ರಾಷ್ಟ್ರಪತಿಗಳ ಕಾರ್ಯಾಲಯ
16 ನೇ ಏಷ್ಯನ್ ಆರ್ಗನೈಸೇಶನ್ ಆಫ್ ಸುಪ್ರೀಂ ಆಡಿಟ್ ಇನ್ಸ್ಟಿಟ್ಯೂಷನ್ ಅಸೆಂಬ್ಲಿಯ ಉದ್ಘಾಟನಾ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಭಾಗವಹಿಸಿದ್ದರು
ಎಸ್ ಎ ಐ ಸಂಸ್ಥೆಯ ಲೆಕ್ಕಪರಿಶೋಧನೆಗಳು ಮತ್ತು ಮೌಲ್ಯಮಾಪನಗಳು ಜನರ ಹಣವನ್ನು ರಕ್ಷಿಸುವುದಲ್ಲದೆ ಆಡಳಿತದಲ್ಲಿ ಜನರ ವಿಶ್ವಾಸವನ್ನು ಹೆಚ್ಚಿಸುತ್ತವೆ: ರಾಷ್ಟ್ರಪತಿ ಮುರ್ಮು
Posted On:
24 SEP 2024 12:39PM by PIB Bengaluru
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 24, 2024) ನವದೆಹಲಿಯಲ್ಲಿ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಯೋಜಿಸಿದ್ದ 16 ನೇ ಏಷ್ಯನ್ ಆರ್ಗನೈಸೇಶನ್ ಆಫ್ ಸುಪ್ರೀಂ ಆಡಿಟ್ ಇನ್ಸ್ಟಿಟ್ಯೂಷನ್ (ಅಸೋಸೈ) ಅಸೆಂಬ್ಲಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭಾರತದಲ್ಲಿ ಸಿಎಜಿ ದೇಶದ ಸಾರ್ವಜನಿಕ ಹಣಕಾಸು ವಿಷಯದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಭಾರತೀಯ ಸಂವಿಧಾನವು ಸಿಎಜಿ ಕಚೇರಿಗೆ ವ್ಯಾಪಕ ಅಧಿಕಾರ ಮತ್ತು ಸಂಪೂರ್ಣ ಸ್ವಾಯತ್ತತೆಯನ್ನು ಒದಗಿಸಿದೆ ಎನ್ನುವುದು ಕಾರಣವಿಲ್ಲದೆ ಅಲ್ಲ. ಸಿಎಜಿ ಕಚೇರಿಯು ಸಂವಿಧಾನ ರಚನಾಕಾರರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿದೆ ಎಂದು ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತನ್ನ ಕಾರ್ಯಚಟುವಟಿಕೆಯಲ್ಲಿ ಅತ್ಯುನ್ನತ ಮಟ್ಟದ ಸಮಗ್ರತೆಯನ್ನು ಖಾತ್ರಿಪಡಿಸುವ ನೈತಿಕ ನಡವಳಿಕೆಯ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತದೆ.
