ಪ್ರವಾಸೋದ್ಯಮ ಸಚಿವಾಲಯ
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ಬಲಪಡಿಸಲು ಭಾರತ ಮತ್ತು ಮಲೇಷ್ಯಾ ಒಪ್ಪಂದಕ್ಕೆ ಸಹಿ
2022ರಲ್ಲಿ ಮಲೇಷ್ಯಾದ 2.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭಾರತಕ್ಕೆ ಭೇಟಿ
Posted On:
30 AUG 2024 2:44PM by PIB Bengaluru
ಭಾರತ ಮತ್ತು ಮಲೇಷ್ಯಾ ಅತ್ಯಂತ ನಿಕಟವಾದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಲು, ಭಾರತ ಮತ್ತು ಮಲೇಷ್ಯಾ ಪ್ರವಾಸೋದ್ಯಮ ಸಚಿವಾಲಯ ಮತ್ತು ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸಚಿವಾಲಯವು ತಿಳಿವಳಿಕೆ ಒಪ್ಪಂದಕ್ಕೆ (MOU) ಸಹಿ ಮಾಡಿದೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಶ್ರೀ ಗಂಜೇಂದ್ರ ಸಿಂಗ್ ಶೇಖಾವತ್ ಮತ್ತು ಮಲೇಷ್ಯಾದ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸಚಿವ ಶ್ರೀ ವೈ.ಬಿ. ಡಾಟೊ, ಶ್ರೀ ಟಿಯೊಂಗ್ ಕಿಂಗ್ ಸಿಂಗ್ ನಡುವೆ 2024 ಆಗಸ್ಟ್ 20 ರಂದು ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ತಿಳಿವಳಿಕೆ ಒಪ್ಪಂದದ ಪ್ರಮುಖಾಂಶಗಳು ಹೀಗಿವೆ...
a. ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳ ಪ್ರಚಾರ ಮತ್ತು ಮಾರುಕಟ್ಟೆ;
b. ವಿನಿಮಯ ಕಾರ್ಯಕ್ರಮಗಳು ಸೇರಿದಂತೆ ಪ್ರವಾಸೋದ್ಯಮ ಸಂಶೋಧನೆ, ತರಬೇತಿ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ವಿಸ್ತರಣೆ;
c. ಪ್ರವಾಸೋದ್ಯಮ ಮೂಲಸೌಕರ್ಯ, ಸೌಲಭ್ಯಗಳು, ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಹೂಡಿಕೆಗೆ ಪ್ರೋತ್ಸಾಹ;
d. ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಮತ್ತು ಉತ್ಪನ್ನವನ್ನು ಉತ್ತೇಜಿಸಲು ಮಧ್ಯಸ್ಥಗಾರರನ್ನು ಉತ್ತೇಜಿಸುವುದು;
e. ವ್ಯಾಪಾರ ಪ್ರವಾಸೋದ್ಯಮ, ಇದರಲ್ಲಿ ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು, ಪ್ರದರ್ಶನಗಳು (MICE);
f. ಪ್ರವಾಸೋದ್ಯಮ ಪಾಲುದಾರರು, ಪ್ರವಾಸ ನಿರ್ವಾಹಕರು ಮತ್ತು ಟ್ರಾವೆಲ್ ಏಜೆಂಟರ ನಡುವೆ ಸಹಕಾರವನ್ನು ಉತ್ತೇಜಿಸುವುದು;
g. ಸಮುದಾಯ ಆಧಾರಿತ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಪ್ರಚಾರ ಮತ್ತು ಅಭಿವೃದ್ಧಿ.
ಮಲೇಷ್ಯಾ ಭಾರತಕ್ಕೆ ಬರುವ ಪ್ರವಾಸಿ ಮೂಲ ಮಾರುಕಟ್ಟೆಗಳಲ್ಲಿ ಒಂದಾಗಿದೆ. 2022 ರಲ್ಲಿ, 2.5 ಲಕ್ಷಕ್ಕೂ ಹೆಚ್ಚು ಮಲೇಷ್ಯಾ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು. ತಿಳಿವಳಿಕೆ ಒಪ್ಪಂದವು ಮಲೇಷ್ಯಾದಿಂದ ಪ್ರವಾಸಿಗರ ಆಗಮನಕ್ಕೆ ಮತ್ತಷ್ಟು ನೆರವು ಒದಗಿಸಲು ಆದ್ಯತೆ ನೀಡಲಾಗಿದೆ.
*****
(Release ID: 2050178)
Visitor Counter : 43