ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಆಕಾಶವಾಣಿಯು ‘ಸ್ವಚ್ಛತಾ ಹಿ ಸೇವಾʼಅಭಿಯಾನದ ಭಾಗವಾಗಿ ರೋಗ ತಡೆಗಟ್ಟುವ ಆರೋಗ್ಯ ತಪಾಸಣಾ ಶಿಬಿರಗಳು, ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳು ಮತ್ತು ಯೋಗ ತರಬೇತಿಯನ್ನು ಆಯೋಜಿಸಿತು


ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು, ಆರೋಗ್ಯಕರ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಮತ್ತು ಎಲ್ಲರಿಗೂ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಲು ಈ ಪ್ರಯತ್ನಗಳನ್ನು ಮಾಡಲಾಗುತ್ತಿದೆ

Posted On: 03 OCT 2024 9:27AM by PIB Bengaluru

ಸ್ವಚ್ಛತಾ ಹಿ ಸೇವಾ 2024 ಅಭಿಯಾನದ ಭಾಗವಾಗಿ, ಆಕಾಶವಾಣಿ, ನವದೆಹಲಿಯು ಎರಡು ದಿನಗಳ ಬೃಹತ್‌ ಪ್ರಮಾಣದ ರೋಗ ತಡೆಗಟ್ಟುವ ಆರೋಗ್ಯ ತಪಾಸಣೆ ಶಿಬಿರಗಳು, ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳು ಮತ್ತು ಸಫಾಯಿ ಮಿತ್ರರಿಗಾಗಿ ಯೋಗ ತರಬೇತಿಗಳನ್ನು 1-2 ಅಕ್ಟೋಬರ್, 2024 ರಲ್ಲಿ ಆಯೋಜಿಸಿತು. ಈ ಅಭಿಯಾನದ ಅಡಿಯಲ್ಲಿ , ನಮ್ಮ ಸ್ವಚ್ಛತಾ ಹೀರೋಗಳಿಗೆ ಹಲವಾರು ಆಸ್ಪತ್ರೆಗಳಿಂದ ಉಚಿತ ಕಣ್ಣು, ದಂತ, ಸ್ತ್ರೀರೋಗ, ಚರ್ಮ, ಜೀರ್ಣಾಂಗ ಮತ್ತು ಸಾಮಾನ್ಯ ತಪಾಸಣೆಗಳನ್ನು ಆಕಾಶವಾಣಿ ಆವರಣದಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಏರ್ಪಡಿಸಲಾಯಿತು.

ಸಫಾಯಿ ಮಿತ್ರರ ಆರೋಗ್ಯಕ್ಕಾಗಿ ಆಕಾಶವಾಣಿ ಮತ್ತು ಎಸ್ ಸಿ ಸಹಯೋಗ

ಸಫಾಯಿ ಮಿತ್ರರ ಜೊತೆ ದೀರ್ಘಾವಧಿಯ ಸಹಯೋಗಕ್ಕಾಗಿ ಫರಿದಾಬಾದ್ ನ ಇ ಎಸ್‌ ಐ ಸಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನೊಂದಿಗೆ (ಎನ್‌ ಐ ಟಿ) ಕೂಡ ಸಹಯೋಗವನ್ನು ಸ್ಥಾಪಿಸಲಾಗಿದೆ. ಇ ಎಸ್‌ ಐ ಸಿ ನಮ್ಮ ಸಫಾಯಿ ಮಿತ್ರರಿಗೆ ಉಚಿತ ಆನ್-ದಿ-ಸ್ಪಾಟ್ ನೋಂದಣಿಯನ್ನು ಒದಗಿಸಿತು, ಸಾಮಾನ್ಯ ಸಮಾಲೋಚನೆಗಾಗಿ ಹೊರರೋಗಿ ಸ್ಲಿಪ್‌ ಗಳು ಮತ್ತು ಸಾಮಾನ್ಯ ವೈದ್ಯರಿಂದ ಪ್ರಿಸ್ಕ್ರಿಪ್ಷನ್‌ ಗಳು ಮತ್ತು ಪರಿಣಿತ ಸಮಾಲೋಚನೆಗಾಗಿ ರೆಫರಲ್‌ (ಅಗತ್ಯವಿರುವಷ್ಟು) ಅನ್ನು ಒದಗಿಸಿದವು. ಪ್ರತಿ ಸಫಾಯಿ ಮಿತ್ರ ಅವರ ಎಲ್ಲಾ ಪ್ರಿಸ್ಕ್ರಿಪ್ಷನ್‌ ಗಳು ಮತ್ತು ಪರೀಕ್ಷಾ ವರದಿಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳಲು ವೈದ್ಯಕೀಯ ಕಡತವನ್ನು ರಚಿಸಲಾಗಿದೆ.

