ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಉದ್ಯೋಗ ದತ್ತಾಂಶ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಡಾ. ಮನ್ಸುಖ್ ಮಾಂಡವಿಯಾ


ಉದ್ಯೋಗ ದತ್ತಾಂಶ ಮತ್ತು ಅದರ ವಿಶ್ಲೇಷಣೆಗಳ ಸಂಗ್ರಹಕ್ಕಾಗಿ ಕಾರ್ಯವಿಧಾನದ ಮೇಲೆ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ 

Posted On: 08 OCT 2024 3:30PM by PIB Bengaluru

ಕೇಂದ್ರ ಕಾರ್ಮಿಕ, ಉದ್ಯೋಗ ಮತ್ತು ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು 07.10.2024 ರಂದು ನವದೆಹಲಿಯಲ್ಲಿ ಉದ್ಯೋಗ ದತ್ತಾಂಶ ಮತ್ತು ಸಾಗರೋತ್ತರ ವಲಸೆ ಪ್ರವೃತ್ತಿಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲ್ಪಟ್ಟ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು. 

ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ನೀತಿ ಆಯೋಗದೊಂದಿಗಿನ ಚರ್ಚೆಗಳು ಸಾಗರೋತ್ತರ ಉದ್ಯೋಗ ಮತ್ತು ದೇಶೀಯ ಉದ್ಯೋಗ ಸೃಷ್ಟಿ ಎರಡಕ್ಕೂ ಸಮನ್ವಯ ಮತ್ತು ದತ್ತಾಂಶ ಸಮೀಕರಣವನ್ನು ಬಲಪಡಿಸುವ ಗುರಿ ಹೊಂದಿದ್ದು, ಜೊತೆಗೆ ನೇಮಕಾತಿ ಸಂಸ್ಥೆಗಳ ಮೇಲ್ವಿಚಾರಣೆ ಮತ್ತು ವಿದೇಶದಲ್ಲಿ ಉದ್ಯೋಗಕ್ಕಾಗಿ ಕೌಶಲ್ಯ ಅಗತ್ಯತೆಗಳನ್ನು ಹೆಚ್ಚಿಸುವ ಗುರಿ ಹೊಂದಿದೆ.

ವಿದೇಶಗಳಲ್ಲಿ ಉದ್ಯೋಗ/ಇಸಿಆರ್ ಅಧ್ಯಯನ/ಇಸಿಆರ್ ಅಲ್ಲದೇ ದೇಶಗಳಿಗೆ ತೆರಳುವ ನಾಗರಿಕರಿಗೆ ಸಮಗ್ರ ದತ್ತಾಂಶ ದೊರೆಯಲಿದೆ. ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್) ಪೋರ್ಟಲ್, ಮೈ ಭಾರತ್ ವೇದಿಕೆ, ಎಂಎಡಿಎಡಿ, ಇಮೈಗ್ರೇಟ್, ಇಶ್ರಮ್ ಪೋರ್ಟಲ್, ರಾಜ್ಯ ಪೋರ್ಟಲ್  ಇತ್ಯಾದಿಗಳ ಏಕೀಕರಣವು ಉದ್ಯೋಗದ ಪೂರೈಕೆ ಮತ್ತು ಬೇಡಿಕೆಯ ಭಾಗದ ಸಮಗ್ರ ದೃಷ್ಟಿಕೋನಕ್ಕಾಗಿ ಇರಬೇಕು ಎಂದು ಸಚಿವರು ಸಲಹೆ ನೀಡಿದರು.

ಉದ್ಯೋಗ ದತ್ತಾಂಶವನ್ನು ಒಟ್ಟುಗೂಡಿಸುವಲ್ಲಿ ಉದ್ಯಮ ಸಂಘಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಸಚಿವರು ಒತ್ತಿ ಹೇಳಿದರು. ವಿವಿಧ ಸಚಿವಾಲಯಗಳಿಂದ ಉದ್ಯೋಗ ಸಂಬಂಧಿತ ದತ್ತಾಂಶಗಳನ್ನು ಸಂಗ್ರಹಿಸಲು ಅನುಕೂಲವಾಗುವಂತಹ ಆವರಣ ಸಂಸ್ಥೆಯಾಗಿ ನೀತಿ ಆಯೋಗದ ಪಾತ್ರವನ್ನು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು.  

