ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ
ಭಾರತ ಮತ್ತು ಯುನೆಸ್ಕೋ ಜಂಟಿಯಾಗಿ ಮುಖ್ಯ ವೈಜ್ಞಾನಿಕ ಸಲಹೆಗಾರರ ರೌಂಡ್ ಟೇಬಲ್ (CSAR) 2024 ಆವೃತ್ತಿಯನ್ನು 6 ಸೆಪ್ಟೆಂಬರ್ 2024 ರಂದು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಆಯೋಜಿಸಿದೆ
प्रविष्टि तिथि:
03 SEP 2024 11:19AM by PIB Bengaluru

ಮುಖ್ಯ ವಿಜ್ಞಾನ ಸಲಹೆಗಾರರ ದುಂಡು ಮೇಜಿನ ಸಮ್ಮೇಳನ 2024 (CSAR) ಶುಕ್ರವಾರ, 6 ಸೆಪ್ಟೆಂಬರ್ 2024 ರಂದು ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (UNESCO) ನ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ದುಂಡು ಮೇಜಿನ ಸಮ್ಮೇಳನವನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಮತ್ತು ಯುನೆಸ್ಕೋದ ನೈಸರ್ಗಿಕ ವಿಜ್ಞಾನ ವಲಯ ಜಂಟಿಯಾಗಿ ಆಯೋಜಿಸಿದೆ. 2023 ರಲ್ಲಿ ಭಾರತದ G20 ಅಧ್ಯಕ್ಷರ ಅವಧಿಯಲ್ಲಿ ಶೆರ್ಪಾ-ಟ್ರ್ಯಾಕ್ ಕಾರ್ಯಕ್ರಮದ ಅಡಿಯಲ್ಲಿ ಮುಖ್ಯ ವಿಜ್ಞಾನ ಸಲಹೆಗಾರರ ರೌಂಡ್ ಟೇಬಲ್ ಕಾನ್ಫರೆನ್ಸ್ ಪರಿಕಲ್ಪನೆಯನ್ನು ರೂಪಿಸಿ ಪ್ರಾರಂಭಿಸಲಾಯ್ತು.
ಸಮ್ಮೇಳನದಲ್ಲಿ 28 ದೇಶಗಳ ಪ್ರತಿನಿಧಿಗಳು ತಮ್ಮ ಮುಖ್ಯ ವಿಜ್ಞಾನ ಸಲಹೆಗಾರರು (CSAs) ಅಥವಾ ನಾಮನಿರ್ದೇಶಿತ ಸಮಾನರ ನೇತೃತ್ವದಲ್ಲಿ, ಮತ್ತು 6 ಅಂತರರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಲಿವೆ. ಮುಕ್ತ ವಿಜ್ಞಾನವನ್ನು ಪ್ರೋತ್ಸಾಹಿಸುವುದು, ಜ್ಞಾನದ ಅಸಮತೋಲನವನ್ನು ನಿವಾರಿಸುವುದು, ಮತ್ತು ಜಾಗತಿಕವಾಗಿ ವಿಜ್ಞಾನ ಸಲಹೆ ಸಾಮರ್ಥ್ಯವನ್ನು ನಿರ್ಮಿಸುವುದು" ಎಂಬ ವಿಷಯದ ಕುರಿತು ಚರ್ಚಿಸಲಿದ್ದಾರೆ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊಫೆಸರ್ ಅಜಯ್ ಕುಮಾರ್ ಸೂದ್ ಮತ್ತು ಯುನೆಸ್ಕೋದ ಸಹಾಯಕ ಮಹಾನಿರ್ದೇಶಕ (ಹೆಚ್ಚುವರಿ ಮಹಾನಿರ್ದೇಶಕ - ನೈಸರ್ಗಿಕ ವಿಜ್ಞಾನ) ಡಾ. ಲಿಡಿಯಾ ಬ್ರಿಟೊ ದುಂಡುಮೇಜಿನ ಸಮ್ಮೇಳನದ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.
ಸೆಪ್ಟೆಂಬರ್ 6, 2024 ರಂದು, CSAR 2024ಕ್ಕೆ ಮುನ್ನ ವಿಜ್ಞಾನದ ಮೇಲಿನ ವಿಶ್ವಾಸವನ್ನು ಬೆಳೆಸುವಲ್ಲಿ ವಿಜ್ಞಾನ ಸಲಹಾ ಕಾರ್ಯವಿಧಾನಗಳ ಪ್ರಭಾವದ ಕುರಿತು ಚರ್ಚಿಸಲಾಗುವುದು. ಅಲ್ಲದೆ ರಾಷ್ಟ್ರ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಸಲಹೆಗೆ ಸಂಬಂಧಿಸಿದ ಸಾಮರ್ಥ್ಯ ನಿರ್ಮಾಣದ ಕುರಿತು ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೆ, ಈ ಮುಕ್ತ ಸಮ್ಮೇಳನವು ಮುಖ್ಯ ವೈಜ್ಞಾನಿಕ ಸಲಹೆಗಾರರು, ಸಮಾನ ಸ್ಥಾನಮಾನದ ಅಧಿಕಾರಿಗಳು, ವಿವಿಧ ಸದಸ್ಯ ರಾಷ್ಟ್ರಗಳ ಯುನೆಸ್ಕೋ ಖಾಯಂ ನಿಯೋಗಗಳು, ಮತ್ತು ಅಂತರರಾಷ್ಟ್ರೀಯ ವೈಜ್ಞಾನಿಕ ಮತ್ತು ವೈಜ್ಞಾನಿಕ ಸಲಹಾ ಸಂಸ್ಥೆಗಳ ಪ್ರತಿನಿಧಿಗಳ ನಡುವಿನ ಸಂವಾದಕ್ಕೆ ವೇದಿಕೆಯನ್ನು ಒದಗಿಸಲಿದೆ.
ರೌಂಡ್ ಟೇಬಲ್ ಕಾನ್ಫರೆನ್ಸ್ ನ 2024 ರ ಆವೃತ್ತಿಯು ದಕ್ಷಿಣ ಆಫ್ರಿಕಾದ ನಾಯಕತ್ವದಲ್ಲಿ ಈ ಕಾರ್ಯಕ್ರಮದ ಮುಂದುವರಿಕೆಗೆ ದಾರಿ ಮಾಡಿಕೊಡಲಿದೆ.
*****
(रिलीज़ आईडी: 2051638)
आगंतुक पटल : 88