ಭಾರತದ ಸ್ಪರ್ಧಾ ಆಯೋಗ
azadi ka amrit mahotsav

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್), ವಯಾಕಾಮ್ 18, ಡಿಜಿಟಲ್ 18 ಮೀಡಿಯಾ ಲಿಮಿಟೆಡ್, ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್ಐಪಿಎಲ್) ಮತ್ತು ಸ್ಟಾರ್ ಟೆಲಿವಿಷನ್ ಪ್ರೊಡಕ್ಷನ್ಸ್ ಲಿಮಿಟೆಡ್ (ಎಸ್ ಐಪಿಎಲ್) ಸಂಯೋಜನೆಗೆ ಸಿಸಿಐ ಅನುಮೋದನೆ ನೀಡಿದೆ

Posted On: 28 AUG 2024 6:34PM by PIB Bengaluru

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್), ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ (ವಯಾಕಾಮ್ 18), ಡಿಜಿಟಲ್ 18 ಮೀಡಿಯಾ ಲಿಮಿಟೆಡ್, ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್ಐಪಿಎಲ್) ಮತ್ತು ಸ್ಟಾರ್ ಟೆಲಿವಿಷನ್ ಪ್ರೊಡಕ್ಷನ್ಸ್ ಲಿಮಿಟೆಡ್ (ಎಸ್ ಟಿಪಿಎಲ್) ಒಳಗೊಂಡ ಪ್ರಸ್ತಾವಿತ ಸಂಯೋಜನೆಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಅನುಮೋದನೆ ನೀಡಿದೆ.

ಪ್ರಸ್ತಾವಿತ ಸಂಯೋಜನೆಯು ಆರ್ ಐಎಲ್ ಗ್ರೂಪ್ ನ ಭಾಗವಾದ ವಯಾಕಾಮ್ 18 ಮತ್ತು ಸಂಪೂರ್ಣವಾಗಿ ವಾಲ್ಟ್ ಡಿಸ್ನಿ ಕಂಪನಿ (ಟಿಡಬ್ಲ್ಯೂಡಿಸಿ) ಒಡೆತನದ ಎಸ್ಐಪಿಎಲ್ ನ  ಮನರಂಜನಾ ವ್ಯವಹಾರಗಳನ್ನು (ಇತರ ಕೆಲವು ಗುರುತಿಸಲಾದ ವ್ಯವಹಾರಗಳೊಂದಿಗೆ) ಸಂಯೋಜಿಸಲು ಉದ್ದೇಶಿಸಿದೆ. ವಹಿವಾಟಿನ ಪರಿಣಾಮವಾಗಿ, ಪ್ರಸ್ತುತ ತನ್ನ ಅಂಗಸಂಸ್ಥೆಗಳ ಮೂಲಕ ಟಿಡಬ್ಲ್ಯೂಡಿಸಿಯ ಸಂಪೂರ್ಣ ಸ್ವಾಮ್ಯದ ಘಟಕವಾಗಿರುವ ಎಸ್ಐಪಿಎಲ್, ಜಂಟಿ ಉದ್ಯಮ (ಜೆವಿ) ಆಗಲಿದ್ದು, ಇದನ್ನು ಆರ್ ಐಎಲ್, ವಯಾಕಾಮ್ 18 ಮತ್ತು ಅಸ್ತಿತ್ವದಲ್ಲಿರುವ ಟಿಡಬ್ಲ್ಯೂಡಿಸಿ ಅಂಗಸಂಸ್ಥೆಗಳು ಜಂಟಿಯಾಗಿ ಹೊಂದಿರುತ್ತವೆ.

ಆರ್ ಐ ಎಲ್, ನೇರವಾಗಿ ಅಥವಾ ಪರೋಕ್ಷವಾಗಿ, ತೈಲ ಮತ್ತು ಅನಿಲದ ಪರಿಶೋಧನೆ ಮತ್ತು ಉತ್ಪಾದನೆಯಂತಹ ಹಲವಾರು ವ್ಯವಹಾರಗಳಲ್ಲಿ ತೊಡಗಿದೆ; ಪೆಟ್ರೋಲಿಯಂ ಸಂಸ್ಕರಣೆ ಮತ್ತು ಮಾರುಕಟ್ಟೆ; ಪೆಟ್ರೋಕೆಮಿಕಲ್ಸ್ ತಯಾರಿಕೆ ಮತ್ತು ಮಾರಾಟ; ರಾಸಾಯನಿಕಗಳ ತಯಾರಿಕೆ ಮತ್ತು ಮಾರಾಟ; ಸಂಘಟಿತ ಚಿಲ್ಲರೆ ವ್ಯಾಪಾರ; ಮಾಧ್ಯಮ ಮತ್ತು ಮನರಂಜನಾ ಚಟುವಟಿಕೆಗಳು; ಮತ್ತು ಭಾರತ ಮತ್ತು ವಿಶ್ವಾದ್ಯಂತ ದೂರಸಂಪರ್ಕ ಮತ್ತು ಡಿಜಿಟಲ್ ಸೇವೆಗಳು.

