ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಸೇವೆಯಿಂದ ಕಲಿಕೆ (ಸೇವಾ ಸೇ ಸೀಖೇನ್) ಕಾರ್ಯಕ್ರಮ ಯುವಕರನ್ನು ಸಬಲೀಕರಣಗೊಳಿಸುವುದು ಮತ್ತು ಸಮುದಾಯದಲ್ಲಿ ಸಹಾನುಭೂತಿ ಮತ್ತು ಸೇವೆಯ ಸಂಸ್ಕೃತಿಯನ್ನು ಬೆಳೆಸಲಿ


MY ಭಾರತ್‌ನ “ಸೇವೆಯಿಂದ ಕಲಿಕೆ” ಯೋಜನೆಯ 24 ರಾಜ್ಯಗಳಲ್ಲಿ ಪ್ರಗತಿಯಲ್ಲಿದೆ; 319 ಆಸ್ಪತ್ರೆಗಳಲ್ಲಿ 1700 ಕ್ಕೂ ಹೆಚ್ಚು  ಸ್ವಯಂಸೇವಕರು ಆರೋಗ್ಯ ರಕ್ಷಣೆಯಲ್ಲಿ ತೊಡಗಿದ್ದಾರೆ

ಈ ಕಾರ್ಯಕ್ರಮದ ಮೂಲಕ, ನಮ್ಮ ಯುವ MY ಭಾರತ್ ಸ್ವಯಂಸೇವಕರು ನಮ್ಮ ರಾಷ್ಟ್ರದ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತಿರುವಾಗ ಅಮೂಲ್ಯವಾದ ಅನುಭವ ಪಡೆಯುತ್ತಿದ್ದಾರೆ" - ಡಾ. ಮನ್ಸುಖ್ ಮಾಂಡವಿಯಾ

Posted On: 25 SEP 2024 2:54PM by PIB Bengaluru

ಭಾರತದ ಯುವಜನರನ್ನು ತೊಡಗಿಸಿಕೊಳ್ಳಲು ಮತ್ತು ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಮಹತ್ವದ ಕ್ರಮದಲ್ಲಿ, ಯುವ ವ್ಯವಹಾರಗಳ ಇಲಾಖೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು MY ಭಾರತ್ ಉಪಕ್ರಮದ ಅಡಿಯಲ್ಲಿ “ಸೇವೆಯಿಂದ ಕಲಿಕೆ" (ಸೇವಾ ಸೇ ಸೀಖೆನ್” ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಸೆಪ್ಟೆಂಬರ್ 17, 2024 ರಂದು ಇದಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರವ್ಯಾಪಿ ಸ್ವಯಂಸೇವಾ ಉಪಕ್ರಮವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನಿರ್ಣಾಯಕ ನೆರವು ನೀಡುತ್ತಿರುವಾಗ ಯುವಜನರಿಗೆ ಕಲಿಕೆಯ ಅನುಭವಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

(ಛತ್ತೀಸ್‌ಗಢ)

ಕಾರ್ಯಕ್ರಮದ ಕುರಿತು ಮಾತನಾಡಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ, “ಈ ಕಾರ್ಯಕ್ರಮವು ಭಾರತದಾದ್ಯಂತ ರೋಗಿಗಳ ಅಗತ್ಯತೆಗಳನ್ನು ತಿಳಿಸುವ, ಸೇವಾ ಸಂಸ್ಕೃತಿಯನ್ನು ಪೋಷಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ಕಾರ್ಯಕ್ರಮದ ಮೂಲಕ, ನಮ್ಮ ಯುವ MY ಭಾರತ್ ಸ್ವಯಂಸೇವಕರು ನಮ್ಮ ರಾಷ್ಟ್ರದ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಮೂಲಕ ಅಮೂಲ್ಯವಾದ ಅನುಭವವನ್ನು ಪಡೆಯುತ್ತಿದ್ದಾರೆ ಎಂದರು.

(ರಾಜಸ್ಥಾನ)

