ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕಾರ್ಮಿಕ ಸುಧಾರಣೆಗಳು ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆಗೆ ಚಂಡೀಗಢದಲ್ಲಿ ನಡೆಯಲಿರುವ ಎರಡನೇ ಪ್ರಾದೇಶಿಕ ಸಭೆಯ ಅಧ್ಯಕ್ಷತೆ ವಹಿಸಲಿರುವ ಸುಶ್ರಿ ಶೋಭಾ ಕರಂದ್ಲಾಜೆ
Posted On:
05 SEP 2024 11:43AM by PIB Bengaluru
ಪಂಜಾಬ್, ಹಿಮಾಚಲ ಪ್ರದೇಶ, ಲಡಾಖ್, ರಾಜಸ್ಥಾನ್ ಮತ್ತು ಚಂಡೀಗಢ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಉತ್ತರದ ರಾಜ್ಯಗಳ ಪ್ರಾದೇಶಿಕ ಸಭೆ 2024ರ ಸೆಪ್ಟಂಬರ್ 6ರಂದು ಚಂಡೀಗಢದಲ್ಲಿ ನಡೆಯಲಿದೆ. ಭಾರತ ಸರ್ಕಾರದ ಕಾರ್ಮಿಕ ಮತ್ತು ಔದ್ಯೋಗಿಕ ಸಚಿವಾಲಯವು ಕಾರ್ಮಿಕ ಸುಧಾರಣೆಗಳು, ಇಶ್ರಮ್-ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (ಎನ್ ಡಿಯುಡಬ್ಲೂ), ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಬಿಒಸಿಡ್ಲೂ), ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಕೇಂದ್ರೀಕರಿಸುವ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಈ ಸಭೆಯನ್ನು ಆಯೋಜಿಸಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಶ್ರೀಮತಿ ಸುಮಿತಾ ದಾವ್ರಾ ಮತ್ತು ಭಾರತ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಗಳ ಇತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನಡೆಸುತ್ತಿರುವ ರಾಷ್ಟ್ರವ್ಯಾಪಿ ಸಮಾಲೋಚನೆಗಳ ಸರಣಿಯ ಮುಂದುವರಿಕೆಯಾಗಿದೆ. ಮೊದಲನೇ ಪ್ರಾದೇಶಿಕ ಸಭೆಯನ್ನು 2024ರ ಆ.30ರಂದು ಬೆಂಗಳೂರಿನಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಪುದುಚೇರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಕ್ಷಿಣ ರಾಜ್ಯಗಳು/ಕೇಂದ್ರಾಳಿತ ಪ್ರದೇಶಗಳೊಂದಿಗೆ ನಡೆಸಲಾಯಿತು. ಈ ಪ್ರಾದೇಶಿಕ ಸಭೆಗಳು 04.10.2024 ರವರೆಗೆ ಮುಂದುವರಿಯಲಿವೆ.
ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಚಿಸಿದ ಕರಡು ನಿಯಮಗಳಲ್ಲಿ ಸಮನ್ವಯತೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ರಕ್ಷಣೆಯ ಪ್ರಯೋಜನ ಸುಲಭವಾಗಿ ದೊರಕಿಸಿಕೊಡಲು ಇ-ಶ್ರಮ್ ಪೋರ್ಟಲ್ ಅನ್ನು 'ಒಂದು-ನಿಲುಗಡೆ ಪರಿಹಾರ'ವಾಗಿ ಸ್ಥಾಪಿಸುವುದು, ವಿವಿಧ ಕೇಂದ್ರಗಳ ವ್ಯಾಪ್ತಿಯ ವಿಸ್ತರಣೆ, ಬಿಒಸಿ ಕಾರ್ಮಿಕರ ಕಲ್ಯಾಣ ಯೋಜನೆಗಳು, ಉದ್ಯೋಗಾವಕಾಶಗಳಿಗಾಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ, ಉದ್ಯೋಗದ ಮಾಪನ ಮತ್ತು ರಾಷ್ಟ್ರೀಯ ವೃತ್ತಿ ಸೇವೆ (ಎನ್ ಸಿಎಸ್) ಸೇರಿದಂತೆ ಪ್ರಮುಖ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.
*****
(Release ID: 2052156)
Visitor Counter : 48