ಉಚಿತ ಆರೋಗ್ಯ ಪರೀಕ್ಷೆಗಳು ಮತ್ತು ಬಿ ಎಚ್ ದಾಖಲಾತಿ

ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 200 ನೈರ್ಮಲ್ಯ ಕಾರ್ಮಿಕರು, ಭದ್ರತಾ ಸಿಬ್ಬಂದಿ, ಹೊರಗುತ್ತಿಗೆ ಚಾಲಕರು ಮತ್ತು ಎಂಟಿಎಸ್ ಉದ್ಯೋಗಿಗಳಿಗೆ ಡಾ. ಲಾಲ್ ಪಾಥ್‌ಲ್ಯಾಬ್‌ ನಿಂದ ರಕ್ತ ಪರೀಕ್ಷೆ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಯಿತು. ಅಕ್ಟೋಬರ್ 1 ರಂದು, ಸಫಾಯಿ ಮಿತ್ರರು ಮತ್ತು ಪ್ರಸಾರ ಭಾರತಿಯ ಇತರ ಸಿಬ್ಬಂದಿಗಾಗಿ ಆಕಾಶವಾಣಿ ಭವನದಲ್ಲಿ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ದಾಖಲಾತಿಯೊಂದಿಗೆ ಆಯುಷ್ಮಾನ್ ಭಾರತ್ ಪಿಎಂಜೆಎವೈ ಮತ್ತು ಎ ಬಿ ಎಚ್‌ ಎ ಕಾರ್ಡ್ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಲು ಮತ್ತು ನೇರ ಪ್ರದರ್ಶನವನ್ನು ಒದಗಿಸಲು ಬೂತ್ ಅನ್ನು ಸ್ಥಾಪಿಸಲಾಯಿತು.

ನೈರ್ಮಲ್ಯ ಕಾರ್ಮಿಕರಿಗೆ ಯೋಗ ತರಬೇತಿ ಮತ್ತು ವಂಚನೆ ಕುರಿತ ಜಾಗೃತಿ

ನೈರ್ಮಲ್ಯ ಕಾರ್ಯಕರ್ತರಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ವಿದ್ಯಾರ್ಥಿಗಳ ತಂಡದೊಂದಿಗೆ ಕಚೇರಿಗಳಲ್ಲಿ ಎಲ್ಲಾ ನೈರ್ಮಲ್ಯ ಕಾರ್ಯಕರ್ತರಿಗೆ ಯೋಗ ತರಬೇತಿಯನ್ನು ಆಯೋಜಿಸಲಾಯಿತು. ಹೆಚ್ಚುವರಿಯಾಗಿ, ಕೋಟಕ್ ಮಹೀಂದ್ರಾ ಬ್ಯಾಂಕ್  ಸಹಯೋಗದೊಂದಿಗೆ ವಂಚನೆಯ ಬಗ್ಗೆ ಜಾಗೃತಿ ಮೂಡಿಸುವ ಸಂವಾದಾತ್ಮಕ ಅಧಿವೇಶನವನ್ನು ಆಯೋಜಿಸಲಾಯಿತು. ಇದರಲ್ಲಿ ಸುಮಾರು 50 ಅಧಿಕಾರಿಗಳು ಪಾಲ್ಗೊಂಡಿದ್ದರು.

