ಕೃಷಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿಯವರು 5ನೇ ಅಕ್ಟೋಬರ್ 2024 ರಂದು ಮಹಾರಾಷ್ಟ್ರದ ವಾಶಿಮ್ ನಲ್ಲಿ ಪಿಎಂ-ಕಿಸಾನ್  ಯೋಜನೆಯ 18 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ


9.4 ಕೋಟಿಗೂ ಹೆಚ್ಚು ರೈತರು ನೇರ ವರ್ಗಾವಣೆಯಲ್ಲಿ 20,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ

ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆ (ಮಹಾರಾಷ್ಟ್ರ ಸರ್ಕಾರ) ಯ 5 ನೇ ಕಂತು ವಿತರಣೆ 

ಕೃಷಿ ಮೂಲಸೌಕರ್ಯ ನಿಧಿಯಡಿ ಪೂರ್ಣಗೊಂಡ 7516 ಯೋಜನೆಗಳ ಉದ್ಘಾಟನೆ

ಸುಮಾರು 9,200 ಎಫ್ ಪಿಒಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು

ಜಾನುವಾರು ಮತ್ತು ಸ್ಥಳೀಯ ಲಿಂಗ ವಿಂಗಡಣೆ ಮಾಡಿದ ವೀರ್ಯ ತಂತ್ರಜ್ಞಾನಕ್ಕಾಗಿ ಸಂಯೋಜಿತ ಜೀನೋಮಿಕ್ ಚಿಪ್ ಬಿಡುಗಡೆ

ಗ್ರಾಮ ಪಂಚಾಯಿತಿಗೆ ಸಾಮಾಜಿಕ ಅಭಿವೃದ್ಧಿ ಅನುದಾನದ ಇ-ವಿತರಣೆ

ಎಂಎಸ್ ಕೆವಿವೈ 2.0 ಅಡಿಯಲ್ಲಿ 19 ಮೆ.ವ್ಯಾ ಒಟ್ಟು 5 ಸೌರ ಪಾರ್ಕ್ಗಳು ರಾಷ್ಟ್ರಕ್ಕೆ ಸಮರ್ಪಣೆ

Posted On: 04 OCT 2024 1:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 18 ನೇ ಕಂತನ್ನು 5 ಅಕ್ಟೋಬರ್ 2024 ರಂದು ಮಹಾರಾಷ್ಟ್ರದ ವಾಶಿಮ್ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಮಹತ್ವದ  ಕಾರ್ಯಕ್ರಮದಲ್ಲಿ ದೇಶಾದ್ಯಂತ 9.4 ಕೋಟಿಗೂ ಹೆಚ್ಚು ರೈತರು ನೇರ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ, ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ₹ 20,000 ಕೋಟಿಗೂ ಹೆಚ್ಚು ಮೊತ್ತವನ್ನು ಪಡೆಯುತ್ತಾರೆ.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಸಿ.ಪಿ. ರಾಧಾಕೃಷ್ಣನ್, ಕೇಂದ್ರ ಕೃಷಿ ಸಚಿವರಾದ  ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ರಾಜೀವ್ ರಂಜನ್ ಸಿಂಗ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ಶ್ರೀ ಅಜಿತ್ ಪವಾರ್ ಮತ್ತು ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವ ಶ್ರೀ ಸಂಜಯ್ ರಾಥೋಡ್, ವಾಶಿಮ್ ಮತ್ತು ಯವತ್ಮಾಲ್ ಜಿಲ್ಲೆಗಳ  ಉಸ್ತುವಾರಿ ಸಚಿವರೂ ಆಗಿದ್ದಾರೆ. 732 ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), 1 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಮತ್ತು ದೇಶಾದ್ಯಂತ 5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ವೆಬ್ ಕಾಸ್ಟ್ ಮೂಲಕ ಸುಮಾರು 2.5 ಕೋಟಿ  ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಬಿಡುಗಡೆಯ ದಿನವನ್ನು ಪಿಎಂ-ಕಿಸಾನ್ ಉತ್ಸವ ದಿವಸ ಎಂದು ಆಚರಿಸುವ ವಿಶೇಷ ಕಾರ್ಯಕ್ರಮಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತದೆ.

