ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav g20-india-2023

'ನೋಡಿ ನಮ್ಮ ದೇಶವನ್ನು, ಜನತೆಯ ಆಯ್ಕೆ (ದೇಖೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್) 2024' ಗಾಗಿ ಮತದಾನವು ಸೆಪ್ಟೆಂಬರ್ 15 ರವರೆಗೆ ತೆರೆದಿರುತ್ತದೆ


ಹೆಚ್ಚಿನ ಆದ್ಯತೆಯ ಆಕರ್ಷಣೀಯ ಪ್ರವಾಸಿತಾಣಗಳನ್ನು ಗುರುತಿಸಲು ಮತ್ತು ಅವುಗಳನ್ನು ಮಿಷನ್ ಮೋಡ್ ನಲ್ಲಿ ವಿಶ್ವದರ್ಜೆಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುವ ಉಪಕ್ರಮ

Posted On: 06 SEP 2024 2:28PM by PIB Bengaluru

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು 'ನೋಡಿ ನಮ್ಮ ದೇಶವನ್ನು, ಜನತೆಯ ಆಯ್ಕೆ(ದೇಖೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್) 2024' ಅನ್ನು ಅಭಿವೃದ್ಧಿಪಡಿಸಿದೆ, ಈ ಮೂಲಕ 'ಭಾರತದ ಜನತೆಯ (ಭಾರತ್ ಕಿ ಜನತಾ)'ದ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಮೊಟ್ಟಮೊದಲ ರಾಷ್ಟ್ರವ್ಯಾಪಿ ಐಪಿ (ಬೌದ್ಧಿಕ ಆಸ್ತಿ) ಪ್ರಯತ್ನ ನಡೆದಿದೆ. ಈ ಉಪಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 7 ಮಾರ್ಚ್ 2024 ರಂದು ಶ್ರೀನಗರದಲ್ಲಿ ಪ್ರಾರಂಭಿಸಿದರು. ಮತದಾನವು ಸೆಪ್ಟೆಂಬರ್ 15, 2024 ರವರೆಗೆ ತೆರೆದಿರುತ್ತದೆ.

Image

ರಾಷ್ಟ್ರವ್ಯಾಪಿ ಸಮೀಕ್ಷೆಯ ಉದ್ದೇಶವು ಹೆಚ್ಚು ಆದ್ಯತೆಯ ಪ್ರವಾಸಿ ಆಕರ್ಷಣೆಗಳನ್ನು ಗುರುತಿಸಲು ನಾಗರಿಕರೊಂದಿಗೆ ತೊಡಗಿಸಿಕೊಳ್ಳುವುದು ಮತ್ತು 5 ಪ್ರವಾಸೋದ್ಯಮ ವಿಭಾಗಗಳಲ್ಲಿ - ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಂಪರೆ, ಪ್ರಕೃತಿ ಮತ್ತು ವನ್ಯಜೀವಿ, ಸಾಹಸ ಮತ್ತು ಇತರ ಪ್ರವಾಸಿ ವಿಷಯಗಳನ್ನು ಅರ್ಥಮಾಡಿಕೊಳ್ಳುವುದ. ನಾಲ್ಕು ಮುಖ್ಯ ವಿಭಾಗಗಳಲ್ಲದೆ, 'ಇತರ' ವರ್ಗವು ತಮ್ಮ ವೈಯಕ್ತಿಕ ಮೆಚ್ಚಿನವುಗಳಿಗೆ ಮತ ಹಾಕಬಹುದು ಮತ್ತು ಅನ್ವೇಷಿಸದ ಪ್ರವಾಸೋದ್ಯಮ ಆಕರ್ಷಣೆಗಳು ಮತ್ತು ವೈಬ್ರೆಂಟ್ ಬಾರ್ಡರ್ ವಿಲೇಜ್ ಗಳು, ವೆಲ್‌ನೆಸ್ ಟೂರಿಸಂ, ವೆಡ್ಡಿಂಗ್ ಟೂರಿಸಂ ಮುಂತಾದ ಸ್ಥಳಗಳ ರೂಪದಲ್ಲಿ ಅಪರಿಚಿತ ಹಾಗೂ ಪ್ರಚಾರ ಸಿಗದೆ ಗುಪ್ತವಾಗಿರುವ ಪ್ರವಾಸೋದ್ಯಮ ಕ್ಷೇತ್ರದ ಅಮೂಲ್ಯ ರತ್ನಗಳನ್ನು ಬಹಿರಂಗಪಡಿಸಲು  ಈ ಉಪಕ್ರಮ ಸಹಾಯ ಮಾಡುತ್ತದೆ.

