ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಮೌರಿಟೇನಿಯಾಗೆ ನಿನ್ನೆ ಭೇಟಿ


ಮೌರಿಟೇನಿಯಾ ಅಧ್ಯಕ್ಷರನ್ನು ಭೇಟಿ ಮಾಡಿದ ರಾಷ್ಟ್ರಪತಿ: ನಿಯೋಗ ಮಟ್ಟದ ಮಾತುಕತೆಯ ನೇತೃತ್ವ ವಹಿಸಿದ್ದರು

ಮೌರಿಟೇನಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು

ಭಾರತೀಯ ಸಮುದಾಯದ ಕೌಶಲ್ಯಗಳು, ಪರಿಣತಿ ಮತ್ತು ಅನುಭವ ಭಾರತದ ಪ್ರಗತಿಗೆ ಮುಖ್ಯ: ರಾಷ್ಟ್ರಪತಿ ಮುರ್ಮು

ರಾಜತಾಂತ್ರಿಕರ ತರಬೇತಿ, ಸಾಂಸ್ಕೃತಿಕ ವಿನಿಮಯ, ವೀಸಾ ವಿನಾಯಿತಿ ಮತ್ತು ವಿದೇಶಿ ಕಚೇರಿಯ ಸಮಾಲೋಚನೆಗಳ ಕ್ಷೇತ್ರಗಳಲ್ಲಿ ನಾಲ್ಕು ಒಡಂಬಡಿಕೆಗಳಿಗೆ ಸಹಿ ಮತ್ತು ವಿನಿಮಯ

Posted On: 17 OCT 2024 11:12AM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ತಮ್ಮ ಆಲ್ಜೀರಿಯಾ ಪ್ರವಾಸದ ಎರಡನೇ ಚರಣದಲ್ಲಿ (2024ರ ಅಕ್ಟೋಬರ್ 16ರಂದು) ಮೌರಿಟೇನಿಯಾ ಮತ್ತು ಮಲವೈಗೆ ಭೇಟಿ ನೀಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೌಕ್‌ಚಾಟ್-ಔಮ್‌ಟೌನ್ಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಮೌರಿಟೇನಿಯಾದ ಅಧ್ಯಕ್ಷ ಗೌರವಾನ್ವಿತ ಶ್ರೀ ಮೊಹಮದ್ ಔಲ್ಡ್ ಘಜೌನಿ ಆತ್ಮೀಯವಾಗಿ ಬರ ಮಾಡಿಕೊಂಡರು ಮತ್ತು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. 

ಇದು ಮೌರಿಟೇನಿಯಾಕ್ಕೆ ಭಾರತದ ರಾಷ್ಟ್ರಪತಿ ಅವರ ಮೊದಲ ಭೇಟಿಯಾಗಿದೆ. ರಾಷ್ಟ್ರಪತಿಯವರೊಂದಿಗೆ ರಾಜ್ಯ ಸಚಿವರಾದ ಶ್ರೀ ಸುಕನತಾ ಮಜುಂದಾರ್ ಮತ್ತು ಸಂಸದರಾದ ಶ್ರೀ ಮುಖೇಶ್ ಕುಮಾರ್ ದಲಾಲ್ ಮತ್ತು ಶ್ರೀ ಅತುಲ್ ಗರ್ಗ್ ಉಪಸ್ಥಿತರಿದ್ದರು.

