ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಹಾರಾಷ್ಟ್ರದ ಮುಂಬೈನಲ್ಲಿ “ಮುಂಬೈ ಸಮಾಚಾರ”ದ '200 ನಾಟ್ ಔಟ್' ಸಾಕ್ಷ್ಯಚಿತ್ರವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಬಿಡುಗಡೆ ಮಾಡಿದರು


“ಮುಂಬೈ ಸಮಾಚಾರ” ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆಗೆ ಉದಾಹರಣೆಯಾಗಿದೆ, ಅದನ್ನು ಗಳಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ

ಪ್ರಪಂಚದ ಎಲ್ಲಾ ದೇಶಗಳ ಅಲ್ಪಸಂಖ್ಯಾತರು ಪಾರ್ಸಿ ಸಮುದಾಯದಿಂದ ಕಲಿಯಬೇಕು

ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಿದ್ದರೆ ಅದು ಪಾರ್ಸಿ ಸಮುದಾಯದವರು

ತಮ್ಮ ಕರ್ತವ್ಯಕ್ಕಾಗಿ ಮಾತ್ರ ಬದುಕುವ ಮತ್ತು ಎಂದಿಗೂ ಏನನ್ನೂ ಅಪೇಕ್ಷಿಸದೆ ಪ್ರತಿಯೊಂದು ಕ್ಷೇತ್ರದಲ್ಲೂ ಕೊಡುಗೆ ನೀಡುವ ಪಾರ್ಸಿ ಸಮುದಾಯದಿಂದ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಜನರು ಬಹಳಷ್ಟು ಕಲಿಯಬೇಕು.

ಝಾನ್ಸಿ ಕಿ ರಾಣಿ ಯಾವ ಉದ್ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೋ ಅದೇ ಉದ್ದೇಶವನ್ನು ಸಾಬೀತುಪಡಿಸಿದ ಒಬ್ಬ ಗುಜರಾತಿ, 2014 ರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಎರಡೂ ಸುದ್ದಿಗಳನ್ನು ಪ್ರಕಟಿಸಿದ ಏಕೈಕ ಪತ್ರಿಕೆ 'ಮುಂಬೈ ಸಮಾಚಾರ್' ಆಗಿದೆ.

“ಮುಂಬೈ ಸಮಾಚಾರ್” ಯಾವುದೇ ಸಿದ್ಧಾಂತದೊಂದಿಗೆ ಸಂಬಂಧವಿಲ್ಲದೆ ತನ್ನ ಓದುಗರಿಗೆ ಯಾವಾಗಲೂ ಸತ್ಯವನ್ನು ತಲುಪಿಸುತ್ತಿದೆ

'ಮುಂಬೈ ಸಮಾಚಾರ್' ಏಷ್ಯಾದ ಅತ್ಯಂತ ಹಳೆಯ ಮತ್ತು ವಿಶ್ವದ ಮೂರನೇ ಅತ್ಯಂತ ಹಳೆಯ ಸಕ್ರಿಯವಾಗಿ ಕಾಋ್ಯನಿರ್ವಹಿಸುತ್ತಿರುವ ದಿನಪತ್ರಿಕೆಯಾಗಿದೆ

‘ಮುಂಬೈ ಸಮಾಚಾರ’ದಲ್ಲಿ ಯಾವದಾದರೊಂದು ವಿಷಯದ ಬಗ್ಗೆ ಏನಾದರೂ ಪ್ರಕಟವಾದರೆ , ಅದು ಸತ್ಯವಾಗಿರಬೇಕು , ಎಂಬ ಮಾತು ಪ್ರಚಲಿತವಿದೆ

ಮೋದಿ ಸರ್ಕಾರ ತಂದಿರುವ ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ

ಮಕ್ಕಳಿಗೆ ನಮ್ಮ ಭಾಷೆಯನ್ನು ಕಲಿಸಿ, ಅವರನ್ನು ಜೀವನದ ಹಾದಿಯಲ್ಲಿ ನಮ್ಮ ಭಾಷೆಯನ್ನು ಮುಂದೆ ತೆಗೆದುಕೊಂಡು ಹೋಗಿ ಮುಂದಿನ ಪೀಳಿಗೆಗೆ ನಮ್ಮ ಭಾಷೆಯನ್ನು ಹಸ್ತಾಂತರಿಸುವವರೆಗೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ

