ಸಹಕಾರ ಸಚಿವಾಲಯ
azadi ka amrit mahotsav

ಗುಜರಾತಿನ ಆನಂದ್‌ ನಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ ಡಿ ಡಿ ಬಿ) ವಜ್ರ ಮಹೋತ್ಸವ ಆಚರಣೆ ಮತ್ತು ಶ್ರೀ ತ್ರಿಭುವನ್ ದಾಸ್‌ ಪಟೇಲ್ ಅವರ ಜನ್ಮದಿನದ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ₹ 300 ಕೋಟಿ ಮೌಲ್ಯದ ಹಲವಾರು ರೈತ ಕಲ್ಯಾಣ ಚಟುವಟಿಕೆಗಳನ್ನು ಉದ್ಘಾಟಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಶ್ವೇತ ಕ್ರಾಂತಿಗಾಗಿ SoP 2.0 ಅನ್ನು ಬಿಡುಗಡೆ ಮಾಡಲಾಗಿದೆ, ಈಗ, ಒಂದು ಲಕ್ಷ ಹೊಸ ಮತ್ತು ಅಸ್ತಿತ್ವದಲ್ಲಿರುವ ಡೈರಿಗಳನ್ನು ಬಲಪಡಿಸಲಾಗುವುದು ಮತ್ತು ಹಾಲಿನ ಮಾರ್ಗಗಳನ್ನು ವಿಸ್ತರಿಸಲಾಗುವುದು

ತ್ರಿಭುವನ್ ದಾಸ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಬಡ ರೈತರ ಸಬಲೀಕರಣಕ್ಕಾಗಿ ಶ್ರಮಿಸಿದರು

ತ್ರಿಭುವನ್ ದಾಸ್ ಅವರು ಸಣ್ಣ ಸಹಕಾರಿ ಸಂಘವನ್ನು ಹುಟ್ಟುಹಾಕಿದರು, ಅದು ಇಂದು 2 ಕೋಟಿ ರೈತರನ್ನು ಸಹಕಾರಿ ಕ್ಷೇತ್ರದೊಂದಿಗೆ ಸಂಪರ್ಕಿಸುವ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿದೆ

ಕಳೆದ 60 ವರ್ಷಗಳಲ್ಲಿ, ಎನ್‌ ಡಿ ಡಿ ಬಿ ರೈತರ ಜೊತೆಗೆ ತಾಯಂದಿರು ಮತ್ತು ಸಹೋದರಿಯರನ್ನು ಸಶಕ್ತಗೊಳಿಸಿದೆ ಮತ್ತು ಸಂಘಟಿಸುತ್ತಿದೆ, ಅವರ ಉನ್ನತಿ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ

ಸಹಕಾರಿ ಉತ್ಪನ್ನಗಳನ್ನು ಬ್ರ್ಯಾಂಡಿಂಗ್ ಮಾಡುವುದು ಮತ್ತು ಕಾರ್ಪೊರೇಟ್ ಉತ್ಪನ್ನಗಳೊಂದಿಗೆ ಸ್ಪರ್ಧಿಸಲು ಅವುಗಳನ್ನು ಸಿದ್ಧಪಡಿಸುವುದು ಯಶಸ್ಸಿನ ಕೀಲಿಯಾಗಿದೆ

ಎನ್‌ ಡಿ ಡಿ ಬಿ ಯು ಕೃಷಿಯನ್ನು ಸ್ವಾವಲಂಬಿಯನ್ನಾಗಿ ಮಾಡುವ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ವೇಗಗೊಳಿಸಿದೆ

ಪಶುಸಂಗೋಪನಾ ಸಹಕಾರಿ ಸಂಘಗಳು ರೈತರ ಏಳಿಗೆಯೊಂದಿಗೆ ಅಪೌಷ್ಟಿಕತೆ ವಿರುದ್ಧದ ಹೋರಾಟವನ್ನು ಬಲಪಡಿಸುತ್ತವೆ

