ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮುಂಬೈನಲ್ಲಿರುವ ಪ್ರಮುಖ ಚಲನಚಿತ್ರ ಕ್ಷೇತ್ರದ ಸಂಸ್ಥೆಗಳನ್ನು ಪರಿಶೀಲಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್


ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಅನಿಮೇಷನ್‌ ನಲ್ಲಿ ರಾಷ್ಟ್ರೀಯ ಶ್ರೇಷ್ಠತೆ ಕೇಂದ್ರದ ಪ್ರಗತಿಯನ್ನು ಪರಿಶೀಲಿಸಿದರು; ಎವಿಜಿಸಿ ವಲಯಕ್ಕೆ ಸಂಪೂರ್ಣ ಉದ್ಯಮ ಮಾನದಂಡಗಳ ಅವಶ್ಯಕತೆಯಿದೆ ಎಂದು ಸಚಿವರು ಅಭಿಪ್ರಾಯಪಟ್ಟರು

Posted On: 23 SEP 2024 6:39PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಮುಂಬೈನ ಎನ್.ಎಫ್.ಡಿ.ಸಿ. ಕ್ಯಾಂಪಸ್‌ ಗೆ ಭೇಟಿ ನೀಡಿದರು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿ.ಬಿ.ಎಫ್.ಸಿ.) ಮತ್ತು ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್.ಎಫ್.ಡಿ.ಸಿ.) ಯ ಚಟುವಟಿಕೆಗಳ ವ್ಯಾಪಕವಾಗಿ ಪರಿಶೀಲನೆ ನಡೆಸಿದರು.

ತಮ್ಮ ಭೇಟಿಯ ಸಮಯದಲ್ಲಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು, ಗುಲ್ಶನ್ ಮಹಲ್‌ ನ ಪಾರಂಪರಿಕ ಕಟ್ಟಡ ಸೇರಿದಂತೆ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿದರು. "ವಸ್ತು ಪ್ರದರ್ಶನಗಳು ಭಾರತೀಯ ಚಲನಚಿತ್ರಗಳ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯನ್ನು ಪ್ರದರ್ಶಿಸುತ್ತವೆ, ಮೂಕ ಯುಗದಿಂದ ಇಂದಿನ ಡಿಜಿಟಲ್ ವರೆಗೆ, ರಾಷ್ಟ್ರದ ಸಾಂಸ್ಕೃತಿಕ ವರ್ಣಕ್ಕೆ ಸಿನೆಮಾರಂಗವು ನೀಡಿದ ಅಪಾರ ಕೊಡುಗೆಯನ್ನು ಎತ್ತಿ ಇವುಗಳು ತೋರಿಸಿಕೊಡುತ್ತವೆ" ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು 

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿ.ಬಿ.ಎಫ್.ಸಿ.) ಅಧ್ಯಕ್ಷ ಶ್ರೀ ಪ್ರಸೂನ್ ಜೋಶಿ ಅವರು ಪ್ರಮಾಣೀಕರಣ ಪ್ರಕ್ರಿಯೆಯಲ್ಲಿನ ಇತ್ತೀಚಿನ ಉಪಕ್ರಮಗಳು ಮತ್ತು ಒಟ್ಟಾರೆಯಾಗಿ ಚಲನಚಿತ್ರೋದ್ಯಮದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ಸಚಿವರು ತಮ್ಮ ಅವಲೋಕನದಲ್ಲಿ ಚಲನಚಿತ್ರ ವಲಯದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಅಗತ್ಯವಿರುವ ಪ್ರಯತ್ನಗಳಿಗೆ , ಮತ್ತು ಉತ್ತಮ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ವಾಣಿಜ್ಯಿಕವಾಗಿಯೂ ಹಾಗೂ ಆರ್ಥಿಕವಾಗಿಯೂ ಲಾಭದಾಯಕವಾದ ಯೋಜನೆಗಳನ್ನು ರೂಪಿಸಲು ಒತ್ತು ನೀಡಲು ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಭಾರತದ ಸಿನಿಮಾ ಪರಂಪರೆಯನ್ನು ಮರುಸ್ಥಾಪಿಸುವ ಮತ್ತು ಸಂರಕ್ಷಿಸುವಲ್ಲಿ ಅನುಕರಣೀಯ ಕೆಲಸಕ್ಕಾಗಿ ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾ (ಎನ್.ಎಫ್.ಡಿ.ಸಿ. - ಎನ್.ಎಫ್.ಎ.ಐ.) ಅನ್ನು ಕೇಂದ್ರ ಸಚಿವರು ಶ್ಲಾಘಿಸಿದರು.

