ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದಲ್ಲಿ ಅನಿಮೆ ಮತ್ತು ಮಂಗಾ ಸಂಸ್ಕೃತಿ ಮತ್ತು ಕ್ರಿಯೇಟರ್ ಆರ್ಥಿಕತೆಗೆ ದೊಡ್ಡ ಉತ್ತೇಜನ


ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಭಾರತ ಮಾಧ್ಯಮ ಮತ್ತು ಮನರಂಜನಾ ಸಂಘವು ವೇವ್ಸ್ ಅನಿಮೆ ಮತ್ತು ಮಂಗಾ ಸ್ಪರ್ಧೆʼಯನ್ನು ಪ್ರಾರಂಭಿಸಿದೆ

ಸ್ಪರ್ಧೆಗಳು ವಿದ್ಯಾರ್ಥಿಗಳು ಮತ್ತು ವೃತ್ತಿಪರರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತವೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತೀಯ ಪ್ರತಿಭೆಯನ್ನು ಪ್ರದರ್ಶಿಸುತ್ತವೆ: ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು


Posted On: 24 SEP 2024 5:36PM by PIB Bengaluru

ಭಾರತದಲ್ಲಿ ಅನಿಮೆ ಮತ್ತು ಮಂಗಾ ಸಂಸ್ಕೃತಿಯನ್ನು ಉತ್ತೇಜಿಸುವ ಐತಿಹಾಸಿಕ ಉಪಕ್ರಮದಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಭಾರತ ಮಾಧ್ಯಮ ಮತ್ತು ಮನರಂಜನಾ ಸಂಘ (ಎಂಇಎಐ) ಸಹಯೋಗದೊಂದಿಗೆ ಅಧಿಕೃತವಾಗಿ ವೇವ್ಸ್ ಅನಿಮೆ ಮತ್ತು ಮಂಗಾ ಸ್ಪರ್ಧೆಯನ್ನು (WAM!) ಪ್ರಾರಂಭಿಸಿದೆ. ಈ ವಿನೂತನ ಸ್ಪರ್ಧೆಯು 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್' (Create in India Challenge) ನ ಭಾಗವಾಗಿದೆ, ಇದು ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸಲು ಮತ್ತು ಭಾರತೀಯ ಪ್ರೇಕ್ಷಕರಲ್ಲಿ ಜಪಾನಿನ ಮಂಗಾ ಮತ್ತು ಅನಿಮೆಯಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಬಳಸಿಕೊಳ್ಳುವ  ಗುರಿಯನ್ನು ಹೊಂದಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೇ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಆಗಸ್ಟ್ 22, 2024 ರಂದು ನವದೆಹಲಿಯಲ್ಲಿ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ ಒನ್ (Create in India Challenge—Season One) ಅನ್ನು ಅನಾವರಣಗೊಳಿಸಿದರು. 78ನೇ ಸ್ವಾತಂತ್ರ್ಯ ದಿನದಂದು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ 'ಭಾರತದಲ್ಲಿ ವಿನ್ಯಾಸ, ಜಗತ್ತಿಗೆ ವಿನ್ಯಾಸ' ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಮುಂಬರುವ ವೇವ್ಸ್‌  ಶೃಂಗಸಭೆಯ ಪೂರ್ವಭಾವಿಯಾಗಿ ಈ ಚಾಲೆಂಜ್ ಕಾರ್ಯನಿರ್ವಹಿಸುತ್ತದೆ.

WAM! ಬಗ್ಗೆ

ಡಬ್ಲ್ಯುಎಎಂ ಜನಪ್ರಿಯ ಜಪಾನಿ ಕಲಾ ಶೈಲಿಗಳ ಸ್ಥಳೀಯ ಆವೃತ್ತಿಗಳನ್ನು ರಚಿಸಲು ಭಾರತೀಯ ಕ್ರಿಯೇಟರ್ಸ್‌ ಗೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಜಾಗತಿಕ ಮಟ್ಟದಲ್ಲಿ ಅನನ್ಯ ಗುರುತನ್ನು ರಚಿಸಲು ಸಾಕಷ್ಟು ಮಾರುಕಟ್ಟೆ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಮಂಗಾ ಮತ್ತು ಅನಿಮೆಯಲ್ಲಿ ಸೃಜನಶೀಲ ಅಭಿವ್ಯಕ್ತಿಗಾಗಿ ಬಲವಾದ ವೇದಿಕೆಯನ್ನು ಸ್ಥಾಪಿಸುವ ಗುರಿಯನ್ನು ಸ್ಪರ್ಧೆಯು ಹೊಂದಿದೆ.