ರಾಷ್ಟ್ರಪತಿ ಅವರು, ಮೌರಿಟೇನಿಯಾದಲ್ಲಿ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾರಿಟೇನಿಯಾದಲ್ಲಿನ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ಸಣ್ಣ ಪ್ರಮಾಣದಲ್ಲಿ ಸೇರಿದ್ದ ಭಾರತೀಯ ಸಮುದಾಯದ ಸಕ್ರಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅವರು, ಮೌರಿಟೇನಿಯಾದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಿದ ಭಾರತೀಯ ಸಮುದಾಯವನ್ನು ಶ್ಲಾಘಿಸಿದರು. ಭಾರತದ ಪ್ರಗತಿಗೆ ಅವರ ಕೌಶಲ್ಯ, ಪರಿಣಿತಿ ಮತ್ತು ಅನುಭವವೂ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಭಾರತೀಯ ಸಮುದಾಯವನ್ನು ಬೆಂಬಲಿಸಿದ್ದಕ್ಕಾಗಿ ಮೌರಿಟೇನಿಯಾ ಸರ್ಕಾರ ಮತ್ತು ಅಲ್ಲಿನ ಜನತೆಯನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಎಲ್ಲರನ್ನೂ ಒಳಗೊಳ್ಳುವ ಮತ್ತು ಸ್ವಾಗತಿಸುವ ಅವರ ಮನೋಭಾವದಿಂದಾಗಿ ಮೌರಿಟೇನಿಯಾದಲ್ಲಿ ಭಾರತೀಯ ಸಮುದಾಯವು ಏಳಿಗೆ ಹೊಂದುತ್ತಿದೆ ಎಂದು ಅವರು ಹೇಳಿದರು.

ಸಮುದಾಯ ಸ್ವಾಗತ ಕಾರ್ಯಕ್ರಮದ ನಂತರ, ರಾಷ್ಟ್ರಪತಿಗಳು ಅಧ್ಯಕ್ಷೀಯ ಭವನಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಮೌರಿಟೇನಿಯಾದ ಅಧ್ಯಕ್ಷ ಮೊಹಮ್ಮದ್ ಔಲ್ಡ್ ಘಜೌನಿ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಿದರು. ಉಭಯ ನಾಯಕರು ಭಾರತ ಮತ್ತು ಮೌರಿಟೇನಿಯಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಿದರು. ಬಳಿಕ ಅವರು ನಿಯೋಗ ಮಟ್ಟದ ಮಾತುಕತೆಯ ನೇತೃತ್ವ ವಹಿಸಿದರು ಮತ್ತು ರಾಜತಾಂತ್ರಿಕರ ತರಬೇತಿ, ಸಾಂಸ್ಕೃತಿಕ ವಿನಿಮಯ, ವೀಸಾ ವಿನಾಯಿತಿ ಮತ್ತು ವಿದೇಶಾಂಗ ಕಚೇರಿಯ ಸಮಾಲೋಚನೆಗಳ ಕ್ಷೇತ್ರಗಳಲ್ಲಿ ನಾಲ್ಕು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಮತ್ತು ವಿನಿಮಯಕ್ಕೆ ಸಾಕ್ಷಿಯಾದರು.

ಇದಕ್ಕೂ ಮುನ್ನ, ಮೌರಿಟೇನಿಯಾದ ವಿದೇಶಾಂಗ ವ್ಯವಹಾರಗಳು, ಸಹಕಾರ ಸಚಿವರಾದ ಗೌರವಾನ್ವಿತ  ಶ್ರೀ ಮೊಹಮ್ಮದ್ ಸೇಲಂ ಔಲ್ಡ್ ಮೆರ್ಜೌಗ್ ಅವರು  ಪ್ರತ್ಯೇಕ ಸಭೆಯಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ್ದರು.

ಬಳಿಕ ರಾಷ್ಟ್ರಪತಿ ಮಲವೈಗೆ ತೆರಳಿದರು – ಇದು ಅವರ ಮೂರು ರಾಷ್ಟ್ರಗಳ ಭೇಟಿಯ ಕೊನೆಯ ಹಂತವಾಗಿದೆ.

ರಾಷ್ಟ್ರಪತಿಗಳ ಭಾಷಣವನ್ನು ವೀಕ್ಷಿಸಲು ದಯಮಾಡಿ ಇಲ್ಲಿ ಕ್ಲಿಕ್‌ ಮಾಡಿ

 

*****

 


(Release ID: 2065816) Visitor Counter : 43