ವಯಾಕಾಮ್ 18, ದೂರದರ್ಶನ (ಟಿವಿ) ಚಾನೆಲ್ ಗಳ ಪ್ರಸಾರ, ಒಟಿಟಿ ಪ್ಲಾಟ್ ಫಾರ್ಮ್ ನ ಕಾರ್ಯಾಚರಣೆ, ಟಿವಿ ಚಾನೆಲ್ ಗಳಲ್ಲಿ ವಾಣಿಜ್ಯ ಜಾಹೀರಾತು ಸ್ಥಳವನ್ನು ಮಾರಾಟ ಮಾಡುವುದು, ಸರಕುಗಳಿಗೆ ಪರವಾನಗಿ ಮತ್ತು ಭಾರತ ಮತ್ತು ವಿಶ್ವಾದ್ಯಂತ ನೇರ ಕಾರ್ಯಕ್ರಮವನ್ನು ಆಯೋಜಿಸುವ ವ್ಯವಹಾರದಲ್ಲಿ ತೊಡಗಿದೆ. ವಯಾಕಾಮ್ 18 ಚಲನ ಚಿತ್ರಗಳ ಉತ್ಪಾದನೆ ಮತ್ತು ವಿತರಣೆಯ ವ್ಯವಹಾರದಲ್ಲಿಯೂ ತೊಡಗಿದೆ.
ಟಿವಿ ಪ್ರಸಾರ ಮತ್ತು ಎವಿ ವಿಷಯ ಮತ್ತು ಚಲನ ಚಿತ್ರಗಳ ಉತ್ಪಾದನೆ, ಒಟಿಟಿ ಪ್ಲಾಟ್ ಫಾರ್ಮ್ ನ ಕಾರ್ಯಾಚರಣೆ ಮತ್ತು ಟಿವಿ ಚಾನೆಲ್ ಗಳು ಮತ್ತು ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ವಾಣಿಜ್ಯ ಜಾಹೀರಾತು ಸ್ಥಳವನ್ನು ಮಾರಾಟ ಮಾಡುವುದು ಸೇರಿದಂತೆ ಹಲವಾರು ಮಾಧ್ಯಮ ಚಟುವಟಿಕೆಗಳಲ್ಲಿ ಎಸ್ಐಪಿಎಲ್ ತೊಡಗಿಸಿಕೊಂಡಿದೆ. ಎಸ್ಐಪಿಎಲ್, ನೇರವಾಗಿ ಅಥವಾ ಪರೋಕ್ಷವಾಗಿ, ಟಿಡಬ್ಲ್ಯೂಡಿಸಿಯ ಸಂಪೂರ್ಣ ಸ್ವಾಮ್ಯದ ಘಟಕವಾಗಿದೆ.

ಎಸ್ ಟಿಪಿಎಲ್ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಸಂಯೋಜಿಸಲ್ಪಟ್ಟ ಕಂಪನಿಯಾಗಿದೆ ಮತ್ತು ಪರೋಕ್ಷವಾಗಿ ಟಿಡಬ್ಲ್ಯೂಡಿಸಿಯ ಒಡೆತನದಲ್ಲಿದೆ.

ಸ್ವಯಂಪ್ರೇರಿತ ಮಾರ್ಪಾಡುಗಳ ಅನುಸರಣೆಗೆ ಒಳಪಟ್ಟು ಆಯೋಗವು ಪ್ರಸ್ತಾವಿತ ಸಂಯೋಜನೆಯನ್ನು ಅನುಮೋದಿಸಿತು.

ಸಿಸಿಐನ ವಿವರವಾದ ಆದೇಶವನ್ನು ಅನುಸರಿಸಲಾಗುವುದು.

 

*****


(Release ID: 2049714) Visitor Counter : 36