Posted On: 08 SEP 2024 10:23PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಹಾರಾಷ್ಟ್ರದ ಮುಂಬೈನಲ್ಲಿ “ಮುಂಬೈ ಸಮಾಚಾರ”ದ '200 ನಾಟ್ ಔಟ್' ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, “ಯಾವುದೇ ಸಂಸ್ಥೆಯನ್ನು ಎರಡು ಶತಮಾನಗಳಿಂದ ನಡೆಸುವುದು ತುಂಬಾ ಕಷ್ಟ, ಅದು ಕೂಡ ಸ್ಥಳೀಯ ಭಾಷಾ ಪತ್ರಿಕೆ. “ಮುಂಬೈ ಸಮಾಚಾರ” ವಿಶ್ವಾಸಾರ್ಹತೆಗೆ ಉದಾಹರಣೆಯಾಗಿದೆ. ಅಂತಹ ವಿಶ್ವಾಸಾರ್ಹತೆಯನ್ನು ಗಳಿಸಲು ಒಬ್ಬರು ತುಂಬಾ ಶ್ರಮಿಸಬೇಕು” ಎಂದು ಶ್ರೀ ಶಾ ಹೇಳಿದರು. “ಯಾವುದೇ ಸಿದ್ಧಾಂತದೊಂದಿಗೆ ಸಂಬಂಧವಿಲ್ಲದ ರಾಜಕಾರಣಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಆದರೆ ಯಾವುದೇ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿರುವ ಯಾವುದೇ ಪತ್ರಿಕೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು. “ “ಮುಂಬೈ ಸಮಾಚಾರ” ಯಾವುದೇ ಸಿದ್ಧಾಂತದೊಂದಿಗೆ ಸಂಬಂಧ ಹೊಂದದೆ ಓದುಗರೊಂದಿಗೆ ಮಾತ್ರ ನೇರ ಸಂಪರ್ಕ ಹೊಂದಿದ್ದು, ಅವರಿಗೆ ಸತ್ಯವನ್ನು ತಲುಪಿಸುತ್ತಿದೆ” ಎಂದು ಅವರು ಹೇಳಿದರು.

ಝಾನ್ಸಿ ಕಿ ರಾಣಿ ಯಾವ ಉದ್ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೋ ಅದೇ ಉದ್ದೇಶವನ್ನು ಸಾಬೀತುಪಡಿಸಿದ ಗುಜರಾತಿಯೊಬ್ಬರು 2014 ರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು, ಈ ಎರಡೂ ಸುದ್ದಿಗಳನ್ನು ಪ್ರಕಟಿಸಿದ ಏಕೈಕ ಪತ್ರಿಕೆ 'ಮುಂಬೈ ಸಮಾಚಾರ್' ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 

“1857ರ ಕ್ರಾಂತಿ, ಕಾಂಗ್ರೆಸ್ನ ರಚನೆ, ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಗಣೇಶ ಉತ್ಸವದ ಆರಂಭ, ಗೋಖಲೆ-ತಿಲಕ್ ಮತ್ತು ಗಾಂಧೀಜಿಯವರ ಪ್ರವರ್ಧಮಾನಕ್ಕೆ ಏರಿದ ಹೋರಾಟ, ಭಾರತ ಚಳವಳಿ, ಉಪ್ಪಿನ ಸತ್ಯಾಗ್ರಹ, ಬ್ರಿಟೀಷರ ನಿರ್ಗಮನ, ಸ್ವಾತಂತ್ರ್ಯ ದಿನ ಮತ್ತು ಸ್ವಾತಂತ್ರ್ಯದ 75 ವರ್ಷಗಳು, ಮುಂತಾದ ಸಂದರ್ಭಗಳಲ್ಲಿ ವರದಿ ಮಾಡಿದ ಏಕೈಕ ಪತ್ರಿಕೆ 'ಮುಂಬೈ ಸಮಾಚಾರ್' ಆಗಿದೆ “ಎಂದು ಶ್ರೀ ಶಾ ಹೇಳಿದರು. 