ಡಬ್ಲ್ಯುಎಎಂನಲ್ಲಿ ಮೂರು ವಿಭಾಗಗಳಿವೆ, ಪ್ರತಿಯೊಂದೂ ಸೃಜನಾತ್ಮಕ ಅಭಿವ್ಯಕ್ತಿಗೆ ವಿಶಿಷ್ಟ ವೇದಿಕೆಯನ್ನು ಒದಗಿಸುತ್ತವೆ:

1. ಭಾಗವಹಿಸುವಿಕೆ ವಿಭಾಗ

1.  ಮಂಗಾ (ಜಪಾನೀಸ್ ಶೈಲಿಯ ಕಾಮಿಕ್ಸ್)- ವಿದ್ಯಾರ್ಥಿ ಮತ್ತು ವೃತ್ತಿಪರ ವರ್ಗಕ್ಕೆ ವೈಯಕ್ತಿಕ ಭಾಗವಹಿಸುವಿಕೆ

2. ವೆಬ್‌ಟೂನ್ (ಡಿಜಿಟಲ್ ಮಾಧ್ಯಮಗಳಿಗಾಗಿ ಕಾಮಿಕ್ಸ್) - ವಿದ್ಯಾರ್ಥಿ ಮತ್ತು ವೃತ್ತಿಪರ ವರ್ಗಕ್ಕೆ ವೈಯಕ್ತಿಕ ಭಾಗವಹಿಸುವಿಕೆ

3. ಅನಿಮೆ (ಜಪಾನೀಸ್ ಶೈಲಿಯ ಅನಿಮೇಷನ್) - ತಂಡ (4 ಜನರವರೆಗೆ) ವಿದ್ಯಾರ್ಥಿ ಮತ್ತು ವೃತ್ತಿಪರ ವರ್ಗಕ್ಕೆ ಭಾಗವಹಿಸುವಿಕೆ

2. ಸ್ವರೂಪ ಮತ್ತು ವಿತರಣೆ - ಸ್ಕ್ರಿಪ್ಟ್ ಅನ್ನು ಸ್ಥಳದಲ್ಲೇ ಒದಗಿಸಲಾಗುತ್ತದೆ. ಭಾಗವಹಿಸುವವರು ಈ ಕೆಳಗಿನಬವುಗಳನ್ನು ಸಿದ್ಧಪಡಿಸಬೇಕು:

1.   ಮಂಗಾ (ವಿದ್ಯಾರ್ಥಿ, ವೈಯಕ್ತಿಕ) - 2 ಪುಟಗಳ ಮಂಗಾ, ಶಾಯಿ ಮತ್ತು  ಬಣ್ಣ (ಭೌತಿಕ / ಡಿಜಿಟಲ್) ಕನಿಷ್ಠ 4 ಫಲಕಗಳು

2.   ಮಂಗಾ (ವೃತ್ತಿಪರ, ವೈಯಕ್ತಿಕ) - 2 ಪುಟಗಳ ಮಂಗಾ, ಶಾಯಿ ಮತ್ತು ಬಣ್ಣ (ಭೌತಿಕ / ಡಿಜಿಟಲ್) ಕನಿಷ್ಠ 4 ಫಲಲಕಗಳು

                        3.   ವೆಬ್‌ಟೂನ್ (ವಿದ್ಯಾರ್ಥಿ, ವೈಯಕ್ತಿಕ): ಶಾಯಿ ಮತ್ತು ಬಣ್ಣದೊಂದಿಗೆ 7 ಫಲಕಗಳು

                        4.  ವೆಬ್‌ಟೂನ್ (ವೃತ್ತಿಪರ, ವೈಯಕ್ತಿಕ): ಶಾಯಿ ಮತ್ತು ಬಣ್ಣದೊಂದಿಗೆ 10 ಫಲಕಗಳು.

5.  ಅನಿಮೆ (ವಿದ್ಯಾರ್ಥಿ, ತಂಡಗಳು) - ಒದಗಿಸಿದ ಸ್ಕ್ರಿಪ್ಟ್ ಪ್ರಕಾರ 10 ಸೆಕೆಂಡುಗಳ ಅನಿಮೆ

6.  ಅನಿಮೆ (ವೃತ್ತಿಪರ, ತಂಡಗಳು) - ಒದಗಿಸಿದ ಸ್ಕ್ರಿಪ್ಟ್ ಪ್ರಕಾರ 15 ಸೆಕೆಂಡುಗಳ ಅನಿಮೆ

 

ಸ್ಪರ್ಧೆಯ ರಚನೆ ಮತ್ತು ವೇಳಾಪಟ್ಟಿ

ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಪ್ರತ್ಯೇಕ ವಿಭಾಗಗಳೊಂದಿಗೆ ಭಾಗವಹಿಸುವವರು ಪ್ರತ್ಯೇಕವಾಗಿ ಅಥವಾ ತಂಡಗಳಲ್ಲಿ (4 ಜನರವರೆಗೆ) ಸ್ಪರ್ಧಿಸಬಹುದು. ಸ್ಪರ್ಧೆಗಳನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ: ಹನ್ನೊಂದು ನಗರಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳು ಮತ್ತು ರಾಷ್ಟ್ರೀಯ ಮಟ್ಟದ ಅಂತಿಮ ಪಂದ್ಯ.