ಫೆಬ್ರವರಿ 24, 2019 ರಂದು ಪ್ರಾರಂಭವಾದ ಪಿಎಂ-ಕಿಸಾನ್ ಯೋಜನೆಯು ಮೂರು ಸಮಾನ ಕಂತುಗಳಲ್ಲಿ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕವಾಗಿ ₹ 6,000 ಒದಗಿಸುತ್ತದೆ. ಪ್ರಧಾನಮಂತ್ರಿಯವರು ಪಿಎಂ-ಕಿಸಾನ್ ನ 18 ನೇ ಕಂತನ್ನು ಅಕ್ಟೋಬರ್ 5 ರಂದು ಬಿಡುಗಡೆ ಮಾಡಲಿದ್ದಾರೆ. 18 ನೇ ಕಂತಿನ ಬಿಡುಗಡೆಯೊಂದಿಗೆ, ಯೋಜನೆಯಡಿಯಲ್ಲಿ ಒಟ್ಟು ವಿತರಣೆಯು ₹ 3.45 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ, ಇದು ರಾಷ್ಟ್ರವ್ಯಾಪಿ 11 ಕೋಟಿಗೂ ಹೆಚ್ಚು ರೈತರಿಗೆ ಬೆಂಬಲ ನೀಡುತ್ತದೆ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ಪುನರುಚ್ಚರಿಸುತ್ತದೆ.

ಮಹಾರಾಷ್ಟ್ರದಲ್ಲಿ, ಯೋಜನೆಯ 17 ಕಂತುಗಳಲ್ಲಿ ಸುಮಾರು 1.20 ಕೋಟಿ ರೈತರಿಗೆ ಸುಮಾರು ₹ 32,000 ಕೋಟಿಗಳನ್ನು ವರ್ಗಾಯಿಸಲಾಗಿದೆ, ಇದು ಭಾರತದ ಎಲ್ಲಾ ರಾಜ್ಯಗಳಲ್ಲಿ ಎರಡನೇ ಅತಿ ಹೆಚ್ಚು ವಿತರಣೆಯಾಗಿದೆ. 18ನೇ ಕಂತಿನಲ್ಲಿ ಸುಮಾರು 91.51 ಲಕ್ಷ ರೈತರು ₹1,900 ಕೋಟಿಗೂ ಅಧಿಕ ಪ್ರಯೋಜನ ಪಡೆಯಲಿದ್ದಾರೆ.

ಪಿಎಂ-ಕಿಸಾನ್ ಕಂತಿನ ವಿತರಣೆಯ ಜೊತೆಗೆ, ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆಯ 5 ನೇ ಕಂತಿನ ಅಡಿಯಲ್ಲಿ ಮಹಾರಾಷ್ಟ್ರದ ರೈತರಿಗೆ ಅವರ ಪ್ರಯತ್ನಗಳನ್ನು ಮತ್ತಷ್ಟು ಬೆಂಬಲಿಸಲು ಸುಮಾರು ₹ 2,000 ಕೋಟಿಯ ಹೆಚ್ಚುವರಿ ಪ್ರಯೋಜನವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ.