ಎನ್ ಡಿ ಡಿ ಬಿ ತರಕಾರಿ ಸಂಸ್ಕರಣೆಯನ್ನು ಪ್ರಾರಂಭಿಸಿದೆ, ಇದು ರೈತರು ಉತ್ಪಾದಿಸುವ ತರಕಾರಿಗಳು ವಿಶ್ವಾದ್ಯಂತ ಮಾರುಕಟ್ಟೆಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ, ಲಾಭವು ನೇರವಾಗಿ ರೈತರಿಗೆ ತಲುಪುವುದನ್ನು ಖಚಿತಪಡಿಸುತ್ತದೆ

ಪ್ರಧಾನಿ ಮೋದಿಯವರ ದೂರದೃಷ್ಟಿಯ ಯೋಜನೆಯಾದ ಗೋಬರ್ಧನ್ ಯೋಜನೆಯು ಮಣ್ಣಿನ ಸಂರಕ್ಷಣೆ ಮತ್ತು ಬೆಳೆ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡುತ್ತಿದೆ

Posted On: 22 OCT 2024 5:03PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತಿನ ಆನಂದ್‌ ನಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ ಡಿ ಡಿ ಬಿ) ವಜ್ರ ಮಹೋತ್ಸವ ಆಚರಣೆ ಮತ್ತು ಶ್ರೀ ತ್ರಿಭುವನ್ ದಾಸ್‌ ಪಟೇಲ್ ಅವರ ಜನ್ಮದಿನದ ಸಂದರ್ಭದಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಹಲವಾರು ರೈತ ಕಲ್ಯಾಣ ಚಟುವಟಿಕೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001STST.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಪ್ರಧಾನ ಮಂತ್ರಿಯವರು ಉಲ್ಲೇಖಿಸಿದ ಎಲ್ಲಾ ಪ್ರಮುಖ ರೈತ ಸ್ನೇಹಿ ಅಂಶಗಳನ್ನು ಒಳಗೊಂಡಿರುವ ಶ್ವೇತ ಕ್ರಾಂತಿ 2.0 ಗಾಗಿ ಸಾಮಾನ್ಯ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ ಒ ಪಿ) ಬಿಡುಗಡೆ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಸಹಕಾರಿ ಕ್ಷೇತ್ರವು ಒಂದು ಲಕ್ಷ ಹೊಸ ಮತ್ತು ಅಸ್ತಿತ್ವದಲ್ಲಿರುವ ಡೈರಿಗಳನ್ನು ಸಶಕ್ತಗೊಳಿಸುತ್ತದೆ ಮತ್ತು ಎರಡನೇ ಶ್ವೇತ ಕ್ರಾಂತಿಯು ಹಾಲಿನ ಮಾರ್ಗಗಳನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು.

ಶ್ರೀ ತ್ರಿಭುವನದಾಸ್ ಅವರ ವ್ಯಕ್ತಿತ್ವವು ವಿವರಿಸಲು ಅಸಾಧ್ಯವಾದ ಕಠಿಣ ಪರಿಶ್ರಮದ ಜೀವನವಾಗಿತ್ತು ಎಂದು ಶ್ರೀ ಶಾ ಹೇಳಿದರು. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಶ್ರೀ ತ್ರಿಭುವನದಾಸ್ ಪಟೇಲ್ ಅವರು ದೇಶದ ಬಡ ರೈತರ ಸಬಲೀಕರಣಕ್ಕಾಗಿ ಅನನ್ಯ ದೃಷ್ಟಿಕೋನದಿಂದ ಕೆಲಸ ಮಾಡಿದರು. ತಮ್ಮ ಸ್ವಹಿತಾಸಕ್ತಿಯನ್ನು ತ್ಯಾಗ ಮಾಡಿ ದೇಶದ ಬಡ ರೈತರ ಸಬಲೀಕರಣಕ್ಕಾಗಿ ಶ್ರಮಿಸಿದರು. ತ್ರಿಭುವನದಾಸ್ ಅವರು ತಮ್ಮ ಜೀವನದುದ್ದಕ್ಕೂ ವೈಯಕ್ತಿಕ ಲಾಭದಿಂದ ದೂರವಿದ್ದರು ಮತ್ತು ದೇಶದ ಪ್ರತಿಯೊಬ್ಬ ರೈತರನ್ನು ಸಹಕಾರದ ನಿಜವಾದ ಮನೋಭಾವದೊಂದಿಗೆ ಸಂಪರ್ಕಿಸಲು ತಮ್ಮ ಪ್ರಯತ್ನಗಳನ್ನು ಮಾಡಿದರು, ಅದರಲ್ಲಿ ಅವರು ಉತ್ತಮ ಯಶಸ್ಸನ್ನು ಸಾಧಿಸಿದರು. ತ್ರಿಭುವನದಾಸ್ ಅವರಿಂದಲೇ ದೇಶದ 5 ಕೋಟಿ ಜಾನುವಾರು ಸಾಕಣೆದಾರರು ನೆಮ್ಮದಿಯಾಗಿದ್ದಾರೆ ಮತ್ತು ಇಂದು ದೇಶದ ಕೋಟಿಗಟ್ಟಲೆ ರೈತರು, ವಿಶೇಷವಾಗಿ ಮಹಿಳೆಯರು ಸಮೃದ್ಧರಾಗುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು. ತ್ರಿಭುವನದಾಸ್ ಅವರು ಸಣ್ಣ ಸಹಕಾರಿ ಸಂಘವನ್ನು ಸ್ಥಾಪಿಸಿದರು, ಅದು ಇಂದು ದೇಶದ 2 ಕೋಟಿ ರೈತರನ್ನು ಸಹಕಾರಿ ಕ್ಷೇತ್ರದೊಂದಿಗೆ ಸಂಪರ್ಕಿಸುವ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image002SJI2.jpg

