ಪ್ರಧಾನ ಮಂತ್ರಿಯವರ ಕಛೇರಿ

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 15 AUG 2024 2:30PM by PIB Bengaluru

ಭಾರತ್ಮಾತಾ ಕಿ ಜೈ!

ಭಾರತ್ಮಾತಾ ಕಿ ಜೈ!

ಭಾರತ್ಮಾತಾ ಕಿ ಜೈ!

ಭಾರತ್ಮಾತಾ ಕಿ ಜೈ!

ನನ್ನ ಪ್ರೀತಿಯ ದೇಶವಾಸಿಗಳೇ, ನನ್ನ ಕುಟುಂಬ ಸದಸ್ಯರೇ!

ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಅಸಂಖ್ಯಾತ ಪೂಜನೀಯ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವ ಶುಭ ದಿನ, ಶುಭ ಕ್ಷಣ ಇದಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳೊಂದಿಗೆ ಧೈರ್ಯದಿಂದ ನೇಣುಗಂಬವನ್ನು ಅಪ್ಪಿಕೊಂಡರು. ಇದು ಅವರ ಧೈರ್ಯ, ಸಂಕಲ್ಪ ಮತ್ತು ದೇಶಭಕ್ತಿ ಸದ್ಗುಣಗಳನ್ನು ಸ್ಮರಿಸುವ ಹಬ್ಬವಾಗಿದೆ. ವೀರಕಲಿಗಳಿಂದಾಗಿಯೇ ಸ್ವಾತಂತ್ರ್ಯದ ಹಬ್ಬದಂದು ಮುಕ್ತವಾಗಿ ಉಸಿರಾಡುವ ಸೌಭಾಗ್ಯ ನಮಗೆ ದಕ್ಕದೆ. ದೇಶವು ಅವರಿಗೆ ಬಹಳ ಋಣಿಯಾಗಿದೆ. ಅಂತಹ ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಬಗ್ಗೆ ನಮ್ಮ ಗೌರವ ವನ್ನು ವ್ಯಕ್ತಪಡಿಸೋಣ.

ಪ್ರೀತಿಯ ದೇಶವಾಸಿಗಳೇ,

ರಾಷ್ಟ್ರ ನಿರ್ಮಾಣದ ಬದ್ಧತೆಯೊಂದಿಗೆ, ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ದೇಶವನ್ನು ರಕ್ಷಿಸುತ್ತಿರುವ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ಇಂದು ನಾನು ನನ್ನ ಮನದಾಳದ ಗೌರವವನ್ನು ಸಲ್ಲಿಸುತ್ತೇನೆ. ಅದು ನಮ್ಮ ರೈತರಾಗಿರಬಹುದು, ಯುವಶಕ್ತಿಯ ಅತ್ಯುನ್ನತ ನೈತಿಕ ಸ್ಥೈರ್ಯವಾಗಿರಬಹುದು, ನಮ್ಮ ತಾಯಂದಿರು ಮತ್ತು ಸಹೋದರಿಯರ ಕೊಡುಗೆಗಳಾಗಿರಬಹುದು ಅಥವಾ ದಲಿತರು, ದಮನಿತರು, ಶೋಷಿತರು, ಅವಕಾಶ ವಂಚಿತರಾಗಿರಬಹುದು; ಇಂದು ಅವರ ದೇಶಭಕ್ತಿಯ ಹುರುಪು ಮತ್ತು ಪ್ರಜಾಪ್ರಭುತ್ವದಲ್ಲಿ ಅವರ ನಂಬಿಕೆಯು ವಿಶ್ವಕ್ಕೆ ಸ್ಫೂರ್ತಿಯಾಗಿದೆ. ಅಂತಹ ಎಲ್ಲ ಮಹನೀಯರಿಗೆ ನಾನು ಗೌರವದಿಂದ ನಮಸ್ಕರಿಸುತ್ತೇನೆ.

ಪ್ರೀತಿಯ ದೇಶವಾಸಿಗಳೇ,

ವರ್ಷ ಮತ್ತು ಹಿಂದಿನ ಕೆಲವು ವರ್ಷಗಳಿಂದ, ನೈಸರ್ಗಿಕ ವಿಪತ್ತುಗಳು ನಮ್ಮ ಕಳವಳವನ್ನು ಹೆಚ್ಚಿಸಿವೆ. ಅನೇಕ ಜನರು ತಮ್ಮ ಕುಟುಂಬ ಮತ್ತು ಆಸ್ತಿಪಾಸ್ತಿಗಳಣ್ನು ಕಳೆದುಕೊಂಡಿದ್ದಾರೆ, ರಾಷ್ಟ್ರವು ಹಲವಾರು ಬಾರಿ ಭಾರಿ ನಷ್ಟವನ್ನು ಅನುಭವಿಸಿದೆ. ಇಂದು ನಾನು ಅವರೆಲ್ಲರಿಗೂ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ಭರವಸೆ ನೀಡುತ್ತೇನೆ.

ಪ್ರೀತಿಯ ದೇಶವಾಸಿಗಳೇ,

ಈಗ ನಾವು ಒಮ್ಮೆ ಸ್ವಾತಂತ್ರ್ಯ ಪೂರ್ವದ ದಿನಗಳನ್ನು ಮೆಲುಕು ಹಾಕೋಣ. ನೂರಾರು ವರ್ಷಗಳ ಗುಲಾಮಗಿರಿಯ ಅವಧಿಯಲ್ಲಿ, ಪ್ರತಿ ಅವಧಿಯೂ ಒಂದು ಹೋರಾಟವಾಗಿತ್ತು. ನಮ್ಮ ಯುವಕರು, ವೃದ್ಧರು, ರೈತರು, ಮಹಿಳೆಯರು ಅಥವಾ ಬುಡಕಟ್ಟು ಜನಾಂಗದವರು ಗುಲಾಮಗಿರಿಯ ವಿರುದ್ಧ ನಿರಂತರವಾಗಿ ಹೋರಾಡಿದ್ದಾರೆ. ಬಹಳವಾಗಿ ಸ್ಮರಿಸಲಾಗುವ 1857 ದಂಗೆಗೆ ಮುಂಚೆಯೇ, ನಮ್ಮ ದೇಶದಲ್ಲಿ ಅನೇಕ ಬುಡಕಟ್ಟು ಪ್ರದೇಶಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದಿದ್ದವು ಎಂಬುದಕ್ಕೆ ನಮ್ಮ ಇತಿಹಾಸವು ಪುರಾವೆಯಾಗಿದೆ.

ಸ್ನೇಹಿತರೇ,

ಸ್ವಾತಂತ್ರ್ಯ ಪೂರ್ವದಲ್ಲಿ 40 ಕೋಟಿ ದೇಶವಾಸಿಗಳು ಅಪಾರ ಉತ್ಸಾಹ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅವರು ತಮ್ಮ ಕನಸು, ಸಂಕಲ್ಪದೊಂದಿಗೆ ಮುಂದೆ ಸಾಗಿದರು ಮತ್ತು ದಣಿವರಿಯದೆ ಹೋರಾಡಿದರು. ಅಲ್ಲಿ ಇದ್ದ್ದು ಒಂದೇ ಒಂದು ಧ್ವನಿ, ಅದೆಂದರೆ - "ವಂದೇ ಮಾತರಂ". ಮತ್ತು ಅವರೆಲ್ಲರದ್ದು ಒಂದೇ ಒಂದು ಕನಸು- ʻಭಾರತದ ಸ್ವಾತಂತ್ರ್ಯʼ. ಅವರ ರಕ್ತವು ಇಂದು ನಮ್ಮ ರಕ್ತನಾಳಗಳಲ್ಲಿ ಹರಿಯುತ್ತದೆ ಎಂಬುದು ನಾವು ಹೆಮ್ಮೆಪಡುವ ವಿಷಯ. ಅವರು ನಮ್ಮ ಪೂರ್ವಜರು. ಅವರ ಸಂಖ್ಯೆ ಕೇವಲ 40 ಕೋಟಿ. ಕೇವಲ 40 ಕೋಟಿ ಜನರು ಜಾಗತಿಕ ಶಕ್ತಿಯನ್ನು ಬೇರುಸಹಿತ ಕಿತ್ತೊಗೆದರು ಮತ್ತು ಗುಲಾಮಗಿರಿಯ ಸಂಕೋಲೆಗಳನ್ನು ಕಳಚಿದರು. ನಮ್ಮ ಪೂರ್ವಜರಿಗೆ ಇದು ಸಾಧ್ಯವಾಯಿತಾದರೆ, ಅವರ ರಕ್ತವನ್ನು ನಮ್ಮ ರಕ್ತನಾಳಗಳಲ್ಲಿ ಹರಿಸುತ್ತಿರುವ ನಾವು ಇಂದು 140 ಕೋಟಿ ಜನರಿದ್ದೇವೆ. 40 ಕೋಟಿ ಜನರು ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಲು ಸಾಧ್ಯವಾಯಿತಾದರೆ, 40 ಕೋಟಿ ಜನರು ಸ್ವಾತಂತ್ರ್ಯವನ್ನು ಸಾಧಿಸುವ ಕನಸನ್ನು ಈಡೇರಿಸಲು ಸಾಧ್ಯವಾದರೆ, ಈಗ ನನ್ನ ದೇಶದ 140 ಕೋಟಿ ನಾಗರಿಕರು, ನನ್ನ ಕುಟುಂಬದ 140 ಕೋಟಿ ಸದಸ್ಯರು ಸಂಕಲ್ಪದೊಂದಿಗೆ ಹೊರಟರೆ, ಒಂದು ದಿಕ್ಕನ್ನು ನಿರ್ಧರಿಸಿ, ಎಷ್ಟೇ ದೊಡ್ಡ ಸವಾಲುಗಳು ಏನೇ ಇರಲಿ, ಹೆಗಲಿಗೆ ಹೆಗಲು ಕೊಟ್ಟು ಹಂತ ಹಂತವಾಗಿ ಮುನ್ನಡೆದರೆ, ಸಂಪನ್ಮೂಲಗಳ ಕೊರತೆ ಎಷ್ಟೇ ಇರಲಿ ಅಥವಾ ಹೋರಾಟ ಎಷ್ಟು ತೀವ್ರವಾಗಿರಲಿ, ನಾವು ಪ್ರತಿಯೊಂದು ಸವಾಲನ್ನು ಜಯಿಸಬಹುದು ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಬಹುದು. ನಾವು 2047 ವೇಳೆಗೆ 'ವಿಕಸಿತ ಭಾರತ' ಗುರಿಯನ್ನು ಸಾಧಿಸಬಹುದು. 40 ಕೋಟಿ ದೇಶವಾಸಿಗಳು ತಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ತ್ಯಾಗದಿಂದ ನಮಗೆ ಸ್ವಾತಂತ್ರ್ಯವನ್ನು ತಂದುಕೊಡಲು ಸಾಧ್ಯವಾದರೆ, 140 ಕೋಟಿ ದೇಶವಾಸಿಗಳು ಸಹ ಅದೇ ಸ್ಫೂರ್ತಿಯೊಂದಿಗೆ ಸಮೃದ್ಧ ಭಾರತವನ್ನು ನಿರ್ಮಿಸಬಹುದು.

ಸ್ನೇಹಿತರೇ,

ಜನರು ದೇಶಕ್ಕಾಗಿ ಸಾಯಲು ಸಹ ಬದ್ಧರಾಗಿದ್ದ ಸಮಯವಿತ್ತು, ಅವರ ನೆರವಿನೊಂದಿಗೆ ನಾವು ನಾವು ಸ್ವಾತಂತ್ರ್ಯವನ್ನು ಸಾಧಿಸಿದ್ದೇವೆ. ಆದರೆ, ಇಂದು ದೇಶಕ್ಕಾಗಿ ಬದುಕಲು ಬದ್ಧರಾಗುವ ಸಮಯ. ದೇಶಕ್ಕಾಗಿ ಸಾಯುವ ಬದ್ಧತೆ ನಮಗೆ ಸ್ವಾತಂತ್ರ್ಯವನ್ನು ತಂದರೆ, ದೇಶಕ್ಕಾಗಿ ಬದುಕುವ ಬದ್ಧತೆಯು ಸಮೃದ್ಧ ಭಾರತವನ್ನು ಸೃಷ್ಟಿಸಲಿದೆ.

ಸ್ನೇಹಿತರೇ,

ʻವಿಕಸಿತ ಭಾರತ-2047ʼ ಕೇವಲ ಭಾಷಣಗಳಿಗಾಗಿ ಸೃಷ್ಟಿಸಿದ ಪದಗುಚ್ಛವಲ್ಲ. ಇದರ ಹಿಂದೆ ಕಠಿಣ ಪರಿಶ್ರಮವಿದೆ. ದೇಶಾದ್ಯಂತ ಅನೇಕರಿಂದ ಸಲಹೆಗಳನ್ನು ಪಡೆಯಲಾಗಿದೆ, ನಾವು ನಾಗರೀಕರಿಂದಲೂ ಹೆಗಳನ್ನು ಕೋರಿದ್ದೇವೆ. ʻವಿಕಸಿತ ಭಾರತ-2047ʼಗಾಗಿ ಕೋಟ್ಯಂತರ ನಾಗರಿಕರು ಅಸಂಖ್ಯಾತ ಸಲಹೆಗಳನ್ನು ನೀಡಿರುವುದು ನನಗೆ ಸಂತೋಷವಾಗಿದೆ. ಪ್ರತಿಯೊಬ್ಬ ನಾಗರಿಕನ ಕನಸು ಇದರಲ್ಲಿ ಪ್ರತಿಫಲಿಸುತ್ತದೆ. ಪ್ರತಿಯೊಬ್ಬ ನಾಗರಿಕನ ಸಂಕಲ್ಪವು ಇದರಲ್ಲಿ ಸ್ಪಷ್ಟವಾಗಿದೆ. ಯುವಕರು, ವೃದ್ಧರು, ಗ್ರಾಮಸ್ಥರು, ರೈತರು, ದಲಿತರು, ಬುಡಕಟ್ಟು ಜನಾಂಗದವರು, ಪರ್ವತವಾಸಿಗಳು, ಅರಣ್ಯವಾಸಿಗಳು ಅಥವಾ ನಗರವಾಸಿಗಳುಹೀಗೆ ಪ್ರತಿಯೊಬ್ಬರೂ 2047 ವೇಳೆಗೆ ದೇಶವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವ ವೇಳೆಗೆ ʻವಿಕಸಿತ ಭಾರತʼವನ್ನು ನಿರ್ಮಿಸಲು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ.

ಸಲಹೆಗಳನ್ನು ಓದಿ ನನಗೆ ತುಂಬಾ ಸಂತೋಷವಾಯಿತು. ಅವರು ಏನು ಬರೆದಿದ್ದಾರೆ? ಕೆಲವರು ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡಲು ಪ್ರಸ್ತಾಪಿಸಿದ್ದಾರೆ. ʻವಿಕಸಿತ ಭಾರತ-2047ʼ ಗಾಗಿ, ಕೆಲವರು ದೇಶವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲು ಸಲಹೆ ನೀಡಿದ್ದಾರೆ. ನಮ್ಮ ವಿಶ್ವವಿದ್ಯಾಲಯಗಳು ಜಾಗತಿಕ ಸ್ಥಾನಮಾನವನ್ನು ಸಾಧಿಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಸ್ವಾತಂತ್ರ್ಯದ ಇಷ್ಟು ವರ್ಷಗಳ ನಂತರ ನಮ್ಮ ಮಾಧ್ಯಮಗಳು ಏಕೆ ಜಾಗತಿಕವಾಗಬಾರದು ಎಂದೂ ಕೆಲವರು ಪ್ರಶ್ನಿಸಿದ್ದಾರೆ. ನಮ್ಮ ನುರಿತ ಯುವಕರು ವಿಶ್ವದ ಮೊದಲ ಆಯ್ಕೆಯಾಗಬೇಕು ಎಂಬ ನಂಬಿಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಭಾರತವು ಜೀವನದ ಪ್ರತಿಯೊಂದು ಅಂಶದಲ್ಲೂ ಆದಷ್ಟು ಬೇಗ ಸ್ವಾವಲಂಬಿಯಾಗಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ನಾವು ʻಶ್ರೀಅನ್ನʼ ಎಂದು ಕರೆಯುವ ನಮ್ಮ ರೈತರು ಉತ್ಪಾದಿಸುವ ಸಿರಿಧಾನ್ಯಗಳು, ʻಸೂಪರ್ಫುಡ್‌ʼ ಪ್ರಪಂಚದಾದ್ಯಂತದ ಪ್ರತಿಯೊಂದು ಊಟದ ಮೇಜನ್ನು ತಲುಪಬೇಕು ಎಂದು ಅನೇಕರು ಪ್ರತಿಪಾದಿಸಿದರು. ನಾವು ವಿಶ್ವದ ಪೌಷ್ಠಿಕಾಂಶವನ್ನು ಬಲಪಡಿಸಬೇಕು ಮತ್ತು ಭಾರತದ ಸಣ್ಣ ರೈತರನ್ನು ಬೆಂಬಲಿಸಬೇಕು. ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು ಸೇರಿದಂತೆ ದೇಶದ ವಿವಿಧ ಘಟಕಗಳಲ್ಲಿ ಆಡಳಿತ ಸುಧಾರಣೆಗಳ ಅಗತ್ಯವನ್ನು ಹಲವಾರು ಜನರು ಎತ್ತಿ ತೋರಿಸಿದರು. ನ್ಯಾಯಾಂಗ ಸುಧಾರಣೆಗಳ ಅಗತ್ಯದ ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬದ ಬಗ್ಗೆ ಕಳವಳಗಳನ್ನು ಆಗಾಗ್ಗೆ ವ್ಯಕ್ತಪಡಿಸಲಾಗುತ್ತಿತ್ತು. ಅನೇಕ ಗ್ರೀನ್ ಫೀಲ್ಡ್ ನಗರಗಳನ್ನು ನಿರ್ಮಿಸುವುದು ಸಮಯದ ಅಗತ್ಯವಾಗಿದೆ ಎಂದು ಅನೇಕರು ಬರೆದಿದ್ದಾರೆ. ಹೆಚ್ಚುತ್ತಿರುವ ನೈಸರ್ಗಿಕ ವಿಪತ್ತುಗಳ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಆಡಳಿತದಲ್ಲಿ ಸಾಮರ್ಥ್ಯ ವರ್ಧನೆಗಾಗಿ ಅಭಿಯಾನವನ್ನು ಪ್ರಾರಂಭಿಸಲು ವ್ಯಕ್ತಿಯೊಬ್ಬರು ಸಲಹೆ ನೀಡಿದ್ದಾರೆ. ಇನ್ನು ಕೆಲವರಾದರೆ, ಭಾರತದ ತನ್ನದ್ದೇ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಆದಷ್ಟು ಬೇಗ ಸ್ಥಾಪಿಸಬೇಕು ಎಂದು ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ. ಜಗತ್ತು ಸಮಗ್ರ ಆರೋಗ್ಯ ರಕ್ಷಣೆಯನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಭಾರತವು ಸಾಂಪ್ರದಾಯಿಕ ಔಷಧ ಮತ್ತು ಸ್ವಾಸ್ಥ್ಯದ ಕೇಂದ್ರವಾಗಿ ಅಭಿವೃದ್ಧಿ ಹೊಂದಬೇಕು ಎಂದು ಕೆಲವರು ಒತ್ತಿ ಹೇಳಿದ್ದಾರೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಯಾವುದೇ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಮತ್ತೊಬ್ಬರು ಸಲಹೆ ನೀಡದ್ದಾರೆ..