ಪ್ರತಿ ರಾಜ್ಯ ಮಟ್ಟದ ಕಾರ್ಯಕ್ರಮವು ಬೆಳಗ್ಗೆ 9:00 ಗಂಟೆಗೆ ನೋಂದಣಿಯೊಂದಿಗೆ ಪ್ರಾರಂಭವಾಗುತ್ತದೆ, ನಂತರ 9:30 ಗಂಟೆಗೆ ಸ್ವಾಗತ ಮತ್ತು ವಿವರಣೆ ಅಧಿವೇಶನದ ನಂತರ ಸ್ಪರ್ಧೆಯು ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ನಡೆಯುತ್ತದೆ, ಇದರಲ್ಲಿ ಎಕ್ಸ್‌ಪೋ ಮತ್ತು ಉದ್ಯೋಗ ಮೇಳವು ಭಾಗವಹಿಸುವವರನ್ನು ಉದ್ಯಮದ ಅವಕಾಶಗಳೊಂದಿಗೆ ಸಂಪರ್ಕಿಸುತ್ತದೆ. ಸಂಜೆ 6:00 ರಿಂದ ರಾತ್ರಿ 8:00 ರವರೆಗೆ ಒಂದು ಸುತ್ತು ಮತ್ತು ಆಚರಣೆಯೊಂದಿಗೆ ದಿನವು ಮುಕ್ತಾಯಗೊಳ್ಳುತ್ತದೆ, ಇದರಲ್ಲಿ ಕಾಸ್ಪ್ಲೇ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮಗಳು, ಧ್ವನಿ ನಟನೆ ಅಧಿವೇಶನಗಳು ಮತ್ತು ಅತ್ಯಾಕರ್ಷಕ ಕೊಡುಗೆಗಳಂತಹ ಚಟುವಟಿಕೆಗಳು ಸೇರಿವೆ.

WAM! ಪ್ರಮುಖ ದಿನಾಂಕಗಳು ಮತ್ತು ಸ್ಥಳಗಳು!

  • WAM! ಬೆಂಗಳೂರು: ಅಕ್ಟೋಬರ್ 27, 2024
  • WAM! ಚೆನ್ನೈ: ನವೆಂಬರ್ 10, 2024
  • WAM! ಕೊಹಿಮಾ: ನವೆಂಬರ್ 22, 2024
  • WAM! ಕೋಲ್ಕತ್ತಾ: ನವೆಂಬರ್ 24, 2024
  • WAM! ಭುವನೇಶ್ವರ: ನವೆಂಬರ್ 26, 2024
  • WAM! ವಾರಣಾಸಿ: ನವೆಂಬರ್ 28, 2024
  • WAM! ದೆಹಲಿ: ನವೆಂಬರ್ 30, 2024
  • WAM! ಮುಂಬೈ: ಡಿಸೆಂಬರ್ 15, 2024
  • WAM! ಅಹಮದಾಬಾದ್: ಡಿಸೆಂಬರ್ 17, 2024
  • WAM! ನಾಗ್ಪುರ: ಡಿಸೆಂಬರ್ 19, 2024
  • WAM! ಹೈದರಾಬಾದ್: ಡಿಸೆಂಬರ್ 21, 2024

 

http://www.meai.in/wam ವೆಬ್‌ಸೈಟ್ WAM ನೋಂದಣಿ ತೆರೆದಿದೆ. ಭಾಗವಹಿಸುವಿಕೆ ಎಲ್ಲಾ ವರ್ಗಗಳಿಗೆ ಉಚಿತವಾಗಿದೆ.

 

WAM! ಫೆಬ್ರವರಿ 5 ರಿಂದ 9, 2025 ರವರೆಗೆ ದೆಹಲಿಯ ಭಾರತ ಮಂಟಪದಲ್ಲಿ ವೇವ್ಸ್‌ ಶೃಂಗಸಭೆಯ ಭಾಗವಾಗಿ ಅಂತಿಮ ಪಂದ್ಯ ನಡೆಯಲಿದೆ. ವಿಜೇತರು ಅನಿಮೆ ಜಪಾನ್‌ ಗೆ ಸಂಪೂರ್ಣ ವೆಚ್ಚವನ್ನು ಪಾವತಿಸಿದ ಪ್ರವಾಸವನ್ನು ಪಡೆಯುತ್ತಾರೆ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಬೆಂಬಲಿಸುವ ಅಂತಹುದೇ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಿಸುವ ಅವಕಾಶ ಪಡೆಯುತ್ತಾರೆ.