1964ರಲ್ಲಿ ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಮುಲ್ ಡೈರಿಗೆ ಭೇಟಿ ನೀಡಿದರು ಮತ್ತು ಗುಜರಾತ್ ಮಾತ್ರವಲ್ಲದೆ ಇಡೀ ದೇಶದ ಪಶುಪಾಲಕರು ಈ ಯಶಸ್ವಿ ಮಾದರಿಯಿಂದ ಪ್ರಯೋಜನ ಪಡೆಯಬೇಕೆಂದು ನಿರ್ಧರಿಸಿದರು. ಇದರ ನಂತರ, ಶಾಸ್ತ್ರಿಯವರು ಎನ್‌ ಡಿ ಡಿ ಬಿ ಯನ್ನು ಸ್ಥಾಪಿಸಲು ನಿರ್ಧರಿಸಿದರು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. 60 ವರ್ಷಗಳಲ್ಲಿ ಎನ್‌ ಡಿ ಡಿ ಬಿ ದೇಶಾದ್ಯಂತ ಸಹಕಾರಿ ಕ್ಷೇತ್ರ, ರೈತರು ಮತ್ತು ತಾಯಂದಿರು ಮತ್ತು ಸಹೋದರಿಯರನ್ನು ಸಬಲೀಕರಣಗೊಳಿಸಿ ಸಂಘಟಿಸಿದ್ದು ಮಾತ್ರವಲ್ಲದೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದು ಹೇಳಿದರು. ಸಹಕಾರಿ ಸಂಘಗಳ ಮೂಲಕ ಪಶುಸಂಗೋಪನೆ ನಡೆಸಿದಾಗ ರೈತರಿಗೆ ಸಮೃದ್ಧಿಯಾಗುವುದಲ್ಲದೆ ದೇಶದಲ್ಲಿನ ಅಪೌಷ್ಟಿಕ ಮಕ್ಕಳ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು. ಅಮುಲ್ ಮೂಲಕ ರಚಿಸಲಾದ ಟ್ರಸ್ಸಟ್‌ ಮಹಿಳೆಯರನ್ನು ಸಬಲೀಕರಣಗೊಳಿಸುವುದಲ್ಲದೆ ಮಕ್ಕಳಿಗೆ ಪೌಷ್ಟಿಕಾಂಶವನ್ನು ಒದಗಿಸುವ ಮೂಲಕ ಸದೃಢ ನಾಗರಿಕರನ್ನು ಸೃಷ್ಟಿಸಲು ಅಡಿಪಾಯ ಹಾಕಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003DZ38.jpg

