ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಉದ್ಯೋಗಿಗಳ ರಾಜ್ಯ ವಿಮಾ ನಿಗಮದ (ಇ.ಎಸ್.ಐ.ಸಿ.) 194ನೇ ಸಭೆಯ ಅಧ್ಯಕ್ಷತೆಯನ್ನು ಡಾ. ಮನ್ಸುಖ್ ಮಾಂಡವಿಯಾ ವಹಿಸಿದ್ದರು


ಮುಂದಿನ 5 ವರ್ಷಗಳಲ್ಲಿ 75,000 ಹೊಸ ವೈದ್ಯಕೀಯ ಸೀಟುಗಳ ಭರವಸೆಯನ್ನು ಸ್ವಾತಂತ್ರ್ಯ ದಿನಾಚರಣೆ (2024)ಯಂದು ಪ್ರಧಾನಮಂತ್ರಿಯವರು ನೀಡಿದ್ದಕ್ಕೆ ಪೂರಕವಾಗಿ ಕೇಂದ್ರ ಸಚಿವರು 10 ಹೊಸ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯನ್ನು ಘೋಷಿಸಿದರು

ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆಗೆ 01.07.2024 ರಿಂದ 30.06.2026 ರವರೆಗೆ ವಿಸ್ತರಣೆಯನ್ನು ನೀಡಲಾಗಿದೆ

ಅಖಿಲ ಭಾರತ ಮಟ್ಟದಲ್ಲಿ ಆಧಾರದ ಮೇಲೆ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿ.ಎಂ.ಜೆ.ಎ,ವೈ) ನೊಂದಿಗೆ ಸಹಯೋಗದೊಂದಿಗೆ ಒಮ್ಮುಖ ಕಾರ್ಯಕ್ರಮದ ಅಡಿಯಲ್ಲಿ ಇ.ಎಸ್.ಐ.ಸಿ ಫಲಾನುಭವಿಗಳಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸುವುದನ್ನು ಇ.ಎಸ್.ಐ.ಸಿ.  ಪ್ರಕಟಿಸಿದೆ

ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜುಗಳಲ್ಲಿ ಪ್ಯಾರಾ-ಮೆಡಿಕಲ್ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸ್ಗಳು ಪ್ರಾರಂಭವಾಗಲಿದೆ

ಎನ್.ಒ.ಆರ್.ಸಿ.ಇ.ಟಿ. ಮೂಲಕ ನರ್ಸಿಂಗ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿದೆ

Posted On: 08 OCT 2024 6:15PM by PIB Bengaluru

ಇಂದು ನವದೆಹಲಿಯ ಇ.ಎಸ್.ಐ.ಸಿ. ಪ್ರಧಾನ ಕಛೇರಿಯಲ್ಲಿ ಇ.ಎಸ್.ಐ. ಕಾರ್ಪೊರೇಶನ್ನ 194ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಹಾಗೂ ಕ್ರೀಡೆಗಳ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ವಹಿಸಿದ್ದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸಚಿವರು ಇ.ಎಸ್.ಐ.ಸಿ.ಯ ಮೂಲಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲು ಇ.ಎಸ್.ಐ. ಕಾರ್ಪೊರೇಶನ್ ನ ಹಲವಾರು ಪ್ರಮುಖ ನಿರ್ಧಾರಗಳನ್ನು ಸಭೆಯಲ್ಲಿ, ಪ್ರಕಟಿಸಿದರು.

10 ಹೊಸ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜುಗಳ ಸ್ಥಾಪನೆ

ಅಂಧೇರಿ (ಮಹಾರಾಷ್ಟ್ರ), ಬಸಾಯಿದರಪುರ (ದೆಹಲಿ), ಗುವಾಹಟಿ-ಬೆಲ್ಟೋಲಾ (ಅಸ್ಸಾಂ), ಇಂದೋರ್ (ಮಧ್ಯಪ್ರದೇಶ), ಜೈಪುರ (ರಾಜಸ್ಥಾನ), ನರೋಡಾ-ಬಾಪುನಗರ (ಗುಜರಾತ್), ನೋಯ್ಡಾ ಮತ್ತು ವಾರಣಾಸಿ (ಉತ್ತರ ಪ್ರದೇಶ), ರಾಂಚಿ (ಜಾರ್ಖಂಡ್), ಲುಧಿಯಾನ (ಪಂಜಾಬ್) ಗಳಲ್ಲಿ 10 ಹೊಸ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಇ.ಎಸ್.ಐ. ಕಾರ್ಪೊರೇಷನ್ ತಾತ್ವಿಕವಾಗಿ ಅನುಮೋದನೆ ನೀಡಿದೆ. 

