ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಡಿಯೋ ಕಾನ್ಪರೆನ್ಸ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ


“ದೇಶದಲ್ಲಿ ವಂದೇ ಭಾರತ್ ರೈಲುಗಳ ವಿಸ್ತರಣೆ ಮತ್ತು ಆಧುನೀಕರಣದ ಮೂಲಕ ವಿಕಸಿತ ಭಾರತದ ಗುರಿ ತಲುಪಲು ರಾಷ್ಟ್ರ ಇಂಚಿಂಚು ಸಾಗುತ್ತಿದೆ”

“ವಿಕಸಿತ ಭಾರತದ ಗುರಿ ಸಾಧಿಸಲು ದಕ್ಷಿಣ ರಾಜ್ಯಗಳ ತ್ವರಿತ ಬೆಳವಣಿಗೆ ಅಗತ್ಯ”

“ರಾಷ್ಟ್ರೀಯ ರಾಜಧಾನಿ ವಲಯ [ಎನ್.ಸಿ.ಆರ್] ಆಧುನಿಕ ರೈಲುಗಳು, ಎಕ್ಸ್ ಪ್ರೆಸ್ ಹೆದ್ದಾರಿ ಸಂಪರ್ಕ ಜಾಲ ಮತ್ತು ರೈಲು ಸೇವೆಗಳ ವಿಸ್ತರಣೆ ಒಳಗೊಂಡಂತೆ ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಪಿಎಂ ಗತಿಶಕ್ತಿ ಉದಾಹರಣೆ”

“ಭಾರತೀಯ ರೈಲ್ವೆಯ ಆಧುನೀಕರಣಕ್ಕೆ ವಂದೇ ಭಾರತ್ ಹೊಸ ಮುಖವಾಗಿದೆ” 

Posted On: 31 AUG 2024 1:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಪ್ರಧಾನಮಂತ್ರಿಯವರ ‘ಭಾರತದಲ್ಲೇ ತಯಾರಿಸು - ಮೇಕ್ ಇನ್ ಇಂಡಿಯಾ’ ಮತ್ತು ಸ್ವಾವಲಂಬಿ ಭಾರತ” ದೃಷ್ಟಿಕೋನದ ಮಹತ್ವ ಕುರಿತು ಬೆಳಕು ಚೆಲ್ಲಿದರು. ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರ್‌ಕೋಯಿಲ್ ಮೂರು ಮಾರ್ಗಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತಿದೆ. ಈ ಮೂರು ರೈಲುಗಳು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಪರ್ಕ ವ್ಯವಸ್ಥೆಗೆ ಪುಷ್ಟಿ ನೀಡಲಿದೆ.

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರ್‌ಕೋಯಿಲ್ ವಂದೇ ಭಾರತ್ ರೈಲು ಮಾರ್ಗಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಉತ್ತರ ಮತ್ತು ದಕ್ಷಿಣ ನಡುವೆ ಅಭಿವೃದ್ಧಿ ಯಾನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಈ ಮೂರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿರುವುದರಿಂದ ಪ್ರಮುಖ ನಗರಗಳು, ಐತಿಹಾಸಿನ ನಗರಗಳಿಗೆ ಸಂಪರ್ಕ ಕಲ್ಪಿಸಿದಂತಾಗಿದೆ ಎಂದರು. “ದೇವಾಲಯಗಳ ನಗರಿ ಮಧುರೈ ಇದೀಗ ಮಾಹಿತಿ ತಂತ್ರಜ್ಞಾನ ನಗರಿ ಬೆಂಗಳೂರು ನಡುವೆ ಸಂಪರ್ಕ ಸಾಧ್ಯವಾಗಿದೆ” ಇದರಿಂದ ಸಂಪರ್ಕ ಸುಗಮವಾಗಿದ್ದು, ವಿಶೇಷವಾಗಿ ವಾರಾಂತ್ಯ ಅಥವಾ ಹಬ್ಬದ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ನಾಗರ್ ಕೊಯಿಲ್ ಮತ್ತು ಚೆನ್ನೈ ನಡುವಿನ ಮಾರ್ಗದಿಂದ ವಿದ್ಯಾರ್ಥಿಗಳು, ರೈತರು ಮತ್ತು ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ಅನುಕೂಲವಾಗಲಿದೆ. ವಂದೇ ಭಾರತ್ ರೈಲುಗಳಿಗೆ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯನ್ನು ಉಲ್ಲೇಖಿಸಿದರು. ಇದು ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಉದ್ಯೋಗಾವಕಾಶಗಳ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಶ್ರೀ ಮೋದಿಯವರು ಹೇಳಿದರು. ಹೊಸ ವಂದೇ ಭಾರತ್ ರೈಲು ಸಂಪರ್ಕ ಪಡೆದಿರುವ ನಗರಗಳ ನಾಗರಿಕರನ್ನು ಪ್ರದಾನಿ ಅಭಿನಂದಿಸಿದರು.