ಸ್ನೇಹಿತರೇ,

ನಾನು ಸಲಹೆಗಳನ್ನು ಖುದ್ದಾಗಿ ಓದುತ್ತಿದ್ದೆ, ಏಕೆಂದರೆ ಅವುಗಳನ್ನು ನೀಡಿರುವುದು  ನನ್ನ ಸಹ ನಾಗರೀಕರು. ಇವು ನನ್ನ ದೇಶದ ಸಾಮಾನ್ಯ ನಾಗರಿಕರ ಸಲಹೆಗಳು. ರಾಷ್ಟ್ರದ ಜನರು ಅಂತಹ ದೊಡ್ಡ ಆಲೋಚನೆಗಳು ಮತ್ತು ಭವ್ಯ ಕನಸುಗಳನ್ನು ಹೊಂದಿರುವಾಗ, ಅವರ ಸಂಕಲ್ಪವು ಮಾತುಗಳಲ್ಲಿ ಪ್ರತಿಫಲಿಸಿದಾಗ, ಅದು ನಮ್ಮೊಳಗಿನ ಹೊಸ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ನಮ್ಮ ಆತ್ಮವಿಶ್ವಾಸವು ಹೊಸ ಎತ್ತರವನ್ನು ತಲುಪುತ್ತದೆ, ಮತ್ತು ಜನರ ನಂಬಿಕೆ ಕೇವಲ ಬೌದ್ಧಿಕ ಚರ್ಚೆಯಲ್ಲ; ಇದು ಅನುಭವಗಳಿಂದ ಹೊರಹೊಮ್ಮಿರುವಂಥದ್ದರು. ನಂಬಿಕೆಯು ದೀರ್ಘಕಾಲೀನ ಕಠಿಣ ಪರಿಶ್ರಮದ ಫಲ. ಆದ್ದರಿಂದ, ಭಾರತದ 18,000 ಹಳ್ಳಿಗಳಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಕೆಂಪು ಕೋಟೆಯ ಕೊತ್ತಲಗಳಿಂದ ಹೇಳಿದ ಮಾತನ್ನು ಸಾಮಾನ್ಯ ಜನರು ಕೇಳಿಸಿಕೊಂಡಾಗ, ಮತ್ತು ಭರವಸೆಯನ್ನು ಸರಕಾರ ಈಡೇರಿಸಿದಾಗ ಜನರ ವಿಶ್ವಾಸವು ಬಲಗೊಳ್ಳುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಇನ್ನೂ 2.5 ಕೋಟಿ ಕುಟುಂಬಗಳು ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ವಾಸಿಸುತ್ತಿವೆ ಎಂದು ಹೇಳಲಾಗುತ್ತಿತ್ತು. 2.5 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದಾಗ, ಶ್ರೀಸಾಮಾನ್ಯನ ವಿಶ್ವಾಸ ಹೆಚ್ಚಿದೆ. ನಾವು 'ಸ್ವಚ್ಛ ಭಾರತ' ಸ್ವಚ್ಛ ಭಾರತದ ಬಗ್ಗೆ ಮಾತನಾಡುವಾಗ, ಸಮಾಜದ ಶ್ರೀಮಂತ ವರ್ಗಗಳಿಂದ ಹಿಡಿದು ಗ್ರಾಮೀಣ ಕುಟುಂಬಗಳವರೆಗೆ, ಬಡ ಕಾಲೋನಿಗಳಲ್ಲಿ ವಾಸಿಸುವ ಜನರು ಅಥವಾ ಸಣ್ಣ ಮಕ್ಕಳವರೆಗೆ, ಇಂದು ಪ್ರತಿ ಕುಟುಂಬವು ಸ್ವಚ್ಛ ಪರಿಸರವನ್ನು ಬೆಂಬಲಿಸುತ್ತಿದೆ ಮತ್ತು ಸ್ವಚ್ಛತೆಯ ಬಗ್ಗೆ ಮಾತನ್ನು ಪ್ರೋತ್ಸಾಹಿಸುತ್ತಿದೆ. ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಸ್ವಚ್ಛ ಅಭ್ಯಾಸಗಳು ಮತ್ತು ಪರಿಸರದ ವಿಚಾರವಾಗಿ ಸಾಮಾಜಿಕ ಬದಲಾವಣೆಯನ್ನು ಖಾತರಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದು ದೇಶದೊಳಗೆ ಬಂದಿರುವ ಹೊಸ ಪ್ರಜ್ಞೆಯ ನೈಜ ಪ್ರತಿಬಿಂಬ ಎಂದು ನಾನು ನಂಬುತ್ತೇನೆ.

ಇಂದು ಮೂರು ಕೋಟಿ ಕುಟುಂಬಗಳು ತಮ್ಮ ಮನೆಗಳಲ್ಲೇ ನಲ್ಲಿಗಳಿಂದ ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿವೆ ಎಂದು ಕೆಂಪು ಕೋಟೆಯಿಂದ ಘೋಷಿಸಿದಾಗ, ನಮ್ಮ ಎಲ್ಲಾ ಕುಟುಂಬಗಳು ಶುದ್ಧ ಕುಡಿಯುವ ನೀರನ್ನು ಪಡೆಯುವುದು ಅತ್ಯಗತ್ಯವಾಗಿದೆ. ʻಜಲ ಜೀವನ್ ಮಿಷನ್ʼ ಮೂಲಕ, 12 ಕೋಟಿ ಕುಟುಂಬಗಳು ಅಲ್ಪಾವಧಿಯಲ್ಲಿ ಶುದ್ಧ ನಲ್ಲಿ ನೀರು ಸರಬರಾಜನ್ನು ಪಡೆಯುತ್ತಿವೆ. ಇಂದು 15 ಕೋಟಿ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಿವೆ. ನಮ್ಮ ಜನರಲ್ಲಿ ಸೌಲಭ್ಯಗಳಿಂದ ವಂಚಿತರಾಗಿದ್ದವರು ಯಾರು? ಹಿಂದೆ ಉಳಿದಿದ್ದವರು ಯಾರು? ಸಮಾಜದ ಮುಂದುವರಿದ ಸ್ತರಗಳು ಅಂತಹ ಸೌಲಭ್ಯಗಳ ಯಾವ ಕೊರತೆಯನ್ನೂ ಎದುರಿಸಲಿಲ್ಲ. ದಲಿತರು, ಶೋಷಿತ ಜನರು, ಬುಡಕಟ್ಟು ಸಹೋದರ-ಸಹೋದರಿಯರು, ಕೊಳೆಗೇರಿಗಳಲ್ಲಿ ವಾಸಿಸುವ ಜನರು ಇಂತಹ ಅಂತಹ ಮೂಲಭೂತ ಅಗತ್ಯಗಳಿಂದ ವಂಚಿತರಾಗಿದ್ದರು. ಅಂತಹ ಅನೇಕ ಮೂಲಭೂತ ಅಗತ್ಯಗಳನ್ನು ಪೂರೈಸಲು ನಾವು ಪ್ರಯತ್ನಗಳನ್ನು ಮಾಡಿದ್ದೇವೆ ಮತ್ತು ಇದರ ಫಲ ಮತ್ತು ಪ್ರಯೋಜನಗಳನ್ನು ಸಮಾಜದ ಎಲ್ಲಾ ಸದಸ್ಯರು ಪಡೆದಿದ್ದಾರೆ.

ನಾವು ʻವೋಕಲ್ ಫಾರ್ ಲೋಕಲ್ʼ ಮಂತ್ರವನ್ನು ನೀಡಿದ್ದೇವೆ. ಇಂದು ಇದು ಆರ್ಥಿಕ ಅಭಿವೃದ್ಧಿಗೆ ಹೊಸ ಮಂತ್ರವಾಗಿ ಮಾರ್ಪಟ್ಟಿರುವುದು ಎಂದು ನನಗೆ ಸಂತೋಷ ತಂದಿದೆ. ಪ್ರತಿಯೊಂದು ಜಿಲ್ಲೆಯೂ ಈಗ ತಮ್ಮ ಉತ್ಪನ್ನಗಳ ಬಗ್ಗೆ ಹೆಮ್ಮೆ ಪಡುತ್ತಿದೆ. ʻಒಂದು ಜಿಲ್ಲೆ- ಒಂದು ಉತ್ಪನ್ನʼ ಈಗ ಹೊಸ ಜನಾಂದೋಲನವಾಗಿದೆ. ಪ್ರತಿ ಜಿಲ್ಲೆಯು ಈಗ ʻಒಂದು ಜಿಲ್ಲೆ ಒಂದು ಉತ್ಪನ್ನʼ ಅಡಿಯಲ್ಲಿ ಉತ್ಪನ್ನವನ್ನು ರಫ್ತು ಮಾಡುವ ನಿಟ್ಟಿನಲ್ಲಿ ಯೋಚಿಸಲು ಪ್ರಾರಂಭಿಸಿದೆ. ಜಿಲ್ಲೆಗಳು ನವೀಕರಿಸಬಹುದಾದ ಇಂಧನದ ಸಂಕಲ್ಪವನ್ನು ತೆಗೆದುಕೊಂಡಿದ್ದವು. ಜಿ-20 ರಾಷ್ಟ್ರಗಳಿಗಿಂತ ಭಾರತವು ವಲಯದಲ್ಲಿ ಹೆಚ್ಚು ಸಾಧನೆ ಮಾಡಿದೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ಸವಾಲುಗಳನ್ನು ಪರಿಹರಿಸಲು ಭಾರತ ಅವರಿತ ಶ್ರಮಿಸುತ್ತಿದೆ.

ಸ್ನೇಹಿತರೇ,

ʻಫಿನ್ಟೆಕ್‌ʼ ವಲಯದಲ್ಲಿನ ನಮ್ಮ ಯಶಸ್ಸಿನ ಬಗ್ಗೆ ನಮ್ಮ ರಾಷ್ಟ್ರವು ಅಪಾರ ಹೆಮ್ಮೆಯನ್ನು ಹೊಂದಿದೆ. ಇದನ್ನು ಜಗತ್ತು ಸಹ ನಮ್ಮಿಂದ ಕಲಿಯಲು ಬಯಸುತ್ತದೆ. ಇದು ನಮ್ಮ ಸಾಮರ್ಥ್ಯಗಳ ಬಗ್ಗೆ ಇನ್ನಷ್ಟು ಹೆಮ್ಮೆ ಪಡುವಂತೆ ಮಾಡುತ್ತದೆ.

ಸ್ನೇಹಿತರೇ,

ಕೋವಿಡ್ಸಾಂಕ್ರಾಮಿಕ ಸಮಯದಲ್ಲಿ ಎದುರಿಸಿದ ಬಿಕ್ಕಟ್ಟನ್ನು ನಾವು ಹೇಗೆ ಮರೆಯಲು ಸಾಧ್ಯ? ನಮ್ಮ ದೇಶದಲ್ಲಿ ಸಮಯದಲ್ಲಿ ವಿಶ್ವದಲ್ಲೇ ಅತ್ಯಂತ ವೇಗದ ಲಸಿಕೀಕರಣ ನಡೆಸಲಾಯಿತು. ನಮ್ಮದೇ ಸೇನೆಯು ʻಸರ್ಜಿಕಲ್ ಸ್ಟ್ರೈಕ್ʼ ಮತ್ತು ʻಏರ್ ಸ್ಟ್ರೈಕ್ʼ ನಡೆಸಿದಾಗ, ಯುವಕರ ಹೃದಯಗಳು ಹೆಮ್ಮೆಯಿಂದ ಪುಳಕಿತಗೊಂಡವು, ಅವರು ತಮ್ಮ ತಲೆಗಳನ್ನು ಮೇಲೆತ್ತಿ ನಡೆದರು. ಇವುಗಳಿಂದಾಗಿ ಇಂದು 140 ಕೋಟಿ ದೇಶವಾಸಿಗಳಲ್ಲಿ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ತುಂಬಿದೆ.

ಸ್ನೇಹಿತರೇ,

ಎಲ್ಲ ಅಂಶಗಳ ಹಿಂದೆ ಉದ್ದೇಶಪೂರ್ವಕ ಪ್ರಯತ್ನವಿದೆ. ಸುಧಾರಣೆಯ ಪರಂಪರೆಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ. ರಾಜಕೀಯ ನಾಯಕತ್ವವು ಸಬಲೀಕರಣವನ್ನು ತರಲು ನಿರ್ಧರಿಸಿದಾಗ ಮತ್ತು ಅಭಿವೃದ್ಧಿಯ ಬಗ್ಗೆ  ದೃಢನಿಶ್ಚಯವನ್ನು ಹೊಂದಿದ್ದಾಗ, ಸರ್ಕಾರಿ ಯಂತ್ರವು ಸಹ ದೃಢವಾದ ಅನುಷ್ಠಾನಗಳನ್ನು ಸಕ್ರಿಯಗೊಳಿಸಲು ಮತ್ತು ಖಾತರಿಪಡಿಸಿಕೊಳ್ಳಲು ಪ್ರಾರಂಭಿಸುತ್ತದೆ. ಪ್ರತಿಯೊಬ್ಬ ನಾಗರಿಕನು ಕನಸುಗಳನ್ನು ಸಾಧಿಸುವತ್ತ ಸಕ್ರಿಯವಾಗಿ ಭಾಗವಹಿಸಲು ಪ್ರಾರಂಭಿಸಿದಾಗ ಅಪೇಕ್ಷಣೀಯ ಫಲಿತಾಂಶಗಳನ್ನು ಸಾಧಿಸುವುದು ನಿಶ್ಚಿತ.

ನನ್ನ ಪ್ರೀತಿಯ ದೇಶವಾಸಿಗಳೇ,

ಸ್ವಾತಂತ್ರ್ಯದ ಹಲವಾರು ದಶಕಗಳ ನಂತರವೂ ಒಂದು ರಾಷ್ಟ್ರವಾಗಿ ನಾವು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ ಎಂಬುದನ್ನು ನಾವು ಮರೆಯಬಾರದು. 'ಚಲ್ತಾ ಹೈ' ಎಂಬ ನಮ್ಮ ಮನಸ್ಥಿತಿ ಹಾಗೂ ಯಥಾಸ್ಥಿತಿಯನ್ನು ಒಪ್ಪಿಕೊಂಡು ಮುಂದುವರಿಯುವುದು ಇದಕ್ಕೆ ಕಾರಣ. ಬದಲಾವಣೆಯನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಮಗೆ ನಂಬಿಕೆಯಲ್ಲ ಅಥವಾ ಪ್ರಕ್ರಿಯೆಯಲ್ಲಿ ನಾವು ಭಾಗವಹಿಸುವುದಿಲ್ಲ. ನಾವು ಯಥಾಸ್ಥಿತಿಯನ್ನು ಪ್ರಶ್ನಿಸುವುದಿಲ್ಲ ಮತ್ತು ಹೆಚ್ಚಿನ ಸಮಸ್ಯೆಗಳ ಸೃಷ್ಟಿಗೆ ಹೆದರಿ ಹೊಸದಾಗಿ ಏನನ್ನೂ ಮಾಡುವುದಿಲ್ಲ. ಹಿಂದೆಯೂ ಯಥಾಸ್ಥಿತಿಯ ವಾತಾವರಣವಿತ್ತು, ಏನಿದೆಯೋ, ಹೇಗಿದೆಯೋ ಹಾಗೇಯೇ ಮುಂದುವರಿಯುವ ಸ್ಥಿತಿಯಿತ್ತು. ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಜನರು ನಂಬಿದ್ದರು. ನಾವು ಮನಸ್ಥಿತಿಯನ್ನು ಮುರಿಯಬೇಕಾಗಿತ್ತು; ನಮ್ಮನಲ್ಲಿ ನಾವು ನಮ್ಮನ್ನು ಆತ್ಮವಿಶ್ವಾಸ ತುಂಬಬೇಕಾಗಿತ್ತು, ಮತ್ತು ನಾವು ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿದ್ದೇವೆ. ಅನೇಕ ಜನರು, "ನಾವು ಈಗ ಮುಂದಿನ ಪೀಳಿಗೆಗಾಗಿ ಏಕೆ ಕೆಲಸ ಮಾಡಬೇಕು? ವರ್ತಮಾನದ ಬಗ್ಗೆ ಗಮನ ಹರಿಸೋಣ," ಹೇಳುತ್ತಿದ್ದರು. ಆದರೆ ದೇಶದ ಸಾಮಾನ್ಯ ನಾಗರಿಕರು ಅದನ್ನು ಬಯಸಲಿಲ್ಲ; ಅವರು ಬದಲಾವಣೆಗಾಗಿ ಕಾಯುತ್ತಿದ್ದರು, ಅವರು ಬದಲಾವಣೆಯನ್ನು ಬಯಸಿದ್ದರು, ಅವರು ಅದಕ್ಕಾಗಿ ಉತ್ಸುಕರಾಗಿದ್ದರು. ಆದರೆ ಯಾರೂ ಅವರ ಕನಸುಗಳು, ಭರವಸೆಗಳು ಮತ್ತು ಆಕಾಂಕ್ಷೆಗಳಿಗೆ ಪ್ರಾಮುಖ್ಯತೆ ನೀಡಲಿಲ್ಲ. ಪರಿಣಾಮವಾಗಿ, ಅವರು ಕಷ್ಟಗಳೊಂದಿಗೆ  ಹೋರಾಡುತ್ತಲೇ ಇದ್ದರು. ಅವರು ಸುಧಾರಣೆಗಳಿಗಾಗಿ ಕಾಯುತ್ತಿದ್ದರು. ನಮಗೆ ಜವಾಬ್ದಾರಿಯನ್ನು ನೀಡಲಾಯಿತು. ನಾವು ಗಮನಾರ್ಹ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಬಡವರು, ಮಧ್ಯಮ ವರ್ಗದವರು, ದೀನದಲಿತರು, ನಮ್ಮ ಬೆಳೆಯುತ್ತಿರುವ ನಗರ ಜನಸಂಖ್ಯೆ, ಯುವಕರ ಕನಸುಗಳು ಮತ್ತು ಸಂಕಲ್ಪಗಳು, ಅವರ ಆಕಾಂಕ್ಷೆಗಳು, ಅವರ ಜೀವನದಲ್ಲಿ ಬದಲಾವಣೆ ತರಲು ನಾವು ಸುಧಾರಣೆಗಳ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಸುಧಾರಣೆಗಳಿಗೆ ನಮ್ಮ ಬದ್ಧತೆ ಕೇವಲ ವಾಣಿಜ್ಯ ಸುದ್ದಿ ಪತ್ರಿಕೆಗಳ ಸಂಪಾದಕೀಯಗಳಿಗೆ ಸೀಮಿತವಾಗಿಲ್ಲ ಎಂದು ನಾನು ದೇಶದ ನಾಗರಿಕರಿಗೆ ಭರವಸೆ ನೀಡಲು ಬಯಸುತ್ತೇನೆ. ಸುಧಾರಣೆಗಳಿಗೆ ನಮ್ಮ ಬದ್ಧತೆ ಕೆಲವು ದಿನಗಳ ಚಪ್ಪಾಳೆಗಾಗಿ ಅಲ್ಲ. ನಮ್ಮ ಸುಧಾರಣೆಗಳ ಪ್ರಕ್ರಿಯೆಯು ಬಲವಂತದಿಂದ ನಡೆಸಲ್ಪಡುವುದಿಲ್ಲ, ಬದಲಾಗಿ ರಾಷ್ಟ್ರವನ್ನು ಬಲಪಡಿಸುವ ಉದ್ದೇಶದಿಂದ ಮುನ್ನಡೆಸಲ್ಪಡುತ್ತದೆ. ಆದ್ದರಿಂದ, ಇಂದು, ನಮ್ಮ ಸುಧಾರಣೆಗಳ ಮಾರ್ಗವು ಬೆಳವಣಿಗೆಯ ನೀಲನಕ್ಷೆಯಾಗಿದೆ ಎಂದು ನಾನು ಹೇಳಬಲ್ಲೆ. ನಮ್ಮ ಸುಧಾರಣೆಗಳು, ಬೆಳವಣಿಗೆ, ಬದಲಾವಣೆ, ಇವೆಲ್ಲವೂ ಕೇವಲ ಸಂವಾದಗಳು, ಅಥವಾ ಬುದ್ಧೀಜೀವಿಗಳು ಅಥವಾ ವಿಷಯ ತಜ್ಞರ  ಚರ್ಚಾವಿಷಯಗಳಾಗಿ ಉಳಿದಿಲ್ಲ.