ಭವಿಷ್ಯದ ಪೀಳಿಗೆಗಳು ಈ ಶ್ರೀಮಂತ ಕಲಾತ್ಮಕ ಪರಂಪರೆಯಿಂದ ಆನಂದಿಸಬಹುದು ಮತ್ತು ಕಲಿಯಬಹುದು ಎಂದು ಖಚಿತಪಡಿಸಿಕೊಂಡ ಕೇಂದ್ರ ಸಚಿವರು, ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ನಿರ್ಣಾಯಕ ಭಾಗವಾಗಿರುವ ಚಲನಚಿತ್ರಗಳನ್ನು ರಕ್ಷಿಸುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು ಉಪಕ್ರಮಗಳನ್ನು ರೂಪಿಸಲು ನಿರ್ದೇಶಿಸಿದರು. ಎವಿಜಿಸಿ ವಲಯದಲ್ಲಿ ರಾಷ್ಟ್ರೀಯ ಶ್ರೇಷ್ಠತೆಯ ಕೇಂದ್ರ (ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್) ಸ್ಥಾಪನೆಯಲ್ಲಿ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳಲ್ಲಿ ಸಂಪೂರ್ಣ ಉದ್ಯಮದ ದೃಷ್ಟಿಕೋನದ ಅಗತ್ಯವಿದೆ ಎಂದು ಸಚಿವರು ಹೇಳಿದರು. 

ಆನಿಮೇಷನ್‌ ನಲ್ಲಿನ ರಾಷ್ಟ್ರೀಯ ಶ್ರೇಷ್ಠತೆಯ ಕೇಂದ್ರದ ಪ್ರಗತಿಯನ್ನು ಪರಿಶೀಲಿಸಿದ ಸಚಿವ ಶ್ರೀ ವೈಷ್ಣವ್ ಅವರು, ಭಾರತೀಯ ಮನರಂಜನಾ ಉದ್ಯಮದಲ್ಲಿ  ಉಪಕ್ಷೇತ್ರವಾಗಿ ಬೆಳೆಯುತ್ತಿರುವ ಅನಿಮೇಷನ್ ಮತ್ತು ದೃಶ್ಯ ಪರಿಣಾಮಗಳ ವಿಭಾಗದ ಪ್ರಾಮುಖ್ಯತೆಯನ್ನು ಮನಗೊಂಡು, ಈ ಕುರಿತು ತಜ್ಞರ ಜೊತೆಗೆ ಸಂಪೂರ್ಣವಾಗಿ ವಿಶ್ಲೇಷಿಸಿದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪಶ್ಚಿಮ ವಲಯದ ಮಹಾನಿರ್ದೇಶಕರಾದ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ, ಎನ್.ಎಫ್.ಡಿ.ಸಿ.ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪೃಥುಲ್ ಕುಮಾರ್, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿ.ಬಿ.ಎಫ್.ಸಿ.) ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ಶ್ರೀ ರಾಜೇಂದ್ರ ಸಿಂಗ್ ಮತ್ತು ಎನ್.ಎಫ್.ಡಿ.ಸಿ. ಮತ್ತು ಸಿ.ಬಿ.ಎಫ್.ಸಿ ಗಳ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಮ್ಮ ಭೇಟಿಯ ಸಂದರ್ಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು, ತಾಯಿಯ ಹೆಸರಿನಲ್ಲಿ ಸಸಿ ನೆಡುವ 'ಏಕ್ ಪೇಡ್ ಮಾ ಕೇ ನಾಮ್' ಉಪಕ್ರಮದಡಿಯಲ್ಲಿ ಎನ್‌.ಎಫ್‌.ಡಿ.ಸಿ. ಆವರಣದಲ್ಲಿ  ಒಂದು ಸಸಿಯನ್ನು ನೆಟ್ಟರು.

 

*****


(Release ID: 2058176) Visitor Counter : 33