ಶ್ರೀ ಅಮಿತ್ ಶಾ ಅವರು ದೀರ್ಘಕಾಲ ಪತ್ರಿಕೆ ನಡೆಸುವುದು ಮತ್ತು ಪತ್ರಿಕೋದ್ಯಮದ ಉದ್ದೇಶಗಳಿಗೆ ಅಂಟಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿದೆ, ಇದನ್ನು “ಮುಂಬೈ ಸಮಾಚಾರ” ಸಾಧಿಸಿದೆ. 1962ರ ಭಾರತ-ಚೀನಾ ಯುದ್ಧ, ಕಛ್ ಭೂಕಂಪ, ಸ್ವಾತಂತ್ರ್ಯ ಚಳವಳಿ, ತುರ್ತುಪರಿಸ್ಥಿತಿ ವಿರುದ್ಧದ ಜನಪರ ಹೋರಾಟದಂತಹ ದೇಶದ ಆಗು-ಹೋಗುಗಳಲ್ಲಿ ಪತ್ರಿಕೋದ್ಯಮದ ನೀತಿಯನ್ನು ಅನುಸರಿಸಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೋದ್ಯಮದಲ್ಲಿ ಗುಜರಾತಿಯನ್ನು ಜೀವಂತವಾಗಿಡಲು ಮತ್ತು ಜನರು ಗುಜರಾತಿಯನ್ನು ಮಾತನಾಡುವ ಭಾಷೆಯಾಗಿ ಬಳಸಲು “ಮುಂಬೈ ಸಮಾಚಾರ್” ದೊಡ್ಡ ಕೊಡುಗೆ ನೀಡಿದೆ ಎಂದು ಅವರು ಹೇಳಿದರು. ಪತ್ರಿಕೆಯ ಪ್ರಸರಣವು ಪತ್ರಿಕೆಯ ಕೊಡುಗೆಗಳ ನಿಜವಾದ ಸೂಚಕವಾಗಿರಬಾರದು ಎಂದು ಶ್ರೀ ಷಾ ಹೇಳಿದರು, “ಮುಂಬೈ ಸಮಾಚಾರ”ದ ಕೊಡುಗೆಗಳು ಅದರ ಪ್ರಸಾರಕ್ಕಿಂತ ಎಷ್ಟೋಪಾಲು ದೊಡ್ಡದಾಗಿದೆ ಎಂದು ಅವರು ಹೇಳಿದರು.

“ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಿದ್ದರೆ ಅದು ಪಾರ್ಸಿಗಳು” ಎಂದು ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರು ಹೇಳಿದ್ದಾರೆ. “ತಮ್ಮ ಕರ್ತವ್ಯಕ್ಕಾಗಿ ಬದುಕುವ ಮತ್ತು ಎಂದಿಗೂ ಏನನ್ನೂ ಅಪೇಕ್ಷಿಸದೆ ಪ್ರತಿಯೊಂದು ಕ್ಷೇತ್ರದಲ್ಲೂ ಕೊಡುಗೆ ನೀಡಿರುವ ಪಾರ್ಸಿ ಸಮುದಾಯದಿಂದ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಜನರು ಕಲಿಯಬೇಕು” ಎಂದು ಹೇಳಿದರು. ದೇಶದ ಕಾನೂನು, ಕೈಗಾರಿಕಾ ಅಭಿವೃದ್ಧಿ, ಫಿನ್ಟೆಕ್ ಅಥವಾ ಐಟಿ ವಲಯದ ಬಗ್ಗೆ ಪಾರ್ಸಿ ಸಮುದಾಯವು ಮುಂಚೂಣಿಯಲ್ಲಿದೆ ಎಂದು ಶ್ರೀ ಶಾ ಹೇಳಿದರು. “ಮುಂಬೈ ಸಮಾಚಾರ”ದ ಮೂಲಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ “ಕಾಮ ಕುಟುಂಬ” ನೀಡಿದ ಕೊಡುಗೆಯನ್ನು ಗುಜರಾತ್, ಗುಜರಾತಿಗಳು ಮತ್ತು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. “ಮುಂಬೈ” ಎಂಬ ಹೆಸರನ್ನು ಬಾಂಬೆಯಿಂದ ಬದಲಾಯಿಸಿದಾಗ ನ್ಯಾಯಾಲಯದಲ್ಲಿ ದೊಡ್ಡ ಸಾಕ್ಷಿಯಾಗಿ “ಮುಂಬೈ ಸಮಾಚಾರ” ಉಲ್ಲೇಖವಾಗಿರುವುದು ಪತ್ರಿಕೆಗೆ ದೊಡ್ಡ ಬಿರುದು ತಂದಿದೆ ಎಂದು ಅವರು ಹೇಳಿದರು.