ಇದಲ್ಲದೆ, ಕೃಷಿ ಮೂಲಸೌಕರ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಹೊಸ ಸರ್ಕಾರದ ಮೊದಲ 100 ದಿನಗಳಲ್ಲಿ ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಅಡಿಯಲ್ಲಿ ಪೂರ್ಣಗೊಂಡ ಹಲವಾರು ಯೋಜನೆಗಳ ಸಮರ್ಪಣೆಗೆ ಈ ಕಾರ್ಯಕ್ರಮವು ಸಾಕ್ಷಿಯಾಗಲಿದೆ. 2020 ರಲ್ಲಿ ಪ್ರಾರಂಭಿಸಲಾದ ಕೃಷಿ ಮೂಲಸೌಕರ್ಯ ನಿಧಿ (ಎಐಎಫ್AIF), ಸುಗ್ಗಿಯ ನಂತರದ ನಿರ್ವಹಣೆ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಆಸ್ತಿಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮಧ್ಯಮದಿಂದ ದೀರ್ಘಾವಧಿಯ ಸಾಲದ ಹಣಕಾಸು ಸೌಲಭ್ಯವಾಗಿದೆ. ಈ ಯೋಜನೆಯು ಅರ್ಹ ಸಾಲಗಾರರಿಗೆ 3% ಬಡ್ಡಿ ರಿಯಾಯಿತಿ ಮತ್ತು ಕ್ರೆಡಿಟ್ ಗ್ಯಾರಂಟಿ ಸೌಲಭ್ಯದೊಂದಿಗೆ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಸಾಲದ ರೂಪದಲ್ಲಿ ಒದಗಿಸುತ್ತದೆ. ಕಳೆದ 100 ದಿನಗಳಲ್ಲಿ, 10,066 ಕ್ಕೂ ಹೆಚ್ಚು ಕೃಷಿ-ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರವ್ಯಾಪಿ ಮಂಜೂರು ಮಾಡಲಾಗಿದೆ,  ಇದರಲ್ಲಿ ₹ 6,541 ಕೋಟಿ ಮಂಜೂರಾತಿಯನ್ನು ಒಳಗೊಂಡಿದೆ (ಎಫ್ ಪಿಒ ಗಳಿಗೆ 101 ಯೋಜನೆಗಳು ₹ 97.67 ಕೋಟಿ ಮಂಜೂರಾತಿ ಮೊತ್ತದೊಂದಿಗೆ). ಹೆಚ್ಚುವರಿಯಾಗಿ, ಒಟ್ಟು ₹1,929 ಕೋಟಿ ಮಂಜೂರಾತಿಯೊಂದಿಗೆ 7,516 ಯೋಜನೆಗಳು ಪೂರ್ಣಗೊಂಡಿದ್ದು, ₹13.82 ಕೋಟಿ ಮೌಲ್ಯದ 35 ಎಫ್ ಪಿಒ ಯೋಜನೆಗಳನ್ನು ಸಮರ್ಪಿಸಲಾಗುವುದು. ಈ ಯೋಜನೆಗಳು ಕೃಷಿ ಮೂಲಸೌಕರ್ಯವನ್ನು ಬಲಪಡಿಸುವುದು, ಸಂಗ್ರಹಣೆ ಮತ್ತು ಸಂಸ್ಕರಣೆ ಮತ್ತು ಸಾಗಾಣಿಕೆ  ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ಎಫ್ ಪಿಒ ಗಳನ್ನು ಕಾರ್ಯಾಚರಣೆಯನ್ನು  ವಿಸ್ತರಿಸಲುಅನುವು ಮಾಡಿಕೊಡುತ್ತದೆ, ಒಟ್ಟಾರೆಯಾಗಿ ರೈತರು ಮತ್ತು ಕೃಷಿ ವಲಯಕ್ಕೆ ಗಮನಾರ್ಹವಾದ ಪ್ರಯೋಜನವನ್ನು ನೀಡುತ್ತದೆ.

ಬಲವಾದ ಮೌಲ್ಯ ಪೂರೈಕೆ ಸರಪಳಿಯನ್ನು ಸ್ಥಾಪಿಸಲು ಮತ್ತು ಸಣ್ಣ, ಕನಿಷ್ಠ ಮತ್ತು ಭೂರಹಿತ ರೈತರಿಗೆ ಬೆಂಬಲ ನೀಡಲು, ಭಾರತ ಸರ್ಕಾರವು 10,000 ಎಫ್ ಪಿಒಗಳ ರಚನೆ ಮತ್ತು ಪ್ರಚಾರಕ್ಕಾಗಿ ಕೇಂದ್ರ ವಲಯ ಯೋಜನೆಯನ್ನು (ಸಿಎಸ್ ಎಸ್) ಪ್ರಾರಂಭಿಸಿತು, ಇದು ದೇಶದ ಪ್ರತಿಯೊಂದು ಬ್ಲಾಕ್ ಅನ್ನು ಒಳಗೊಂಡಿದೆ. ಇಲ್ಲಿಯವರೆಗೆ, ಸುಮಾರು 9,200 ಎಫ್ ಪಿಒಗಳನ್ನು ರಚಿಸಲಾಗಿದ್ದು, 8.3 ಲಕ್ಷ ಮಹಿಳೆಯರು ಮತ್ತು 5.77 ಲಕ್ಷ ಎಸ್ಟಿ ಮತ್ತು ಎಸ್ಸಿ ಫಲಾನುಭವಿಗಳು ಸೇರಿದಂತೆ 24 ಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಎಫ್ಪಿಒಗಳು ಈಗ ವಾರ್ಷಿಕ ₹1,300 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದ್ದು, ಈ ಕಾರ್ಯಕ್ರಮದ ವೇಳೆ ಅವುಗಳನ್ನು ಪ್ರಧಾನಮಂತ್ರಿಯವರುಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಮಂತ್ರಿಯವರ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ದ ದೃಷ್ಟಿಗೆ ಅನುಗುಣವಾಗಿ, ಸ್ಥಳೀಯ ಲಿಂಗ-ವಿಂಗಡಣೆಯ ವೀರ್ಯ ಉತ್ಪಾದನಾ ತಂತ್ರಜ್ಞಾನಕ್ಕೂ ಸಹ ಸಮಾರಂಭದಲ್ಲಿ ಚಾಲನೆ ನೀಡಲಾಗುವುದು. ಈ ಕೈಗೆಟುಕುವ ತಂತ್ರಜ್ಞಾನವು ರೈತರಿಗೆ ಲಿಂಗ-ವಿಂಗಡಿಸಿದ ವೀರ್ಯದ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಪ್ರತಿ ಡೋಸ್ ಗೆ ಅಂದಾಜು ₹200 ವೆಚ್ಚವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್ ಡಿ) ಅಭಿವೃದ್ಧಿಪಡಿಸಿದ ಸಂಯೋಜಿತ ಜೀನೋಮಿಕ್ ಚಿಪ್ - ದನಗಳಿಗೆ 'ಗೌ ಚಿಪ್' ಮತ್ತು ಎಮ್ಮೆಗಳಿಗೆ 'ಮಹಿಷ್ ಚಿಪ್' ಅನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ. ಭಾರತೀಯ ತಳಿಗಳಿಗೆ ಅನುಗುಣವಾಗಿ ಈ ಚಿಪ್, ಚಿಕ್ಕ ವಯಸ್ಸಿನಲ್ಲೇ ಯುವ, ಉತ್ತಮ ಗುಣಮಟ್ಟದ ಎತ್ತುಗಳನ್ನು ಗುರುತಿಸುವ ಮೂಲಕ, ಭಾರತದಲ್ಲಿ ಹೈನುಗಾರಿಕೆಯ ಸಾಮರ್ಥ್ಯವನ್ನು ಸುಧಾರಿಸುವ ಮೂಲಕ ಪ್ರಾಣಿಗಳ ಆಯ್ಕೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ರೈತರಿಗೆ ಅನುವು ಮಾಡಿಕೊಡುತ್ತದೆ.