ಈ ನಿರ್ಧಾರವು ಸ್ವಾತಂತ್ರ್ಯ ದಿನದ (2024) ಭಾಷಣದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಮುಂದಿನ 5 ವರ್ಷಗಳಲ್ಲಿ ಹೊಸ 75000 ಹೊಸ ವೈದ್ಯಕೀಯ ಸೀಟುಗಳನ್ನು ರಚಿಸುವ ಘೋಷಣೆಯನ್ನು ಬೆಂಬಲಿಸುತ್ತದೆ. 

ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು 01.07.2024 ರಿಂದ 30.06.2026 ರವರೆಗೆ ವಿಸ್ತರಣೆ ಮಾಡಲಾಗಿದೆ

ನಿರುದ್ಯೋಗಿಗಳಾಗಿರುವ ವಿಮಾದಾರರಿಗೆ ಪರಿಹಾರವನ್ನು ಒದಗಿಸಲು, ಎರಡು ವರ್ಷಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ "ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ" ಎಂಬ ಯೋಜನೆಯನ್ನು ಇ.ಎಸ್.ಐ.ಸಿ. ನಲ್ಲಿ 01.07.2018. ರಂದು ಪ್ರಾರಂಭಿಸಲಾಯಿತು. ವಿಮೆ ಮಾಡಿದ ವ್ಯಕ್ತಿಯು ಗಳಿಕೆಗಾಗಿ ಹೊಸ ಕೆಲಸ ಹುಡುಕುವ ಅವಧಿಯಲ್ಲಿ ನಿರುದ್ಯೋಗ ಭತ್ಯೆಯ ರೂಪದಲ್ಲಿ ಬೆಂಬಲವನ್ನು ಒದಗಿಸಲು ಯೋಜನೆಯು ಉದ್ದೇಶಿಸಲಾಗಿತ್ತು.

ಪ್ರಾರಂಭವಾಗಿ ಎರಡು ವರ್ಷಗಳು ಪೂರ್ಣಗೊಂಡ ನಂತರ, ಯೋಜನೆಯನ್ನು 01.07.2020 ರಿಂದ 30.06.2021 ರವರೆಗೆ ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಯಿತು. ಇದನ್ನು ಈ ಮೊದಲು 30.06.2022 ರವರೆಗೆ ಮತ್ತು ನಂತರ 30.06.2024 ರವರೆಗೆ ವಿಸ್ತರಿಸಲಾಯಿತು.

ಇದಲ್ಲದೆ, ಈ ಯೋಜನೆಯನ್ನು ಪುನಃ 01.07.2024 ರಿಂದ 30.06.2026 ರವರೆಗೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲಾಗಿದೆ.

ಅಖಿಲ ಭಾರತ ಮಟ್ಟದಲ್ಲಿ ಆಧಾರದ ಮೇಲೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿ.ಎಂ.ಜೆ.ಎ,ವೈ) ನೊಂದಿಗೆ ಸಹಯೋಗದೊಂದಿಗೆ ಒಮ್ಮುಖ ಕಾರ್ಯಕ್ರಮದ ಅಡಿಯಲ್ಲಿ ಇ.ಎಸ್.ಐ.ಸಿ ಫಲಾನುಭವಿಗಳಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸಲಾಗುವುದು.

ಈ ನಿರ್ಧಾರವು, ದೇಶದ ಆರೋಗ್ಯ ಸೇವೆಯಿಲ್ಲದ/ಕೊರತೆಯ ಪ್ರದೇಶಗಳಲ್ಲಿ ಇ.ಎಸ್.ಐ.ಸಿ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿ.ಎಂ.ಜೆ.ಎ,ವೈ) ನ ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಹಾಯ ಮಾಡುತ್ತದೆ. ಪಿ.ಎಂ.ಜೆ.ಎ,ವೈ  ಅಡಿಯಲ್ಲಿ ಎಂಪನೆಲ್ಡ್ ಮಾಡಲಾದ ಆಸ್ಪತ್ರೆಗಳಲ್ಲಿ ಇ.ಎಸ್.ಐ.ಸಿ ಯ ವಿಮಾದಾರರಿಗೆ ಉಚಿತ ಚಿಕಿತ್ಸೆಗಾಗಿ ಯಾವುದೇ ವೆಚ್ಚದ ಮಿತಿ ಇರುವುದಿಲ್ಲ.

ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ಯಾರಾ-ಮೆಡಿಕಲ್ ಮತ್ತು ಬಿ.ಎಸ್ಸಿ. (ನರ್ಸಿಂಗ್) ಕೋರ್ಸ್ಗಳ ಪ್ರಾರಂಭವಾಗಲಿದೆ

ಇ.ಎಸ್.ಐ ಕಾರ್ಪೊರೇಶನ್ ಪ್ಯಾರಾ-ಮೆಡಿಕಲ್ ಮತ್ತು ಬಿಎಸ್ಸಿ (ನರ್ಸಿಂಗ್) ಕೋರ್ಸ್ಗಳನ್ನು ಇಎಸ್ಐಸಿ ವೈದ್ಯಕೀಯ ಕಾಲೇಜು ಅಲ್ವಾರ್ (ರಾಜಸ್ಥಾನ), ಬಿಹ್ತಾ (ಬಿಹಾರ), ಫರಿದಾಬಾದ್ (ಹರಿಯಾಣ), ಜೋಕಾ (ಪಶ್ಚಿಮ ಬಂಗಾಳ), ಕೆ.ಕೆ. ನಗರ (ತಮಿಳುನಾಡು), ಸನತ್ನಗರ (ತೆಲಂಗಾಣ) ಮತ್ತು ರಾಜಾಜಿನಗರ (ಕರ್ನಾಟಕ)ಗಳಲ್ಲಿ ಪ್ರಾರಂಭ ಮಾಡಲಿದೆ.

ಎ.ಐ.ಐ.ಎಂ.ಎಸ್. ನೇಮಕಾತಿ ನೀತಿಗೆ ಅನುಗುಣವಾಗಿ ನೋರ್ಸೆಟ್  ಮೂಲಕ ನರ್ಸಿಂಗ್ ಸಿಬ್ಬಂದಿಗಳ ನೇಮಕಾತಿ

ಎ.ಐ.ಐ.ಎಂ.ಎಸ್. ನಿಂದ ಆಯೋಜಿಸಲಾದ ನೋರ್ಸೆಟ್ ಮೂಲಕ ನರ್ಸಿಂಗ್ ಸಿಬ್ಬಂದಿಗಳ ನೇಮಕಾತಿಯನ್ನು ನಡೆಸಲು ಎ.ಐ.ಐ.ಎಂ.ಎಸ್. ನೇಮಕಾತಿ ನೀತಿಗೆ ಅನುಗುಣವಾಗಿ ನರ್ಸಿಂಗ್ ಸಿಬ್ಬಂದಿ ಹುದ್ದೆಗೆ ನೇಮಕಾತಿಯನ್ನು ಅಳವಡಿಸಿಕೊಳ್ಳಲು ಇ.ಎಸ್.ಐ. ಕಾರ್ಪೊರೇಶನ್ ಅನುಮೋದಿಸಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಇ.ಎಸ್.ಐ.ಸಿ ಆಸ್ಪತ್ರೆಗಳು/ಕಾಲೇಜುಗಳು ಮತ್ತು ಡಿಸ್ಪೆನ್ಸರಿಗಳಲ್ಲಿ ದಾದಿಯರ ಕೊರತೆ ಮತ್ತು ಖಾಲಿ ಹುದ್ದೆಗಳಿಲ್ಲ ಎಂದು ಇದು ಖಚಿತಪಡಿಸುತ್ತದೆ.

ವಿವಿಧ ಸ್ಥಳಗಳಲ್ಲಿ ಆಸ್ಪತ್ರೆಗಳು/ಡಿಸ್ಪೆನ್ಸರಿಗಳು/ಡಿ.ಸಿ.ಬಿ.ಒಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಇ.ಎಸ್.ಐ. ಕಾರ್ಪೊರೇಷನ್ ಅನುಮೋದಿಸಲಾಗಿದೆ

ಇ.ಎಸ್.ಐ.ಸಿ ಮೂಲಸೌಕರ್ಯವನ್ನು ಬಲಪಡಿಸಿದ ನಂತರ, ನೂತನ ಮಾನದಂಡಗಳನ್ನು ವಿಶ್ಲೇಷಿಸಿದ ನಂತರ ಮತ್ತು ವಿಮಾದಾರ ಕಾರ್ಮಿಕರ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನಿಗಮವು ಈ ಕೆಳಗಿನ ಯೋಜನೆಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಗಳನ್ನು ಅನುಮೋದಿಸಿತು: -