ಎನ್‌ ಡಿ ಡಿ ಬಿ ಗ್ರಾಮೀಣ ಕ್ಷೇತ್ರ ಮತ್ತು ದೇಶದ ಅಭಿವೃದ್ಧಿಯನ್ನು ವೇಗಗೊಳಿಸಿದೆ ಮತ್ತು ಕೃಷಿಯನ್ನು ಸ್ವಾವಲಂಬಿಯನ್ನಾಗಿ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತ್ರಿಭುವನ್ ದಾಸ್ ಅವರು ಎನ್‌‌ ಡಿ ಡಿ ಬಿ ಯ ಅಡಿಪಾಯವನ್ನು ಹಾಕಿದರು, ಅದು ಇಂದು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಬಹಳ ದೊಡ್ಡ ಸಂಸ್ಥೆಯಾಗಿದೆ. 1987 ರಲ್ಲಿ ಎನ್‌ ಡಿ ಡಿ ಬಿ ಅಧಿಕೃತ ಸಂಸ್ಥೆಯಾಯಿತು ಮತ್ತು 1970 ರಿಂದ 1996 ರವರೆಗೆ ಆಪರೇಷನ್ ಫ್ಲಡ್ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿ ಜಾರಿಗೊಳಿಸಿತು, ಇದು ಶ್ವೇತ ಕ್ರಾಂತಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಅಮುಲ್ ಇಂದು ₹ 60,000 ಕೋಟಿ ಮೌಲ್ಯದ ವಾರ್ಷಿಕ ವ್ಯವಹಾರವನ್ನು ನಡೆಸುತ್ತಿದೆ ಎಂದು ಅವರು ಹೇಳಿದರು, ಇದನ್ನು ಆರಂಭದಲ್ಲಿ ಮಹಿಳೆಯರಿಂದ ಅತ್ಯಂತ ಕಡಿಮೆ ಹಂಚಿಕೆಯ ಬಂಡವಾಳದಲ್ಲಿ ನಿರ್ಮಿಸಲಾಗಿದೆ. 1964 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎನ್‌ ಡಿ ಡಿ ಬಿ ಯನ್ನು ಸ್ಥಾಪಿಸಲು ನಿರ್ಧರಿಸಿದಾಗ, ಈ ಬೀಜವು ಒಂದು ದಿನ ಬೃಹತ್ ಆಲದ ಮರವಾಗಿ ಬೆಳೆಯುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ಶ್ರೀ ಶಾ ಹೇಳಿದರು. ಎನ್‌ ಡಿ ಡಿ ಬಿ ಯ ದ್ರವ ಹಾಲಿನ ಮಾರಾಟವು ದಿನಕ್ಕೆ 427 ಲಕ್ಷ ಲೀಟರ್‌ ಗೆ, ಸಂಗ್ರಹಣೆಯು ದಿನಕ್ಕೆ 589 ಲಕ್ಷ ಲೀಟರ್‌ ಗೆ ಮತ್ತು ಆದಾಯ ₹344 ಕೋಟಿಯಿಂದ ₹426 ಕೋಟಿಗೆ ಮತ್ತು ನಿವ್ವಳ ಲಾಭ ₹50 ಕೋಟಿಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಎನ್‌ ಡಿ ಡಿ ಬಿ ತರಕಾರಿಗಳನ್ನು ಸಂಸ್ಕರಣೆ ಮಾಡಲು ಪ್ರಾರಂಭಿಸಿದ್ದು, ಇದರಿಂದಾಗಿ ನಮ್ಮ ರೈತರು ಉತ್ಪಾದಿಸುವ ತರಕಾರಿಗಳು ಇಡೀ ಜಗತ್ತನ್ನು ತಲುಪುತ್ತಿವೆ ಮತ್ತು ಸಹಕಾರಿ ಮಾದರಿಯಲ್ಲಿ ಅದರ ಪ್ರಯೋಜನಗಳನ್ನು ತಳ ಮಟ್ಟಕ್ಕೆ ತಲುಪಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಗೋಬರ್ಧನ್ ಯೋಜನೆ ನಮ್ಮ ಭೂಮಿಯನ್ನು ಸಂರಕ್ಷಿಸಿ ಸುಧಾರಿಸಿದೆ, ಉತ್ಪಾದನೆಯನ್ನು ಹೆಚ್ಚಿಸಿದೆ, ರೈತರ ಸಮೃದ್ಧಿಯನ್ನು ಹೆಚ್ಚಿಸಿದೆ ಮತ್ತು ಸ್ವಚ್ಛ ಪರಿಸರವನ್ನು ನಿರ್ಮಿಸಿದೆ ಎಂದು ಹೇಳಿದರು. ಹಸುವಿನ ಸಗಣಿಯಿಂದ ಅನಿಲ ಮತ್ತು ಗೊಬ್ಬರವನ್ನು ತಯಾರಿಸಲಾಗುತ್ತಿದೆ ಮತ್ತು ಕಾರ್ಬನ್ ಕ್ರೆಡಿಟ್ ಪಾವತಿಯು ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ತಲುಪುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೂರದೃಷ್ಟಿಯ ನಿರ್ಧಾರ ಕೈಗೊಂಡು ಗೋಬರ್ಧನ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಶ್ರೀ ಶಾ ಹೇಳಿದರು. ಎನ್‌ ಡಿ ಡಿ ಬಿ 10,000 ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ ಪಿ ಒ) ನೋಂದಾಯಿಸಿದೆ ಎಂದು ಅವರು ಮಾಹಿತಿ ನೀಡಿದರು.