ಕುಸುಮ್ – ಸಿ (ಎಂಎಸ್ ಕೆವವೈ 2.0) ಯೋಜನೆಯಡಿಯಲ್ಲಿ ಸುಮಾರು 3,000 ಮೆ.ವ್ಯಾ  ಗಾಗಿ ಪ್ರಶಸ್ತಿ ಪತ್ರಗಳ ಇ-ವಿತರಣೆ ಮತ್ತು ಗ್ರಾಮ ಪಂಚಾಯತ್ ಗಳಿಗೆ ಸಾಮಾಜಿಕ ಅಭಿವೃದ್ಧಿ ಅನುದಾನಗಳ ಇ-ವಿತರಣೆಯನ್ನು ಪ್ರಧಾನ ಮಂತ್ರಿಯವರು  ಮಾಡಲಿದ್ದಾರೆ. ಎಂಎಸ್ ಕೆವವೈ 2.0 ಅಡಿಯಲ್ಲಿ ಒಟ್ಟು 19 ಮೆ.ವ್ಯಾ  ಸಾಮರ್ಥ್ಯದ ಐದು ಸೌರ ಪಾರ್ಕ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು, ಇದು ಸುಸ್ಥಿರ ವಿದ್ಯುತ್ ಪರಿಹಾರಗಳಿಗೆ  ನೆರವಾಗುತ್ತದೆ ಮತ್ತು ರೈತರಿಗೆ ಹಗಲಿನ ವಿದ್ಯುತ್ ಮತ್ತು ಹೆಚ್ಚುವರಿ ಆದಾಯದ ಮೂಲವನ್ನು ಭೂಮಿ ಗುತ್ತಿಗೆಯ ಮೂಲಕ ಒದಗಿಸುತ್ತದೆ.

5 ಸೌರ ಉದ್ಯಾನವನಗಳು ಈ ಕೆಳಗಿನಂತಿವೆ:

(i) ಧೋಂಡಲಗಾಂವ್, ಚಾ. ಸಂಭಾಜಿ ನಗರ-3 ಮೆ.ವ್ಯಾ

(ii) ಬಾಮ್ನಿ ಬಿಕೆ. ನಾಂದೇಡ್ - 5 ಮೆ.ವ್ಯಾ

(iii) ಕೊಂಡಗಿರಿ, ಕೊಲ್ಲಾಪುರ - 3 ಮೆ.ವ್ಯಾ

(iv) ಜಲಾಲಾಬಾದ್, ಅಕೋಲಾ - 3 ಮೆ.ವ್ಯಾ

(v) ಪಾಲ್ಶಿ ಬಿಕೆ. ಬುಲ್ಧಾನ - 5 ಮೆ.ವ್ಯಾ

 

*****


(Release ID: 2062267) Visitor Counter : 28