ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 6ರವರೆಗೆ ಭಾರತೀಯ ಕಲಾ ಉತ್ಸವವನ್ನು ಆಯೋಜಿಸಲಿರುವ ರಾಷ್ಟ್ರಪತಿ ನಿಲಯಂ


ಸೆಪ್ಟೆಂಬರ್ 28ರಂದು ಉತ್ಸವವನ್ನು ಉದ್ಘಾಟಿಸಲಿರುವ ರಾಷ್ಟ್ರಪತಿಯವರು

Posted On: 17 SEP 2024 6:01PM by PIB Bengaluru

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯಗಳ ಸಹಯೋಗದೊಂದಿಗೆ ರಾಷ್ಟ್ರಪತಿ ನಿಲಯಂ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 6, 2024ರವರೆಗೆ ಭಾರತೀಯ ಕಲಾ ಮಹೋತ್ಸವದ ಮೊದಲ ಆವೃತ್ತಿಯನ್ನು ಆಯೋಜಿಸಲಿದೆ. ಸೆಪ್ಟೆಂಬರ್ 28, 2024ರಂದು ರಾಷ್ಟ್ರಪತಿಯವರು ಈ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಎಂಟು ದಿನಗಳ ಕಾಲ ನಡೆಯುವ ಈ ಉತ್ಸವವು ನಮ್ಮ ಈಶಾನ್ಯ ರಾಜ್ಯಗಳ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಪ್ರವಾಸಿಗರು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾಗಳ ಕಲೆ, ಸಂಸ್ಕೃತಿ, ಕರಕುಶಲತೆ ಮತ್ತು ಪಾಕಶಾಲೆಯ ವೈವಿಧ್ಯತೆಯ ಪರಿಚಯ ಪಡೆಯಲಿದ್ದಾರೆ. ಈ ರಾಜ್ಯಗಳ 300 ಕ್ಕೂ ಹೆಚ್ಚು ಕಲಾವಿದರು ಮತ್ತು ಕುಶಲಕರ್ಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 6, 2024ರವರೆಗೆ ಬೆಳಿಗ್ಗೆ 10:00ರಿಂದ ರಾತ್ರಿ 8:00ರವರೆಗೆ ಪ್ರವಾಸಿಗರು ಮಹೋತ್ಸವಕ್ಕೆ ಭೇಟಿ ನೀಡಬಹುದು. ಸಂದರ್ಶಕರು https://visit.rashtrapatibhavan.gov.in ಭೇಟಿ ನೀಡುವ ಮೂಲಕ ತಮ್ಮ ಸ್ಲಾಟ್ ಅನ್ನು ಕಾಯ್ದಿರಿಸಬಹುದು. ಈ ಮಹೋತ್ಸವಕ್ಕೆ ಉಚಿತ ಪ್ರವೇಶದ ಅನುಕೂಲವಿದೆ. ಸಿಕಂದರಾಬಾದ್ ನ ಬೋಲಾರಂನಲ್ಲಿರುವ ರಾಷ್ಟ್ರಪತಿ ನಿಲಯಂನಲ್ಲಿ ವಾಕ್-ಇನ್ ಸಂದರ್ಶಕರಿಗೆ ಸ್ಥಳದಲ್ಲೇ ಬುಕಿಂಗ್ ಸೌಲಭ್ಯವೂ ಲಭ್ಯವಿರುತ್ತದೆ.

 

*****
 


(Release ID: 2056058) Visitor Counter : 37