ಎನ್‌ ಡಿ ಡಿ ಬಿ ಯ ಉಪಕ್ರಮದ ನಂತರ, ಈಗ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಡೈರಿ ಕ್ಷೇತ್ರದ ಎಲ್ಲಾ ಘಟಕಗಳನ್ನು ಭಾರತದಲ್ಲಿಯೇ ನಿರ್ಮಿಸಲಾಗುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. 210 ಕೋಟಿ ಮೌಲ್ಯದ ಮದರ್ ಡೈರಿಯ ಹಣ್ಣು ತರಕಾರಿ ಸಂಸ್ಕರಣಾ ಘಟಕಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದರು. ಇದಲ್ಲದೇ ಉತ್ತರಾಖಂಡದ ಬದ್ರಿ ತುಪ್ಪ ಮತ್ತು ಮದರ್ ಡೈರಿಯ ಗಿರ್ ತುಪ್ಪದ ಬ್ರ್ಯಾಂಡ್ ಅನ್ನು ಸಹ ಇಂದು ಬಿಡುಗಡೆ ಮಾಡಲಾಯಿತು. ಸಹಕಾರಿ ಉತ್ಪನ್ನಗಳನ್ನು ಬ್ರ್ಯಾಂಡ್ ಮಾಡುವುದು ಮತ್ತು ಕಾರ್ಪೊರೇಟ್ ಉತ್ಪನ್ನಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅವುಗಳನ್ನು ಸಿದ್ಧಪಡಿಸುವುದು ಯಶಸ್ಸಿನ ಕೀಲಿಯಾಗಿದೆ ಎಂದು ಹೇಳಿದರು. ಇಂದು ನಮ್ಮ ಅಮುಲ್ ಬ್ರ್ಯಾಂಡ್ ಜಾಗತಿಕವಾಗಿ ಉನ್ನತ ಸ್ಥಾನದಲ್ಲಿದೆ, ಇದು ನಮಗೆ ಪ್ರಮುಖ ಸಾಧನೆಯಾಗಿದೆ. ಇಂದು ಪ್ರಾರಂಭಿಸಲಾದ ಉಪಕ್ರಮಗಳು ಲಡಾಖ್‌ ನ ಏಪ್ರಿಕಾಟ್ ರೈತರಿಗೆ, ಹಿಮಾಚಲದ ಸೇಬು ಮತ್ತು ಮೇಘಾಲಯದ ಅನಾನಸ್ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image004LYES.jpg

