ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸ್ವಚ್ಛತಾ ಅಭಿಯಾನವು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ತಾಯಂದಿರು ಮತ್ತು ಸಹೋದರಿಯರ ಜೀವನದಿಂದ ಶಾಪವನ್ನು ನಿವಾರಿಸಿದೆ: ಉಪರಾಷ್ಟ್ರಪತಿ


ಕೆಂಪು ಕೋಟೆಯಿಂದ ಸ್ವಚ್ಛತೆಗೆ ಪ್ರಧಾನಮಂತ್ರಿ ನೀಡಿದ ಕರೆ, ಸ್ವಚ್ಛತೆಯ ಬಗೆಗಿನ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಿತು - ಉಪರಾಷ್ಟ್ರಪತಿ

ಸ್ವಚ್ಛತಾ ಅಭಿಯಾನವು ಸ್ವಚ್ಛತೆಗೆ ಸೀಮಿತವಾಗಬಾರದು; ಇದು ನಮ್ಮ ಆಲೋಚನೆಗಳು ಮತ್ತು ಅಭ್ಯಾಸಗಳಲ್ಲಿ ಬದಲಾವಣೆ ತರಬೇಕು: ಜಗದೀಪ್‌ ಧನಕರ್‌

ಸ್ವಚ್ಛ ಭಾರತ್ ಮಿಷನ್ ಮಹಿಳಾ ಸಬಲೀಕರಣ ಮತ್ತು ಜೀವನೋಪಾಯದ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ - ಉಪರಾಷ್ಟ್ರಪತಿ

ಕಸದ ಬಿಕ್ಕಟ್ಟು ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಆರ್ಥಿಕತೆಗೆ ದಾರಿ ಮಾಡಿಕೊಟ್ಟಿದೆ: ಉಪರಾಷ್ಟ್ರಪತಿ  

ಶುಚಿತ್ವ ಗುಣ, ಮೌಲ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಜೋಡಿಸಿ, ಇದು ನಮ್ಮ ಸಾಂಸ್ಕೃತಿಕ ಪರಂಪರೆ - ಜಗದೀಪ್‌ ಧನಕರ್‌

ಉಪರಾಷ್ಟ್ರಪತಿಗಳು ರಾಜಸ್ಥಾನದ ಜುಂಜುನುದಲ್ಲಿ 'ಸ್ವಚ್ಛತಾ ಹಿ ಸೇವಾ 2024' ಅಭಿಯಾನವನ್ನು ಉದ್ಘಾಟಿಸಿದರು

Posted On: 17 SEP 2024 2:40PM by PIB Bengaluru

ಸ್ವಚ್ಛತೆಯ ಬಗ್ಗೆ ಜನರ ಗ್ರಹಿಕೆಯಲ್ಲಿ ಪರಿವರ್ತಿತ ಬದಲಾವಣೆ ಕಂಡುಬಂದಿದೆ. ಅದು ಪ್ರಧಾನಮಂತ್ರಿಯವರು ನೀಡಿದ ಕರೆಯಿಂದ ಸ್ವಚ್ಛತೆಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್‌ ತಿಳಿಸಿದರು.