ವಿಕಸಿತ ಭಾರತ ಗುರಿಯನ್ನು ಸಾಧಿಸಲು ದಕ್ಷಿಣದ ರಾಜ್ಯಗಳ ತ್ವರಿತ ಅಭಿವೃದ್ಧಿ ಅಗತ್ಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ದಕ್ಷಿಣ ಭಾರತವು ಅಪಾರ ಪ್ರತಿಭೆ, ಸಂಪನ್ಮೂಲಗಳು ಮತ್ತು ಅವಕಾಶಗಳ ನಾಡು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಡೀ ದಕ್ಷಿಣ ಭಾರತದ ಜೊತೆಗೆ ತಮಿಳುನಾಡಿನ ಅಭಿವೃದ್ಧಿಯು ಸರ್ಕಾರದ ಆದ್ಯತೆಯಾಗಿದೆ. ಅಭಿವೃದ್ಧಿಯ ಯಾನದಲ್ಲಿ ಸರ್ಕಾರದ ಬದ್ಧತೆಗೆ ರೈಲ್ವೆ ಒಂದು ನಿದರ್ಶನವಾಗಿದೆ. ಈ ವರ್ಷ ತಮಿಳುನಾಡಿಗೆ 6000 ಕೋಟಿ ರೂಪಾಯಿ ಮಂಜೂರು ಮಾಡಿದ್ದು, 2014 ಕ್ಕೆ ಹೋಲಿಸಿದರೆ ಇದು 7 ಪಟ್ಟು ಅಧಿಕವಾಗಿದೆ. ತಮಿಳುನಾಡಿಗೆ ವಂದೇ ಭಾರತ್ ರೈಲುಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇದೇ ರೀತಿ ಕರ್ನಾಟಕಕ್ಕೆ ಬಜೆಟ್ ನಲ್ಲಿ 7000 ಕೋಟಿ ರೂಪಾಯಿ ರೂ ಮಂಜೂರು ಮಾಡಿದ್ದು, 2014ಕ್ಕೆ ಹೋಲಿಸಿದರೆ 9 ಪಟ್ಟು ಅಧಿಕವಾಗಿದೆ. ಭಾರತ್ ರೈಲುಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.    

ಪ್ರಧಾನಿಯವರು ಹಿಂದಿನ ಬಜೆಟ್‌ಗಳಿಂದ ಅನುಕೂಲವಾಗಿದೆ ಮತ್ತು ಬಹು ಪಟ್ಟು ಹೆಚ್ಚಳವು ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ರೈಲು ಸಂಚಾರವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು. ರೈಲ್ವೆ ಹಳಿಗಳು ಕೂಡ ಹೆಚ್ಚಾಗಿದ್ದು, ರೈಲ್ವೆ ಹಳಿಗಳ ವಿದ್ಯುದೀಕರಣ ನಡೆಯುತ್ತಿದೆ ಮತ್ತು ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಸುಗಮ ಜೀವನ ಮತ್ತು ಸುಗಮ ವ್ಯಾಪಾರ ವಲಯದಲ್ಲೂ ಸುಧಾರಣೆ ಕಂಡು ಬಂದಿದೆ ಎಂದು ಹೇಳಿದರು.

