ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಕ್ರೀಡಾ ದಿನ: ಮೇಜರ್ ಧ್ಯಾನ್ ಚಂದ್ ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಗೌರವ ನಮನ 

प्रविष्टि तिथि: 29 AUG 2024 10:25AM by PIB Bengaluru

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ದೇಶದ ನಾಗರಿಕರಿಗೆ ಶುಭಾಶಯ ಕೋರಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಖ್ಯಾತ ಹಾಕಿ ಆಟಗಾರ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಇಂದು ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ದೇಶದ ಕ್ರೀಡಾ ಕ್ಷೇತ್ರಕ್ಕೆ ಉತ್ಸಾಹದಿಂದ ಕೊಡುಗೆ ನೀಡಿದ ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸುವ ಎಲ್ಲಾ ಕ್ರೀಡಾಪಟುಗಳನ್ನು ಗುರುತಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ. 

ಪ್ರತಿಯೊಬ್ಬ ಯುವ ಭಾರತೀಯನು ಕ್ರೀಡೆಗೆ ಮಹತ್ವ ನೀಡಿ ಆಟವಾಡುವುದು, ಆ ಕ್ಷೇತ್ರದಲ್ಲಿ ಅವರು ಮಿಂಚಲು ಪೂರಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿಕೊಡಲು ಎಲ್ಲಾ ಹಂತಗಳಲ್ಲಿ ಕ್ರೀಡೆಗಳನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನ ಮಂತ್ರಿಗಳು ಪುನರುಚ್ಛರಿಸಿದ್ದಾರೆ. 

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು,

“ದೇಶದ ನಾಗರಿಕರಿಗೆ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು. ಇಂದು ನಾವು ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ಸಲ್ಲಿಸುತ್ತೇವೆ. ಕ್ರೀಡೆಯ ಬಗ್ಗೆ ಒಲವು ಹೊಂದಿರುವ ಮತ್ತು ಭಾರತಕ್ಕಾಗಿ ಆಟವಾಡುವ ಪ್ರತಿಯೊಬ್ಬ ಕ್ರೀಡಾಪಟುಗಳನ್ನು ಅಭಿನಂದಿಸಲು ಇದು ಒಂದು ಸುಸಂದರ್ಭವಾಗಿದೆ. ನಮ್ಮ ಸರ್ಕಾರವು ಕ್ರೀಡೆಗಳನ್ನು ಬೆಂಬಲಿಸಲು ಬದ್ಧವಾಗಿದ್ದು, ಇದರಿಂದ ಹೆಚ್ಚಿನ ಯುವಕರು ಆಟವಾಡಲು ಮತ್ತು ಈ ಕ್ಷೇತ್ರದಲ್ಲಿ ಮಿಂಚಲು ಸಾಧ್ಯವಾಗುತ್ತದೆ'' ಎಂದು ಬರೆದುಕೊಂಡಿದ್ದಾರೆ.

 

 

*****


(रिलीज़ आईडी: 2049729) आगंतुक पटल : 86
इस विज्ञप्ति को इन भाषाओं में पढ़ें: Odia , Telugu , English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Malayalam