ರಾಜಸ್ಥಾನದ ಜುಂಜುನುವಿನಲ್ಲಿ ಪರಮವೀರ್ ಪೀರು ಸಿಂಗ್ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಇಂದು 'ಸ್ವಚ್ಛತಾ ಹಿ ಸೇವಾ - 2024' ಅಭಿಯಾನದ ಉದ್ಘಾಟನೆ ಮಾಡಿದ ಜಗದೀಪ್‌ ಧನಕರ್‌ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. "ಪ್ರಧಾನಿ ನರೇಂದ್ರ ಮೋದಿಯವರು 15 ಆಗಸ್ಟ್ 2014 ರಂದು ಕೆಂಪು ಕೋಟೆಯ ಮೇಲಿನಿಂದ ಸ್ವಚ್ಛತಾ ಅಭಿಯಾನದ ಬಗ್ಗೆ ಘೋಷಣೆ ಮಾಡಿದ್ದರು. ಒಂದು ದಶಕದಲ್ಲಿ ವಿಶ್ವದ ಅತ್ಯಂತ ಕ್ರಾಂತಿಕಾರಿ ಹೆಜ್ಜೆ ಎಂದು ಸಾಬೀತಾಗಿದೆ ಮತ್ತು ಕಳೆದ ದಶಕದಲ್ಲಿ ದೇಶದಲ್ಲಿ ನಿರಂತರ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಅಭಿಯಾನದಿಂದಾಗಿ ಮತ್ತು ಪ್ರಧಾನಿಯವರ ಉಪಕ್ರಮದಿಂದಾಗಿ, ಸ್ವಚ್ಛತೆಯ ಕಡೆಗೆ ಜನರ ಮನಸ್ಥಿತಿಯಲ್ಲಿ ಕ್ರಾಂತಿಕಾರಿ ಮತ್ತು ವ್ಯಾಪಕ ಬದಲಾವಣೆಯಾಗಿದೆ" ಎಂದರು.

 

ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, ಶೌಚಾಲಯಗಳ ಅನುಪಸ್ಥಿತಿಯು ಶಾಪವಾಗಿತ್ತು. "ಮಹಿಳೆಯರ ಘನತೆಗೆ ಧಕ್ಕೆಯುಂಟಾಗುತ್ತಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಲಾದ ಈ ಮಿಷನ್ ಈಗ ಬಹುಮುಖಿ ಅಭಿವೃದ್ಧಿಗೆ ಕಾರಣವಾಗಿದೆ" ಎಂದು ಅವರು ಹೇಳಿದ್ದಾರೆ.

 

ಸ್ವಚ್ಛತಾ ಅಭಿಯಾನದ ವಿವಿಧ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ ಜಗದೀಪ್‌ ಧನಕರ್‌, ಸ್ವಚ್ಛತೆಯನ್ನು ಗುಣ, ಮೌಲ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಜೋಡಿಸುವ ನಿರ್ಣಯಕ್ಕೆ ಕರೆ ನೀಡಿದರು. ನೂತನವಾಗಿ ಹಮ್ಮಿಕೊಂಡಿರುವ ಅಭಿಯಾನದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು, ದಶಕದ ನಂತರ ಹೊಸ ಆರಂಭಕ್ಕೆ ನಾಂದಿ ಹಾಡಿದ್ದು, ಈ ಅಭಿಯಾನ ಸ್ವಚ್ಛತೆಗೆ ಸೀಮಿತವಾಗದೆ ನಮ್ಮ ಚಿಂತನೆಗಳಲ್ಲಿ ಬದಲಾವಣೆ, ಪದ್ಧತಿಯಲ್ಲಿ ಬದಲಾವಣೆ ತರಬೇಕು. ಈ ಜೀವನಶೈಲಿಯು ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಆರ್ಥಿಕ ಪ್ರಗತಿಗೆ ಪ್ರಚಂಡ ಕೊಡುಗೆಯನ್ನು ನೀಡುತ್ತದೆ" ಎಂದು ತಿಳಿಸಿದರು.

 

‘ಮೇರಾ ಯುವ ಭಾರತ್’ ಕಾರ್ಯಕ್ರಮವನ್ನು ಉಪರಾಷ್ಟ್ರಪತಿಗಳು ಶ್ಲಾಘಿಸಿದರು ಮತ್ತು ಈ ಕಾರ್ಯಕ್ರಮಕ್ಕೆ ಯುವಕರನ್ನು ಕಳುಹಿಸಲು ಎಲ್ಲಾ ಕಾಲೇಜುಗಳ ಉಪಕುಲಪತಿಗಳು, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಮನವಿ ಮಾಡಿದರು. ಒಂದೂವರೆ ಕೋಟಿ ಯುವಕರು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸೇರಲು ಮುಂದೆ ಬಂದಿದ್ದಾರೆ, ಇದು ಅವರ ಮನಸ್ಥಿತಿಯನ್ನು ಬದಲಾಯಿಸುತ್ತದೆ, ರಾಷ್ಟ್ರೀಯತೆಯ ಬಗ್ಗೆ ಅವರ ಬದ್ಧತೆಯನ್ನು ತೋರಿಸುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಅದು ಪ್ರವರ್ಧಮಾನಕ್ಕೆ ಬರುತ್ತದೆ ಮತ್ತು ಸಮೃದ್ಧವಾಗುತ್ತದೆ ಎಂದು ಹೇಳಿದರು.