ವಿದೇಶಿ ಉದ್ಯೋಗದಾತರೊಂದಿಗಿನ ಒಪ್ಪಂದಗಳನ್ನು ಪ್ರಮಾಣೀಕರಿಸಬೇಕು ಮತ್ತು ಅದರ ನಿಬಂಧನೆಗನ್ನು ಪರಿಣಾಮಕಾರಿಗೊಳಿಸುವ ಬಗ್ಗೆ ಪ್ರತಿಕ್ರಿಯೆಯನ್ನು ಪಡೆಯಲು ವಲಸೆ ಮತ್ತು ಚಲನಶೀಲ ಪಾಲುದಾರಿಕೆ ವ್ಯವಸ್ಥೆಗಳು (ಎಂಎಂಪಿಎ) ಮತ್ತು ಸಾಮಾಜಿಕ ಭದ್ರತಾ ಒಪ್ಪಂದಗಳನ್ನು (ಎಸ್ಎಸ್ಎ) ಪರಿಶೀಲಿಸಬೇಕು ಎಂದು ಒತ್ತಿ ಹೇಳಿದರು. 

ಉದ್ಯೋಗ ಕುರಿತಂತೆ ದೇಶದ ವಿವಿಧ ಪೋರ್ಟಲ್ ಗಳ ಬಗೆಗಿನ ಅಧ್ಯಯನ ವರದಿಯ ಒಳನೋಟವನ್ನು ನೀತಿ ಆಯೋಗ ಹಂಚಿಕೊಂಡಿದ್ದು, ಸರ್ಕಾರದ ಯೋಜನೆಗಳು ಮತ್ತು ವಲಯಗಳಡಿ ಸಮಗ್ರವಾಗಿ ಉದ್ಯೋಗ ಸೃಜನೆಗಾಗಿ ಏಕರೂಪ ವೇದಿಕೆಗಳು ಅಗತ್ಯವಾಗಿವೆ ಎಂದು ಒತ್ತಿ ಹೇಳಿದರು. 

ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ ದತ್ತಾಂಶ ಅಂತರವನ್ನು ತಗ್ಗಿಸಿ ಸೇತುವೆ ನಿರ್ಮಿಸಲು ಸರ್ಕಾರದ ಬದ್ಧತೆಯನ್ನು ಸಾಕಾರಗೊಳಿಸಲು ಈ ಸಭೆ ಒತ್ತು ನೀಡಿತು ಮತ್ತು ಸಮಗ್ರ, ಬಹುಹಂತದ ಉದ್ಯೋಗ ದತ್ತಾಂಶ ಪೋರ್ಟಲ್ ಸೂಕ್ತ ನೀತಿ ಮತ್ತು ಉದ್ಯೋಗ ಸೃಜನೆಯ ಉಪಕ್ರಮಗಳನ್ನು ಇದು ಒಳಗೊಂಡಿತ್ತು. 

ಉದ್ಯೋಗ ದತ್ತಾಂಶದಲ್ಲಿ ಸಮನ್ವಯವನ್ನು ಬಲಪಡಿಸಲು, ಸಾಗರೋತ್ತರ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಮತ್ತು ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಭದ್ರತೆಗೆ ಬಲವಾದ ಬದ್ಧತೆಯೊಂದಿಗೆ ಸಭೆಯನ್ನು ಸಮಾಪ್ತಿಗೊಳಿಸಲಾಯಿತು. ಪ್ರಸ್ತಾವಿತ ಏಕೀಕೃತ ಉದ್ಯೋಗ ದತ್ತಾಂಶ ಪೋರ್ಟಲ್ ಉದ್ಯೋಗದ ದತ್ತಾಂಶವನ್ನು ಕೇಂದ್ರೀಕರಿಸುವಲ್ಲಿ ಪರಿವರ್ತಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಇಮೈಗ್ರೇಟ್ ಮತ್ತು ಎನ್.ಸಿ.ಎಸ್ ಏಕೀಕರಣವು ಅಂತರರಾಷ್ಟ್ರೀಯ ಉದ್ಯೋಗ ಮಾರುಕಟ್ಟೆಗಳಿಗೆ ಪ್ರವೇಶವನ್ನು ವಿಸ್ತರಿಸುತ್ತದೆ. 

 

*****



(Release ID: 2063220) Visitor Counter : 24