ಸುರಕ್ಷಾ ಶಿಬಿರದಲ್ಲಿ ಮಹಿಳಾ ಸಫಾಯಿ ಮಿತ್ರರಿಗೆ ಉಚಿತ ಸ್ತ್ರೀರೋಗ ತಪಾಸಣೆ

ಸುರಕ್ಷಾ ಶಿಬಿರದಲ್ಲಿ, ಗುರುಗ್ರಾಮದ ಆರ್ಟೆಮಿಸ್ ಆಸ್ಪತ್ರೆಯ ಸಹಯೋಗದೊಂದಿಗೆ ಮಹಿಳಾ ಸಫಾಯಿ ಮಿತ್ರರಿಗೆ ಉಚಿತ ಸ್ತ್ರೀರೋಗ ತಪಾಸಣೆಯನ್ನು ನಡೆಸಲಾಯಿತು. ಈ ಉಪಕ್ರಮವು ಮಹಿಳಾ ನೈರ್ಮಲ್ಯ ಕಾರ್ಮಿಕರಲ್ಲಿ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಅವರಿಗೆ ಅಗತ್ಯ ವೈದ್ಯಕೀಯ ಆರೈಕೆಯ ಪ್ರವೇಶವನ್ನು ಖಚಿತಪಡಿಸುತ್ತದೆ. ಇದು ಪ್ರಮುಖ ಆರೋಗ್ಯ ಸೇವೆಗಳನ್ನು ನೀಡುವುದಲ್ಲದೆ ಮಹಿಳೆಯರ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿತು, ಸಫಾಯಿ ಮಿತ್ರರು ತಮ್ಮ ಆರೋಗ್ಯದ ಬಗ್ಗೆ ಆದ್ಯತೆ ನೀಡಲು ಮತ್ತು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು ಪ್ರೋತ್ಸಾಹಿಸಿತು.

ಸುರಕ್ಷಾ ಶಿಬಿರದಲ್ಲಿ ಸಫಾಯಿಮಿತ್ರರಿಗೆ ಉಚಿತ ನೇತ್ರ ತಪಾಸಣೆ ಸೌಲಭ್ಯ ಒದಗಿಸಲಾಯಿತು

ನಮ್ಮ ಸಫಾಯಿಮಿತ್ರರು ಪರಿಪೂರ್ಣ 6/6 ದೃಷ್ಟಿಯನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು, ಲಾರೆನ್ಸ್ ಮತ್ತು ಮೇಯೊ ಸಂಸ್ಥೆಯವರು ಸುರಕ್ಷಾ ಶಿಬಿರದ ಸಮಯದಲ್ಲಿ ಉಚಿತ ನೇತ್ರ ಪರೀಕ್ಷೆಯ ಸೌಲಭ್ಯವನ್ನು ನೀಡಿದರು. ಈ ಉಪಕ್ರಮವು ನೈರ್ಮಲ್ಯ ಕಾರ್ಮಿಕರಲ್ಲಿ ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳಿತು, ಅವರಿಗೆ ಅಗತ್ಯ ದೃಷ್ಟಿ ಆರೈಕೆಗೆ ಅವಕಾಶವನ್ನು ಒದಗಿಸಿತು.

ಆಕಾಶವಾಣಿ ನಿರ್ದೇಶನಾಲಯದಲ್ಲಿ ಸ್ವಚ್ಛತಾ ಸೆಲ್ಫಿ ಪಾಯಿಂಟ್ ಸ್ಥಾಪನೆ

ಸ್ವಚ್ಛತೆಯನ್ನು ಉತ್ತೇಜಿಸಲು ಮತ್ತು ಸ್ವಚ್ಛ ಭಾರತ ಅಭಿಯಾನದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಆಕಾಶವಾಣಿ ನಿರ್ದೇಶನಾಲಯದಲ್ಲಿ 'ಸ್ವಚ್ಛತಾ ಸೆಲ್ಫಿ ಪಾಯಿಂಟ್' ಅನ್ನು ಸ್ಥಾಪಿಸಲಾಯಿಗಿದೆ. ಇಲ್ಲಿ ಉದ್ಯೋಗಿಗಳು ಮತ್ತು ಸಂದರ್ಶಕರು ಸೆಲ್ಫಿ ತೆಗೆದುಕೊಳ್ಳಬಹುದು. ಇದು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಹೆಮ್ಮೆಯ ಭಾವವನ್ನು ಬೆಳೆಸುತ್ತದೆ. #SwachhataSelfie ಎಂಬ ಹ್ಯಾಶ್‌ಟ್ಯಾಗ್‌ ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ, ಭಾಗವಹಿಸುವವರು ಸ್ವಚ್ಛತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬಹುದು ಮತ್ತು ಇತರರನ್ನು ಆಂದೋಲನಕ್ಕೆ ಸೇರಲು ಪ್ರೇರೇಪಿಸಬಹುದು.