(i) ಆಂಧ್ರಪ್ರದೇಶದ ಗುಂಟೂರಿನಲ್ಲಿ 100 ಹಾಸಿಗೆಗಳ ಇ.ಎಸ್.ಐ. ಆಸ್ಪತ್ರೆ

(ii) ಉತ್ತರ ಪ್ರದೇಶದ ಫತೇಪುರ್ನಲ್ಲಿರುವ 01 ಡಾಕ್ಟರ್ ಗಳನ್ನು ಹೊಂದಿದ ಡಿಸ್ಪೆನ್ಸರಿ

(iii) ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಡಿಸಿಬಿಒ

(iv) ಮಹಾರಾಷ್ಟ್ರ ಪುಣೆಯಲ್ಲಿ 350 ಹಾಸಿಗೆಗಳ ಇ.ಎಸ್.ಐ. ಆಸ್ಪತ್ರೆ

(v) ಅಸ್ಸಾಂ ನ ಧುಬ್ರಿಯಲ್ಲಿ ಇ.ಎಸ್.ಐ. ಡಿಸ್ಪೆನ್ಸರಿ ಮತ್ತು ಬ್ರಾಂಚ್ ಆಫೀಸ್ 

(vi) ಬಿಹಾದ ಮುಜಾಫರ್ಪುರದಲ್ಲಿ 100 ಹಾಸಿಗೆಗಳ ಇ.ಎಸ್.ಐ. ಆಸ್ಪತ್ರೆ

(vii) ಉತ್ತರ ಪ್ರದೇಶದ ಔರೈಯಾದಲ್ಲಿ ಡಿಸಿಬಿಒ
 

ಇದಲ್ಲದೆ, ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್-56 ದಲ್ಲಿರುವ ಇ.ಎಸ್.ಐ.ಸಿ ವಸತಿ ಕಾಲೋನಿಯಲ್ಲಿ 717 ಹೊಸ ಸಿಬ್ಬಂದಿ ವಸತಿ ಗಳ ನಿರ್ಮಾಣಕ್ಕೂ ಅನುಮೋದನೆ ನೀಡಲಾಗಿದೆ.

ವೈದ್ಯಕೀಯ ಆರೈಕೆ ಸೇವೆಗಳು, ಆಡಳಿತ, ಹಣಕಾಸಿನ ವಿಷಯಗಳ ಸುಧಾರಣೆಗೆ ಸಂಬಂಧಿಸಿದ ವಿವಿಧ ಕಾರ್ಯಸೂಚಿ ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ನಡೆಯುತ್ತಿರುವ ನಿರ್ಮಾಣ ಯೋಜನೆಗಳ ಪ್ರಗತಿ ಪರಿಶೀಲನೆ ಕೂಡಾ ಸಭೆಯಲ್ಲಿ ಮಾಡಲಾಯಿತು.

ಇ.ಎಸ್.ಐ ಕಾರ್ಪೊರೇಶನ್ ನ 194 ನೇ ಸಭೆಯಲ್ಲಿ ಎಂ.ಎಸ್. ಡೋಲಾ ಸೇನ್, ಸಂಸದರು (ರಾಜ್ಯಸಭೆ), ಶ್ರೀ ಪ್ರವೀಣ್ ಖಂಡೇಲ್ವಾಲ್, ಸಂಸದರು (ಲೋಕಸಭಾ), ಶ್ರೀ ಎನ್.ಕೆ. ಪ್ರೇಮಚಂದ್ರನ್, ಸಂಸದರು (ಲೋಕಸಭೆ), ಶ್ರೀಮತಿ ಸುಮಿತಾ ದಾವ್ರಾ, ಕಾರ್ಯದರ್ಶಿ (ಎಲ್& ಇ) ಮತ್ತು ಶ್ರೀ ಅಶೋಕ್ ಕುಮಾರ್ ಸಿಂಗ್, ಮಹಾನಿರ್ದೇಶಕರು, ಇ.ಎಸ್.ಐ.ಸಿ,  ರಾಜ್ಯ ಸರ್ಕಾರಗಳ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು, ಉದ್ಯೋಗದಾತರ ಪ್ರತಿನಿಧಿಗಳು, ಉದ್ಯೋಗಿಗಳು ಮತ್ತು ವೈದ್ಯಕೀಯ ಕ್ಷೇತ್ರದ ತಜ್ಞರು ಉಪಸ್ಥಿತರಿದ್ದರು.
 

*****

 


(Release ID: 2063387) Visitor Counter : 42