ಸಾರ್ವಜನಿಕ ವಲಯದ ಲೆಕ್ಕಪರಿಶೋಧನೆಯ ಕಾರ್ಯವು ಸಾಂಪ್ರದಾಯಿಕ ಲೆಕ್ಕಪರಿಶೋಧನೆಯನ್ನು ಮೀರಿ ಸಾರ್ವಜನಿಕ ಕಲ್ಯಾಣ ಯೋಜನೆಗಳು ಮತ್ತು ಯೋಜನೆಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಎಲ್ಲಾ ನಾಗರಿಕರಿಗೆ ಸಮಾನವಾಗಿ ಸೇವೆ ಸಲ್ಲಿಸುವುದನ್ನು ಖಚಿತಪಡಿಸುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ತಂತ್ರಜ್ಞಾನದ ಬಳಕೆಯಿಂದ ಹೆಚ್ಚು ಹೆಚ್ಚು ಸಾರ್ವಜನಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಆದ್ದರಿಂದ, ಲೆಕ್ಕಪರಿಶೋಧನೆಯು ತನ್ನ ತಪಾಸಣೆ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವಂತೆ ತಾಂತ್ರಿಕ ಬೆಳವಣಿಗೆಗಳನ್ನು ಮುಂದುವರಿಸುವ ಅಗತ್ಯವಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಯಂತ್ರ ಕಲಿಕೆ ಮತ್ತು ಜಿಯೋ-ಸ್ಪೇಷಿಯಲ್ ತಂತ್ರಜ್ಞಾನದಂತಹ ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳು ಆಧುನಿಕ ಆಡಳಿತದ ಬೆನ್ನೆಲುಬಾಗುತ್ತಿರುವ ನಿರ್ಣಾಯಕ ಘಟ್ಟದಲ್ಲಿ ನಾವು ಇಂದು ಇದ್ದೇವೆ ಎಂದು ರಾಷ್ಟ್ರಪತಿಗಳು ಹೇಳಿದರು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಡಿಜಿಟಲ್ ಆರ್ಥಿಕತೆಯ ಕಾರ್ಯನಿರ್ವಹಣೆಯನ್ನು ಮತ್ತು ನಾಗರಿಕರಿಗೆ ಒದಗಿಸಲಾದ ಸೇವೆಗಳನ್ನು ಬೆಂಬಲಿಸಲು ಮತ್ತು ಸುಧಾರಿಸಲು ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಡಿಜಿಟಲ್ ಗುರುತುಗಳಿಂದ ಹಿಡಿದು ಇ-ಆಡಳಿತದ ಪ್ಲಾಟ್ ಫಾರಂಗಳವರೆಗೆ, ಸಾರ್ವಜನಿಕ ಸೇವೆಗಳು ಮತ್ತು ಸರಕುಗಳ ವಿತರಣೆಯನ್ನು ಕ್ರಾಂತಿಕಾರಿಗೊಳಿಸುವ ಸಾಮರ್ಥ್ಯವನ್ನು ಡಿಪಿಐ ಹೊಂದಿದೆ, ಅವುಗಳನ್ನು ಹೆಚ್ಚು ಸುಲಭವಾಗಿ, ಪರಿಣಾಮಕಾರಿಯಾಗಿ ಮತ್ತು ಒಳಗೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.
ಪ್ರಪಂಚದ ಅನೇಕ ಭಾಗಗಳಲ್ಲಿ, ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗದವರು ಡಿಜಿಟಲ್ ತಂತ್ರಜ್ಞಾನಗಳು ತಲುಪುವ ಅವಕಾಶ ಕಡಿಮೆ ಹೊಂದಿದ್ದಾರೆ, ಡಿಜಿಟಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಡಿಮೆ ಅವಕಾಶಗಳನ್ನು ಹೊಂದಿದ್ದಾರೆ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎಂದು ರಾಷ್ಟ್ರಪತಿಗಳು ಹೇಳಿದರು. ಈ ಅಸಮಾನತೆಯು ಅಗತ್ಯ ಸೇವೆಗಳನ್ನು ಧಕ್ಕಿಸಿಕೊಳ್ಳುವ ಅವರ ಸಾಮರ್ಥ್ಯವನ್ನು ಮಿತಿಗೊಳಿಸುವುದಲ್ಲದೆ ಅಸಮಾನತೆಯನ್ನು ಶಾಶ್ವತಗೊಳಿಸುತ್ತದೆ. ಇಲ್ಲಿ ಸುಪ್ರೀಂ ಆಡಿಟ್ ಸಂಸ್ಥೆಗಳ (ಎಸ್ಎಐ) ಪಾತ್ರವು ನಿರ್ಣಾಯಕವಾಗುತ್ತದೆ. ಲೆಕ್ಕಪರಿಶೋಧಕರಾಗಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಎಲ್ಲರಿಗೂ ಒಳಗೊಳ್ಳುವ ಮತ್ತು ಎಟಕುವರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವರು ಅನನ್ಯ ಜವಾಬ್ದಾರಿ ಮತ್ತು ಅವಕಾಶವನ್ನು ಹೊಂದಿದ್ದಾರೆ ಎಂದು ಹೇಳಿದರು.