ಸಹಕಾರ ಸಚಿವಾಲಯವು ಮೂರು ಹೊಸ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ನಾಯಕತ್ವಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಾಗ ಮಾತ್ರ ಇಂತಹ ಹೊಸ ಉಪಕ್ರಮಗಳನ್ನು ಕೈಗೊಳ್ಳಲು ಸಾಧ್ಯ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಿ ಕ್ಷೇತ್ರದಲ್ಲಿ ಅನೇಕ ಉಪಕ್ರಮಗಳು ಮತ್ತು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು. ಪ್ರಸ್ತುತ, ಈ ವಲಯದಲ್ಲಿ ಸುಮಾರು 22 ರಾಜ್ಯ ಒಕ್ಕೂಟಗಳು ಮತ್ತು 231 ಜಿಲ್ಲಾ ಒಕ್ಕೂಟಗಳು, 28 ಮಾರ್ಕೆಟಿಂಗ್ ಡೈರಿಗಳು ಮತ್ತು 21 ಹಾಲು ಉತ್ಪಾದಕ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಮೋದಿ ಸರ್ಕಾರವು 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಸ್ಥಾಪಿಸಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು, ಇದು ನಮ್ಮ ಸಹಕಾರ ಚೌಕಟ್ಟನ್ನು ಹೆಚ್ಚು ಬಲಪಡಿಸುತ್ತದೆ. ಈ ಉಪಕ್ರಮವು ಸಹಕಾರಿ ಕ್ಷೇತ್ರದ ಎಲ್ಲಾ ಸಂಸ್ಥೆಗಳ ಬಲವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. 231 ಮಿಲಿಯನ್ ಟನ್ ಹಾಲು ಉತ್ಪಾದನೆಯಲ್ಲಿ ಭಾರತವು ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಅವರು ಹೇಳಿದರು. ನಮ್ಮ ಹಾಲಿನ ಉತ್ಪಾದನೆಯ ಬೆಳವಣಿಗೆಯ ದರವು ಶೇ.6 ಆಗಿದ್ದರೆ, ಜಾಗತಿಕ ಬೆಳವಣಿಗೆಯ ದರ ಕೇವಲ ಶೇ.2 ಆಗಿದೆ. ಇಂದು, ಎಂಟು ಕೋಟಿ ಗ್ರಾಮೀಣ ಕುಟುಂಬಗಳು ಪ್ರತಿದಿನ ಹಾಲು ಉತ್ಪಾದಿಸುತ್ತವೆ, ಆದರೆ ಕೇವಲ 1.5 ಕೋಟಿ ಮಾತ್ರ ಸಹಕಾರಿ ಕ್ಷೇತ್ರಕ್ಕೆ ಸಂಪರ್ಕ ಹೊಂದಿವೆ. ಇದರರ್ಥ ಉಳಿದ 6.5 ಕೋಟಿ ಕುಟುಂಬಗಳು ನ್ಯಾಯಯುತ ಮೌಲ್ಯವನ್ನು ಪಡೆಯುತ್ತಿಲ್ಲ ಮತ್ತು ಶೋಷಣೆಗೆ ಒಳಗಾಗುತ್ತಿವೆ ಎಂದು ಅವರು ಒತ್ತಿ ಹೇಳಿದರು. ಭವಿಷ್ಯದಲ್ಲಿ ಹಾಲು ಉತ್ಪಾದನೆಗೆ ಸಂಬಂಧಿಸಿದ ಎಂಟು ಕೋಟಿ ರೈತ ಕುಟುಂಬಗಳು ತಮ್ಮ ಶ್ರಮಕ್ಕೆ ಸಂಪೂರ್ಣ ಸಂಭಾವನೆ ಪಡೆದು ಸಹಕಾರಿ ಕ್ಷೇತ್ರಕ್ಕೆ ಸೇರುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು.

ಸಹಕಾರಿ ಸಂಘಗಳನ್ನು ಬಲಪಡಿಸುವ ಅಭಿಯಾನದ ಫಲವಾಗಿ ದೇಶದಲ್ಲಿ 1970ರಲ್ಲಿ ಪ್ರತಿ ವ್ಯಕ್ತಿಗೆ 40 ಕೆಜಿ ಇದ್ದ ಹಾಲಿನ ಲಭ್ಯತೆ 2011ರಲ್ಲಿ 103 ಕೆಜಿಗೆ ಹೆಚ್ಚಾಯಿತು, 2023ರಲ್ಲಿ ಪ್ರತಿ ವ್ಯಕ್ತಿಗೆ 167 ಕೆಜಿಗೆ ಏರಿಕೆಯಾಯಿತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಜಾಗತಿಕವಾಗಿ ತಲಾ ಸರಾಸರಿ ಹಾಲಿನ ಲಭ್ಯತೆ 117 ಕೆಜಿ ಎಂದು ಅವರು ಹೇಳಿದರು.

 

*****


(Release ID: 2067215) Visitor Counter : 75