ರಾಷ್ಟ್ರಪತಿಗಳ ಕಾರ್ಯಾಲಯ
ಅಕ್ಟೋಬರ್ 3 ರಿಂದ 4 ರವರೆಗೆ ರಾಜಸ್ಥಾನಕ್ಕೆ ರಾಷ್ಟ್ರಪತಿ ಭೇಟಿ
Posted On:
02 OCT 2024 6:27PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2024 ರ ಅಕ್ಟೋಬರ್ 3 ರಿಂದ 4 ರವರೆಗೆ ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 3 ರಂದು ಉದಯಪುರದ ಮೋಹನ್ ಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಅವರು ಭಾಗವಹಿಸಲಿದ್ದಾರೆ.
ಅಕ್ಟೋಬರ್ 4 ರಂದು ಮೌಂಟ್ ಅಬುವಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಆಯೋಜಿಸಿರುವ ‘ಸ್ವಚ್ಛ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮಿಕತೆ’ ವಿಷಯದ ಕುರಿತು ಜಾಗತಿಕ ಶೃಂಗಸಭೆಯಲ್ಲಿ ರಾಷ್ಟ್ರಪತಿ ಅವರು ಭಾಗವಹಿಸಲಿದ್ದಾರೆ. ಅದೇ ದಿನ, ಬನ್ಸ್ವಾರಾದ ಮಂಗಡ್ ಧಾಮನಲ್ಲಿ ರಾಜಸ್ಥಾನ ಸರ್ಕಾರ ಆಯೋಜಿಸಿರುವ ಆದಿ ಗೌರವ್ ಸಮ್ಮಾನ್ ಸಮರೋಪದಲ್ಲಿ ಅವರು ಭಾಗವಹಿಸಲಿದ್ದಾರೆ.
*****
(Release ID: 2061471)
Visitor Counter : 34