ಸ್ನೇಹಿತರೇ,

ರಾಜಕೀಯ ಒತ್ತಡದಿಂದಾಗಿ ನಾವು ಇದನ್ನು ಮಾಡಿಲ್ಲ. ನಾವು ಏನೇ ಮಾಡಿದರೂ, ರಾಜಕೀಯ ಲಾಭ ಮತ್ತು ನಷ್ಟವನ್ನು ಲೆಕ್ಕಹಾಕುವ ಮೂಲಕ ನಾವು ಯೋಚಿಸುವುದಿಲ್ಲ. ನಮ್ಮ ಏಕೈಕ ಸಂಕಲ್ಪವೆಂದರೆ ರಾಷ್ಟ್ರ ಮೊದಲು, ರಾಷ್ಟ್ರ ಮೊದಲು, ರಾಷ್ಟ್ರದ ಹಿತಾಸಕ್ತಿಯೇ ಸರ್ವೋಚ್ಚವಾಗಿದೆ. ನನ್ನ ಭಾರತ ಶ್ರೇಷ್ಠವಾಗಬೇಕು ಎಂಬ ಸಂಕಲ್ಪದೊಂದಿಗೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ಸ್ನೇಹಿತರೇ,

ಸುಧಾರಣೆಗಳ ವಿಷಯಕ್ಕೆ ಬಂದಾಗ ಒಂದು ಸುದೀರ್ಘ ಕಥೆಯೇ ಇದೆ. ನಾನು ಅದರ ಚರ್ಚೆಗೆ ಹೊರಟರೆ ಗಂಟೆಗಳು ಬೇಕಾಗಬಹುದು. ಆದರೆ ನಾನು ಒಂದು ಸಣ್ಣ ಉದಾಹರಣೆಯನ್ನು ನೀಡಲು ಬಯಸುತ್ತೇನೆ. ಅದು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸುಧಾರಣೆಗಳ ಬಗ್ಗೆ. ಬ್ಯಾಂಕಿಂಗ್ ಕ್ಷೇತ್ರದ ಸ್ಥಿತಿಯ ಬಗ್ಗೆ ಯೋಚಿಸಿ- ಅಭಿವೃದ್ಧಿಯಾಗಲಿ, ವಿಸ್ತರಣೆಯಾಗಲಿ, ವಿಶ್ವಾಸವಾಗಲಿ ಇರಲಿಲ್ಲ. ಅಷ್ಟೇ ಅಲ್ಲ, ಆಗ ನಡೆಯುತ್ತಿದ್ದ ಚಟುವಟಿಕೆಗಳು ನಮ್ಮ ಬ್ಯಾಂಕುಗಳನ್ನು ಬಿಕ್ಕಟ್ಟಿಗೆ ಸಿಲುಕಿಸಿದ್ದವು. ಬ್ಯಾಂಕಿಂಗ್ ಕ್ಷೇತ್ರವನ್ನು ಬಲಪಡಿಸಲು ನಾವು ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಮತ್ತು ಇಂದು, ಇದರ ಪರಿಣಾಮವಾಗಿ, ನಮ್ಮ ಬ್ಯಾಂಕುಗಳು ವಿಶ್ವದ ಆಯ್ದ ಬಲಿಷ್ಠ ಬ್ಯಾಂಕುಗಳಲ್ಲಿ ಸ್ಥಾನ ಪಡೆದಿವೆ. ಬ್ಯಾಂಕುಗಳು ಬಲವಾದಾಗ, ಔಪಚಾರಿಕ ಆರ್ಥಿಕತೆಯ ಶಕ್ತಿಯೂ ಬಲಗೊಳ್ಳುತ್ತದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿದಾಗ, ಅದು ಸಾಮಾನ್ಯ ಬಡವರರು, ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳ ಅಗತ್ಯಗಳನ್ನು ಪೂರೈಸಲು ದೊಡ್ಡ ಶಕ್ತಿಯಾಗುತ್ತದೆ.

ಗೃಹ ಸಾಲ, ವಾಹನ ಸಾಲ, ಟ್ರ್ಯಾಕ್ಟರ್ ಖರೀದಿಸಲು ನಮ್ಮ ರೈತನಿಗೆ ಸಾಲ, ನಮ್ಮ ಯುವಕರಿಗೆ ನವೋದ್ಯಮ ಪ್ರಾರಂಭಿಸಲು ಸಾಲ, ಯುವಕರಿಗೆ ಶಿಕ್ಷಣಕ್ಕಾಗಿ ಸಾಲ ಅಥವಾ ವಿದೇಶಕ್ಕೆ ಹೋಗಲು ಸಾಲ - ಇವೆಲ್ಲವೂ ಬ್ಯಾಂಕುಗಳ ಮೂಲಕ ಸಾಧ್ಯ. ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವ ನನ್ನ ಸಹೋದರ-ಸಹೋದರಿಯರು ಸಹ ಇಂದು ಬ್ಯಾಂಕುಗಳಿಂದ ಪ್ರಯೋಜನ ಪಡೆಯುತ್ತಿರುವುದು ನನಗೆ ಸಂತೋಷವಾಗಿದೆ. ನನ್ನ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ಈಗ ಬ್ಯಾಂಕುಗಳೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತಿದ್ದಾರೆ, ಹೊಸ ಎತ್ತರವನ್ನು ಸಾಧಿಸುತ್ತಿದ್ದಾರೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಪಾಲುದಾರರಾಗುತ್ತಿದ್ದಾರೆ. ಇದು ನನಗೆ ಸಂತೋಷ ತಂದಿದೆ. ನಮ್ಮ ʻಎಂಎಸ್ಎಂಇʼಗಳು ಮತ್ತು ನಮ್ಮ ಸಣ್ಣ ಕೈಗಾರಿಕೆಗಳಿಗೆ ಬ್ಯಾಂಕುಗಳು ದೊಡ್ಡ ಬೆಂಬಲವಾಗಿವೆ. ಅವು ಮತ್ತಷ್ಟು ಪ್ರಗತಿ ಸಾಧಿಸಲು ದೈನಂದಿನ ವೆಚ್ಚಗಳಿಗೆ ಹಣದ ಅಗತ್ಯವಿದೆ, ಮತ್ತು ನಮ್ಮ ಬಲವಾದ ಬ್ಯಾಂಕುಗಳಿಂದಾಗಿ ಇಂದು ಅದು ಸಾಧ್ಯವಾಗಿದೆ.

ಸ್ನೇಹಿತರೇ,

ನಮ್ಮ ದೇಶವು ಸ್ವಾತಂತ್ರ್ಯವನ್ನು ಪಡೆದರೂ, ದುರದೃಷ್ಟವಶಾತ್ "ಮಾಯಿ-ಬಾಪ್" ಸಂಸ್ಕೃತಿಯು ಬೇರೂರಿತ್ತು. ಅಲ್ಲಿ ಜನರು ನಿರಂತರವಾಗಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುವುದು ಅನಿವಾರ್ಯವಾಗಿತ್ತು, ಸರ್ಕಾರದಿಂದ ಅನುಕೂಲಗಳನ್ನು ಪಡೆಯಲು ಶಿಫಾರಸುಗಳ ಪ್ರಾಬಲ್ಯ ಜೋರಾಗಿತ್ತು. ಇಂದು, ನಾವು ಆಡಳಿತದ ಮಾದರಿಯನ್ನು ಪರಿವರ್ತಿಸಿದ್ದೇವೆ. ಈಗ, ಸರ್ಕಾರವೇ ಫಲಾನುಭವಿಗಳ ಬಳಿಗೆ ತಲುಪುತ್ತದೆ; ಸರ್ಕಾರವು ಅವರ ಮನೆಗಳಿಗೆ ಗ್ಯಾಸ್ ತಲುಪಿಸುತ್ತದೆ, ಅವರ ಮನೆಗಳಿಗೆ ನೀರು ಸರಬರಾಜು ಮಾಡುತ್ತದೆ, ವಿದ್ಯುತ್ ಒದಗಿಸುತ್ತದೆ ಮತ್ತು ಅಭಿವೃದ್ಧಿಯ ಹೊಸ ಎತ್ತರವನ್ನು ಮುಟ್ಟಲು ಪ್ರೋತ್ಸಾಹಿಸಲು ಆರ್ಥಿಕ ಸಹಾಯವನ್ನು ನೀಡುತ್ತದೆ. ನಮ್ಮ ಯುವಕರ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರ ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಸ್ನೇಹಿತರೇ,

ನಮ್ಮ ಸರ್ಕಾರವು ಪ್ರಮುಖ ಸುಧಾರಣೆಗಳಿಗೆ ಅತ್ಯಂತ ಬದ್ಧವಾಗಿದೆ ಮತ್ತು ಪ್ರಯತ್ನಗಳ ಮೂಲಕ ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವ ಗುರಿಯನ್ನು ನಾವು ಹೊಂದಿದ್ದೇವೆ.

ಸ್ನೇಹಿತರೇ,

ದೇಶದಲ್ಲಿ ಹೊಸ ವ್ಯವಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ರಾಷ್ಟ್ರವನ್ನು ಮುನ್ನಡೆಸಲು, ಹಲವಾರು ಹಣಕಾಸು ನೀತಿಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ಮತ್ತು ಹೊಸ ವ್ಯವಸ್ಥೆಗಳಲ್ಲಿ ದೇಶದ ನಂಬಿಕೆ ಸ್ಥಿರವಾಗಿ ಬೆಳೆಯುತ್ತಿದೆ. ಇಂದು 20-25 ವರ್ಷ ವಯಸ್ಸಿನವರು ಮತ್ತು ಒಂದು ದಶಕದ ಹಿಂದೆ ಕೇವಲ 12-15 ವರ್ಷ ವಯಸ್ಸಿನವರಾಗಿದ್ದವರು ಪರಿವರ್ತನೆಯು ತಮ್ಮ ಕಣ್ಣ ಮುಂದೆ ನಡೆಯುತ್ತಿರುವುದನ್ನು ನೋಡಿದ್ದಾರೆ. ಕೇವಲ 10 ವರ್ಷಗಳಲ್ಲಿ, ಅವರ ಕನಸುಗಳು ರೂಪುಗೊಂಡಿವೆ, ತೀಕ್ಷ್ಣಗೊಂಡಿವೆ ಮತ್ತು ಹೊಸ ಆತ್ಮವಿಶ್ವಾಸದ ಪ್ರಜ್ಞೆಯನ್ನು ಹುಟ್ಟುಹಾಕಿವೆ, ಇದು ಈಗ ರಾಷ್ಟ್ರದ ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇಂದು, ಭಾರತದ ಖ್ಯಾತಿಯು ಜಾಗತಿಕವಾಗಿ ಹೆಚ್ಚಾಗಿದೆ, ಮತ್ತು ಭಾರತದ ಬಗ್ಗೆ ವಿಶ್ವದ ಗ್ರಹಿಕೆ ಬದಲಾಗಿದೆ.

ನಮ್ಮ ಯುವಕರಿಗೆ ಈಗ ವಿಶ್ವದಾದ್ಯಂತ ಅವಕಾಶಗಳ ಬಾಗಿಲು ವಿಶಾಲವಾಗಿ ತೆರೆದಿದೆ. ಸ್ವಾತಂತ್ರ್ಯದ ನಂತರ ಅನೇಕ ವರ್ಷಗಳಿಂದ ನಮ್ಮ ಕೈತಪ್ಪಿದ್ದ ಅಸಂಖ್ಯಾತ ಹೊಸ ಉದ್ಯೋಗಾವಕಾಶಗಳು ಈಗ ಮನೆ ಬಾಗಿಲಿಗೆ ಬಂದಿವೆ. ಸಾಧ್ಯತೆಗಳು ವಿಸ್ತರಿಸಿವೆ, ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ನನ್ನ ದೇಶದ ಯುವಕರು ಇನ್ನು ಮುಂದೆ ನಿಧಾನವಾಗಿ ಚಲಿಸಲು ಬಯಸುವುದಿಲ್ಲ. ನಿಧಾನವಾದ ಪ್ರಗತಿಯಲ್ಲಿ ಅವರಿಗೆ ನಂಬಿಕೆಯಿಲ್ಲ. ಬದಲಾಗಿ, ಅವರು ದಿಟ್ಟ ಹೆಜ್ಜೆಗಳನ್ನು ಇಡುವ ಮೂಲಕ ಹೊಸ ಮೈಲುಗಲ್ಲುಗಳನ್ನು ಸಾಧಿಸುವ ಮನಸ್ಥಿತಿಯಲ್ಲಿದ್ದಾರೆ. ಇದು ಭಾರತಕ್ಕೆ ʻಸುವರ್ಣ ಯುಗʼ ಎಂದು ನಾನು ಹೇಳಲು ಬಯಸುತ್ತೇನೆ. ಜಾಗತಿಕ ಪರಿಸ್ಥಿತಿಗಳಿಗೆ ಹೋಲಿಸಿದರೆ ಇದು ನಿಜಕ್ಕೂ ನಮ್ಮ ಸುವರ್ಣ ಯುಗವೇ ಹೌದು.

ನನ್ನ ಪ್ರೀತಿಯ ದೇಶವಾಸಿಗಳೇ,

ಅವಕಾಶ ಕೈತಪ್ಪಲು ನಾವು ಬಿಡಬಾರದು. ನಾವು ಕ್ಷಣವನ್ನು ಸದುಪಯೋಗಪಡಿಸಿಕೊಂಡು ನಮ್ಮ ಕನಸುಗಳು ಮತ್ತು ಸಂಕಲ್ಪಗಳೊಂದಿಗೆ ಮುನ್ನಡೆದರೆ, ನಾವು ʻಸುವರ್ಣ ಭಾರತʼಕ್ಕಾಗಿ (ಸ್ವರ್ಣಿಮ್ ಭಾರತ್) ರಾಷ್ಟ್ರದ ಆಕಾಂಕ್ಷೆಗಳನ್ನು ಪೂರೈಸಬಲ್ಲೆವು ಮತ್ತು 2047 ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಗುರಿಯನ್ನು ಸಾಧಿಸಬಲ್ಲೆವು. ಶತಮಾನಗಳ ಸಂಕೋಲೆಗಳಿಂದ ನಾವೀಗ ಮುಕ್ತರಾಗಿದ್ದೇವೆ.

ಇಂದು, ಅದು ಪ್ರವಾಸೋದ್ಯಮ ಕ್ಷೇತ್ರವಾಗಿರಲಿ, ಎಂಎಸ್ಎಂಇಗಳು, ಶಿಕ್ಷಣ, ಆರೋಗ್ಯ, ಸಾರಿಗೆ, ಕೃಷಿ ಅಥವಾ ಕೃಷಿ ಕ್ಷೇತ್ರ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಮತ್ತು ಆಧುನಿಕ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಉತ್ತಮ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುತ್ತಿರುವ ವೇಳೆಯಲ್ಲಿ ನಮ್ಮ ದೇಶದ ವಿಶಿಷ್ಟ ಪರಿಸ್ಥಿತಿಗಳಿಗೆ ಅನುಗುಣವಾಗಿ ಮುಂದುವರಿಯುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರತಿಯೊಂದು ವಲಯಕ್ಕೂ ಆಧುನೀಕರಣ ಮತ್ತು ನಾವೀನ್ಯತೆ ಅಗತ್ಯವನ್ನು ಮನಗಾಣಲಾಗುತ್ತಿದೆ, ತಂತ್ರಜ್ಞಾನವನ್ನು ಬಳಸಲು ಒತ್ತು ನೀಡಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಹೊಸ ನೀತಿಗಳ ಕಾರಣದಿಂದಾಗಿ, ಕ್ಷೇತ್ರಗಳು ಹೊಸ ಬೆಂಬಲ ಮತ್ತು ಶಕ್ತಿಯನ್ನು ಪಡೆಯುತ್ತಿವೆ. ನಾವು ಎಲ್ಲಾ ಅಡೆತಡೆಗಳನ್ನು ತೊಡೆದುಹಾಕಬೇಕು, ಹಿಂಜರಿತಗಳನ್ನು ಮೆಟ್ಟಿ ಮೇಲೆ ಬರಬೇಕು, ಪೂರ್ಣ ಹುರುಪಿನಿಂದ ನಮ್ಮ ಕನಸುಗಳನ್ನು ಸಾಧಿಸಬೇಕು ಮತ್ತು ಯಶಸ್ಸನ್ನು ಕಾಣಬೇಕು. ನಾವು ದೃಷ್ಟಿಕೋನವನ್ನು ಅಂತರ್ಗತಗೊಳಿಸಬೇಕು ಮತ್ತು ನಿಟ್ಟಿನಲ್ಲಿ ಮುಂದುವರಿಯಬೇಕು.

ಈಗ ನೀವು ದೇಶದಲ್ಲಿ ನಡೆಯುತ್ತಿರುವ ಬೃಹತ್ ಬದಲಾವಣೆಗೆ ಸಾಕ್ಷಿಯಾಗುತ್ತಿರಬಹುದು. ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ತಳಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳ ಮೇಲೆ ನಾನು ಬೆಳಕು ಚೆಲ್ಲುತ್ತಿದ್ದೇನೆ. ಕಳೆದ ದಶಕದಲ್ಲಿ, 10 ಕೋಟಿ ಸಹೋದರಿಯರು ಮಹಿಳಾ ಸ್ವಸಹಾಯ ಗುಂಪುಗಳ ಭಾಗವಾಗಿದ್ದಾರೆ. ಇಡೀ 10 ಕೋಟಿ ಮಂದಿ ಹೊಸ ಸದಸ್ಯರು. ಸಾಮಾನ್ಯ ಗ್ರಾಮೀಣ ಕುಟುಂಬಗಳ 10 ಕೋಟಿ ಮಹಿಳೆಯರು ಈಗ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಇದು ನನ್ನಲ್ಲಿ ಹೆಮ್ಮೆ ಮೂಡಿಸಿದೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾದಾಗ, ಅವರು ತಮ್ಮ ಕುಟುಂಬಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಕೊಡುಗೆ ನೀಡಲು ಆರಂಭಿಸುತ್ತಾರೆ. ಅವರು ಸಾಮಾಜಿಕ ಪರಿವರ್ತನೆಯ ಪ್ರವರ್ತಕರು ಮತ್ತು ರಕ್ಷಕರಾಗುತ್ತಾರೆ. ಇಂದು ಜಾಗತಿಕ ಮಟ್ಟದಲ್ಲಿ ಬಲವಾದ ಪಾತ್ರಗಳನ್ನು ನಿರ್ವಹಿಸುತ್ತಿರುವ ಭಾರತದ ಹಲವಾರು ʻಸಿಇಓʼಗಳ ಬಗ್ಗೆ ನನಗೆ ಅಷ್ಟೇ ಹೆಮ್ಮೆ ಇದೆ. ಒಂದೆಡೆ ನಮ್ಮ ʻಸಿಇಓʼಗಳು ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದರೆ, ಮತ್ತೊಂದೆಡೆ ಒಂದು ಕೋಟಿ ತಾಯಂದಿರು ಮತ್ತು ಸಹೋದರಿಯರು ಮಹಿಳಾ ಸ್ವಸಹಾಯ ಗುಂಪುಗಳನ್ನು ಸೇರಿಕೊಂಡು 'ಲಕ್ಷಾಧೀಪತಿ ದೀದಿʼಗಳಾಗುತ್ತಿರುವುದನ್ನು ನೋಡುವುದು ನಿಜಕ್ಕೂ ತೃಪ್ತಿದಾಯಕ ಸಂಗತಿ. ಇದು ನನಗೂ ಅಪಾರ ಹೆಮ್ಮೆಯ ವಿಷಯವೂ ಹೌದು. ನಾವು ಈಗ ಮಹಿಳಾ ಸ್ವಸಹಾಯ ಗುಂಪುಗಳಿಗೆ ನಿಗದಿಪಡಿಸಿದ ನಿಧಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ. ಇಲ್ಲಿಯವರೆಗೆ, ಒಟ್ಟು ಒಂಬತ್ತು ಲಕ್ಷ ಕೋಟಿ ಹಣವನ್ನು ಬ್ಯಾಂಕುಗಳ ಮೂಲಕ ಸ್ವಸಹಾಯ ಗುಂಪುಗಳಿಗೆ ವಿತರಣೆ ಮಾಡಲಾಗಿದೆ, ಇದು ಅವರ ವಿವಿಧ ಕಾರ್ಯಗಳನ್ನು ಮುಂದುವರಿಸಲು ಅನುವು ಮಾಡಿಕೊಡುತ್ತಿದೆ.