 

ವೆಬ್‌ಟೂನ್, ಅನಿಮೆ ಮತ್ತು ಮಂಗಾ

ಭಾರತ ಮತ್ತು ಪ್ರಪಂಚದಾದ್ಯಂತ ವೆಬ್‌ಟೂನ್‌, ಅನಿಮೆ ಮತ್ತು ಮಂಗಾಗಳ ಅಪಾರ ಸಾಮರ್ಥ್ಯದ ಬಗ್ಗೆ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, 'WAM ಅದರ ಶ್ರೀಮಂತ ಕಥೆ ಹೇಳುವ ಕಲೆ, ಸೃಜನಶೀಲ ಶೈಲಿಗಳು ಮತ್ತು ರೋಮಾಂಚಕ ಕಲಾತ್ಮಕತೆಯೊಂದಿಗೆ ಜಾಗತಿಕ ವೇದಿಕೆಯಲ್ಲಿ ಭಾರತೀಯ ಪ್ರತಿಭೆಯನ್ನು ಉನ್ನತೀಕರಿಸಲು, ಹೊಸ ಪೀಳಿಗೆಯು ಧೈರ್ಯದಿಂದ ಕನಸು ಕಾಣಲು ಮತ್ತು ಜಾಗತಿಕ ಸೃಜನಶೀಲತೆಯೊಂದಿಗೆ ಆಳವಾಗಿ ಸಂಪರ್ಕ ಸಾಧಿಸಲು ಪ್ರೇರೇಪಿಸುತ್ತದೆ. ನಮ್ಮ ಸೃಜನಶೀಲ ಸನ್ನಿವೇಶವನ್ನು ಹೆಚ್ಚಿಸುವ ಇಂತಹ ಸೃಜನಾತ್ಮಕವಾಗಿ ಹೆಣೆದ ಕಥೆಗಳಿಗೆ ಭಾರತೀಯ ಗ್ರಾಹಕರಲ್ಲಿ ಭಾರೀ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಹೇಳಿದರು. 10 ರಾಜ್ಯಗಳಾದ್ಯಂತ WAM ಸ್ಪರ್ಧೆಯ ಕುರಿತು ಮಾತನಾಡಿದ ಶ್ರೀ ಜಾಜು, ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸುತ್ತದೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಗಳನ್ನು ಒದಗಿಸುವ ಮೂಲಕ, ನಾವು ಶ್ರೇಷ್ಠತೆಯನ್ನು ಪ್ರೇರೇಪಿಸಬಹುದು ಮತ್ತು ಉದ್ಯಮದಲ್ಲಿ ಉದಯೋನ್ಮುಖ ಪ್ರತಿಭೆಗಳನ್ನು ಪರಿಣಾಮಕಾರಿಯಾಗಿ ಗುರುತಿಸಬಹುದು ಎಂದು ಹೇಳಿದರು.

ಭಾರತ ಮಾಧ್ಯಮ ಮತ್ತು ಮನರಂಜನಾ ಸಂಘದ ಕಾರ್ಯದರ್ಶಿ ಶ್ರೀ ಅಂಕುರ್ ಭಾಸಿನ್ ಮಾತನಾಡಿ, “WAM ನ ಆರಂಭವು ಅನಿಮೆ ಮತ್ತು ಮಂಗಾದ ರೋಮಾಂಚಕ ಸಂಸ್ಕೃತಿಯನ್ನು ಭಾರತದಲ್ಲಿ ಮುಂಚೂಣಿಗೆ ತರುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು. ಪ್ರತಿಭಾವಂತ ರಚನೆಕಾರರು ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಜಾಗತಿಕ ಪ್ರೇಕ್ಷಕರನ್ನು ತಲುಪಲು ವೇದಿಕೆಯನ್ನು ಒದಗಿಸುವ ಮೂಲಕ, ನಾವು ಸೃಜನಶೀಲತೆಯನ್ನು ಬೆಳೆಸುವುದು ಮಾತ್ರವಲ್ಲದೆ 'ಭಾರತದಲ್ಲಿ ರಚಿಸಿ' ದೃಷ್ಟಿಕೋನವನ್ನು ಬಲಪಡಿಸುತ್ತೇವೆ. ಈ ಉಪಕ್ರಮವು ಸ್ಥಳೀಯ ಪ್ರತಿಭೆಗಳನ್ನು ಪೋಷಿಸುವ ಮತ್ತು AVGC-XR ಮತ್ತು ದೇಶದಲ್ಲಿ ಮಾಧ್ಯಮ ಕ್ಷೇತ್ರಗಳಿಗೆ ಅಭಿವೃದ್ಧಿ ಹೊಂದುತ್ತಿರುವ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

 

*****

 

 


(Release ID: 2058420) Visitor Counter : 39