ಸ್ವಚ್ಛ ಭಾರತ ಅಭಿಯಾನದ ಸಾಧನೆಗಳ ಬಗ್ಗೆ ಗಮನ ಸೆಳೆದ ಉಪರಾಷ್ಟ್ರಪತಿಗಳು, 130 ಕೋಟಿ ದೇಶದಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ಎಂಬ ಧ್ಯೇಯೋದ್ದೇಶ ಊಹೆಗೂ ಮೀರಿದ್ದಾಗಿತ್ತು, ಆದರೆ ಇಂದು ಈ ಬದಲಾವಣೆಯಾಗಿದೆ. ಪ್ರಧಾನಿಯವರ ಉಪಕ್ರಮ ಇದಕ್ಕೆ ಕಾರಣವಾಗಿದೆ.

ಭಾರತದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿನ ಆಮೂಲಾಗ್ರ ಬದಲಾವಣೆಗಳಾಗಿವೆ. "ಭಾರತವು ಈಗ ಜಗತ್ತಿಗೆ ಒಂದು ಉದಾಹರಣೆಯಾಗಿದೆ. ಇಂದು ತ್ಯಾಜ್ಯದಿಂದ ಇಂಧನ ಮತ್ತು ಇಂಧನವನ್ನು ಉತ್ಪಾದಿಸಲಾಗುತ್ತಿದೆ" ಎಂದು ಹೇಳಿದರು.

 

ಸ್ವಚ್ಛತೆಯಲ್ಲಿ ನೈರ್ಮಲ್ಯ ಕಾರ್ಯಕರ್ತರ ಪಾತ್ರ ಪ್ರಮುಖವಾದುದು. "ನಾವು ಅವರಿಗೆ ಗೌರವ ಸಲ್ಲಿಸಬೇಕು, ನಾವು ಅವರನ್ನು ಗೌರವದಿಂದ ಕಾಣಬೇಕು, ಅವರು ಅತ್ಯಂತ ಗಂಭೀರವಾದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು

ಸ್ವಚ್ಛತೆಯೇ ಒಂದು ಸೇವೆ, ಇದು ಮಾನವೀಯತೆಗೆ ಅತ್ಯುತ್ತಮವಾದ ಬದ್ಧತೆಯಾಗಿದೆ ಅದನ್ನು ಮುಕ್ತ ಮನಸ್ಸಿನಿಂದ ಅಳವಡಿಸಿಕೊಳ್ಳಬೇಕು.ಈ ನಿಟ್ಟಿನಲ್ಲಿ ಇಡೀ ಸಮಾಜ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸ್ವಚ್ಛತೆ ನಿರ್ಮಾಣವಾಗಬಹುದೆಂಬ ಭರವಸೆ ನನಗಿದೆ. ಇದರಿಂದ ಬಲಿಷ್ಠ ಭಾರತ, ಮತ್ತು ನಮ್ಮ ಪ್ರಯಾಣ ಯಶಸ್ವಿಯಾಗಲಿದೆ ಎಂದು ತಿಳಿಸಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮತ್ತು ವಿದ್ಯುತ್ ಸಚಿವರಾದ ಶ್ರೀ ಮನೋಹರ್ ಲಾಲ್, ರಾಜಸ್ಥಾನ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಶ್ರೀ ಅವಿನಾಶ್ ಗೆಹ್ಲೋಟ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಕಟಿಕಿತಾಳ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. 

ಭಾಷಣದ ಪೂರ್ಣಪಾಠ ಇಲ್ಲಿದೆ: https://pib.gov.in/PressReleasePage.aspx?PRID=2055543

 

*****


(Release ID: 2056023) Visitor Counter : 37