ಸ್ನೇಹಿತರೇ,

ಬಾಹ್ಯಾಕಾಶ ಕ್ಷೇತ್ರವು ನಮಗೆ ಹೊಸ ಭವಿಷ್ಯವನ್ನು ತೆರೆಯುತ್ತಿದೆ ಎಂಬ ಅಂಶವನ್ನು ನಮ್ಮ ಯುವಜನತೆಗೆ ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಅಭಿವೃದ್ಧಿಯ ಅತ್ಯಂತ ಪ್ರಮುಖ ಅಂಶವಾಗಿದ್ದು, ನಾವು ಇದಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ. ನಾವು ವಲಯದಲ್ಲಿ ಹಲವಾರು ಹೊಸ ಸುಧಾರಣೆಗಳನ್ನು ಪರಿಚಯಿಸಿದ್ದೇವೆ. ವಲಯದ ಬೆಳವಣಿಗೆಯನ್ನು ತಡೆಯುತ್ತಿದ್ದ ಹಲವಾರು ನಿರ್ಬಂಧಗಳನ್ನು ನಾವು ತೆಗೆದುಹಾಕಿದ್ದೇವೆ. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ನವೋದ್ಯಮಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಘುತ್ತಿದೆ. ವಲಯವು ಈಗ ಬಹಳ ರೋಮಾಂಚಕವಾಗುತ್ತಿದೆ ಮತ್ತು ನಮ್ಮ ದೇಶವನ್ನು ಶಕ್ತಿಯುತ ರಾಷ್ಟ್ರವನ್ನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ವಲಯವನ್ನು ಬಲಪಡಿಸುವ ಕ್ರಮಗಳ ವಿಚಾರದಲ್ಲಿ ನಾವು ಭವಿಷ್ಯದ ದೃಷ್ಟಿಕೋನವನ್ನು ಹೊಂದಿದ್ದೇವೆ. ಇಂದು ನಮ್ಮ ದೇಶದಲ್ಲಿ ಖಾಸಗಿ ಉಪಗ್ರಹಗಳು ಮತ್ತು ರಾಕೆಟ್ಗಳನ್ನು ಉಡಾವಣೆ ಮಾಡಲಾಗುತ್ತಿರುವುದು ನಮಗೆ ಹೆಮ್ಮೆಯ ವಿಷಯ. ನೀತಿಗಳು ಸರಿಯಾಗಿದ್ದರೆ, ರಾಷ್ಟ್ರೀಯ ಅಭಿವೃದ್ಧಿಗಾಗಿ ಸಂಪೂರ್ಣ ಬದ್ಧತೆಯೊಂದಿಗೆ ನಮ್ಮ ಉದ್ದೇಶಗಳು ನೈಜವಾಗಿದ್ದರೆ ನಾವು ಉತ್ತಮ ಫಲಿತಾಂಶಗಳನ್ನು ಖಂಡಿತವಾಗಿಯೂ ಸಾಧಿಸಬಹುದು ಎಂಬ ಅಂಶವನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ನಮ್ಮ ರಾಷ್ಟ್ರವು ಅಪಾರ ಸಾಧ್ಯತೆಗಳು ಮತ್ತು ಹೊಸ ಅವಕಾಶಗಳನ್ನು ತೆರೆದಿದೆ. ನಮ್ಮ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಿದ ಇನ್ನೂ ಎರಡು ಪ್ರಗತಿಗಳತ್ತ ನಾವು ಗಮನ ಹರಿಸಬೇಕಾಗಿದೆ. ಮೊದಲನೆಯದು ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿ, ಇದರಲ್ಲಿ ನಾವು ಅಗಾಧ ಬೆಳವಣಿಗೆ ಕಂಡಿದ್ದೇವೆ. ಎರಡನೆಯದು ಸುಗಮ ಜೀವನ. ಸಾಮಾನ್ಯ ಜನರಿಗೆ ಕೈಗೆಟುಕುವ ದರದ ಗೌರವಯುತ ಜೀವನಶೈಲಿ ಮತ್ತು ಮೂಲಭೂತ ಸೌಕರ್ಯಗಳು ಲಭ್ಯವಾಗಬೇಕು.

ಕಳೆದ ದಶಕದಲ್ಲಿ ಅತ್ಯಾಧುನಿಕ ರೈಲ್ವೆ, ವಿಮಾನ ನಿಲ್ದಾಣ, ಬಂದರುಗಳು, ಸದೃಢ ರಸ್ತೆಮಾರ್ಗಗಳು, ಬ್ರಾಡ್ಬಾಂಡ್ಸಂಪರ್ಕವನ್ನು ಒದಗಿಸುವ ಮೂಲಕ ಬೃಹತ್ ಮೂಲಸೌಕರ್ಯ ಅಭಿವೃದ್ಧಿಗೆ ನಾವು ಸಾಕ್ಷಿಯಾಗಿದ್ದೇವೆ. ಇದರಿಂದಾಗಿ ಪ್ರತಿ ಹಳ್ಳಿ ಮತ್ತು ಅರಣ್ಯ ಪ್ರದೇಶದಲ್ಲೂ ಸಹ ಶಾಲೆ ಇಒರುವಂತೆ ಖಚಿತಪಡಿಸಿಕೊಳ್ಳಲಾಗಿದೆ. ʻಆಯುಷ್ಮಾನ್ ಭಾರತ್ʼ ಯೋಜನೆಗಳ ಮೂಲಕ ಕೈಗೆಟುಕುವ ದರದ ಆರೋಗ್ಯ ಸೇವೆಯನ್ನು ಕೊನೆಯ ಮೈಲಿಯವರೆಗೆ ತಲುಪಿಸಲಾಗುತ್ತಿದೆ. ಅಲ್ಲಿ ಆಧುನಿಕ ಆಸ್ಪತ್ರೆಗಳು ಮತ್ತು ಆರೋಗ್ಯ ಮಂದಿರಗಳನ್ನು ನಿರ್ಮಿಸುವ ಮೂಲಕ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ. ಹಲವಾರು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಅರವತ್ತು ಸಾವಿರ ಕೊಳಗಳನ್ನು 'ಅಮೃತ ಸರೋವರ'ಗಳಾಗಿ ಪುನರುಜ್ಜೀವನಗೊಳಿಸಲಾಗಿದೆ ಮತ್ತು ಮರುಪೂರಣ ಮಾಡಲಾಗಿದೆ. ಈಗಾಗಲೇ ಎರಡು ಲಕ್ಷ ಪಂಚಾಯಿತಿಗಳಲ್ಲಿ ʻಆಪ್ಟಿಕಲ್ ಫೈಬರ್ʼ ಸಂಪರ್ಕ ಜಾಲವನ್ನು ಅಳವಡಿಸಲಾಗಿದೆ. ಕಾಲುವೆಗಳ ಬೃಹತ್ ಜಾಲದಿಂದಾಗಿ ಅನೇಕ ರೈತರು ಈಗ ಪ್ರಯೋಜನ ಪಡೆಯುತ್ತಿದ್ದಾರೆ. ನಾಲ್ಕು ಕೋಟಿ ಶಾಶ್ವತ ಮನೆಗಳು ಬಡವರಿಗೆ ಹೊಸ ಜೀವನವನ್ನು ನೀಡಿವೆ. ರಾಷ್ಟ್ರೀಯ ಕಾರ್ಯಸೂಚಿಯನ್ನು ಮುಂದುವರಿಸುವ ಪ್ರಯತ್ನದಲ್ಲಿ ಮೂರು ಕೋಟಿ ಹೊಸ ಮನೆಗಳ ನಿರ್ಮಾಣದ ಭರವಸೆ ನೀಡಲಾಗಿದೆ.

ನಮ್ಮ ಈಶಾನ್ಯ ಭಾರತವು ಈಗ ವೈದ್ಯಕೀಯ ಮೂಲಸೌಕರ್ಯಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ರೂಪಾಂತರವು ಕೊನೆಯ ಮೈಲಿವರೆಗೆ ಆರೋಗ್ಯ ಸೇವಾ ಸೌಲಭ್ಯವನ್ನು ವಿಸ್ತರಿಸಲು ನಮಗೆ ಸಹಾಯ ಮಾಡಿದೆ. ಪ್ರದೇಶಗಳನ್ನು ಮುಖ್ಯವಾಹಿನಿಗೆ ತರಲು ನಾವು ದೂರದ ಹಳ್ಳಿಗಳು ಮತ್ತು ಗಡಿಗಳನ್ನು ಸಂಪರ್ಕಿಸುವ ರಸ್ತೆಗಳನ್ನು ನಿರ್ಮಿಸಿದ್ದೇವೆ. ದೃಢವಾದ ಮೂಲಸೌಕರ್ಯ ಜಾಲಗಳ ಮೂಲಕ ದಲಿತರು, ಶೋಷಿತರು, ವಂಚಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು, ಸ್ಥಳೀಯರು ಮತ್ತು ಅರಣ್ಯವಾಸಿಗಳು, ಗುಡ್ಡಗಾಡು ವಾಸಿಗಳು ಮತ್ತು ದೂರದ ಗಡಿ ಪ್ರದೇಶಗಳ ನಿವಾಸಿಗಳ ಅಗತ್ಯಗಳನ್ನು ಪೂರೈಸಲು ನಮಗೆ ಸಾಧ್ಯವಾಗಿದೆ. ಮೀನುಗಾರಿಕೆ, ಪಶುಸಂಗೋಪನೆಯಲ್ಲಿ ತೊಡಗಿರುವ ನಮ್ಮ ನಾಗರಿಕರಿಗೆ ಸಮಗ್ರ ಯೋಜನೆಗಳನ್ನು ಖಚಿತಪಡಿಸಿಕೊಳ್ಳಲು ಸುಧಾರಣೆಗಳನ್ನು ವಿನ್ಯಾಸಗೊಳಿಸಲಾಗಿದೆ.

ನಮ್ಮ ಮೀನುಗಾರರ ಮಿತ್ರರ ಅಗತ್ಯಗಳನ್ನು ಪೂರೈಸುವುದು, ನಮ್ಮ ಹೈನುಗಾರರ ಜೀವನವನ್ನು ಪರಿವರ್ತಿಸುವುದು, ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು - ಇದು ನಮ್ಮ ನೀತಿಗಳು, ನಮ್ಮ ಉದ್ದೇಶಗಳು, ನಮ್ಮ ಸುಧಾರಣೆಗಳು, ನಮ್ಮ ಕಾರ್ಯಕ್ರಮಗಳು ಮತ್ತು ನಮ್ಮ ಕೆಲಸದ ಶೈಲಿಯ ಭಾಗವಾಗಿದೆ. ಪ್ರಯತ್ನಗಳಿಂದಾಗಿ ನಮ್ಮ ಯುವಕರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಅವರು ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ, ಹೊಸ ಕ್ಷೇತ್ರಗಳಿಗೆ ಕಾಲಿಡಲು ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ, ಮತ್ತು ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಅವಧಿಯಲ್ಲಿ ಉದ್ಯೋಗವನ್ನು ಪಡೆಯಲು ಅತ್ಯಧಿಕ ಅವಕಾಶಗಳನ್ನು ಅವರು ಹೊಂದಿದ್ದಾರೆ.

ಗುಣಮಟ್ಟದ ಜೀವನವು ನಮ್ಮ ಮಧ್ಯಮ ವರ್ಗದ ಕುಟುಂಬಗಳ ಸ್ವಾಭಾವಿಕವಾಗಿ ನಿರೀಕ್ಷೆಯಾಗಿದೆ. ಅವರು ದೇಶಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತಾರೆ, ಆದ್ದರಿಂದ ಗುಣಮಟ್ಟದ ಜೀವನದ ನಿರೀಕ್ಷೆಗಳನ್ನು ಪೂರೈಸುವುದು ದೇಶದ ಜವಾಬ್ದಾರಿಯಾಗಿದೆ. ಅವರನ್ನು ಅಧಿಕಾರಶಾಹಿ ಅಡೆತಡೆಗಳಿಂದ ಮುಕ್ತಗೊಳಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ಮತ್ತು 2047 ವೇಳೆಗೆ, ʻವಿಕಸಿತ ಭಾರತʼ ಕನಸು ನನಸಾಗುವ ಹೊತ್ತಿಗೆ, ಸಾಮಾನ್ಯ ನಾಗರಿಕರ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆಯಾಗುತ್ತದೆ ಎಂದು ನಾನು ನಂಬಿದ್ದೇನೆ. ಅಗತ್ಯವಿರುವಲ್ಲಿ ಸರ್ಕಾರ ಅಥವಾ ಆಡಳಿತವು ತಪ್ಪದೆ ತನ್ನ ಪಾತ್ರವನ್ನು ವಹಿಸವ ಹಾಗೂ ಸರ್ಕಾರದಿಂದ ಉಂಟಾಗುವ ವಿಳಂಬದಿಂದಾಗಿ ಯಾವುದೇ ಪರಿಣಾಮ ಉಂಟಾಗದ ವ್ಯವಸ್ಥೆಯನ್ನು ಕಲ್ಪಿಸಲು ನಾವು ಬದ್ಧರಾಗಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ಸಣ್ಣ ಅಗತ್ಯಗಳ ಬಗ್ಗೆಯೂ ಗಮನ ಹರಿಸುತ್ತೇವೆ. ನಾವು ಸಣ್ಣ ಅವಶ್ಯಕತೆಗಳಿಗೂ ಗಮನ ನೀಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ನಮ್ಮ ಬಡ ಮನೆಗಳಲ್ಲಿ ಒಲೆ ಉರಿಯುತ್ತಲೇ ಇರುವಂತೆ ಅಥವಾ ಬಡ ತಾಯಿಯು ತನ್ನ ಮನಸ್ಸಿನಲ್ಲಿ ಚಿಂತೆಗಳೊಂದಿಗೆ ಮಲಗದಂತೆ ಖಚಿತಪಡಿಸಿಕೊಳ್ಳುತ್ತಿದ್ದೇವೆ, ನಾವು ಉಚಿತ ಆರೋಗ್ಯ ಯೋಜನೆಯನ್ನು ನಡೆಸುತ್ತಿದ್ದೇವೆ. (ಉಚಿತ) ವಿದ್ಯುತ್, ನೀರು ಮತ್ತು ಅನಿಲ (ಸಂಪರ್ಕಗಳು) ಈಗ ಬಹುತೇಕ ನೂರು ಪ್ರತಿಶತ ಅನುಷ್ಠಾನ ಹಂತದಲ್ಲಿವೆ, ಮತ್ತು ನಾವು ಪರಿಪೂರ್ಣ ಅನುಷ್ಠಾನದ ಬಗ್ಗೆ ಯಾವಾಗಲೇ ಮಾತನಾಡಿದರೂ ಅದು 100% ಎಂದರ್ಥ. ಪರಿಪೂರ್ಣತೆ ಸಾಕಾರವಾದಾಗ, ಅದು ಜಾತಿವಾದ ಮತ್ತು ಎಡಪಂಥೀಯ ಸಿದ್ಧಾಂತದ ಬಣ್ಣವನ್ನು ಹೊಂದಿರುವುದಿಲ್ಲ. ಪರಿಪೂರ್ಣತೆಯ ಮಂತ್ರವನ್ನು ಅಳವಡಿಸಿಕೊಂಡಾಗ, "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ನೈಜ ತತ್ವವು ಸಾಕಾರಗೊಳ್ಳುತ್ತದೆ.

ಜನರ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಸಾವಿರಾರು ಅನುಸರಣೆಗಳಿಂದಾಗಿ ಸಾಮಾನ್ಯ ನಾಗರಿಕರಿಗೆ ಸರ್ಕಾರವು ಹೊರೆಯಾಗುತ್ತಿತ್ತು. ನಾಗರಿಕರು ಕಾನೂನು ಸಂಕೀರ್ಣತೆಗಳ ಜಾಲದಲ್ಲಿ ಸಿಲುಕದಂತೆ ತಡೆಯಲು ನಾವು 1,500 ಕ್ಕೂ ಹೆಚ್ಚು ಕಾನೂನುಗಳನ್ನು ತೆಗೆದುಹಾಕಿದ್ದೇವೆ. ಸಣ್ಣ ತಪ್ಪುಗಳಿಗಾಗಿ ಜನರನ್ನು ಜೈಲಿಗೆ ಕಳುಹಿಸುವ ಕಾನೂನುಗಳನ್ನು ರೂಪಿಸಲಾಗಿತ್ತು. ಸಣ್ಣ ಅಪರಾಧಗಳಿಗೆ ಜೈಲು ಶಿಕ್ಷೆ ವಿಧಿಸುವ ಅಭ್ಯಾಸವನ್ನು ನಾವು ರದ್ದುಗೊಳಿಸಿದ್ದೇವೆ ಮತ್ತು ಜನರನ್ನು ಜೈಲಿಗೆ ಕಳುಹಿಸುವ ಕಾನೂನಿನ ನಿಬಂಧನೆಗಳನ್ನು ತೆಗೆದುಹಾಕಿದ್ದೇವೆ. ಇಂದು, ನಮ್ಮ ಸ್ವಾತಂತ್ರ್ಯದ ಕುರಿತು ಹೆಮ್ಮೆಪಡುವ ಪರಂಪರೆಯ ಬಗ್ಗೆ ನಾವು ಮಾತನಾಡುವಾಗ, ನಾವು ಶತಮಾನಗಳಷ್ಟು ಹಳೆಯದಾದ ಕ್ರಿಮಿನಲ್ ಕಾನೂನುಗಳನ್ನು (ಭಾರತೀಯ) ನ್ಯಾಯ ಸಂಹಿತೆ ಎಂದು ಕರೆಯಲಾಗುವ ಹೊಸ ಕ್ರಿಮಿನಲ್ ಕಾನೂನುಗಳೊಂದಿಗೆ ಬದಲಾಯಿಸಿದ್ದೇವೆ. ಇದರ ಉದ್ದೇಶ ಶಿಕ್ಷೆಯಲ್ಲ, ಬದಲಿಗೆ ನಾಗರಿಕರಿಗೆ ನ್ಯಾಯವನ್ನು ಖಾತ್ರಿಪಡಿಸುವುದು.

ನಾವು ಜೀವನವನ್ನು ಸುಲಭಗೊಳಿಸುವ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಪ್ರತಿಯೊಂದು ಹಂತದಲ್ಲೂ ನಾನು ಇದನ್ನು ಒತ್ತಿಹೇಳುತ್ತೇನೆ. ಪಕ್ಷ ಅಥವಾ ರಾಜ್ಯವನ್ನು ಲೆಕ್ಕಿಸದೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸುಗಮ ಜೀವನಕ್ಕಾಗಿ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾನು ಮೂಲಕ ಒತ್ತಾಯಿಸುತ್ತೇನೆ. ನಮ್ಮ ಯುವಕರು, ವೃತ್ತಿಪರರು ಮತ್ತು ಪ್ರತಿಯೊಬ್ಬರೂ ತಾವು ಎದುರಿಸುತ್ತಿರುವ ಕ್ಷುಲ್ಲಕ ಸಮಸ್ಯೆಗಳನ್ನು ಹಾಗೂ ಅವುಗಳ ಸಂಭವನೀಯ ಪರಿಹಾರೋಪಾಯಗಳನ್ನು ಸರ್ಕಾರಕ್ಕೆ ಬರೆದು ತಿಳಿಸಬೇಕೆಂದು ನಾನು ವಿನಂತಿಸುತ್ತೇನೆ. ಅವರು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅನಗತ್ಯ ತೊಂದರೆಗಳನ್ನು ತೊಡೆದುಹಾಕುವುದರಿಂದ ಆಗುವ ಹಾನಿ ಏನೂ ಇಲ್ಲ. ಇಂದಿನ ಸರ್ಕಾರಗಳು ಸಂವೇದನಾಶೀಲವಾಗಿವೆ ಎಂದು ನಾನು ದೃಢವಾಗಿ ನಂಬಿದ್ದೇನೆ. ಅದು ಸ್ಥಳೀಯ ಸ್ವಯಮಾಡಳಿತವಾಗಿರಲಿ, ರಾಜ್ಯ ಸರ್ಕಾರವಾಗಿರಲಿ ಅಥವಾ ಕೇಂದ್ರ ಸರ್ಕಾರವಾಗಿರಲಿ, ಅವು ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ.