ಮೀರತ್ – ಲಖನೌ ಮಾರ್ಗದಲ್ಲಿ ಹೊಸದಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪರಿಚಯಿಸಿರುವ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಪಶ್ಚಿಮ ಉತ್ತರ ಪ್ರದೇಶದ ಜನರನ್ನು ಅಭಿನಂದಿಸಿದರು. ಮೀರತ್ ಮತ್ತು ಪಶ್ಚಿಮ ಉತ್ತರ ಪ್ರದೇಶ ವಲಯದಲ್ಲಿ ಭೂ ಕ್ರಾಂತಿಯಾಗುತ್ತಿದ್ದು, ಇದೀಗ ಹೊಸ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದೆ. ಆರ್.ಆರ್.ಟಿ.ಎಸ್ ಇದೀಗ ಮೀರತ್ ನೊಂದಿಗೆ ರಾಜಧಾನಿ ದೆಹಲಿಯನ್ನು ಸಂಪರ್ಕಿಸುತ್ತಿದೆ. ವಂದೇ ಭಾರತ್ ರೈಲುಗಳ ಮೂಲಕ ಉತ್ತರ ಪ್ರದೇಶದ ಲಖನೌ ನಡುವಿನ ಅಂತರ ಕಡಿಮೆಯಾಗಿದೆ. “ರಾಷ್ಟ್ರೀಯ ರಾಜಧಾನಿ ವಲಯ [ಎನ್.ಸಿ.ಆರ್] ಆಧುನಿಕ ರೈಲುಗಳು, ಎಕ್ಸ್ ಪ್ರೆಸ್ ಹೆದ್ದಾರಿ ಸಂಪರ್ಕ ಜಾಲ ಮತ್ತು ರೈಲು ಸೇವೆಗಳ ವಿಸ್ತರಣೆ ಒಳಗೊಂಡಂತೆ ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಪಿಎಂ ಗತಿಶಕ್ತಿ ಉದಾಹರಣೆಯಾಗಿದೆ. ಈ ದೃಷ್ಟಿಕೋನದ ಮೂಲಕ ದೇಶದ ರೈಲ್ವೆಯಲ್ಲಿ ಆಧುನಿಕ ಮೂಲ ಸೌಕರ್ಯ, ಎಕ್ಸ್ ಪ್ರೆಸ್ ಹೆದ್ದಾರಿಗಳ ಸಂಪರ್ಕ ಜಾಲ ಮತ್ತು ವಿಸ್ತರಣಾ ಸೇವೆಗಳು ಹೊಸ ಎತ್ತರಕ್ಕೆ ಸಾಗಿವೆ ಎಂದು ಉದ್ಗರಿಸಿದರು.  

“ವಂದೇ ಭಾರತ್ ರೈಲುಗಳು ಭಾರತೀಯ ರೈಲ್ವೆಯ ಆಧುನೀಕರಣದ ಹೊಸ ಮುಖವಾಗಿದೆ” ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಂದು ನಗರ ಮತ್ತು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಬೇಡಿಕೆ ಕೇಳಿ ಬರುತ್ತಿದೆ. ಇದರಿಂದ ಅತಿ ವೇಗದ ರೈಲುಗಳ ಅಳವಡಿಕೆಯಿಂದ ವ್ಯಾಪಾರ, ಉದ್ಯೋಗ ವಿಸ್ತರಣೆ ಹೊತೆಗೆ ಕನಸುಗಳು ಸಾಕಾರಗೊಳ್ಳುತ್ತಿವೆ. “ದೇಶದಲ್ಲಿ 102 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ ಮತ್ತು ಈ ವರೆಗೆ 3 ಕೋಟಿ ಪ್ರಯಾಣಿಕರು ಈ ರೈಲಗಳ ಮೂಲಕ ಸಂಚರಿಸಿದ್ದಾರೆ” ಎಂದು ಮಾಹಿತಿ ನೀಡಿದರು. ಇದು ವಂದೇ ಭಾರತ್ ರೈಲುಗಳ ಯಶಸ್ಸಿಗೆ ಪುರಾವೆಯಾಗಿರುವ ಜೊತೆಗೆ ದೇಶದ ಜನತೆಯ ಕನಸುಗಳು ಮತ್ತು ನಿರೀಕ್ಷೆಗಳ ಸಂಕೇತವೂ ಆಗಿದೆ ಎಂದರು.

