ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಈಶಾನ್ಯ ಭಾರತವು ದೇಶದ ಅಭಿವೃದ್ಧಿಯ ರಾಡಾರ್‌ನಲ್ಲಿದೆ ಎಂದು ಉಪರಾಷ್ಟ್ರಪತಿಯವರು ಪ್ರತಿಪಾದಿಸಿದರು


ಈಶಾನ್ಯ ಭಾರತವು ರಾಷ್ಟ್ರದ ಏಕತೆ, ಆರ್ಥಿಕ ಪ್ರಗತಿ ಮತ್ತು ಸಾಂಸ್ಕೃತಿಕ ಸಾರದ ಪ್ರಮುಖ ಕೊಡುಗೆದಾರ ಎಂದು ಉಪರಾಷ್ಟ್ರಪತಿಯವರು ಹೇಳಿದರು 

"ಸ್ವರ್ಗವಿದ್ದರೆ ಅದು ಭಾರತದಲ್ಲಿ, ಸ್ವರ್ಗೀಯ ಚೈತನ್ಯವಿದ್ದರೆ ಅದು ಮೇಘಾಲಯದಲ್ಲಿದೆ" ಅದು ಮೇಘಾಲಯದಲ್ಲಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದ್ದಾರೆ
 
'ಲುಕ್ ಈಸ್ಟ್' ಮತ್ತು 'ಆಕ್ಟ್ ಈಸ್ಟ್' ನೀತಿಗಳು ಆ ಭಾಗದಲ್ಲಿ ಅಪಾರ ಬೆಳವಣಿಗೆಗೆ ಕಾರಣವಾದವು ಎಂದು ಉಪರಾಷ್ಟ್ರಪತಿಯವರು ಹೇಳಿದ್ದಾರೆ

ವಾಸ್ತವಾಧಾರವಿಲ್ಲದ ಮಾಹಿತಿಯು ಸಾರ್ವಜನಿಕ ವೇದಿಕೆಗಳಲ್ಲಿ ನಿರ್ಬಂಧಿತವಾಗಬೇಕು ಎಂದು ಉಪರಾಷ್ಟ್ರಪತಿಯವರು ಒತ್ತಿ ಹೇಳಿದ್ದಾರೆ

"ನಮ್ಮ ರಾಷ್ಟ್ರದ ಬಗೆಗಿನ ಮೂಲ ಬದ್ಧತೆಯನ್ನೇ ಮರೆತು, ಯಾವುದೇ ಜವಾಬ್ದಾರಿಯಿಲ್ಲದೆ ನಡೆದುಕೊಳ್ಳಲು ನಮಗೆ ಸಾಧ್ಯವಿಲ್ಲ" - ಉಪರಾಷ್ಟ್ರಪತಿ

Posted On: 16 OCT 2024 7:02PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು, "ಈಶಾನ್ಯ ಭಾರತವು ದೇಶದ ಅಭಿವೃದ್ಧಿಯ ರಾಡಾರ್‌ ನಲ್ಲಿದೆ" ಎಂದು ಹೇಳಿದರು. ರಾಷ್ಟ್ರದ ಏಕತೆ, ಆರ್ಥಿಕ ಪ್ರಗತಿ ಮತ್ತು ಸಾಂಸ್ಕೃತಿಕ ಸಾರಕ್ಕೆ ಈಶಾನ್ಯ ರಾಜ್ಯಗಳು ಗಮನಾರ್ಹ ಕೊಡುಗೆ ನೀಡುತ್ತಿವೆ ಎಂದು ಅವರು  ಹೇಳಿದರು. ಈಶಾನ್ಯ ಭಾರತವನ್ನು ನಮ್ಮ ದೇಶದ ಅತ್ಯಂತ ಮಹತ್ವದ ಭಾಗವೆಂದು ಗುರುತಿಸಿದ ಶ್ರೀ ಧನಕರ್ ಅವರು, ಈ ಪ್ರದೇಶದಲ್ಲಿ ಸಂವಹನ, ಸಂಪರ್ಕ ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ಗಣನೀಯ ಬೆಳವಣಿಗೆಗೆ ಕಾರಣವಾದ 'ಲುಕ್ ಈಸ್ಟ್' ಮತ್ತು 'ಆಕ್ಟ್ ಈಸ್ಟ್' ನೀತಿಗಳನ್ನು ಶ್ಲಾಘಿಸಿದರು.

ಅಜ್ಞಾನ ಮತ್ತು ತಪ್ಪು ಮಾಹಿತಿ ಆಧಾರಿತ ವಿಚಾರಧಾರೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, "ಯಾವುದೇ ವಾಸ್ತವಾಂಶಗಳ ಬುನಾದಿಯಿಲ್ಲದ ಮಾಹಿತಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತವಾಗಿ ಹರಿದಾಡುವುದನ್ನು ನಾವು ಸಹಿಸಬಹುದೇ?" ಎಂದು ಪ್ರಶ್ನಿಸಿದರು. "ನಮ್ಮ ರಾಷ್ಟ್ರದ ಬಗೆಗಿನ ಮೂಲ ಬದ್ಧತೆಯನ್ನೇ ಮರೆತು, ಯಾವುದೇ ಜವಾಬ್ದಾರಿಯಿಲ್ಲದೆ ನಡೆದುಕೊಳ್ಳಲು ನಮಗೆ ಸಾಧ್ಯವೇ?" ಎಂದು ಪ್ರಶ್ನಿಸಿದರು. ಇದರ ಜೊತೆಗೆ "ಭಾರತವು ಪ್ರಗತಿಯ ಹಾದಿಯಲ್ಲಿ ದಾಪುಗಾಲು ಹಾಕುತ್ತಿದ್ದು, ಅದು ಅವಿಭಾಜ್ಯವಾದುದು" ಎಂದು ದೃಢವಾಗಿ ಹೇಳಿದ ಅವರು, ಯುವ ಜನತೆ ವಿವೇಕಯುತ ಮಾಹಿತಿ ಹೊಂದಿರಬೇಕೆಂದು  ಹೇಳಿದರು. ಶ್ರೀ ಧನಕರ್ ಅವರು ಯುವಜನತೆಯನ್ನು ಉದ್ದೇಶಿಸಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪಯಣದಲ್ಲಿ ಯುವಕರೇ ಅತ್ಯಂತ ಪ್ರಮುಖ ಕೊಡುಗೆದಾರರು ಮತ್ತು ನಿರ್ಣಾಯಕ ಪಾಲುದಾರರು ಎಂದು ಹೇಳಿ ಯುವಕರನ್ನು ಪ್ರೋತ್ಸಾಹಿಸಿದರು.