2047 ವೇಳೆಗೆ ʻವಿಕಸಿತ ಭಾರತʼ ಸಾಧಿಸುವ ಕನಸಿಗೆ ಆಡಳಿತದಲ್ಲಿ ಸುಧಾರಣೆಗಳು ಅತ್ಯಗತ್ಯ. ಸಾಮಾನ್ಯ ನಾಗರಿಕರ ಜೀವನದಲ್ಲಿ ಅವಕಾಶಗಳನ್ನು ಸೃಷ್ಟಿಸಲು ಮತ್ತು ಅಡೆತಡೆಗಳನ್ನು ತೊಡೆದುಹಾಕಲು ನಾವು ಸುಧಾರಣೆಗಳೊಂದಿಗೆ ಮುಂದುವರಿಯಬೇಕು. ನಾಗರಿಕರಿಗೆ  ತಮ್ಮ ಜೀವನದಲ್ಲಿ ಘನತೆಯ  ಅನುಭವ ದೊರೆಯಬೇಕು. "ಇದು ನನ್ನ ಹಕ್ಕು, ಅದು ನನಗೆ ದೊರೆಯಲಿಲ್ಲ," ಎಂದು ಯಾರೂ ಹೇಳುವಂತಾಗಬಾರದು. ಜನರು ತಮಗೆ ಅಗತ್ಯವಾಗಿರುವುದನ್ನು ಹುಡುಕಬೇಕಾಗಿಲ್ಲ. ಆದ್ದರಿಂದ, ಆಡಳಿತದಲ್ಲಿ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ನಾವು ದೇಶದಲ್ಲಿ ಸುಧಾರಣೆಗಳ ಬಗ್ಗೆ ಮಾತನಾಡಿದಾಗ  ಏನಾಗುತ್ತದೆ ಎಂದು ನೋಡಿ. ಇಂದು, ದೇಶಾದ್ಯಂತ ಸರಿಸುಮಾರು 3 ಲಕ್ಷ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದು ಪಂಚಾಯತ್ಗಳು, ನಗರ ಪಂಚಾಯತ್ಗಳು, ನಗರ ಪಾಲಿಕಾಗಳು, ಮಹಾನಗರ ಪಾಲಿಕಾಗಳು, ಕೇಂದ್ರಾಡಳಿತ ಪ್ರದೇಶಗಳು, ರಾಜ್ಯಗಳು, ಜಿಲ್ಲೆಗಳು ಅಥವಾ ಕೇಂದ್ರವಾಗಿರಲಿ, 3 ಲಕ್ಷ ಸಣ್ಣ ಘಟಕಗಳು ಸಕ್ರಿಯವಾಗಿವೆ. ನಾನು ಇಂದು ಘಟಕಗಳಿಗೆ ಮನವಿ ಮಾಡುವುದಿಷ್ಟೇ: ನೀವು ನಿಮ್ಮ ಮಟ್ಟದಲ್ಲಿ ವರ್ಷಕ್ಕೆ ಕೇವಲ ಎರಡು ಸುಧಾರಣೆಗಳನ್ನು ಕೈಗೊಂಡರೆ, ಸಾಮಾನ್ಯ ಜನರಿಗೆ ನೇರವಾಗಿ ಪ್ರಯೋಜನವಾಗುವ ಸುಧಾರಣೆಗಳನ್ನು ಕೈಗೊಂಡರೆ, ನಾನು ಹೆಚ್ಚು ಕೇಳುತ್ತಿಲ್ಲ, ಸ್ನೇಹಿತರೇ. ಅದು ಪಂಚಾಯತ್ ಆಗಿರಲಿ, ರಾಜ್ಯ ಸರ್ಕಾರವಾಗಿರಲಿ ಅಥವಾ ಯಾವುದೇ ಇಲಾಖೆಯಾಗಿರಲಿ, ವರ್ಷಕ್ಕೆ ಎರಡು ಸುಧಾರಣೆಗಳನ್ನು ಜಾರಿಗೆ ತಂದು ಅವುಗಳನ್ನು ಕಾರ್ಯರೂಪಕ್ಕೆ ತಂದರೆ , ಅದರ ಪರಿಣಾಮವನ್ನು ಊಹಿಸಿ- ಇದು ವಾರ್ಷಿಕವಾಗಿ ಸುಮಾರು 25-30 ಲಕ್ಷ ಸುಧಾರಣೆಗಳಿಗೆ ದಾರಿ ಮಾಡುತ್ತದೆ. 25-30 ಲಕ್ಷ ಸುಧಾರಣೆಗಳನ್ನು ಮಾಡಿದಾಗ, ಸಾಮಾನ್ಯ ಜನರ ವಿಶ್ವಾಸ ಹೆಚ್ಚಾಗುತ್ತದೆ. ಹೊಸ ವಿಶ್ವಾಸವು ನಮ್ಮ ರಾಷ್ಟ್ರವನ್ನು ಹೊಸ ಎತ್ತರಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ನಾವು ನಮ್ಮ ಸ್ವಂತ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಪ್ರಾರಂಭಿಸಲು, ಹಳೆಯ ವ್ಯವಸ್ಥೆಗಳಿಂದ ಮುಕ್ತರಾಗಲು, ಬದಲಾವಣೆಯನ್ನು ಸೃಷ್ಟಿಸಲು ಮುಂದೆ ಬರಬೇಕು ಮತ್ತು ಧೈರ್ಯದಿಂದ ವರ್ತಿಸಬೇಕು. ಸಾಮಾನ್ಯ ಜನರ ಅಗತ್ಯಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ, ಆದರೆ ಅವರು ಪಂಚಾಯತ್ ಮಟ್ಟದಲ್ಲಿಯೂ ಸವಾಲುಗಳನ್ನು ಎದುರಿಸಬಹುದು. ನಾವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾದರೆ, ನಾವು ನಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು ಎಂದು ನನಗೆ ಖಾತ್ರಿಯಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ನಮ್ಮ ರಾಷ್ಟ್ರವು ಆಕಾಂಕ್ಷೆಗಳಿಂದ ತುಂಬಿ ತುಳುಕುತ್ತಿದೆ. ನಮ್ಮ ದೇಶದ ಯುವಕರು ಹೊಸ ಎತ್ತರಕ್ಕೆ ಏರಲು ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಉತ್ಸುಕರಾಗಿದ್ದಾರೆ. ಆದ್ದರಿಂದ, ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿ, ಪ್ರತಿಯೊಂದು ಕ್ಷೇತ್ರದ ಪ್ರಗತಿಗೆ ವೇಗ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಮೊದಲನೆಯದಾಗಿ, ನಾವು ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ಎರಡನೆಯದಾಗಿ, ವಿಕಸನಗೊಳ್ಳುತ್ತಿರುವ ವ್ಯವಸ್ಥೆಗಳಿಗೆ ಅಗತ್ಯವಾದ ಬೆಂಬಲ ಮೂಲಸೌಕರ್ಯಗಳನ್ನು ಬಲಪಡಿಸುವತ್ತ ನಾವು ಕೆಲಸ ಮಾಡಬೇಕು. ಮತ್ತು ಮೂರನೆಯದಾಗಿ, ನಾವು ನಮ್ಮ ನಾಗರಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವತ್ತ ಆದ್ಯತೆ ನೀಡಬೇಕು ಮತ್ತು ಮೂಲಸೌಕರ್ಯ ಹೆಚ್ಚಿಸಬೇಕು. ಮೂರು ಅಂಶಗಳು ಭಾರತದಲ್ಲಿ ಮಹತ್ವಾಕಾಂಕ್ಷೆಯ ಸಮಾಜವನ್ನು ಬೆಳೆಸಿವೆ, ಇದರ ಪರಿಣಾಮವಾಗಿ ಸಮಾಜದಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ನಮ್ಮ ನಾಗರಿಕರ ಆಕಾಂಕ್ಷೆಗಳನ್ನು ನಮ್ಮ ಯುವಕರ ಶಕ್ತಿ ಮತ್ತು ನಮ್ಮ ರಾಷ್ಟ್ರದ ಶಕ್ತಿಯೊಂದಿಗೆ ಸಂಯೋಜಿಸುವ ಮೂಲಕ ನಾವು ಅಪಾರ ಉತ್ಸಾಹದಿಂದ ಮುಂದುವರಿಯುತ್ತಿದ್ದೇವೆ. ಉದ್ಯೋಗ ಮತ್ತು ಸ್ವಯಂ ಉದ್ಯೋಗದಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುವಲ್ಲಿ ನಾವು ಗಮನಾರ್ಹ ದಾಪುಗಾಲು ಇಟ್ಟಿದ್ದೇವೆ ಎಂದು ನಾನು ನಂಬುತ್ತೇನೆ. ಇಂದು ನಾವು ತಲಾ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜಾಗತಿಕ ಬೆಳವಣಿಗೆಗೆ ಭಾರತದ ಕೊಡುಗೆ ಗಣನೀಯವಾಗಿದೆ, ನಮ್ಮ ರಫ್ತು ನಿರಂತರವಾಗಿ ಹೆಚ್ಚುತ್ತಿದೆ, ನಮ್ಮ ವಿದೇಶಿ ವಿನಿಮಯ ಮೀಸಲು ದ್ವಿಗುಣಗೊಂಡಿದೆ ಮತ್ತು ಭಾರತದ ಮೇಲೆ ಜಾಗತಿಕ ಸಂಸ್ಥೆಗಳ ನಂಬಿಕೆ ಹೆಚ್ಚಿದೆ. ಭಾರತವು ಸರಿಯಾದ ಹಾದಿಯಲ್ಲಿದೆ, ವೇಗವಾಗಿ ಮುನ್ನಡೆಯುತ್ತಿದೆ ಮತ್ತು ನಮ್ಮ ಕನಸುಗಳಿಗೆ ದೊಡ್ಡ ಶಕ್ತಿ ಇದೆ ಎಂದು ನಾನು ನಂಬುತ್ತೇನೆ. ಇದೆಲ್ಲದರ ಜೊತೆಗೆ, ನಮ್ಮ ಸಂವೇದನಾಶೀಲತೆಯ ಮಾರ್ಗವು ನಮ್ಮನ್ನು ಶಕ್ತಿಯುತಗೊಳಿಸುತ್ತದೆ ಮತ್ತು ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಸಹಾನುಭೂತಿಯು ನಮ್ಮ ಕಾರ್ಯವಿಧಾನದ ಕೇಂದ್ರಬಿಂದುವಾಗಿದೆ. ನಾವು ನಮ್ಮ ಕೆಲಸದ ಕೇಂದ್ರಬಿಂದುವಾಗಿ ಸಮಾನತೆ ಮತ್ತು ಸಹಾನುಭೂತಿ ಎರಡನ್ನೂ ಇರಿಸಿಕೊಂಡು ಮುಂದುವರಿಯುತ್ತಿದ್ದೇವೆ.

ಸ್ನೇಹಿತರೇ,

ನಾನು ಕೋವಿಡ್‌  ಅವಧಿಯ ಬಗ್ಗೆ ಹೇಳುವುದಾದರೆ, ಜಾಗತಿಕ ಸಾಂಕ್ರಾಮಿಕ ಪರಿಸ್ೀತಿಯ ನಡುವೆ ತನ್ನ ಆರ್ಥಿಕತೆಯನ್ನು ತ್ವರಿತವಾಗಿ ಸುಧಾರಿಸಿದ ದೇಶ ಯಾವುದಾದರೂ ಜಗತ್ತಿನಲ್ಲಿಇದ್ದರೆ ಅದು ಭಾರತ ಮಾತ್ರ. ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಇದು ನನ್ನಲ್ಲಿ ಭರವಸೆ ಮೂಡಿಸಿದೆ. ಜಾತಿ ಮತ್ತು ಮತವನ್ನು ಮೀರಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದಾಗ, ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅದು ದೃಢಪಡಿಸುತ್ತದೆ. ಇಂದು, ಇಡೀ ರಾಷ್ಟ್ರವು ತ್ರಿವರ್ಣ ಧ್ವಜದ ಅಡಿಯಲ್ಲಿ ಒಂದಾಗಿದೆ - ಪ್ರತಿಯೊಂದು ಮನೆಯೂ ತಿರಂಗದಿಂದ ಅಲಂಕರಿಸಲ್ಪಟ್ಟಿದೆ, ಜಾತಿ, ಮತ, ಉನ್ನತ ವರ್ಗ ಅಥವಾ ಕೆಳವರ್ಗದ ಭೇದಗಳಿಲ್ಲದೆ ನಾವೆಲ್ಲರೂ ಭಾರತೀಯರೆಂದು ಸಾರುತ್ತಿದೆ. ಏಕತೆ ನಾವು ಸಾಗುತ್ತಿರುವ ದಿಕ್ಕಿನ ಶಕ್ತಿಗೆ ಸಾಕ್ಷಿಯಾಗಿದೆ. ನಾವು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದಾಗ, ನಾವು ನಮ್ಮ ವೇಗವನ್ನು ಉಳಿಸಿಕೊಂಡಿದ್ದೇವೆ. ನಮ್ಮ ಕನಸುಗಳು ಶೀಘ್ರದಲ್ಲೇ ಈಡೇರುತ್ತವೆ ಎಂಬ ನಮ್ಮ ನಂಬಿಕೆಯನ್ನು ಇದು ಬಲಪಡಿಸಿದೆ. 100ಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಆಯಾ ರಾಜ್ಯಗಳ ಅತ್ಯುತ್ತಮ ಜಿಲ್ಲೆಗಳೊಂದಿಗೆ ಸ್ಪರ್ಧಿಸಿದಾಗ, ನಮ್ಮ ದಿಕ್ಕು ಮತ್ತು ಬೆಳವಣಿಗೆಯ ವೇಗ ಎರಡೂ ಖಂಡಿತವಾಗಿಯೂ ಪ್ರಬಲವಾಗಿವೆ ಎಂದು ನಾವು ಭಾವಿಸಬಹುದು. ನಮ್ಮ ಬುಡಕಟ್ಟು ಜನಸಂಖ್ಯೆಯು ಕಡಿಮೆ ಇದ್ದರೂ  ದೇಶಾದ್ಯಂತ ದೂರದ ಸ್ಥಳಗಳಲ್ಲಿ ಸಣ್ಣ ಗುಂಪುಗಳಾಗಿ ಹರಡಿದೆ ಮತ್ತು ಸರ್ಕಾರವು ಅವರ ಯೋಗಕ್ಷೇಮ ಮತ್ತು ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತದೆ. ʻಪಿಎಂ ಜನ್ ಮನ್ʼ ಯೋಜನೆಗಳ ಪ್ರಯೋಜನಗಳು ಹಳ್ಳಿಗಳು, ಬೆಟ್ಟಗಳು ಮತ್ತು ಕಾಡುಗಳಲ್ಲಿನ ದೂರದ ಪ್ರದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ತಲಪುವಂತೆ ಖಚಿತಪಡಿಸಿಕೊಳ್ಳುವುದು ಸರ್ಕಾರಕ್ಕೆ ಒಂದು ಸವಾಲಾಗಿದೆ. ಆದರೆ ನಿಟ್ಟಿನಲ್ಲಿ ನಾವು ಯಾವುದೇ ಪ್ರಯತ್ನವನ್ನು ತಪ್ಪಿಸುತ್ತಿಲ್ಲ. ನೀವು ಸಹಾನುಭೂತಿಯಿಂದ ಕೆಲಸ ಮಾಡಿದಾಗ ಅದು ಸಾಕಾರವಾಗುತ್ತದೆ. ನಾವು ಮಹಿಳೆಯರನ್ನು ಗೌರವಿಸಬೇಕು, ಆದರೆ ಅವರ ಯೋಗಕ್ಷೇಮಕ್ಕಾಗಿ ಸಹಾನುಭೂತಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಿಟ್ಟಿನಲ್ಲಿ, ನಾವು ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ವಿಸ್ತರಿಸಿದ್ದೇವೆ. ತಾಯಿಯನ್ನು ನೋಡಿಕೊಂಡರೆ ಮಾತ್ರ ಭಾವಿ ನಾಗರಿಕನಾಗುವ ತೊಡೆಯ ಮೇಲಿರುವ ಮಗುವಿಗೆ ನಾವು ಜವಾಬ್ದಾರರಾಗಿರಲು ಸಾಧ್ಯ. ನಂಬಿಕೆಯು ನಮ್ಮ ದೇಶದ ಮಹಿಳೆಯರ ಬಗ್ಗೆ ಸಹಾನುಭೂತಿಯ ನಿರ್ಧಾರಗಳನ್ನು ಕೈಗೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ.

ನನ್ನ ವಿಶೇಷ ಚೇತನ ಸಹೋದರ ಸಹೋದರಿಯರು ಭಾರತೀಯ ಸಂಕೇತ ಭಾಷೆಯಲ್ಲಿ ಸಂವಹನ ನಡೆಸಲು ಪ್ರಾರಂಭಿಸಿದಾಗ, ಅಥವಾ 'ಸುಗಮ್ಯ ಭಾರತ್ʼ ಮೂಲಕ ಎಲ್ಲರನ್ನೂ ಒಳಗೊಂಡ ರಾಷ್ಟ್ರದ ಅಭಿಯಾನದಿಂದ ಪ್ರಯೋಜನವನ್ನು ಪಡೆದಾಗ, ಅವರು ದೇಶದ ನಾಗರಿಕರಾಗಿ ಗೌರವದ ಮತ್ತು ಘನತೆ ಭಾವವನ್ನು ಅನುಭವಿಸುತ್ತಾರೆ. ಪ್ಯಾರಾಲಿಂಪಿಕ್ಸ್ನಲ್ಲಿ ನಮ್ಮ ಕ್ರೀಡಾಪಟುಗಳು ವಿಜೇತರಾಗಿ ಹೊರಬರುವುದನ್ನು ನೋಡುವುದೇ ಒಂದು ಅದ್ಭುತ. ನಮ್ಮ ಸಹಾನುಭೂತಿ ಅವರಲ್ಲಿ ಶಕ್ತಿಯನ್ನು ತುಂಬುತ್ತದೆ. ಬಹಿಷ್ಕಾರಕ್ಕೊಳಗಾದ ನಮ್ಮ ತೃತೀಯ ಲಿಂಗಿ ಸಮಾಜದ ಬಗ್ಗೆ ಹೆಚ್ಚಿನ ಸಂವೇದನಾಶೀಲತೆಯೊಂದಿಗೆ ನಾವು ಸಮಾನ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ. ಅಲ್ಲದೆ, ಅವರು ಮುಖ್ಯವಾಹಿನಿಗೆ ಪ್ರವೇಶಿಸಲು ಹೊಸ ಕಾನೂನುಗಳನ್ನು ಪರಿಚಯಿಸುವ ಮೂಲಕ ಎಲ್ಲರಿಗೂ ಘನತೆ, ಗೌರವ ಮತ್ತು ಸಮಾನತೆಯನ್ನು ಖಾತರಿಪಡಿಸುತ್ತಿದ್ದೇವೆ. ಹೀಗಾಗಿ, ನಾವು ಬದಲಾವಣೆಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ನಾವು 'ತ್ರಿವಿಧ ಮಾರ್ಗ'ವನ್ನು ಪ್ರಾರಂಭಿಸಿದ್ದೇವೆ ಮತ್ತು ಎಲ್ಲರಿಗೂ ಸೇವೆಯನ್ನು ಒದಗಿಸುವ ಮನೋಭಾವದಿಂದ ಆಗುವ ನೇರ ಪ್ರಯೋಜನವನ್ನು ನೋಡುತ್ತಿದ್ದೇವೆ.