ವಿಕಸಿತ ಭಾರತಕ್ಕೆ ಆಧುನಿಕ ರೈಲ್ವೆ ಮೂಲ ಸೌಕರ್ಯ ವಲಯ ಬಲಿಷ್ಠ ಆಧಾರ ಸ್ತಂಭವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ದ್ವಿಪಥ ರೈಲ್ವೆ ಮಾರ್ಗಗಳು, ರೈಲ್ವೆ ಮಾರ್ಗಗಳ ವಿದ್ಯುದೀಕರಣ, ಹೊಸ ರೈಲುಗಳ ಸಂಚಾರ ಮತ್ತು ಹೊಸ ಮಾರ್ಗಗಳ ನಿರ್ಮಾಣದ ಮೂಲಕ ಈ ವಲಯ ತ್ವರಿತ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಈ ವರ್ಷದ ಬಜೆಟ್ ನಲ್ಲಿ 2.5 ಲಕ್ಷ ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಸರ್ಕಾರ ಭಾರತೀಯ ರೈಲ್ವೆಯನ್ನು ಉನ್ನತ ತಂತ್ರಜ್ಞಾನ ಸೇವೆಗಳೊಂದಿಗೆ ಸಂಪರ್ಕಿಸುತ್ತಿದೆ. ಹಳೆಯ ಚಿತ್ರಣ ಬದಲಾಗಿದ್ದು, ಆಧುನಿಕವಾಗಿ ರೂಪಾಂತರಗೊಳ್ಳುತ್ತಿದೆ ಎಂದರು. ವಿಸ್ತರಣಾ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ವಂದೇ ಭಾರತ್ ರೈಲುಗಳ ಜೊತೆಗೆ ಅಮೃತ್ ಭಾರತ್ ರೈಲುಗಳನ್ನು ವಿಸ್ತರಿಸಲಾಗುವುದು. ಶೀಘ್ರದಲ್ಲೇ ಸ್ಲೀಪರ್ ವಂದೇ ಭಾರತ್ ರೈಲುಗಳ ಸೇವೆಗೆ ಹಸಿರು ನಿಶಾನೆ ಒದಗಿಸಲಾಗುವುದು. ಜನರ ಅನುಕೂಲಕ್ಕಾಗಿ ನಮೋ ಭಾರತ್ ರೈಲುಗಳನ್ನು ಓಡಿಸಲಾಗುತ್ತಿದೆ ಮತ್ತು ನಗರಗಳಲ್ಲಿನ ಸಂಚಾರಿ ಸಮಸ್ಯೆಗಳನ್ನು ನಿಭಾಯಿಸಲು ವಂದೇ ಮೆಟ್ರೋ ರೈಲು ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.

ಭಾರತದ ನಗರಗಳನ್ನು ರೈಲ್ವೆ ನಿಲ್ದಾಣಗಳ ಮೂಲಕ ಗುರುತಿಸಲಾಗುತ್ತದೆ. ಅಮೃತ್ ಭಾರತ್ ರೈಲ್ವೆ ನಿಲ್ದಾಣ ಯೋಜನೆಗಳ ಮೂಲಕ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಮೂಲಕ ನಗರಗಳಿಗೆ ಹೊಸ ಗುರುತು ನೀಡಲಾಗುತ್ತಿದೆ. “1300 ಕ್ಕೂ ಅಧಿಕ ರೈಲ್ವೆ ನಿಲ್ದಾಣಗಳನ್ನು ದೇಶಾದ್ಯಂತ ನವೀಕರಿಸಲಾಗುತ್ತಿದ್ದು, ಕೆಲವು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಣ್ಣ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಸುಗಮ ಪ್ರಯಾಣಕ್ಕೆ ರಹದಾರಿಯಾಗಿದೆ ಎಂದರು.   