ಶಿಲ್ಲಾಂಗ್‌ ನಲ್ಲಿ ಇಂದು ನಡೆದ ಮೇಘಾಲಯ ಸ್ಕಿಲ್ ಮತ್ತು ಇನ್ನೋವೇಶನ್ ಹಬ್ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, "ಕೌಶಲ್ಯವನ್ನು ಅನ್ವೇಷಿಸಲಾಗುವುದಿಲ್ಲ ಅಥವಾ ಆವಿಷ್ಕರಿಸಲಾಗುವುದಿಲ್ಲ, ಬದಲಿಗೆ ನಿರ್ದಿಷ್ಟ ಕ್ಷೇತ್ರದಲ್ಲಿ ವ್ಯಕ್ತಿಯ ಪ್ರತಿಭೆಯ ಸಮರ್ಥ ಬಳಕೆಯೇ ಮಾನವ ಸಂಪನ್ಮೂಲಕ್ಕೆ ಗುಣಾತ್ಮಕ ಮುನ್ನಡೆಯನ್ನು ನೀಡುತ್ತದೆ" ಎಂದು  ಹೇಳಿದರು. "ಕೌಶಲ್ಯವು ಈಗ ಕೇವಲ ಒಂದು ಅರ್ಹತೆ ಅಷ್ಟೇ ಅಲ್ಲ, ಅದು ನಮ್ಮ ಅನಿವಾರ್ಯ ಅಗತ್ಯವಾಗಿ ಪರಿಣಮಿಸಿದೆ" ಎಂದು ಅವರು  ಹೇಳಿದರು.

ಉಪರಾಷ್ಟ್ರಪತಿಯವರು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸುವುದು ಮತ್ತು ಐದು ವರ್ಷಗಳ ಅವಧಿಯಲ್ಲಿ ಐದು ಲಕ್ಷ ಯುವಜನರಿಗೆ ಇಂಟರ್ನ್‌ ಶಿಪ್ ನೀಡಲು 60,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸುವುದನ್ನು ಉಪರಾಷ್ಟ್ರಪತಿಯವರು ಹೈಲೈಟ್‌ ಮಾಡಿದರು. ಹಳ್ಳಿಗಳು ಮತ್ತು ಅರೆ-ನಗರ ಪ್ರದೇಶಗಳು ಕೌಶಲ್ಯ ಕೇಂದ್ರಗಳ ತಾಣಗಳಾಗಬೇಕು ಎಂದು ಅವರು ಒತ್ತಿ ಹೇಳಿದರು.

ಮೇಘಾಲಯದ ತಮ್ಮ ಅನುಭವದ ಕುರಿತು ಮಾತನಾಡಿದ ಉಪರಾಷ್ಟ್ರಪತಿಯವರು, "ಸ್ವರ್ಗವೆಂಬುದು ಇದ್ದರೆ ಅದು ಭಾರತದಲ್ಲಿದೆ, ಸ್ವರ್ಗೀಯ ಚೈತನ್ಯವಿದ್ದರೆ ಅದು ಮೇಘಾಲಯದಲ್ಲಿದೆ" ಎಂದು ಹೇಳಿದರು. ಮೇಘಾಲಯದ ಆರ್ಥಿಕತೆಯನ್ನು ಪ್ರವಾಸೋದ್ಯಮದಿಂದ ಮಾತ್ರ ಚಾಲನೆ ಮಾಡಬಹುದು ಎಂದು ಅವರು ಪ್ರತಿಪಾದಿಸಿದರು. "ಪ್ರಕೃತಿ ಮೇಘಾಲಯಕ್ಕೆ ಅಪಾರ ಕೊಡುಗೆಗಳನ್ನು ನೀಡಿದೆ. ಈ ನೈಸರ್ಗಿಕ ಸಂಪತ್ತನ್ನು ಪ್ರತಿಭಾವಂತ ಮತ್ತು ಕುಶಲ ಮಾನವ ಸಂಪನ್ಮೂಲದ ಮೂಲಕ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲರಾದ ಶ್ರೀ ಸಿ.ಎಚ್. ವಿಜಯಶಂಕರ್, ಮೇಘಾಲಯದ ಮುಖ್ಯಮಂತ್ರಿಗಳಾದ ಶ್ರೀ ಕಾನ್ರಾಡ್ ಕೆ. ಸಂಗ್ಮಾ, ಸಚಿವರಾದ ಡಾ. ಮೇಝೆಲ್ ಅಂಪರೀನ್ ಲಿಂಗ್ದೋ, ಮೇಘಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಡೊನಾಲ್ಡ್ ಫಿಲಿಪ್ಸ್ ವಹ್ಲಾಂಗ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

 

*****



(Release ID: 2065754) Visitor Counter : 8