ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೇಂದ್ರ ಸಂಪುಟದ ನಿರ್ಧಾರವನ್ನು ಶ್ಲಾಘಿಸಿದ್ದಾರೆ


ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಕೃತಜ್ಞತೆ ಸಲ್ಲಿಸಿದರು 

ವಾರಣಾಸಿಯಲ್ಲಿ ಗಂಗಾ ನದಿಯ ಮೇಲೆ ರೈಲು ಮತ್ತು ರಸ್ತೆ ಸೇತುವೆ ನಿರ್ಮಾಣ ಸೇರಿದಂತೆ  ₹ 2,642 ಕೋಟಿ ವೆಚ್ಚದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಮಲ್ಟಿ ಟ್ರ್ಯಾಕಿಂಗ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ರೈತರ ಕಲ್ಯಾಣಕ್ಕೆ ಸಮರ್ಪಿತರಾಗಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ, 2025-26 ರ ಕಾಲಮಾನದ ರಬಿ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ

ರೇಪ್‌ ಸೀಡ್ ಮತ್ತು ಸಾಸಿವೆಗೆ ಎಮ್‌ಎಸ್‌ಪಿ ಅತಿದೊಡ್ಡ ಹೆಚ್ಚಳವನ್ನು ಹೊಂದಿದ್ದು ಕ್ವಿಂಟಲ್‌ ಗೆ ₹ 300 ಏರಿಕೆ ಇರುತ್ತದೆ, ಮಸೂರ್‌ ದಾಲ್ ಬೆಲೆಯಲ್ಲಿ ಐತಿಹಾಸಿಕ ಏರಿಕೆ ಕ್ವಿಂಟಲ್‌ ಗೆ ₹ 275  ಆಗಲಿದೆ

ಈ ಹೆಚ್ಚಿದ ಎಮ್‌ಎಸ್‌ಪಿ ಗಳು ರೈತರ ಆದಾಯವನ್ನು ಹೆಚ್ಚಿಸುತ್ತದೆ, ನಮ್ಮ ರೈತರನ್ನು ಇನ್ನಷ್ಟು ಸಮೃದ್ಧಗೊಳಿಸುತ್ತದೆ

ಹಬ್ಬದ ಋತುವಿನಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ (ಡಿಆರ್) ನಲ್ಲಿ ಹೆಚ್ಚುವರಿ 3% ಹೆಚ್ಚಳವನ್ನು ಸಂಪುಟ ಸಭೆ ಅನುಮೋದನೆ ನೀಡಿದೆ

Posted On: 16 OCT 2024 6:56PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಕೇಂದ್ರ ಸಚಿವ ಸಂಪುಟ ಕೈಗೊಂಡ ನಿರ್ಧಾರಗಳನ್ನು ಶ್ಲಾಘಿಸಿದರು. ಎಕ್ಸ್ ಮಾಧ್ಯಮದಲ್ಲಿ ತಮ್ಮ ಸಂದೇಶಗಳ ಸರಣಿಯಲ್ಲಿ, ಶ್ರೀ ಅಮಿತ್ ಶಾ ಅವರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಕೇಂದ್ರ ಸಚಿವ ಸಂಪುಟವು ₹ 2,642 ಕೋಟಿ ವೆಚ್ಚದಲ್ಲಿ ವಾರಣಾಸಿ-ಪಂಡಿತ್ ದೀನದಯಾಳ್ ಉಪಾಧ್ಯಾಯ ಮಲ್ಟಿ ಟ್ರ್ಯಾಕಿಂಗ್ ಯೋಜನೆಗೆ ಅನುಮೋದನೆ ನೀಡಿದೆ" ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು, "ಇದರಲ್ಲಿ ಗಂಗಾ ನದಿ ಯೋಚನೆ, ರೈಲು ಮತ್ತು ರಸ್ತೆ ಸೇತುವೆ ನಿರ್ಮಾಣವೂ ಸೇರಿದೆ. ಈ ಯೋಜನೆಯು ರೈಲ್ವೆ ಜಾಲವನ್ನು 30 ಕಿಲೋಮೀಟರ್‌ ಗಳಷ್ಟು ವಿಸ್ತರಿಸುತ್ತದೆ" ಎಂದು  ಹೇಳಿದರು

ಕೇಂದ್ರ ಗೃಹ ಸಚಿವರು ಈ ಸಂದರ್ಭದಲ್ಲಿ ಮಾತನಾಡಿ, "ದೇಶದಲ್ಲಿ ರಸ್ತೆ ಸಂಪರ್ಕವನ್ನು ನಿರಂತರವಾಗಿ ಉತ್ತೇಜಿಸುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಹೇಳಿದರು.

"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕೆ ಸಮರ್ಪಿತರಾಗಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ 2025-26 ರ ಕಾಲಮಾನದ ರಬಿ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.  ರೇಪ್‌ ಸೀಡ್ ಮತ್ತು ಸಾಸಿವೆಗೆ ಎಂಎಸ್‌ಪಿ ಕ್ವಿಂಟಲ್‌ಗೆ ₹ 300 ರ ಏರಿಕೆಯೊಂದಿಗೆ ಅತಿದೊಡ್ಡ ಹೆಚ್ಚಳವನ್ನು ಕಂಡಿದೆ, ಹಾಗೂ ಮಸೂರ್‌ ದಾಲ್ ಬೆಲೆಯಲ್ಲಿ  ಕ್ವಿಂಟಲ್‌ ಗೆ ₹ 275 ಐತಿಹಾಸಿಕ ಹೆಚ್ಚಳವಾಗಿದೆ. ಈ ಹೆಚ್ಚಿದ ಎಂಎಸ್‌ಪಿ ಗಳು ರೈತರ ಆದಾಯವನ್ನು ಹೆಚ್ಚಿಸುತ್ತದೆ, ನಮ್ಮ ರೈತರನ್ನು ಇನ್ನಷ್ಟು ಸಮೃದ್ಧಗೊಳಿಸುತ್ತದೆ. ರೈತರ ಪ್ರತಿಯೊಂದು ಕಾಳಜಿಯನ್ನು ಪರಿಹರಿಸಿದ್ದಕ್ಕಾಗಿ ಮೋದಿ ಜಿ ಅವರಿಗೆ ಕೃತಜ್ಞತೆಗಳು" ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು 

"ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಹಬ್ಬ ಹರಿದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ (ಡಿಆರ್) ನಲ್ಲಿ ಹೆಚ್ಚುವರಿ 3% ಹೆಚ್ಚಳವನ್ನು ಇಂದು ಸಚಿವ ಸಂಪುಟವು ಘೋಷಿಸಿತು ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಹೇಳಿದರು.  

"ಈ ನಿರ್ಧಾರದಿಂದ 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಈ ವಿಶೇಷ ಕೊಡುಗೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಕೃತಜ್ಞತೆಗಳು" ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

 

 

*****

 

 


(Release ID: 2065618) Visitor Counter : 33