“ರೈಲ್ವೆ, ರಸ್ತೆ ಮಾರ್ಗಗಳು ಮತ್ತು ಜಲ ಮಾರ್ಗಗಳನ್ನು ಬಲಗೊಳಿಸಿದರೆ ದೇಶವನ್ನು ಬಲಗೊಳಿಸಿದಂತೆ”. ಎಂದು ಪ್ರಧಾನಮಂತ್ರಿ ಹೇಳಿದರು. ಇದರಿಂದ ಬಡವರು ಇಲ್ಲವೆ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ದೇಶ ಸಾಕ್ಷಿಯಾಗಿದ್ದು, ಇಂದು ಬಡವರು ಮತ್ತು ಮಧ್ಯಮ ವರ್ಗದವರು ಸಬಲರಾಗುತ್ತಿದ್ದಾರೆ ಎಂದು ಅವರು ಗಮನಸೆಳದರು. ಮೂಲಸೌಕರ್ಯಗಳ ವಿಸ್ತರಣೆಯೊಂದಿಗೆ ಉದ್ಯೋಗಾವಕಾಶಗಳು ಮತ್ತು ಹೊಸ ಅವಕಾಶಗಳು ಹಳ್ಳಿಗಳನ್ನು ತಲುಪುತ್ತಿರುವ ಉದಾಹರಣೆಗಳನ್ನು ಅವರು ನೀಡಿದರು. ಉದ್ಯೋಗಾವಕಾಶಗಳು ಮತ್ತು ಹೊಸ ಉದ್ಯೋಗಾವಕಾಶಗಳು ಹಳ್ಳಿಗಳಿಗಳು ತಲುಪುತ್ತಿದ್ದು, ಇದು ಒಂದು ಉತ್ತಮ ಉದಾಹರಣೆಯಾಗಿದೆ. ಹಳ್ಳಿಗಳಲ್ಲಿ ಸುಲಭ ದರದಲ್ಲಿ ದತ್ತಾಂಶ ಮತ್ತು ಡಿಜಿಟಲ್ ಮೂಲ ಸೌಕರ್ಯ ದೊರೆಯುತ್ತಿದ್ದು, ಇದರಿಂದ ಹೊಸ ಸಾಧ್ಯತೆಗಳು ದೊರೆಯುತ್ತಿವೆ. ಆಸ್ಪತ್ರೆಗಳು, ಶೌಚಾಲಯಗಳು, ಪಕ್ಕಾ ಮನೆಗಳಗಳನ್ನು ದಾಖಲೆ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಬಡವರಲ್ಲಿ ಬಡವರು ಕೂಡ ಇದರಿಂದ ದೇಶದಲ್ಲಿ ಲಾಭ ಪಡೆಯುತ್ತಿದ್ದಾರೆ. ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳ ಮೂಲ ಸೌಕರ್ಯ ನಿರ್ಮಾಣವಾದರೆ ಯುವ ಸಮೂಹದ ಅಭಿವೃದ್ಧಿ ಕೂಡ ಸಾಧ್ಯವಾಗಲಿದೆ” ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇಂತಹ ಹಲವಾರು ಪ್ರಯತ್ನಗಳಿಂದಾಗ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನ ರೇಖೆಯಿಂದ ಹೊರ ಬಂದಿದ್ದಾರೆ ಎಂದರು.