“ಭಾರತದ ಭಾಷೆಗಳು, ಭಾರತದ ಪರಂಪರೆಯಾಗಿದೆ ಮತ್ತು ಪ್ರಪಂಚದ ಯಾವುದೇ ದೇಶವು ಭಾರತದಂತೆ ಹಲವಾರು ಉಪಭಾಷೆಗಳು ಮತ್ತು ಭಾಷೆಗಳನ್ನು ಹೊಂದಿಲ್ಲ” ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಇದಕ್ಕಾಗಿಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂದಿರುವ ನೂತನ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಮನೆಯಲ್ಲಿ ಕನಿಷ್ಠ ನಮ್ಮ ಭಾಷೆಯಲ್ಲಾದರೂ ಮಾತನಾಡಬೇಕು, ಇದರಿಂದ ಮಕ್ಕಳಿಗೆ ನಮ್ಮ ಭಾಷೆ ಕಲಿಯಲು ಸಹಾಯವಾಗುತ್ತದೆ ಎಂದು ಗೃಹ ಸಚಿವರು ಎಲ್ಲರಿಗೂ ಮನವಿ ಮಾಡಿದರು. 

“ನಮ್ಮ ಭಾಷೆಯ ಸಂಪರ್ಕ ಕಡಿದುಕೊಂಡರೆ ನಮ್ಮ ಸಂಸ್ಕೃತಿಯ ಸಂಪರ್ಕವೂ ಕಳಚಿಕೊಂಡಂತಾಗುತ್ತದೆ. ಮಕ್ಕಳಿಗೆ ನಮ್ಮ ಭಾಷೆಯನ್ನು ಕಲಿಸಿ, ನಮ್ಮ ಭಾಷೆಯನ್ನು ಮುಂದೆ ಕೊಂಡೊಯ್ದು ಮುಂದಿನ ಪೀಳಿಗೆಗೆ ನಮ್ಮ ಭಾಷೆಯನ್ನು ಹಸ್ತಾಂತರಿಸುವವರೆಗೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು

ನಮ್ಮ ಭಾಷೆಯನ್ನು ಉಳಿಸಿ, ಬೆಳೆಸಿ, ಹೆಚ್ಚು ಅರ್ಥಪೂರ್ಣ, ಹೊಂದಿಕೊಳ್ಳುವ ಮತ್ತು ಅದರ ಸಹೋದರ ಭಾಷೆಗಳೊಂದಿಗೆ ನಮ್ಮ ಶಬ್ದಕೋಶವನ್ನು ಶ್ರೀಮಂತಗೊಳಿಸುವುದರಿಂದ ನಮ್ಮ ಶಬ್ದಕೋಶವು ಶ್ರೀಮಂತವಾಗುತ್ತದೆ , ಮಾತೃಭಾಷೆಗಾಗಿ ಪ್ರತಿಯೊಬ್ಬರು ಸಾಕಷ್ಟು ಕೆಲಸ ಮಾಡಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 

ಕೇಂದ್ರ ಗೃಹ ಸಚಿವಾಲಯವು ಈ ವಿಷಯದಲ್ಲಿ ನಿಖರವಾಗಿ ಕೆಲಸ ಮಾಡಿದೆ ಮತ್ತು ಹಿಂದಿ ನಿಘಂಟನ್ನು ವಿಸ್ತರಿಸಿದೆ ಎಂದು ಅವರು ಹೇಳಿದರು. ದೇಶಾದ್ಯಂತ ಸ್ಥಳೀಯ ಭಾಷೆಗಳಿಂದ 22,831 ಪದಗಳನ್ನು ತರುವ ಮೂಲಕ ಹಿಂದಿಯನ್ನು ಸಂಪೂರ್ಣ ಭಾಷೆಯನ್ನಾಗಿ ಮಾಡಲು ನಾವು ಶ್ರಮಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 