60 ವರ್ಷಗಳ ನಂತರ, ನಾವು ಸತತ ಮೂರನೇ ಬಾರಿಗೆ ರಾಷ್ಟ್ರದ ಸೇವೆ ಸಲ್ಲಿಸಲು ಜನರಿಂದ ಆಯ್ಕೆಯಾಗಿದ್ದೇವೆ. 140 ಕೋಟಿ ದೇಶವಾಸಿಗಳು ನನಗೆ ನೀಡಿದ ಆಶೀರ್ವಾದಕ್ಕೆ ಪ್ರತಿಕ್ರಿಯೆಯಾಗಿ, ನಾನು ಒಂದೇ ಒಂದು ಸಂದೇಶ ನೀಡಲು ಬಯಸುತ್ತೇನೆ: ನಿಮ್ಮಲ್ಲಿ ಪ್ರತಿಯೊಬ್ಬರೂ, ಪ್ರತಿ ಕುಟುಂಬ ಮತ್ತು ಪ್ರತಿ ಪ್ರದೇಶದ ಸೇವೆ ಮಾಡಲು ನಾವು ಇಲ್ಲಿದ್ದೇವೆ. ನಿಮ್ಮ ಆಶೀರ್ವಾದದ ಶಕ್ತಿಯಿಂದ, ನಾವು ಅಭಿವೃದ್ಧಿಯ ಹೊಸ ಎತ್ತರವನ್ನು ಸಾಧಿಸಲು ಬಯಸುತ್ತೇವೆ. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಮುಂದುವರಿಸಲು, ಇಂದು ಕೆಂಪು ಕೋಟೆಯ ಕೊತ್ತಲಗಳಿಂದ, ನಾನು ಕೃತಜ್ಞತೆಯಿಂದ ನಿಮ್ಮ ಮುಂದೆ ತಲೆ ಬಾಗುತ್ತೇನೆ ಮತ್ತು ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಮತ್ತು ರಾಷ್ಟ್ರದ ಸೇವೆ ಮಾಡಲು ನಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಕೋಟ್ಯಂತರ ದೇಶವಾಸಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಮತ್ತು ನಾವು ಹೊಸ ಉತ್ಸಾಹದೊಂದಿಗೆ ಹೊಸ ಎತ್ತರದತ್ತ ಮುಂದುವರಿಯುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾವು ಬದಿಯಲ್ಲಿ ಕೂತು ವಿಕ್ಷಿಸುವ ಮತ್ತು ಸಣ್ಣ ಪುಟ್ಟ ಸಾಧನೆಗಳ ವೈಭವದಲ್ಲಿ ಮೈಮರೆಯುವ ಜನರು ನಾವಲ್ಲ. ನಾವು ಹೊಸ ಜ್ಞಾನಾರ್ಜನೆ ಬಯಸುವ ಮತ್ತು ಸದೃಢತೆಯ ಸಂಸ್ಕೃತಿಯಿಂದ ಬಂದವರು; ಉನ್ನತ ಸಾಧನೆಗಳನ್ನು ನಿರಂತರವಾಗಿ ಬಯಸುವ, ಅಂದುಕೊಂಡಿದ್ದನ್ನು ಮಾಡಿ ಮುಗಿಸುವವರು. ನಾವು ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಲು ಬಯಸುತ್ತೇವೆ ಮತ್ತು ನಮ್ಮ ನಾಗರಿಕರಲ್ಲಿ ಅಭ್ಯಾಸವನ್ನು ಬೆಳೆಸಲು ನಾವು ಬಯಸುತ್ತೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ಹೊಸ ಶಿಕ್ಷಣ ನೀತಿಯ ಮೂಲಕ, 21 ನೇ ಶತಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಲು ನಾವು ಬಯಸುತ್ತೇವೆ. ವೇಗವಾಗಿ ಅಭಿವೃದ್ಧಿಯ ನಿರೀಕ್ಷೆಗಳನ್ನು ಪೂರೈಸಲು ನಾವು ಭಾರತದಲ್ಲಿ ಭವಿಷ್ಯದ ಸನ್ನದ್ಧ ನುರಿತ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕಿದೆ.  ಹೊಸ ಪ್ರತಿಭೆಗಳನ್ನು ಭಾರತದಲ್ಲೇ  ಉಳಿಸಿಕೊಳ್ಳುವಲ್ಲಿ ಹೊಸ ಶಿಕ್ಷಣ ನೀತಿ ದೊಡ್ಡ ಪಾತ್ರ ವಹಿಸುತ್ತದೆ. ನನ್ನ ದೇಶದ ಯುವಕರನ್ನು ವಿದೇಶದಲ್ಲಿ ಅಧ್ಯಯನ ಮಾಡುವಂತೆ ಒತ್ತಾಯಿಸುವುದನ್ನು ನನಗೆ ಇಷ್ಟವಿಲ್ಲ. ಮಧ್ಯಮ ವರ್ಗದ ಕುಟುಂಬವೊಂದು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು ಲಕ್ಷಾಂತರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ನಮ್ಮ ದೇಶದ ಯುವಕರು ವಿದೇಶಕ್ಕೆ ಹೋಗುವ ಅಗತ್ಯವಿಲ್ಲದಂತೆ ನಾವು ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಬಯಸುತ್ತೇವೆ. ನಮ್ಮ ಮಧ್ಯಮ ವರ್ಗದ ಕುಟುಂಬಗಳು ಲಕ್ಷಾಂತರ ಮತ್ತು ಕೋಟ್ಯಂತರ  ರೂಪಾಯಿಗಳನ್ನು ಖರ್ಚು ಮಾಡುವ ಅಗತ್ಯವಿಲ್ಲ. ಅಷ್ಟೇ ಅಲ್ಲ, ವಿದೇಶದಿಂದ ಜನರನ್ನು ಭಾರತಕ್ಕೆ ಬರಲು ಆಕರ್ಷಿಸುವಂತಹ ಸಂಸ್ಥೆಗಳನ್ನು ಕಟ್ಟಲು ನಾವು ಬಯಸುತ್ತೇವೆ. ಇತ್ತೀಚೆಗೆ, ನಾವು ʻನಳಂದ ವಿಶ್ವವಿದ್ಯಾಲಯʼವನ್ನು ಪುನರ್ನಿರ್ಮಿಸುವ ಮೂಲಕ ಬಿಹಾರದ ಭವ್ಯ ಇತಿಹಾಸದ ಹೆಮ್ಮೆಯನ್ನು ಪುನರುಜ್ಜೀವನಗೊಳಿಸಿದ್ದೇವೆ. ನಳಂದ ವಿಶ್ವವಿದ್ಯಾಲಯ ಮತ್ತೊಮ್ಮೆ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಆದಾಗ್ಯೂ, ಶಿಕ್ಷಣ ಕ್ಷೇತ್ರದಲ್ಲಿ ನಾವು ಮತ್ತೊಮ್ಮೆ, ಶತಮಾನಗಳಷ್ಟು ಹಳೆಯದಾದ ನಳಂದ ಮನೋಭಾವವನ್ನು ಪುನರುಜ್ಜೀವನಗೊಳಿಸಬೇಕು, ನಳಂದ ಮನೋಭಾವವನ್ನು ಬದುಕಬೇಕು ಮತ್ತು ಹೆಚ್ಚಿನ ವಿಶ್ವಾಸದಿಂದ, ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಜ್ಞಾನದ ಸಂಪ್ರದಾಯಗಳಿಗೆ ಹೊಸ ಪ್ರಜ್ಞೆಯನ್ನು ತರುವತ್ತ ಕೆಲಸ ಮಾಡಬೇಕು. ಹೊಸ ಶಿಕ್ಷಣ ನೀತಿಯು ಮಾತೃಭಾಷೆಯ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಭಾಷೆಯ ಕಾರಣದಿಂದಾಗಿ ದೇಶದ ಪ್ರತಿಭೆಗೆ ಅಡ್ಡಿಯಾಗಬಾರದು ಎಂದು ನಾನು ರಾಜ್ಯ ಸರ್ಕಾರಗಳು ಮತ್ತು ದೇಶದ ಎಲ್ಲಾ ಸಂಸ್ಥೆಗಳನ್ನು ಒತ್ತಾಯಿಸುತ್ತೇನೆ. ಭಾಷೆ ಒಂದು ತಡೆಗೋಡೆಯಾಗಬಾರದು. ಮಾತೃಭಾಷೆಯ ಶಕ್ತಿಯು ನಮ್ಮ ದೇಶದ ಬಡ ಮಗುವೂ ತಮ್ಮ ಕನಸುಗಳನ್ನು ಈಡೇರಿಸಲು ಸಶಕ್ತಗೊಳಿಸುತ್ತದೆ. ಆದ್ದರಿಂದ, ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಪ್ರಾಮುಖ್ಯತೆ, ಜೀವನದಲ್ಲಿ ಮಾತೃಭಾಷೆಯ ಪಾತ್ರ ಮತ್ತು ಕುಟುಂಬದಲ್ಲಿ ಅದರ ಸ್ಥಾನವನ್ನು ನಾವು ಒತ್ತಿಹೇಳಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ನಾವು ಜಗತ್ತಿನಲ್ಲಿನ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದ್ದಂತೆ, ಕೌಶಲ್ಯಗಳ ಪ್ರಾಮುಖ್ಯತೆಯು ಇನ್ನಿಲ್ಲದಂತೆ ಹೆಚ್ಚಾಗಿದೆ. ಆದ್ದರಿಂದ, ನಾವು ಕೌಶಲ್ಯಗಳಿಗೆ ಹೊಸ ಉತ್ತೇಜನ ನೀಡಲು ಬಯಸುತ್ತೇವೆ. ʻಇಂಡಸ್ಟ್ರಿ 4.0ʼ ಅನ್ನು ಗಮನದಲ್ಲಿಟ್ಟುಕೊಂಡು, ನಾವು ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಕೃಷಿ ಕ್ಷೇತ್ರ ಸೇರಿದಂತೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಾಮರ್ಥ್ಯ ವರ್ಧನೆಗಾಗಿ ಕೌಶಲ್ಯ ಅಭಿವೃದ್ಧಿಯನ್ನು ನಾವು ಬಯಸುತ್ತೇವೆ. ನಮ್ಮ ನೈರ್ಮಲ್ಯ ಕ್ಷೇತ್ರದಲ್ಲೂ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವತ್ತ ನಾವು ಗಮನ ಹರಿಸಲು ಬಯಸುತ್ತೇವೆ. ಆದ್ದರಿಂದ, ನಾವು ಬಾರಿ ಹೆಚ್ಚು ವಿಸ್ತೃತ ವ್ಯಾಪ್ತಿಯಲ್ಲಿ ʻಸ್ಕಿಲ್ ಇಂಡಿಯಾʼ ಕಾರ್ಯಕ್ರಮವನ್ನು ಹೊರತಂದಿದ್ದೇವೆ. ಉದ್ದೇಶಕ್ಕಾಗಿ ನಾವು ವರ್ಷದ ಬಜೆಟ್ನಲ್ಲಿ ದೊಡ್ಡ ನಿಧಿಯನ್ನು ಮೀಸಲಿಟ್ಟಿದ್ದೇವೆ. ಬಜೆಟ್ನಲ್ಲಿ, ನಾವು ʻಇಂಟರ್ನ್ಶಿಪ್‌ʼಗೆ ಒತ್ತು ನೀಡಿದ್ದೇವೆ, ಇದರಿಂದ ನಮ್ಮ ಯುವಕರು ಅನುಭವವನ್ನು ಪಡೆಯಬಹುದು, ಅವರ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಮತ್ತು ಮಾರುಕಟ್ಟೆಯಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಬಹುದು. ರೀತಿಯಲ್ಲಿ ನುರಿತ ಯುವಕರನ್ನು ಸಜ್ಜುಗೊಳಿಸಲು ನಾನು ಬಯಸುತ್ತೇನೆ.

ಸ್ನೇಹಿತರೇ, ಇಂದಿನ ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ, ಭಾರತದ ನುರಿತ ಮಾನವಶಕ್ತಿಯು, ನಮ್ಮ ಕುಶಲ ಯುವ ಶಕ್ತಿಯು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲಿದೆ ಮತ್ತು ನಾವು ಕನಸಿನೊಂದಿಗೆ ಮುಂದುವರಿಯುತ್ತಿರುವುದನ್ನು ನಾನು ಸ್ಪಷ್ಟವಾಗಿ ನೋಡಬಲ್ಲೆ.

ಸ್ನೇಹಿತರೇ,

ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಜೀವನದ ಪ್ರತಿಯೊಂದು ಅಂಶದಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾಮುಖ್ಯತೆ ಹೆಚ್ಚುತ್ತಿದೆ. ನಾವು ವಿಜ್ಞಾನಕ್ಕೆ ಗಮನಾರ್ಹ ಒತ್ತು ನೀಡಬೇಕಾಗಿದೆ. ʻಚಂದ್ರಯಾನ ಮಿಷನ್ʼ ಯಶಸ್ಸಿನ ನಂತರ ನಮ್ಮ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೊಸ ಆಸಕ್ತಿಯ ವಾತಾವರಣ ಉಂಟಾಗಿರುವುದನ್ನು ನಾನು ಗಮನಿಸಿದ್ದೇನೆ. ಹೊಸ ಉತ್ಸಾಹವನ್ನು ನಮ್ಮ ಶಿಕ್ಷಣ ಸಂಸ್ಥೆಗಳು ಪೋಷಿಸಬೇಕು. ಭಾರತ ಸರ್ಕಾರವು ಸಂಶೋಧನೆಗೆ ಬೆಂಬಲವನ್ನು ಹೆಚ್ಚಿಸಿದೆ. ನಾವು ಹೆಚ್ಚಿನ ಸಂಶೋಧನಾ ಪೀಠಗಳನ್ನು ಸ್ಥಾಪಿಸಿದ್ದೇವೆ. ಸಂಶೋಧನೆಯನ್ನು ನಿರಂತರವಾಗಿ ಬಲಪಡಿಸುವ ಶಾಶ್ವತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕಾನೂನು ಚೌಕಟ್ಟನ್ನು ಒದಗಿಸುವ ʻರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನʼವನ್ನು ನಾವು ರಚಿಸಿದ್ದೇವೆ. ಸಂಶೋಧನಾ ಪ್ರತಿಷ್ಠಾನವು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ನಮ್ಮ ದೇಶದ ಯುವಜನರ ಆಲೋಚನೆಗಳನ್ನು ಸಾಕಾರಗೊಳಿಸಲು ಬಜೆಟ್ನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲು ನಾವು ನಿರ್ಧರಿಸಿದ್ದೇವೆ ಎಂಬುದು ಬಹಳ ಹೆಮ್ಮೆಯ ವಿಷಯ.

ಸ್ನೇಹಿತರೇ,

ಇಂದಿಗೂ ನಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು, ಮತ್ತು ಅವರು ದೊಡ್ಡ ಪ್ರಮಾಣದ ಹಣವನ್ನು ಇದಕ್ಕಾಗಿ ಖರ್ಚು ಮಾಡುತ್ತಾರೆ. ಕಳೆದ 10 ವರ್ಷಗಳಲ್ಲಿ, ನಾವು ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಸುಮಾರು ಒಂದು ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಪ್ರತಿ ವರ್ಷ ಸರಿಸುಮಾರು 25,000 ಯುವಕರು ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಕೆಲವೊಮ್ಮೆ, ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಅವರು ಭೇಟಿ ನೀಡಲಿರುವ ದೇಶಗಳ ಬಗ್ಗೆ ಕೇಳಿದರೆ ನನಗೆ ಆಶ್ಚರ್ಯವಾಗುತ್ತದೆ. ಆದ್ದರಿಂದ, ಮುಂದಿನ ಐದು ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ 75,000 ಹೆಚ್ಚು ಸೀಟುಗಳನ್ನು ಸೃಷ್ಟಿಸಲು ನಾವು ನಿರ್ಧರಿಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

2047 ʻವಿಕಸಿತ ಭಾರತʼವು ಆರೋಗ್ಯಕರ ಭಾರತವಾಗಬೇಕು. ಇದನ್ನು ಖಚಿತಪಡಿಸಿಕೊಳ್ಳಲು, ನಾವು ಇಂದಿನಿಂದ ಮಕ್ಕಳ ಪೌಷ್ಠಿಕಾಂಶದ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಅವರು ಅಭಿವೃದ್ಧಿ ಹೊಂದಿದ ಭಾರತದ ಮೊದಲ ಪೀಳಿಗೆ ಆಗಲಿದ್ದಾರೆ. ಅದಕ್ಕಾಗಿಯೇ ನಾವು ಅವರ ಯೋಗಕ್ಷೇಮದ ಬಗ್ಗೆ ವಿಶೇಷ ಗಮನ ಹರಿಸಿ, ಪೌಷ್ಠಿಕಾಂಶ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ನಾವು ಪೌಷ್ಠಿಕಾಂಶಕ್ಕೆ ಆದ್ಯತೆ ನೀಡುವ ʻರಾಷ್ಟ್ರೀಯ ಪೌಷ್ಠಿಕಾಂಶ ಮಿಷನ್ʼ (ಪೋಷಣ್ ಅಭಿಯಾನ) ಅನ್ನು ಪ್ರಾರಂಭಿಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಕೃಷಿ ವ್ಯವಸ್ಥೆಯನ್ನು ಪರಿವರ್ತಿಸುವುದು ನಿರ್ಣಾಯಕ ಮತ್ತು ತುರ್ತು ಅಗತ್ಯವಾಗಿದೆ. ಶತಮಾನಗಳಿಂದ ನಮ್ಮನ್ನು ತಡೆಹಿಡಿದಿರುವ ಹಳೆಯ ಸಂಪ್ರದಾಯಗಳಿಂದ ನಾವು ಮುಕ್ತರಾಗಬೇಕು ಮತ್ತು ಪ್ರಯತ್ನದಲ್ಲಿ ನಾವು ನಮ್ಮ ರೈತರನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದೇವೆ. ಪರಿವರ್ತನೆಯತ್ತ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಇಂದು, ನಾವು ರೈತರಿಗೆ ಸುಲಭವಾಗಿ ಸಾಲವನ್ನು ಒದಗಿಸುತ್ತೇವೆ ಮತ್ತು ಇತ್ತೀಚಿನ ತಂತ್ರಜ್ಞಾನದೊಂದಿಗೆ ಅವರಿಗೆ ಸಹಾಯ ಮಾಡುತ್ತಿದ್ದೇವೆ. ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ಪಡೆಯುವಂತೆ ಖಾತರಿಪಡಿಸಿಕೊಳ್ಳಲು ನಾವು ಸಹಾಯ ಮಾಡುತ್ತಿದ್ದೇವೆ. ನಾವು ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಮಗ್ರ ವ್ಯವಸ್ಥೆಗಳನ್ನು ರೂಪಿಸುತ್ತಿದ್ದೇವೆ. ಇದರಿಂದ ರೈತರಿಗೆ ಆರಂಭದಿಂದ ಅಂತಿಮ ಹಂತದವರೆಗೂ ನೆರವು ಸಿಗುತ್ತದೆ, ನಿಟ್ಟಿನಲ್ಲಿ ಮುಂದುವರಿಯಲು ನಾವು ಬದ್ಧರಾಗಿದ್ದೇವೆ.

ಇಂದು, ಇಡೀ ಜಗತ್ತು ಭೂಮಾತೆಯ ಬಗ್ಗೆ ಕಾಳಜಿ ವಹಿಸುತ್ತಿದೆ. ಆದರೆ, ರಸಗೊಬ್ಬರಗಳ ಬಳಕೆಯಿಂದ ನಮ್ಮ ಮಣ್ಣಿನ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಭೂಮಾತೆಯ (ಮಣ್ಣಿನ) ಉತ್ಪಾದಕತೆಯೂ ಕ್ಷೀಣಿಸುತ್ತಿದೆ ಮತ್ತು ಹಾಳಾಗುತ್ತಿದೆ. ನಿರ್ಣಾಯಕ ಸಮಯದಲ್ಲಿ, ಸಾವಯವ ಕೃಷಿಯ ಮಾರ್ಗವನ್ನು ಆರಿಸಿಕೊಂಡ ಮತ್ತು ನಮ್ಮ ಭೂಮಿ ತಾಯಿಯನ್ನು ಪೋಷಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ನಮ್ಮ ದೇಶದ ಲಕ್ಷಾಂತರ ರೈತರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ವರ್ಷದ ಬಜೆಟ್ನಲ್ಲಿ, ನಾವು ಗಮನಾರ್ಹ ಪ್ರಸ್ತಾವಗಳನ್ನು ಮಾಡಿದ್ದೇವೆ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಗಣನೀಯ ಯೋಜನೆಗಳನ್ನು ಪರಿಚಯಿಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾನು ಇಂದು ವಿಶ್ವದ ಸ್ಥಿತಿಯನ್ನು ಗಮನಿಸಿದರೆ, ಇಡೀ ಜಗತ್ತು ಸಮಗ್ರ ಆರೋಗ್ಯ ರಕ್ಷಣೆಯತ್ತ ಹೊರಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ವಿಶ್ವದಲ್ಲಿ ಸಾವಯವ ಆಹಾರವು ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿದೆ. ಸಾವಯವ ಆಹಾರದ ಜಾಗತಿಕ ಆಹಾರ ಪಾತ್ರೆಯನ್ನು ತುಂಬಬಲ್ಲ ಏಕಮಾತ್ರ ದೇಶವೆಂದರೆ ಅದು ನನ್ನ ದೇಶ ಮತ್ತು ಅದರ ರೈತರು. ಅದಕ್ಕಾಗಿಯೇ ಮುಂಬರುವ ದಿನಗಳಲ್ಲಿ ದೃಷ್ಟಿಕೋನದೊಂದಿಗೆ ಮುಂದುವರಿಯಲು ನಾವು ಬಯಸುತ್ತೇವೆ, ಇದರಿಂದ ನಮ್ಮ ರಾಷ್ಟ್ರವು ಸಾವಯವ ಬೇಡಿಕೆ ಹೆಚ್ಚುತ್ತಿರುವ ಜಗತ್ತಿಗೆ ಸಾವಯವ ಆಹಾರದ ಕಣಜವಾಗಬಲ್ಲದು.

ರೈತರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ, ಹಳ್ಳಿಗಳಿಗೆ ಉನ್ನತ ದರ್ಜೆಯ ಇಂಟರ್ನೆಟ್ ಸಂಪರ್ಕ ಕಲ್ಪಿಸಲು,  ರೈತರಿಗೆ ಆರೋಗ್ಯ ಸೌಲಭ್ಯಗಳು ಹಳ್ಳಿಯಲ್ಲೇ ಲಭ್ಯವಾಗುಂತೆ ಮಾಡಲು, ರೈತರ ಮಕ್ಕಳು ಮಕ್ಕಳು ʻಸ್ಮಾರ್ಟ್ ಶಾಲೆʼಗಳಿಗೆ ಪ್ರವೇಶ ಪಡೆಯಲು ಮತ್ತು ಅವರು ಉದ್ಯೋಗಾವಕಾಶಗಳನ್ನು ಪಡೆಯುವಂತೆ ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ. ಸಣ್ಣ ಭೂಮಿಯಲ್ಲಿ ಇಡೀ ಕುಟುಂಬವನ್ನು ಪೋಷಿಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಹೊಸ ಉದ್ಯೋಗಗಳನ್ನು ಪಡೆಯಲು ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಲು ಯುವಕರನ್ನು ಅಗತ್ಯ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ನಾವು ಸಮಗ್ರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಇತ್ತೀಚಿನ ವರ್ಷಗಳಲ್ಲಿ, ನಾವು ಮಹಿಳಾ ನೇತೃತ್ವದ ಅಭಿವೃದ್ಧಿ ಮಾದರಿಯ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಅದು ನಾವೀನ್ಯತೆಯಾಗಿರಲಿ, ಉದ್ಯೋಗ ಅಥವಾ ಉದ್ಯಮಶೀಲತೆಯಾಗಿರಲಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ. ಅಂದರೆ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿರುವುದು ಮಾತ್ರವಲ್ಲ, ಮಹಿಳೆಯರು ನಾಯಕತ್ವದ ಪಾತ್ರಗಳನ್ನು ಸಹ ವಹಿಸಿಕೊಳ್ಳುತ್ತಿದ್ದಾರೆ. ಇಂದು, ನಮ್ಮ ರಕ್ಷಣಾ ಕ್ಷೇತ್ರ, ವಾಯುಪಡೆ, ಭೂಸೇನೆ, ನೌಕಾಪಡೆ ಅಥವಾ ನಮ್ಮ ಬಾಹ್ಯಾಕಾಶ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾವು ನಮ್ಮ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಗಳಿಗೆ ಸಾಕ್ಷಿಯಾಗುತ್ತಿದ್ದೇವೆ.

ಮತ್ತೊಂದೆಡೆ, ನನಗೆ ಸಾಕಷ್ಟು ಆಘಾತವನ್ನುಂಟುಮಾಡುವ ಕೆಲವೊಂದು ಕಳವಳಕಾರಿ ವಿಷಯಗಳಿವೆ. ಆದ್ದರಿಂದ, ನಾನು ಅವುಗಳ ಬಗ್ಗೆ ಕೆಂಪು ಕೋಟೆಯ ಕೊತ್ತಲಗಳಿಂದ ಮತ್ತೊಮ್ಮೆ ನಿಮಗೆ ಒತ್ತಿ ಹೇಳಲು ಬಯಸುತ್ತೇನೆ. ಒಂದು ಸಮಾಜವಾಗಿ ನಾವು ನಮ್ಮ ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು. ರಾಷ್ಟ್ರದಲ್ಲಿ ಮತ್ತು ನಾಗರಿಕರಲ್ಲಿ ಜನಾಕ್ರೋಶವು ಗೋಚರಿಸುತ್ತಿದೆ. ಆಕ್ರೋಶವನ್ನು ನಾನೂ ಅನುಭವಿಸಬಲ್ಲೆ. ರಾಜ್ಯಗಳು, ಸಮಾಜ ಮತ್ತು ರಾಷ್ಟ್ರವು ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ವಿರುದ್ಧದ ಅಪರಾಧಗಳನ್ನು ಯಾವುದೇ ವಿಳಂಬವಿಲ್ಲದೆ ತನಿಖೆ ಮಾಡಬೇಕು. ಸರ್ಕಾರ, ನ್ಯಾಯಾಂಗ ಮತ್ತು ನಾಗರಿಕ ಸಮಾಜದ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸಲು ಇಂತಹ ರಕ್ಕಸ ಕೃತ್ಯಗಳನ್ನು ಎಸಗುವವರ ವಿರುದ್ಧ ಮೇಲ್ನೋಟಕ್ಕೆ ಕಂಡು ಬರುವ ಅಂಶಗಳನ್ನು ಆಧರಿಸಿ ತಕ್ಷಣವೇ ಪ್ರಕರಣ ದಾಖಲಿಸಬೇಕು. ಅತ್ಯಾಚಾರಕ್ಕೊಳಗಾದವರು - ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳ ಬಗ್ಗೆ ಮಾಧ್ಯಮಗಳಲ್ಲಿ ವಿಶೇಷವಾಗಿ ಒತ್ತಿ ಹೇಳಲಾಗುತ್ತಿದೆ ಮತ್ತು ಸಮಾಜದಲ್ಲಿ ಅವರ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಅತ್ಯಾಚಾರಿ ಮಾತ್ರ ಸುದ್ದಿಯಾಗುತ್ತಿಲ್ಲ ಎಂದು ನಾನು ಉಲ್ಲೇಖಿಸಲು ಬಯಸುತ್ತೇನೆ. ಈಗಿನ ತುರ್ತು ಅಗತ್ಯವೆಂದರೆ ಶಿಕ್ಷೆಗೆ ಒಳಗಾಗುವ ಅಪರಾಧಿಗಳ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಬೇಕು, ಇದರಿಂದ ಅಂತಹ ಪಾಪ ಕೃತ್ಯಗಳನ್ನು ಮಾಡುವವರು ಸಹ ಮರಣದಂಡನೆ ಸೇರಿದಂತೆ ವಿವಿಧ ಪರಿಣಾಮಗಳಿಗೆ ಹೆದರುತ್ತಾರೆ. ಭಯವನ್ನು ಸೃಷ್ಟಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಒಂದು ರಾಷ್ಟ್ರವಾಗಿ ನಮ್ಮ ಸ್ವಂತ ಪ್ರಯತ್ನಗಳು ಮತ್ತು ಸಾಧನೆಗಳನ್ನು ಕಡಿಮೆ ಮಾಡಿ ನೋಡುವ ಅಭ್ಯಾಸವನ್ನು ನಾವು ಬೆಳೆಸಿಕೊಂಡಿದ್ದೇವೆ. ದುರದೃಷ್ಟವಶಾತ್ ನಾವು ನಮ್ಮ ರಾಷ್ಟ್ರೀಯತೆಯ ಬಗ್ಗೆ ಯಾವ ಕಾರಣಕ್ಕೂ ಹೆಮ್ಮೆ ಪಡುವುದನ್ನು ನಿಲ್ಲಿಸಿದ್ದೇವೆ. 'ವಿಳಂಬ' ಎಂಬುದು ಸಾಮಾನ್ಯ ಭಾರತೀಯ ಮನಸ್ಥಿತಿ ಎಂದು ಕೇಳಲು ಅನೇಕ ಬಾರಿ ಮುಜುಗರ ಎನಿಸುತ್ತಿತ್ತು. ಜಾಗತಿಕ ಮಟ್ಟದಲ್ಲಿ ಭಾರತೀಯರ ಬಗ್ಗೆ ಗ್ರಹಿಕೆಯನ್ನು ಸುಧಾರಿಸಲು ನಾವು ಶ್ರಮಿಸಿದ್ದೇವೆ. ಹಿಂದೆ ಆಟಿಕೆಗಳನ್ನು ಸಹ ಭಾರತದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ನಾವು ಅಂತಹ ದಿನಗಳಿಗೂ ಸಾಕ್ಷಿಯಾಗಿದ್ದೇವೆ. ಆದರೆ ಇಂದು ನಮ್ಮ ಆಟಿಕೆ ಉದ್ಯಮವು ಜಾಗತಿಕ ಮಾರುಕಟ್ಟೆಯಲ್ಲಿ ಪರಿಗಣಿಸಲೇಬೇಕಾದ ಹೆಸರಾಗಿದೆ ಎಂದು ನಾವು ಹೆಮ್ಮೆಪಡುತ್ತೇವೆ. ನಾವು ಆಟಿಕೆಗಳನ್ನು ರಫ್ತು ಮಾಡಲು ಪ್ರಾರಂಭಿಸಿದ್ದೇವೆ. ಒಂದು ಕಾಲದಲ್ಲಿ ಮೊಬೈಲ್ ಫೋನ್ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು, ಆದರೆ ಇಂದು ಭಾರತವು ಮೊಬೈಲ್ ಫೋನ್ಗಳ ಉತ್ಪಾದನಾ ಪರಿಸರ ವ್ಯವಸ್ಥೆಯ ದೊಡ್ಡ ಕೇಂದ್ರವನ್ನು ಹೊಂದಿದೆ ಮತ್ತು ನಾವು ಅವುಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲು ಪ್ರಾರಂಭಿಸಿದ್ದೇವೆ. ಇದು ಭಾರತದ ಪರಾಕ್ರಮ.

ಸ್ನೇಹಿತರೇ,

ವಿಶ್ವದ ಭವಿಷ್ಯವು ಅರೆವಾಹಕಗಳು(ಸೆಮಿಕಂಡಕ್ಟರ್‌), ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ(ಎಐ) ಜೊತೆ ನಿಕಟ ನಂಟು ಹೊಂದಿದೆ. ನಾವು ʻಸೆಮಿಕಂಡಕ್ಟರ್ ಮಿಷನ್ʼ ಅನ್ನು ಪ್ರಾರಂಭಿಸಿದ್ದೇವೆ ಮತ್ತು ಜಗತ್ತಿಗೆ ಸ್ಪರ್ಧಾತ್ಮಕ ದರದಲ್ಲಿ ʻಮೇಡ್ ಇನ್ ಇಂಡಿಯಾʼ ಉತ್ಪನ್ನಗಳನ್ನು ನೀಡಲು ಬಯಸುತ್ತೇವೆ. ನಮ್ಮಲ್ಲಿ ಉತ್ತಮ ಪ್ರತಿಭೆಗಳಿವೆ ಮತ್ತು ನಮ್ಮ ಯುವಕರು ಕ್ಷೇತ್ರದಲ್ಲಿ ದೊಡ್ಡ ಕನಸು ಕಾಣಬೇಕು. ಭಾರತವು ಈಗಾಗಲೇ ಸಂಶೋಧನೆಯಲ್ಲಿ ತೊಡಗಿದೆ ಮತ್ತು ಈಗ ನಾವು ಉತ್ಪಾದನೆಯತ್ತ ಸಾಗಬೇಕಿದೆ. ಕ್ಷೇತ್ರದಲ್ಲಿ ಜಗತ್ತಿಗೆ ಅಂತಿಮ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯ ಮತ್ತು ಪರಾಕ್ರಮವನ್ನು ನಾವು ಹೊಂದಿದ್ದೇವೆ.

ಸ್ನೇಹಿತರೇ,

ʻ2ಜಿʼಗಾಗಿಯೂ ನಾವು ಹೆಣಗಾಡಬೇಕಾದ ದಿನಗಳನ್ನು ನಾವು ನೋಡಿದ್ದೇವೆ. ಇಂದು ನಾವು ದೇಶದ ಉದ್ದಗಲಕ್ಕೂ ʻ5ಜಿʼ ಸಂಪರ್ಕ ಆರಂಭವಾಗಿರುವುದನ್ನು ನೋಡಬಹುದು. ಸ್ನೇಹಿತರೇ, ನಾವು ಸದ್ಯಕ್ಕೆ ಎಲ್ಲಿಯೂ ನಿಲ್ಲುವುದಿಲ್ಲ. ನಾವು ʻ5ಜಿʼಗೆ ಮಾತ್ರ ಸೀಮಿತವಾಗಲು ಒಪ್ಪುವುದಿಲ್ಲ. ನಾವು ಈಗಾಗಲೇ ʻ6ಜಿʼಗಾಗಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಪ್ರಗತಿಯಿಂದ ನಾವು ಜಗತ್ತನ್ನು ಚಕಿತಗೊಳಿಸಿದ್ದೇವೆ. ನಾನು ಇದನ್ನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ.

ನನ್ನ ಪ್ರೀತಿಯ ಸ್ನೇಹಿತರೇ,

ರಕ್ಷಣಾ ಕ್ಷೇತ್ರದ ಬಗ್ಗೆ ಮಾತನಾಡುವುದಾದರೆ, ರಕ್ಷಣಾ ಬಜೆಟ್ನಲ್ಲಿ ಹೆಚ್ಚಳ ಮಾಡಿದರೆ ಅದನ್ನು ಪ್ರಶ್ನಿಸುವ ಅಭ್ಯಾಸ ನಮಗಿತ್ತು. ಆದರೆ, ಹಣವನ್ನು ಎಲ್ಲಿ ಬಳಸಲಾಗಿದೆ ಎಂದು ತಿಳಿಯಲು ಯಾರೂ ಪ್ರಯತ್ನಿಸಲಿಲ್ಲ. ರಕ್ಷಣಾ ಬಜೆಟ್ಗೆ ಮೀಸಲಿರಿಸಿದ ಹಣವನ್ನು ಇತರ ದೇಶಗಳಿಂದ ರಕ್ಷಣಾ ಸಲಕರಣೆಗಳನ್ನು ಆಮದು ಮಾಡಿಕೊಳ್ಳಲು ಖರ್ಚು ಮಾಡಲಾಗುತ್ತಿತ್ತು. ನಮ್ಮ ರಕ್ಷಣಾ ಪಡೆಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ಏಕೆಂದರೆ ಕ್ಷೇತ್ರದಲ್ಲೂ ಸ್ವಾವಲಂಬಿಗಳಾಗುವ ಅವರ ವಿಶ್ವಾಸವನ್ನು ನಾವು ನೋಡುತ್ತಿದ್ದೇವೆ. ಅವರು ಇನ್ನು ಮುಂದೆ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದ ವಸ್ತುಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನಾವು ನಮ್ಮ ಸೈನ್ಯದಿಂದ ನಿಜವಾದ ದೇಶಭಕ್ತಿಯನ್ನು ಕಲಿಯಬೇಕು. ಆಶಯದೊಂದಿಗೆ ನಾವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗುತ್ತಿದ್ದೇವೆ. ರಕ್ಷಣಾ ಸಲಕರಣೆ ಉತ್ಪಾದನಾ ಕ್ಷೇತ್ರದಲ್ಲೂ ಭಾರತ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದೆ. ಸಣ್ಣ ವಸ್ತುಗಳನ್ನು ಸಹ ಆಮದು ಮಾಡಿಕೊಳ್ಳುವ ಮೂಲಕ ಇತರೆ ದೇಶಗಳ ಮೇಲೆ ಅವಲಂಬಿತವಾಗಿದ್ದ ನಮ್ಮ ರಕ್ಷಣಾ ವಲಯವು ಕ್ರಮೇಣ ರಫ್ತುದಾರನಾಗಿ ಹೊರಹೊಮ್ಮಿದೆ. ವಿವಿಧ ರಕ್ಷಣಾ ಉಪಕರಣಗಳ ತಯಾರಕ ಮತ್ತು ರಫ್ತುದಾರನಾಗಿ ಭಾರತ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ ಎಂದು ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.

ನಾವು ಉತ್ಪಾದನಾ ವಲಯವನ್ನು ಉತ್ತೇಜಿಸಲು ಬಯಸುತ್ತೇವೆ. ಏಕೆಂದರೆ ನಿರುದ್ಯೋಗವನ್ನು ಪರಿಹರಿಸಲು ಇದು ನಿರ್ಣಾಯಕವಾಗಿದೆ. ಇಂದು, ಉತ್ಪಾದನೆ-ಆಧರಿತ ಪ್ರೋತ್ಸಾಹಧನʼ(ಪಿಎಲ್ಐ) ಯೋಜನೆ ದೊಡ್ಡ ಯಶಸ್ಸನ್ನು ಕಂಡಿದೆ. ವಿದೇಶಿ ನೇರ ಹೂಡಿಕೆ (ಎಫ್ಡಿಐ) ಸುಧಾರಣೆಗಳು ನಮಗೆ ಗಮನಾರ್ಹ ಶಕ್ತಿಯನ್ನು ನೀಡಿವೆ. ʻಎಂಎಸ್ಎಂಇʼಗಳು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಗಣನೀಯ ವೇಗವನ್ನು ಗಳಿಸಿವೆ. ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ, ಮತ್ತು ಇದರ ಪರಿಣಾಮವಾಗಿ, ನಮ್ಮ ಉತ್ಪಾದನಾ ವಲಯವು ಜಾಗತಿಕ ಉತ್ಪಾದನಾ ಕೇಂದ್ರವಾಗುವ ಹಾದಿಯಲ್ಲಿದೆ. ಇಷ್ಟು ದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವ ಮತ್ತು ಅದನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ದೇಶದೊಂದಿಗೆ, ನಾವು ಉತ್ಪಾದನಾ ಜಗತ್ತಿನಲ್ಲಿ, ವಿಶೇಷವಾಗಿ ʻಉದ್ಯಮ 4.0ʼನಲ್ಲಿ ಹೆಚ್ಚಿನ ಶಕ್ತಿಯೊಂದಿಗೆ ಮುಂದುವರಿಯುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಅಗತ್ಯವಾದ ಕೌಶಲ್ಯ ಅಭಿವೃದ್ಧಿಯ ಬಗ್ಗೆಯೂ ನಾವು ಗಮನ ಹರಿಸಿದ್ದೇವೆ. ಕೌಶಲ್ಯ ಅಭಿವೃದ್ಧಿಯಲ್ಲಿ ನಾವು ಹೊಸ ಮಾದರಿಗಳನ್ನು ಪರಿಚಯಿಸಿದ್ದೇವೆ. ನಾವು ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದ್ದೇವೆ. ಇದರಿಂದ ನಾವು ತಕ್ಷಣದ ಅವಶ್ಯಕತೆಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಬಹುದು. ನಾನು ಕೆಂಪು ಕೋಟೆಯ ಕೊತ್ತಲಗಳಿಂದ ಮಾತನಾಡುತ್ತಿರುವ ಸಂದರ್ಭದಲ್ಲಿ, ಭಾರತವು ಕೈಗಾರಿಕಾ ಉತ್ಪಾದನೆಯ ಪ್ರಮುಖ ಕೇಂದ್ರವಾಗುವ ಮತ್ತು ಜಗತ್ತು ಅದರತ್ತ ನೋಡುವ ದಿನ ದೂರವಿಲ್ಲ ಎಂಬ ವಿಶ್ವಾಸ ನನ್ನಲ್ಲಿ ಮೂಡುತ್ತಿದೆ.

ಇಂದು, ವಿಶ್ವದ ಅನೇಕ ಪ್ರಮುಖ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತವೆ. ಚುನಾವಣೆಯ ನಂತರ ನಾನು ಇದನ್ನು ಹೆಚ್ಚಾಗಿ ಗಮನಿಸಿದ್ದೇನೆ. ನನ್ನ ಮೂರನೇ ಅವಧಿಯಲ್ಲಿ ನನ್ನನ್ನು ಭೇಟಿಯಾಗಲು ವಿನಂತಿಸುವ ಬಹುತೇಕ ಮಂದಿ ಹೂಡಿಕೆದಾರರೇ. ಇವರು ಭಾರತಕ್ಕೆ ಬಂದು ಇಲ್ಲಿ ಹೂಡಿಕೆ ಮಾಡಲು ಬಯಸುವ ಜಾಗತಿಕ ಹೂಡಿಕೆದಾರರು. ಇದು ಒಂದು ದೊಡ್ಡ ಸುವರ್ಣಾವಕಾಶ. ಹೂಡಿಕೆದಾರರನ್ನು ಆಕರ್ಷಿಸಲು ಸ್ಪಷ್ಟ ನೀತಿಗಳನ್ನು ರೂಪಿಸುವಂತೆ ನಾನು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ. ಉತ್ತಮ ಆಡಳಿತದ ಭರವಸೆಯನ್ನು ನೀಡಿ, ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿ. ಹೂಡಿಕೆದಾರರನ್ನು ಆಕರ್ಷಿಸಲು ಪ್ರತಿ ರಾಜ್ಯವು ಆರೋಗ್ಯಕರ ಸ್ಪರ್ಧೆಯಲ್ಲಿ ತೊಡಗಬೇಕು. ಸ್ಪರ್ಧೆಯು ತಮ್ಮ ರಾಜ್ಯಗಳಿಗೆ ಹೂಡಿಕೆಯನ್ನು ತರುತ್ತದೆ, ಸ್ಥಳೀಯ ಯುವಕರಿಗೆ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ನೀತಿಗಳನ್ನು ಬದಲಾಯಿಸಬೇಕಾದರೆ, ರಾಜ್ಯಗಳು ಅವುಗಳನ್ನು ಜಾಗತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು. ಭೂಮಿಯ ಅಗತ್ಯವಿದ್ದರೆ, ರಾಜ್ಯಗಳು ʻಭೂ ಬ್ಯಾಂಕ್ʼ ಅನ್ನು ರಚಿಸಬೇಕು. ʻಏಕ ಗವಾಕ್ಷಿʼಯತ್ತ ಗಮನದೊಂದಿಗೆ ಉತ್ತಮ ಆಡಳಿತಕ್ಕಾಗಿ ಕೆಲಸ ಮಾಡುವಲ್ಲಿ ರಾಜ್ಯಗಳು ಹೆಚ್ಚು ಸಕ್ರಿಯವಾಗಿವೆ ಮತ್ತು ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತವೆ. ಇದರಿಂದ ಹೂಡಿಕೆದಾರರು ದೀರ್ಘಕಾಲದವರೆಗೆ ಉಳಿಯುವ ಸಾಧ್ಯತೆಯಿದೆ. ಕೆಲಸವನ್ನು ಕೇಂದ್ರ ಸರ್ಕಾರ ಮಾತ್ರವೇ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಏಕೆಂದರೆ ಯೋಜನೆಗಳನ್ನು ಜಾರಿಗೆ ತರುವುದು ರಾಜ್ಯಗಳಲ್ಲೇ. ಯೋಜನೆಗಳು ಯಶಸ್ವಿಯಾಗಲು ರಾಜ್ಯ ಸರ್ಕಾರಗಳೊಂದಿಗೆ ದೈನಂದಿನ ಸಂವಹನ ಅತ್ಯಗತ್ಯ. ಆದ್ದರಿಂದ, ಜಗತ್ತು ಭಾರತದತ್ತ ಹೆಚ್ಚು ಆಕರ್ಷಿತವಾಗುತ್ತಿರುವುದರಿಂದ ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಬದ್ಧವಾಗಿರುವುದರಿಂದ, ಹಳೆಯ ಅಭ್ಯಾಸಗಳನ್ನು ಬಿಟ್ಟು ಸ್ಪಷ್ಟ ನೀತಿಗಳೊಂದಿಗೆ ಮುಂದುವರಿಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಾನು ರಾಜ್ಯಗಳನ್ನು ಒತ್ತಾಯಿಸುತ್ತೇನೆ. ನಿಮ್ಮ ರಾಜ್ಯದ ಫಲಿತಾಂಶಗಳನ್ನು ನೀವು ನೋಡುತ್ತೀರಿ, ಮತ್ತು ನಿಮ್ಮ ರಾಜ್ಯವು ಪ್ರಕಾಶಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ.