ದಶಕಗಳಿಂದ ಬಾಕಿ ಇದ್ದ ಸಮಸ್ಯೆಗಳಿಗೆ ವರ್ಷಗಳಿಂದ ರೈಲ್ವೆಯು ಪರಿಹಾರ ದೊರಕಿಸಿಕೊಟ್ಟಿದ್ದು, ಇದರಿಂದ ವಿಶ್ವಾಸ ಮೂಡಿದೆ. ಇದರಿಂದ ಭಾರತ ಈ ನಿಟ್ಟಿನಲ್ಲಿ ಇನ್ನೂ ದೀರ್ಘ ಕಾಲ ಸಾಗಬೇಕಾಗಿದೆ. ಬಡವರು, ಮಧ್ಯಮ ವರ್ಗದವರು, ಪ್ರತಿಯೊಬ್ಬರಿಗೂ ಸುಗಮ ಪ್ರಯಾಣ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ ಎಂದರು. ಬಡತನ ನಿರ್ಮೂಲನೆ ಮಾಡಲು ಮೂಲಕ ಸೌಕರ್ಯ ವಲಯದ ಅಭಿವೃದ್ಧಿ ಮಹತ್ವದ ಪಾತ್ರ ವಹಿಸುತ್ತದೆ. “ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶದ ಜನ ಮೂರು ವಂದೇ ಭಾರತ್ ರೈಲುಗಳನ್ನು ಪಡೆದ ಕಾರಣಕ್ಕಾಗಿ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತಿದ್ದೇನೆ” ಎಂದು ಶ್ರೀ ನರೇಂದ್ರ ಮೋದಿ ಅವರು ತಮ್ಮ ಭಾಷಣ ಪೂರ್ಣಗೊಳಿಸಿದರು.

ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವರ್, ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್, ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್.ಎನ್. ರವಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತಿತರೆ ಗಣ್ಯರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ

ಮೀರತ್ – ಲಖನೌ ವಂದೇ ಭಾರತ್ ರೈಲು ಸೇವೆಯಿಂದ ಈ ಎರಡು ನಗರಗಳ ನಡುವಿನ ಅವಧಿ ಒಂದು ಗಂಟೆ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದೇ ರೀತಿ ಚೆನ್ನೈ ಎಗ್ಮೋರ್ – ನಾಗರ್ ಕೊಯಿಲ್ ವಂದೇ ಭಾರತ್ ರೈಲು ಮತ್ತು ಮಧುರೈ – ಬೆಂಗಳೂರು ವಂದೇ ಭಾರತ್ ರೈಲುಗಳು ಕ್ರಮವಾಗಿ 2 ಗಂಟೆ ಮತ್ತು 1.30 ಗಂಟೆಗಳ ಸಮಯ ಉಳಿಸಲಿದೆ. ಈ ಹೊಸ ವಂದೇ ಭಾರತ್ ರೈಲುಗಳು ಈ ಪ್ರದೇಶದ ಜನರಿಗೆ ವೇಗ ಮತ್ತು ಸೌಕರ್ಯದೊಂದಿಗೆ ಪ್ರಯಾಣಿಸಲು ವಿಶ್ವದರ್ಜೆಯ ಸೇವೆಗಳನ್ನು ಒದಗಿಸುತ್ತವೆ ಮತ್ತು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟ ಮೂರು ರಾಜ್ಯಗಳ ಜನರ ನಿರೀಕ್ಞೆಗಳನ್ನು ಪೂರೈಸಲಿವೆ. ವಂದೇ ಭಾರತ್ ರೈಲುಗಳ ಪರಿಚಯದಿಂದ ನಿಯಮಿತವಾಗಿ ಪ್ರಯಾಣಿಕರು, ವೃತ್ತಿಪರರು, ವ್ಯಾಪಾರಸ್ಥರು ಮತ್ತು ವಿದ್ಯಾರ್ಥಿ ಸಮುದಾಯಗಳಿಗೆ ಹೊಸ ಮಾನದಂಡಗಳೊಂದಿಗೆ ಅಪಾರ ಪ್ರಮಾಣದಲ್ಲಿ ನೆರವು ದೊರೆಯುತ್ತಿವೆ.   

 

 

 

*****


(Release ID: 2050761) Visitor Counter : 39