ಸ್ವಚ್ಛತಾ ಹಿ ಸೇವಾ ಅಭಿಯಾನದ ಅಡಿಯಲ್ಲಿ ಆಕಾಶವಾಣಿಯ ಉಪಕ್ರಮಗಳು ನೈರ್ಮಲ್ಯ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ರೋಗ ತಡೆಗಟ್ಟುವ ಆರೋಗ್ಯ ತಪಾಸಣಾ ಶಿಬಿರಗಳು, ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳು ಮತ್ತು ಯೋಗ ತರಬೇತಿಗಳನ್ನು ಆಯೋಜಿಸುವ ಮೂಲಕ, ಆಕಾಶವಾಣಿಯು ದೈಹಿಕ ಆರೋಗ್ಯವನ್ನು ಉತ್ತೇಜಿಸುವುದಲ್ಲದೆ, ಕಾರ್ಮಿಕರಲ್ಲಿ ಸಮುದಾಯ ಮತ್ತು ಬೆಂಬಲದ ಪ್ರಜ್ಞೆಯನ್ನು ಬೆಳೆಸುತ್ತದೆ. ಈ ಪ್ರಯತ್ನಗಳು ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುತ್ತವೆ, ಆರೋಗ್ಯಕರ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತವೆ ಮತ್ತು ಅಂತಿಮವಾಗಿ ಎಲ್ಲರಿಗೂ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ.

Social Media Links of Directorate:

https://x.com/AkashvaniAIR/status/1841177010519097371?t=6BXj0qu2Em_9FEajovkUzQ&s=08

https://x.com/AkashvaniAIR/status/1841164054397690002?t=uEpXY2YK9vUJ9tQV0ChTZQ&s=08

https://x.com/AkashvaniAIR/status/1841162213601476746?t=vceS0fEU95xvrQibfjh_Lw&s=08

https://x.com/AkashvaniAIR/status/1841159594111852998?t=zq48O7WUDsdrQyco89BwTg&s=08

https://x.com/AkashvaniAIR/status/1841157109573931394?t=X9fcM08nD45naylCkEkcBA&s=08

https://x.com/AkashvaniAIR/status/1841154993400778858?t=l3hmvUFIeLVXBbteynXQ-g&s=08

https://x.com/AkashvaniAIR/status/1841151378795708542?t=ETE-Ipske20hc4AFYggUww&s=08

https://x.com/AkashvaniAIR/status/1841145862807781436?t=JGNMW-2liDDX-R3lyMY5rw&s=08

https://x.com/AkashvaniAIR/status/1841143269662622110?t=v6Rk982pwv8GhBq73QSrcQ&s=08

https://x.com/AkashvaniAIR/status/1841141688011485199?t=CLCQG6Rb9U0suSaaFrzmRg&s=08

https://x.com/AkashvaniAIR/status/1841097316268196104?t=hQErg-FhMhj_BdwqfRlA-A&s=08

https://x.com/AkashvaniAIR/status/1841096433786634438?t=wuEMiWYtkb2WokHXsTGTYA&s=08

https://x.com/AkashvaniAIR/status/1841096120434332120?t=JK4dM0vD2V4aBPM6xa_75g&s=08

Social Media Links by some of the Field Stations:

https://x.com/AkashvaniTvm/status/1841013846862872797?t=dfHmQyEJ5YMtzvm08Laygw&s=08

https://www.facebook.com/share/p/fenEcSsRCtSuTauH/?mibextid=A7sQZp

https://www.facebook.com/61552410694570/posts/122186920742080356/?mibextid=rS40aB7S9Ucbxw6v

https://m.facebook.com/story.php?story_fbid=pfbid0EuQYTizULbxdHAXc7wNVpiVyTiShNMVRj2ozGe4r1kxthbpfiqG2C9HwTC1bC5EVl&id=61550023055354&sfnsn=wa

https://x.com/AIRPatna/status/1841310212877132262?t=ilL8G6KKil9-UR-_5MeneA&s=08

https://www.instagram.com/p/DAnMCkHScgb/?igsh=ZjJodGRjeno2bHAy

https://x.com/sanjulata_air/status/1841357206362669091?s=48

https://x.com/AIRVsp/status/1841369362143531191?t=pvFUfBcLV9RQZ_IdrgLNMA&s=08

https://x.com/sanjulata_air/status/1841356386657247685?s=12

https://x.com/NabmBbsr/status/1841076555340014031

 

*****


(Release ID: 2061539) Visitor Counter : 30