“ಮುಂಬೈ ಸಮಾಚಾರ್” ಏಷ್ಯಾದ ಅತ್ಯಂತ ಹಳೆಯ ಪತ್ರಿಕೆ ಮತ್ತು ವಿಶ್ವದ ಮೂರನೇ ಅತ್ಯಂತ ಹಳೆಯ ಪತ್ರಿಕೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಿಶ್ವದಲ್ಲೇ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿರುವ ಏಕೈಕ ಪತ್ರಿಕೆಯಾಗಿದೆ ಎಂದರು. ಭಾರತದ ಇತಿಹಾಸದಲ್ಲಿ ಕಳೆದ 200 ವರ್ಷಗಳು ಏರಿಳಿತಗಳಿಂದ ಕೂಡಿವೆ ಎಂದು ಶ್ರೀ ಶಾ ಹೇಳಿದರು. ಸ್ವಾತಂತ್ರ್ಯದ 75 ವರ್ಷಗಳು ಮತ್ತು ಈಗ ಮುಂದಿನ ಹಾದಿಯು ಸ್ಪಷ್ಟವಾಗಿದೆ, ಸುಸಜ್ಜಿತ ಮತ್ತು ವೈಭವಯುತವಾಗಿದೆ, ಆದರೆ ಅದಕ್ಕಿಂತ ಹಿಂದಿನ 125 ವರ್ಷಗಳು ಏರಿಳಿತಗಳಿಂದ ತುಂಬಿದ್ದವು ಮತ್ತು ಈ ಸಮಯದಲ್ಲಿ “ಮುಂಬೈ ಸಮಾಚಾರ”ವು ಎಂದಿಗೂ ಲಾಭದ ಬಗ್ಗೆ ಚಿಂತಿಸದೆ ಪತ್ರಿಕೋದ್ಯಮದ ನೀತಿಯನ್ನು ಮುನ್ನಡೆಸಲು ಯಾವಾಗಲೂ ಶ್ರಮಿಸಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 

50 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಒಂದು ನಿಮಿಷವೂ ಎಡಿಟ್ ಮಾಡದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಡಬ್ ಮಾಡಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಎರಡು ಶತಮಾನಗಳು ಕಳೆದರೂ ಈ ಸ್ಥಳೀಯ ಭಾಷೆಯ ದಿನಪತ್ರಿಕೆ ಇನ್ನೂ ಕ್ಷೇತ್ರದಿಂದ ಹೊರಬಿದ್ದಿಲ್ಲ, ನಿಲುಗಡೆಯಾಗಿಲ್ಲ,  ಮತ್ತು ಮೂರನೇ ಶತಮಾನ ಪೂರೈಸಲು ಸಿದ್ಧವಾಗಿದೆ ಎಂಬುದನ್ನು “ಮುಂಬೈ ಸಮಾಚಾರ”ವು ಇಡೀ ದೇಶಕ್ಕೆ ತಿಳಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ವೇಗವಾಗಿ ಪ್ರಗತಿ ಹೊಂದುತ್ತಿದೆ ಮತ್ತು 11 ರಿಂದ ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ , ಇಂದು ಇಡೀ ಜಗತ್ತು ಭಾರತವನ್ನು ಉಜ್ವಲ ತಾಣವೆಂದು ಪರಿಗಣಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಭಾರತವು ಜಿ-20 ರಾಷ್ಟ್ರಗಳಲ್ಲಿ ಅತ್ಯಧಿಕ ಬೆಳವಣಿಗೆ ದರವನ್ನು ಹೊಂದಿದೆ ಮತ್ತು ಶೀಘ್ರದಲ್ಲೇ ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ಸ್ವಾತಂತ್ರ್ಯದ 75 ರಿಂದ 100 ವರ್ಷಗಳ ನಡುವಿನ ಈ ಅವಧಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ  ಮೋದಿಯವರು “ಅಮೃತ ಕಾಲ” ಎಂದು ಕರೆದಿದ್ದಾರೆ ಮತ್ತು ಈ ಯಾತ್ರೆಯು ಭಾರತವನ್ನು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. 2047 ರ ಆಗಸ್ಟ್ 15 ರಂದು ಭಾರತವು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಮೊದಲ ಸ್ಥಾನದಲ್ಲಿರುತ್ತದೆ ಎಂಬ ಮೋದಿ ಜೀ ಅವರ ಸಂಕಲ್ಪವನ್ನು ದೇಶದ 140 ಕೋಟಿ ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದರು.

 

*****
 


(Release ID: 2053111) Visitor Counter : 44