ಈ ಉಪಕ್ರಮಕ್ಕೆ ಮೀಸಲಾದ https://innovateindia.mygov.in/dekho-apna-desh/ ಪೋರ್ಟಲ್ ನಲ್ಲಿ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ರಮವಾಗಿ ಇಮೇಲ್ ಐಡಿ ಮೂಲಕ ವಿವಿಧ ವರ್ಗಗಳಲ್ಲಿ - ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಂಪರೆ, ಪ್ರಕೃತಿ ಮತ್ತು ವನ್ಯಜೀವಿ ಸಾಹಸ, ಇತರೆ (ತೆರೆದ ವರ್ಗ) – ಹೀಗೆ ನಾನಾ ವರ್ಗಗಳಳ್ಲಿ  ಮತ ಚಲಾಯಿಸಬಹುದು. 

ಪ್ರಮುಖ ಮಧ್ಯಸ್ಥಗಾರರಿಂದ ಗಣನೀಯ ಬೆಂಬಲ ಮತ್ತು ಹೂಡಿಕೆಗಳನ್ನು ಪಡೆಯುವ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನು ನಿರ್ಧರಿಸಲು ಈ ಫಲಿತಾಂಶಗಳು ಸಹಾಯ ಮಾಡುತ್ತವೆ.

ಉಪಕ್ರಮದ ಮೂಲಕ, ಸಾಂಸ್ಕೃತಿಕ ಮತ್ತು ಸಂಪ್ರದಾಯಗಳ ಸಂರಕ್ಷಣೆಯನ್ನು ಉತ್ತೇಜಿಸಲು ಸಚಿವಾಲಯವು ಪ್ರಯತ್ನಿಸುತ್ತದೆ, ಭವಿಷ್ಯದ ಪೀಳಿಗೆಗೆ ಅವರ ದೀರ್ಘಾಯುಷ್ಯವನ್ನು ಖಾತ್ರಿಪಡಿಸುತ್ತದೆ. ಇದು ಪ್ರಸಿದ್ಧವಾದ ಜನಪ್ರಿಯ ಆಕರ್ಷಣೆಗಳ ಹೊರತಾಗಿ ಜನರು ಭೇಟಿ ನೀಡಲು ಇಷ್ಟಪಡುವ ಕಡಿಮೆ-ಪರಿಚಿತ ಪ್ರವಾಸಿ ಸ್ಥಳಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ಈ ಉಪಕ್ರಮವನ್ನು ಪ್ರಾರಂಭಿಸುವುದರೊಂದಿಗೆ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ವಿಕಸಿತ ಭಾರತ @ 2047 ರ ಕಡೆಗೆ ಭಾರತದ ಪ್ರಯಾಣವನ್ನು ಬೆಂಬಲಿಸುತ್ತಿದೆ. ಈ ಉಪಕ್ರಮವು 'ಸಂಪೂರ್ಣ ಸರ್ಕಾರದ' ವಿಧಾನದ ಮೂಲಕ, ಮಿಷನ್ ಮೋಡ್‌ನಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ, ದೇಶದ ಅಭಿವೃದ್ಧಿಗೆ ಪೂರಕವಾಗಿ ನಾನಾ ಕ್ಷೇತ್ರಗಳು, ಆಕರ್ಷಣೆಗಳು ಮತ್ತು ತಾಣಗಳನ್ನು ಗುರುತಿಸುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಭೇಟಿ ನೀಡಿ:

https://innovateindia.mygov.in/dekho-apna-desh/

 

*****



(Release ID: 2052526) Visitor Counter : 30