ಕಾರ್ಯಕ್ರಮದ ಭಾಗವಾಗಿ, MY ಭಾರತ್ ಸ್ವಯಂಸೇವಕರನ್ನು 700 ಸ್ಥಳಗಳಲ್ಲಿ ನಿಯೋಜಿಸಲಾಗಿದೆ, ಇದರಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಪ್ರತಿ ಆಸ್ಪತ್ರೆಯು 10-20 ಸ್ವಯಂಸೇವಕರನ್ನು ಹೊಂದಿದೆ. ಈ ಉಪಕ್ರಮವು ರೋಗಿಗಳ ಸೇವೆಗಳನ್ನು ಸುಧಾರಿಸಲು ಮಾತ್ರವಲ್ಲದೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಬಗ್ಗೆ ಅರಿವು ಮೂಡಿಸಲು ಗುರಿಯನ್ನು ಹೊಂದಿದೆ. ಸ್ವಯಂಸೇವಕರು ರೋಗಿಗಳಿಗೆ ಮೂಲಭೂತ ಆರೋಗ್ಯ ಸೇವೆಗಳನ್ನು ಪಡೆಯಲು ಸಹಾಯ ಮಾಡುವುದರಿಂದ ಹಿಡಿದು ಹೊರರೋಗಿ ವಿಭಾಗ (OPD) ಕೌಂಟರ್‌ಗಳನ್ನು ನಿರ್ವಹಿಸುವುದು, ಮಾಹಿತಿ, ವಿವರಗಳನ್ನು ಒದಗಿಸುವುದು ಮತ್ತು PM-JAY ದಾಖಲೆಗಳನ್ನು ಬೆಂಬಲಿಸುವವರೆಗೆ ವಿವಿಧ ಕಾರ್ಯಗಳಿಗೆ ಸಹಾಯ ಮಾಡುತ್ತಾರೆ.

(ಗುಜರಾತ್)

"ಸೇವಾ ಸೇ ಸೀಖೆನ್" ಕಾರ್ಯಕ್ರಮವು ಪ್ರಾರಂಭವಾದಾಗಿನಿಂದ ತ್ವರಿತ ಪ್ರಗತಿಯನ್ನು ಕಂಡಿದೆ, 861 ಆಸ್ಪತ್ರೆಗಳು ಈಗಾಗಲೇ MY ಭಾರತ್ ಪೋರ್ಟಲ್‌ನಲ್ಲಿ ನೋಂದಣಿಯಾಗಿವೆ. ಈ ಸೌಲಭ್ಯಗಳು 304 ಪ್ರಾಯೋಗಿಕ ಕಲಿಕೆ ಕಾರ್ಯಕ್ರಮಗಳು ಮತ್ತು 2,649 ಸ್ವಯಂಸೇವಕರಿಗೆ ಅವಕಾಶಗಳನ್ನು ಸೃಷ್ಟಿಸಿವೆ.

ಪ್ರಸ್ತುತ, 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 319 ಆಸ್ಪತ್ರೆಗಳಲ್ಲಿ 1732 ಸ್ವಯಂಸೇವಕರು ಸಕ್ರಿಯರಾಗಿದ್ದಾರೆ. ಪ್ರಮುಖವಾಗಿ, ಗುಜರಾತ್‌ನಲ್ಲಿ 33 ಆಸ್ಪತ್ರೆಗಳಲ್ಲಿ 273 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ನಂತರ ರಾಜಸ್ಥಾನ, ಹರಿಯಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸವ ಸ್ವಯಂಸೇವಕರು ಇದ್ದಾರೆ.


(ಒಡಿಶಾ)

ಅರ್ಥಪೂರ್ಣ ಕೆಲಸದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ “ಸೇವಾ ಸೇ ಸೀಖೆನ್” ಕಾರ್ಯಕ್ರಮವು ಸೇವಾ ಸಂಸ್ಕೃತಿ ಮತ್ತು ಜವಾಬ್ದಾರಿಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇದು PM-JAY ಸೇವೆಗಳ ಬಳಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ, ಇದರಿಂದಾಗಿ ಹಿಂದುಳಿದ ಸಮುದಾಯಗಳಿಗೆ ಆರೋಗ್ಯ ಸೇವೆ ಒದಗಿಸಲು ಹೆಚ್ಚಿನ ನೆರವಾಗಿದೆ. ಈ ಉಪಕ್ರಮದ ಯಶಸ್ಸು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ, ಸಾಮಾಜಿಕವಾಗಿ ಜವಾಬ್ದಾರಿಯುತ ನಾಯಕರ ಹೊಸ ಪೀಳಿಗೆಯನ್ನು ಬೆಳೆಸುತ್ತದೆ ಮತ್ತು ಸಾರ್ವಜನಿಕ ಸೇವೆಯ ಮಹತ್ವವನ್ನು ಬಲಪಡಿಸುತ್ತದೆ.

MY ಭಾರತ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವಂತೆ ಮತ್ತು "ಸೇವಾ ಸೇ ಸೀಖೆನ್" ಕಾರ್ಯಕ್ರಮವು ಬೆಳೆಯುತ್ತಿರುವಂತೆ, ಭಾರತದಾದ್ಯಂತ ಆರೋಗ್ಯ ಬೆಂಬಲ ಮತ್ತು ಯುವ ಸಬಲೀಕರಣ ಎರಡರಲ್ಲೂ ಪರಿವರ್ತಕ ಬದಲಾವಣೆಯನ್ನು ತರಲು ಈ ಯೋಜನೆ ಸಾಕಷ್ಟು ಭರವಸೆ ಒದಗಿಸಿದೆ.

 

*****



(Release ID: 2058848) Visitor Counter : 17