ಪಾರದರ್ಶಕವಲ್ಲದ ಲೆಕ್ಕಪರಿಶೋಧಕ ಅಭ್ಯಾಸಗಳಿಂದ ಆರ್ಥಿಕ ಪ್ರಪಂಚವು ಹೆಚ್ಚಾಗಿ ಸುತ್ತುವರಿಯಲ್ಪಟ್ಟಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಈ ವ್ಯವಸ್ಥೆಯಲ್ಲಿ, ಸ್ವತಂತ್ರ ಸುಪ್ರೀಂ ಆಡಿಟ್ ಸಂಸ್ಥೆಗಳ ಪಾತ್ರವು ಸಾರ್ವಜನಿಕ ಸಂಪನ್ಮೂಲಗಳನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಮತ್ತು ಅತ್ಯಂತ ಸಮಗ್ರತೆಯಿಂದ ನಿರ್ವಹಿಸುವುದನ್ನು ಗಮನಿಸುವುದಾಗಿದೆ. ಎಸ್ಎಐಗಳ ಲೆಕ್ಕಪರಿಶೋಧನೆಗಳು ಮತ್ತು ಮೌಲ್ಯಮಾಪನಗಳು ಜನರ ಹಣವನ್ನು ರಕ್ಷಿಸುವುದಲ್ಲದೆ ಆಡಳಿತದಲ್ಲಿ ಜನರ ವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಸಿಎಜಿ ಆಫ್ ಇಂಡಿಯಾ ಸಂಸ್ಥೆಯು ಸಾರ್ವಜನಿಕ ಲೆಕ್ಕಪರಿಶೋಧನೆಯ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ರಾಷ್ಟ್ರಪತಿಗಳು ಹೇಳಿದರು. 16 ನೇ ಎಎಸ್ಒಎಸ್ಎಐ ಅಸೆಂಬ್ಲಿಯ ಆತಿಥೇಯರಾದ ಎಸ್ ಎ ಐ ಇಂಡಿಯಾ, ಅಸೆಂಬ್ಲಿಯಲ್ಲಿ ನೆರೆದ ವಿದ್ವಾಂಸರ ಚರ್ಚೆಗೆ ಹೆಚ್ಚಿನ ಕೊಡುಗೆಗಳನ್ನು ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 2024 ರಿಂದ 2027 ರ ಅವಧಿಗೆ ಎಎಸ್ಒಎಸ್ಎಐ ನ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದಕ್ಕಾಗಿ ಅವರು ಎಸ್ ಎ ಐ ಇಂಡಿಯಾವನ್ನು ಅಭಿನಂದಿಸಿದರು. ಭಾರತದ ಸಿಎಜಿ ಯ ಸಮರ್ಥ ಉಸ್ತುವಾರಿಯಲ್ಲಿ, ಎಎಸ್ಒಎಸ್ಎಐ ಹೊಸ ಎತ್ತರವನ್ನು ತಲುಪುತ್ತದೆ, ಸದಸ್ಯರಲ್ಲಿ ಹೆಚ್ಚಿನ ಸಹಯೋಗ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ಮೂಲಕ ಎಎಸ್ಒಎಸ್ಎಐ ಹೊಸ ಎತ್ತರಗಳನ್ನು ಏರುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ದಯವಿಟ್ಟು ರಾಷ್ಟ್ರಪತಿಗಳ ಪೂರ್ಣ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ
Kindly find the President Speech here
*****
(Release ID: 2058665)
Visitor Counter : 34