ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ರಾಷ್ಟ್ರವ್ಯಾಪಿ ಕ್ರೀಡಾ ಭಾಗವಹಿಸುವಿಕೆಗೆ ಸ್ಪಷ್ಟ ಕರೆ ನೀಡಿದ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ

Posted On: 24 AUG 2024 4:00PM by PIB Bengaluru

ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯಲ್ಲಿ ಕನಿಷ್ಠ ಒಂದು ಗಂಟೆಗಳ ಕಾಲ ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಎಲ್ಲಾ ನಾಗರಿಕರಿಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಸ್ಪಷ್ಟ ಕರೆ ನೀಡಿದ್ದಾರೆ.

ಪ್ರಧಾನ ಮಂತ್ರಿಯವರ ಮಾತುಗಳಾದ "ಖೇಲೇಗಾ ಇಂಡಿಯಾ, ಖಿಲೇಗಾ ಇಂಡಿಯಾ" ಎಂಬುದರಿಂದ ಪ್ರೇರಿತರಾಗಬೇಕಾಗಿದೆ. ಫಿಟ್‌ ಇಂಡಿಯಾ ಎಂಬುದು ಪ್ರಧಾನಮಂತ್ರಿಯವರ ಪರಿಕಲ್ಪನೆಯಾಗಬೇಕು. ಫಿಟ್‌ ಇಂಡಿಯಾ ಆಂದೋಲನದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ಇದು ಪ್ರತಿಯೊಬ್ಬರ ಕಾರ್ಯಕ್ರಮ ಕೂಡ ಆಗಿದೆ ಮತ್ತು ಈ ವರ್ಷದ ರಾಷ್ಟ್ರೀಯ ಕ್ರೀಡಾ ದಿನದಂದು ರಾಷ್ಟ್ರವ್ಯಾಪಿ ಆಚರಣೆಯಲ್ಲಿ ಭಾಗಿಯಾಗಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿಗಳ ಫಿಟ್ ಇಂಡಿಯಾ ಆಂದೋಲನವನ್ನು ಮುನ್ನಡೆಸುವ ಮಹತ್ವದ ಬಗ್ಗೆ ಕೇಂದ್ರ ಸಚಿವರು ಗಮನ ಸೆಳೆದರು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಸಕ್ರಿಯವಾಗಿರುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ. "ಯಾವುದೇ ಕ್ರೀಡೆಯನ್ನು ಆಡಿ, ಫಿಟ್ ಆಗಿರಿ!" ಎಲ್ಲರೂ ಈ ಅಭಿಯಾಕ್ಕೆ ಕೈಜೋಡಿಸಲು ಪ್ರೋತ್ಸಾಹಿಸಬೇಕು ಎಂದು  ಸಚಿವರು ಒತ್ತಾಯಿಸಿದರು.

 

ರಾಷ್ಟ್ರೀಯ ಕ್ರೀಡಾ ದಿನವು ನಮ್ಮ ಕ್ರೀಡಾ ವೀರರನ್ನು ಗೌರವಿಸುವ ಅವಕಾಶ ಮಾತ್ರವಲ್ಲದೆ ಕ್ರೀಡೆಗಳು ಹೇಗೆ ಸಮತೋಲಿತ ಮತ್ತು ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಎಂಬುದನ್ನು ನೆನಪಿಸುತ್ತದೆ. ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಸದೃಢ ಮತ್ತು ಕ್ರಿಯಾಶೀಲ ಭಾರತವನ್ನು ನಿರ್ಮಿಸುವತ್ತ ಹೆಜ್ಜೆ ಇಡಬೇಕು ಮನವಿ ಮಾಡಿದರು.

ಕ್ರೀಡಾದಿನದ ಹಿನ್ನೆಲೆ:

ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನ ಎಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶಕ್ಕೆ ಪ್ರಶಸ್ತಿಗಳನ್ನು ತರಲು ನೀಡಿದ ಕೊಡುಗೆಗಾಗಿ ನಮ್ಮ ಕ್ರೀಡಾ ಐಕಾನ್‌ಗಳಿಗೆ ಸೂಕ್ತವಾದ ಗೌರವ ನೀಡಲು ಪ್ರತಿ ವರ್ಷ, ರಾಷ್ಟ್ರೀಯ ಕ್ರೀಡಾ ದಿನವನ್ನು  ಆಚರಿಸಲಾಗುತ್ತಿದೆ.

 

*****



(Release ID: 2048594) Visitor Counter : 8