಚಿಲ್ಲರೆ ಮಾರಾಟದ ಬೆಲೆಗಳು ಕುಸಿದಿವೆ ಅಥವಾ ಸ್ಥಿರವಾಗಿವೆ.
ತರಕಾರಿಗಳಿಗೆ ಸಂಬಂಧಿಸಿದಂತೆ, ಸರ್ಕಾರ ಎನ್.ಸಿ.ಸಿ.ಎಫ್ ಮತ್ತು ನಫೆಡ್ ಮೂಲಕ ಬೆಲೆ ಸ್ಥಿರೀಕರಣಕ್ಕಾಗಿ ಕಾಯ್ದಿಟ್ಟ ದಾಸ್ತಾನಿಗಾಗಿ ಮುಂಗಾರು ಬೆಳೆಯಿಂದ 4.7 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಿದೆ. ಸರ್ಕಾರವು 2024ರ ಸೆಪ್ಟೆಂಬರ್ 5 ರಿಂದ ಕಾಯ್ದಿಟ್ಟ ದಾಸ್ತಾನಿನ ಮೂಲಕ ಈರುಳ್ಳಿ ವಿಲೇವಾರಿ ಮಾಡಲು ಪ್ರಾರಂಭಿಸಿತು ಮತ್ತು ಇಲ್ಲಿಯವರೆಗೆ 1.15 ಲಕ್ಷ ಟನ್ ವಿತರಿಸಲಾಗಿದೆ. ಎನ್.ಸಿ.ಸಿ.ಎಫ್ 21 ರಾಜ್ಯಗಳ 77 ಕೇಂದ್ರಗಳಲ್ಲಿ ಮತ್ತು ನಫೆಡ್ 16 ರಾಜ್ಯಗಳ 43 ಕೇಂದ್ರಗಳಲ್ಲಿ ಈರುಳ್ಳಿಯನ್ನು ವಿಲೇವಾರಿ ಮಾಡಿದೆ. ಪೂರೈಕೆ ವೇಗವನ್ನು ಹೆಚ್ಚಿಸಲು, ರೈಲಿನ ಮೂಲಕ ಈರುಳ್ಳಿಯ ಬೃಹತ್ ಸಾಗಣೆಯನ್ನು ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. 2024ರ ಅಕ್ಟೋಬರ್ 20 ರಂದು ದೆಹಲಿಗೆ ನಾಸಿಕ್‌ನಿಂದ ಬಂದ ಕಾಂಡಾ ಎಕ್ಸ್‌ಪ್ರೆಸ್ ಮೂಲಕ ಎನ್.ಸಿ.ಸಿ.ಎಫ್ 1,600 ಮೆಟ್ರಿಕ್ ಟನ್ (42 ಬಿ.ಸಿ.ಎನ್. ವ್ಯಾ ಗನ್‌ಗಳು ಅಂದರೆ ಸರಿಸುಮಾರು 53 ಟ್ರಕ್‌ಗಳು) ಸಾಗಿಸಲಾಗಿದೆ. ನಫೆಡ್ 800 - 840 ಮೆಟ್ರಿಕ್ ಟನ್ ಈರುಳ್ಳಿಯನ್ನು ರೈಲಿನ ಮೂಲಕ ಚೆನ್ನೈಗೆ ಸಾಗಾಣೆ ಮಾಡಿದೆ. 2024ರ ಅಕ್ಟೋಬರ್ 22 ರಂದು ನಾಸಿಕ್ ನಿಂದ ರೈಲು ಚೆನ್ನೈಗೆ ತೆರಳಿದೆ.
ಲಕ್ನೋ ಮತ್ತು ವಾರಣಾಸಿಗೆ ರೈಲು ರೇಕ್ ಮೂಲಕ ಸಾಗಣೆಗೆ ಎನ್.ಸಿ.ಸಿ.ಎಫ್ ಬೇಡಿಕೆ ಇಟ್ಟಿತ್ತು. ಗ್ರಾಹಕ ವ್ಯವಹಾರಗಳ ಇಲಾಖೆಯು ಭಾರತೀಯ ರೈಲ್ವೇಗೆ ನಾಸಿಕ್‌ನಿಂದ ಈಶಾನ್ಯ ಪ್ರದೇಶದ ಹಲವು ಸ್ಥಳಗಳಿಗೆ ಸಾಗಿಸಲು ಅವಕಾಶ ನೀಡುವಂತೆ ವಿನಂತಿಸಿತು. ಇದರಲ್ಲಿ (i) ಎನ್.ಜೆ.ಪಿ: ನ್ಯೂ ಜಲ್ಪೈಗುರಿ (ಸಿಲಿಗುರಿ), (ii) ಡಿಬಿಆರ್ ಜಿ- ದಿಬ್ರುಗಢ್, (iii) ) ಎನ್.ಟಿ.ಎಸ್.ಕೆ- ನ್ಯೂ ಟಿನ್ಸುಕಿಯಾ, ಮತ್ತು (iv) ಸಿ.ಜಿ.ಎಸ್: ಚಾಂಗ್ಸಾರಿ. ಇದರಿಂದಾಗಿ ಭಾರತದ ವಿವಿಧ ಪ್ರದೇಶಗಳಲ್ಲಿ ಈರುಳ್ಳಿಯ ವ್ಯಾಪಕ ಲಭ್ಯತೆಯನ್ನು ಖಚಿತಪಡಿಸಿದಂತಾಗಿದೆ ಮತ್ತು ಗ್ರಾಹಕರಿಗೆ ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಅದರ ಲಭ್ಯತೆಯನ್ನು ಖಚಿತಪಡಿಸಲಾಗಿದೆ.
*****
(Release ID: 2067401)
Visitor Counter : 63