ಸ್ನೇಹಿತರೇ,

ಭಾರತವನ್ನು ಅದರ ಅತ್ಯುತ್ತಮ ಗುಣಮಟ್ಟಕ್ಕಾಗಿ ಗುರುತಿಸುವಂತಾಗುವುದು ಬಹಳ ಮುಖ್ಯ. ವಿಶ್ವಕ್ಕಾಗಿ, ನಾವು ಈಗ ವಿನ್ಯಾಸ ಕ್ಷೇತ್ರದ ಮೇಲೆ ಗಮನ ಹರಿಸಬೇಕಾಗಿದೆ ಮತ್ತು "ಭಾರತದಲ್ಲಿ ವಿನ್ಯಾಸ"ಕ್ಕೆ ಒತ್ತು ನೀಡಬೇಕಾಗಿದೆ. ಭಾರತೀಯ ಮಾನದಂಡಗಳನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸರಿದೂಗಿಸಲು ನಾವು ಶ್ರಮಿಸಬೇಕು. ಭಾರತೀಯ ಮಾನದಂಡಗಳು ಅಂತರರಾಷ್ಟ್ರೀಯ ಮಾನದಂಡಗಳಾದಾಗ, ನಮ್ಮ ಉತ್ಪನ್ನಗಳು ಜಾಗತಿಕ ಸ್ವೀಕಾರವನ್ನು ಪಡೆಯುವುದು ಸುಲಭವಾಗುತ್ತದೆ. ಇದು ನಮ್ಮ ಉತ್ಪಾದನೆಯ ಗುಣಮಟ್ಟ, ನಮ್ಮ ಸೇವೆಗಳ ಗುಣಮಟ್ಟ ಮತ್ತು ನಮ್ಮ ಕಾರ್ಯವಿಧಾನದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಆದ್ದರಿಂದ, ನಾವು ನಿಟ್ಟಿನಲ್ಲಿ ಮುಂದುವರಿಯುವಾಗ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ನಮ್ಮಲ್ಲಿ ಪ್ರತಿಭೆ ಇದೆ. ವಿನ್ಯಾಸ ಕ್ಷೇತ್ರದಲ್ಲಿ ನಾವು ಜಗತ್ತಿಗೆ ಅನೇಕ ಹೊಸ ವಿಷಯಗಳನ್ನು ನೀಡಬಹುದು. ನಾವು "ಭಾರತದಲ್ಲಿ ವಿನ್ಯಾಸ" ಎಂಬ ಕರೆಗೆ ಕಿವಿಗೊಡಬೇಕಿದೆ ಮತ್ತು "ಭಾರತದಲ್ಲಿ ವಿನ್ಯಾಸ ಮತ್ತು ವಿಶ್ವಕ್ಕಾಗಿ ವಿನ್ಯಾಸ" ಎಂಬ ಕನಸಿನೊಂದಿಗೆ ಮುಂದುವರಿಯಬೇಕಿದೆ.

ಗೇಮಿಂಗ್ ಈಗ  ಜಗತ್ತಿನಲ್ಲಿ ದೊಡ್ಡ ಮಾರುಕಟ್ಟೆ ಹೊರಹೊಮ್ಮುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆದರೆ, ಇಂದಿಗೂ, ಗೇಮಿಂಗ್ ಪ್ರಾಬಲ್ಯ ಹಾಗೂ ಗೇಮ್ಗಳ ಅಭಿವೃದ್ಧಿಯಿಂದ ಬರುವ ಲಾಭವನ್ನು ಮುಖ್ಯವಾಗಿ ವಿದೇಶಿ ಕಂಪನಿಗಳು ಹೊಂದಿವೆ. ಭಾರತವು ಶ್ರೀಮಂತ ಪರಂಪರೆಯನ್ನು ಹೊಂದಿದೆ ಮತ್ತು ನಾವು ಗೇಮಿಂಗ್ ಜಗತ್ತಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಬಹುದು. ನಮ್ಮ ದೇಶದಲ್ಲಿ ತಯಾರಿಸಿದ ಗೇಮ್ಗಳತ್ತ ನಾವು ವಿಶ್ವಾದ್ಯಂತ ಮಕ್ಕಳನ್ನು ಆಕರ್ಷಿಸಬಹುದು. ಭಾರತದ ಮಕ್ಕಳು, ಭಾರತದ ಯುವಕರು, ಭಾರತದ ಐಟಿ ವೃತ್ತಿಪರರು ಮತ್ತು ಭಾರತದ ʻಎಐʼ ವೃತ್ತಿಪರರು ಗೇಮಿಂಗ್ ಜಗತ್ತನ್ನು ಮುನ್ನಡೆಸಬೇಕೆಂದು ನಾನು ಬಯಸುತ್ತೇನೆ. ಗೇಮಿಂಗ್ ಜಗತ್ತಿನಲ್ಲಿ, ನಮ್ಮ ಉತ್ಪನ್ನಗಳು ಜಾಗತಿಕವಾಗಿ ಪ್ರಭಾವ ಬೀರಬೇಕು. ನಮ್ಮ ಆನಿಮೇಟರ್ಗಳು ಜಾಗತಿಕವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ನಾವು ಅನಿಮೇಷನ್ ಉದ್ಯಮದಲ್ಲಿ ಬಲವಾದ ಉಪಸ್ಥಿತಿಯನ್ನು ಸ್ಥಾಪಿಸಬಹುದು ಮತ್ತು ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಯತ್ನಿಸಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯು ಆತಂಕದ ವಿಷಯಗಳಾಗಿವೆ. ವಿಶ್ವಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಇವುಗಳ ಬಗ್ಗೆ ಚರ್ಚಿಸಲಾಗುತ್ತಿದೆ. ನಿಟ್ಟಿನಲ್ಲಿ ಭಾರತ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ನಾವು ನಮ್ಮ ಬದ್ಧತೆಯನ್ನು ಕೇವಲ ಮಾತುಗಳ ಮೂಲಕ ಅಲ್ಲ, ಸ್ಪಷ್ಟ ಕ್ರಿಯೆಗಳ ಮೂಲಕವೂ ಪ್ರದರ್ಶಿಸಿದ್ದೇವೆ ಮತ್ತು ಜಗತ್ತನ್ನು ಚಕಿತಗೊಳಿಸುವ ಫಲಿತಾಂಶಗಳನ್ನು ಸಾಧಿಸಿದ್ದೇವೆ. ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧಿಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಮತ್ತು ನಮ್ಮ ನವೀಕರಿಸಬಹುದಾದ ಇಂಧನ ಪ್ರಯತ್ನಗಳನ್ನು ಗಮನಾರ್ಹವಾಗಿ ಮುನ್ನಡೆಸಿದ್ದೇವೆ, ಕ್ಷೇತ್ರದಲ್ಲಿ ಹೊಸ ಶಕ್ತಿಯನ್ನು ತುಂಬಿದ್ದೇವೆ. ಮುಂಬರುವ ವರ್ಷಗಳಲ್ಲಿ ನಾವು ನಿವ್ವಳ ಶೂನ್ಯ ಭವಿಷ್ಯದತ್ತ ಸಾಗುತ್ತಿದ್ದೇವೆ. ಸಂದರ್ಭದಲ್ಲಿ ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಿದ ಗುರಿಗಳನ್ನು ನಾನು ಸ್ಮರಿಸಲು ಬಯಸುತ್ತೇನೆ. ಕೆಂಪು ಕೋಟೆಯ ಕೊತ್ತಲಗಳಿಂದ, ನಾನು ನನ್ನ ದೇಶವಾಸಿಗಳ ಸಾಧನೆಗಳನ್ನು ಎತ್ತಿ ತೋಲು ಬಯಸುತ್ತೇನೆ. ಜಿ-20 ರಾಷ್ಟ್ರಗಳು ಸಾಧಿಸಲು ಸಾಧ್ಯವಾಗದ್ದನ್ನು ನಮ್ಮ ನಾಗರಿಕರು ಸಾಧಿಸಿದ್ದಾರೆ. ಯಾವುದೇ ಜಿ-20 ದೇಶವು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸಿದೆ ಎಂದರೆ ಅದು ನನ್ನ ದೇಶ, ನನ್ನ ಭಾರತ ಮಾತ್ರ. ಸಾಧನೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ನಾವು ನಮ್ಮ ನವೀಕರಿಸಬಹುದಾದ ಇಂಧನ ಗುರಿಗಳನ್ನು ತಲುಪಿದ್ದೇವೆ ಮತ್ತು 2030 ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯಿಂದ ಕೆಲಸ ಮಾಡುತ್ತಿದ್ದೇವೆ. ಇದು ನಿಜಕ್ಕೂ ಒಂದು ದೊಡ್ಡ ಗುರಿ! ಗುರಿಯ ಬಗ್ಗೆ ಜಗತ್ತು ಅಚ್ಚರಿಪಡಬಹುದು, ಆದರೆ ನಾವು ಅದನ್ನು ಸಾಧಿಸುತ್ತೇವೆ ಎಂದು ನಾನು ನನ್ನ ದೇಶವಾಸಿಗಳಿಗೆ ವಿಶ್ವಾಸದಿಂದ ಭರವಸೆ ನೀಡುತ್ತೇನೆ. ಇದು ಮಾನವೀಯತೆಗೆ ಪ್ರಯೋಜನವನ್ನು ನೀಡುತ್ತದೆ, ನಮ್ಮ ಭವಿಷ್ಯವನ್ನು ಭದ್ರಪಡಿಸುತ್ತದೆ ಮತ್ತು ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಖಚಿತಪಡಿಸುತ್ತದೆ. 2030 ವೇಳೆಗೆ ನಮ್ಮ ರೈಲ್ವೆಯನ್ನು ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ಇಲಾಖೆಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ.

ಸ್ನೇಹಿತರೇ,

ʻಪಿಎಂ ಸೂರ್ಯ ಘರ್ʼ ಉಚಿತ ವಿದ್ಯುತ್ ಯೋಜನೆಯು ಹೊಸ ಶಕ್ತಿಯನ್ನು ನೀಡಲು ಸಜ್ಜಾಗಿದೆ. ಇದರ ಪ್ರಯೋಜನಗಳನ್ನು ನಮ್ಮ ದೇಶದ ಸರಾಸರಿ ಕುಟುಂಬಗಳು, ವಿಶೇಷವಾಗಿ ಮಧ್ಯಮ ವರ್ಗದವರು ಪಡೆಯಲಿದ್ದಾರೆ. ಯೋಜನೆ ಫಲಾನುಭವಿಗಳು ಉಚಿತ ವಿದ್ಯುತ್ ಪಡೆಯಲಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ʻಪಿಎಂ ಸೂರ್ಯ ಘರ್ʼ ಯೋಜನೆ ಅಡಿಯಲ್ಲಿ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವವರು ತಮ್ಮ ಇಂಧನ ವೆಚ್ಚವನ್ನು ಸಹ ಕಡಿಮೆ ಮಾಡಬಹುದು.

ಸ್ನೇಹಿತರೇ,

ʻಹಸಿರು ಹೈಡ್ರೋಜನ್ ಮಿಷನ್ʼ ಮೂಲಕ ಜಾಗತಿಕ ಕೇಂದ್ರವಾಗುವ ಗುರಿಯನ್ನು ನಾವು ಹೊಂದಿದ್ದೇವೆ. ನೀತಿಗಳನ್ನು ತ್ವರಿತಗತಿಯಲ್ಲಿ ರೂಪಿಸಲಾಗಿದೆ, ಮತ್ತು ಅವುಗಳ ಅನುಷ್ಠಾನವು ಸಹ ವೇಗವಾಗಿ ಪ್ರಗತಿಯಲ್ಲಿದೆ. ಹಸಿರು ಹೈಡ್ರೋಜನ್ ಅನ್ನು ಹೊಸ ಶಕ್ತಿಯ ಮೂಲವಾಗಿ ಮುನ್ನಡೆಸಲು ಭಾರತ ಬದ್ಧವಾಗಿದೆ. ಪ್ರಯತ್ನಗಳು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಕಳವಳಗಳಿಗೆ ಪರಿಹಾರ ಒದಗಿಸುತ್ತವೆ. ಜೊತೆಗೆ, ಹಸಿರು ಉದ್ಯೋಗಗಳಿಗೆ ಗಮನಾರ್ಹ ಅವಕಾಶಗಳನ್ನು ತೆರೆಯುತ್ತವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಹಸಿರು ಉದ್ಯೋಗಗಳ ಪ್ರಾಮುಖ್ಯತೆ ವಿಸ್ತರಿಸುತ್ತಿದ್ದಂತೆ, ಅವಕಾಶವನ್ನು ಬಳಸಿಕೊಳ್ಳಲು ಮತ್ತು ನಮ್ಮ ಯುವಕರಿಗೆ ಉದ್ಯೋಗವನ್ನು ಒದಗಿಸಲು, ನಾವು ಹಸಿರು ಉದ್ಯೋಗ ವಲಯವನ್ನು ಉತ್ತೇಜಿಸುವತ್ತ ಹಾಗೂ ವಿಸ್ತರಿಸುವತ್ತ ಗಮನ ಹರಿಸಬೇಕಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ತ್ರಿವರ್ಣ ಧ್ವಜದ ಅಡಿಯಲ್ಲಿ, ಜಾಗತಿಕ ಒಲಿಂಪಿಕ್ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ ಯುವ ಕ್ರೀಡಾಪಟುಗಳು ನಮ್ಮೊಂದಿಗೆ ಉಪಸ್ಥಿತರಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ, ನಾನು ನಮ್ಮ ರಾಷ್ಟ್ರದ ಎಲ್ಲಾ ಕ್ರೀಡಾಪಟುಗಳು ಮತ್ತು ಆಟಗಾರರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೊಸ ಕನಸುಗಳು, ಸಂಕಲ್ಪಗಳು ಮತ್ತು ಅಚಲ ಪ್ರಯತ್ನದೊಂದಿಗೆ ನಾವು ಹೊಸ ಗುರಿಗಳತ್ತ ಶ್ರಮಿಸುವುದನ್ನು ಮುಂದುವರಿಸುತ್ತೇವೆ ಎಂಬ ಭರವಸೆಯೊಂದಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕೆಲವೇ ದಿನಗಳಲ್ಲಿ ಪ್ಯಾರಾಲಿಂಪಿಕ್ಸ್ಗಾಗಿ ಭಾರತದ ಕ್ರೀಡಾಪಟುಗಳ ದೊಡ್ಡ ತಂಡ ಪ್ಯಾರಿಸ್ಗೆ ತೆರಳಲಿದೆ. ನಮ್ಮ ಎಲ್ಲಾ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ.

ಸ್ನೇಹಿತರೇ,

ಭಾರತವು ʻಜಿ-20ʼಗೆ ಆತಿಥ್ಯ ವಹಿಸಿತು. ನಮ್ಮ ದೇಶದ ವಿವಿಧ ನಗರಗಳಲ್ಲಿ `ಜಿ-20’ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. 200ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಯಿತು! ಜಿ-20 ಹಿಂದೆ ಎಂದೂ ಇಷ್ಟು ಭವ್ಯವಾಗಿ ನಡೆದಿರಲಿಲ್ಲ, ಇದೇ ಮೊದಲು. ಭಾರತವು ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸಾಟಿಯಿಲ್ಲದ ಆತಿಥ್ಯವನ್ನು ಹೊಂದಿದೆ ಎಂದು ಇದು ಸಾಬೀತುಪಡಿಸುತ್ತದೆ. ಇದರೊಂದಿಗೆ, ನಮ್ಮ ಗುರಿ ಸ್ಪಷ್ಟವಾಗಿದೆ: 2036 ಒಲಿಂಪಿಕ್ಸ್ ಅನ್ನು ಭಾರತದ ನೆಲದಲ್ಲಿ ಆಯೋಜಿಸುವುದು. ನಾವು ಇದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ ಮತ್ತು ನಿಟ್ಟಿನಲ್ಲಿ ಕಡೆಗೆ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದೇವೆ.

ಸ್ನೇಹಿತರೇ,

ಸಮಾಜದ ಅತ್ಯಂತ ಅನನುಕೂಲಕರ ವರ್ಗವನ್ನು ಬೆಂಬಲಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ನಾವು ಯಾರನ್ನಾದರೂ ಹಿಂದೆ ಬಿಟ್ಟರೆ, ಅದು ನಮ್ಮ ಸಾಮೂಹಿಕ ಪ್ರಗತಿಗೆ ಅಡ್ಡಿಯಾಗುತ್ತದೆ. ಆದ್ದರಿಂದ, ಹಿಂದುಳಿದವರನ್ನು ಮೇಲಕ್ಕೆತ್ತಿದರೆ ಮಾತ್ರ ನಾವು ನಿಜವಾಗಿಯೂ ಮುಂದುವರಿಯಬಹುದು. ನಿರ್ಲಕ್ಷಿತ ಪ್ರದೇಶಗಳು, ಅಂಚಿನಲ್ಲಿರುವ ಸಮುದಾಯಗಳು, ನಮ್ಮ ಸಣ್ಣ ರೈತರು, ಕಾಡಿನ ಬುಡಕಟ್ಟು ಸಹೋದರ ಸಹೋದರಿಯರು, ನಮ್ಮ ತಾಯಂದಿರು ಮತ್ತು ಸಹೋದರಿಯರು, ನಮ್ಮ ಕಾರ್ಮಿಕರು ಮತ್ತು ನಮ್ಮ ಶ್ರಮಿಕರನ್ನು ನಮ್ಮ ಮಟ್ಟಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ. ಪ್ರಯತ್ನವು ಈಗಾಗಲೇ ವೇಗ ಪಡೆದಿದೆ ಮತ್ತು ಸಮುದಾಯಗಳು ಶೀಘ್ರದಲ್ಲೇ ನಮ್ಮ ಮಟ್ಟಕ್ಕೆ ಏರುವುದನ್ನು ನಾವು ನೋಡುತ್ತೇವೆ, ಮೂಲಕ ನಮ್ಮ ಸಾಮೂಹಿಕ ಶಕ್ತಿಯನ್ನು ಬಲಪಡಿಸುತ್ತೇವೆ. ನಾವು ಕಾರ್ಯವನ್ನು ಬಹಳ ಸೂಕ್ಷ್ಮತೆಯಿಂದ ಮಾಡಬೇಕು ಮತ್ತು ಮುಂದೆ ಇರುವ ಮಹತ್ವದ ಅವಕಾಶವನ್ನು ಬಳಸಿಕೊಳ್ಳಬೇಕು.

ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳಲು ಇದಕ್ಕಿಂತ ಮಹತ್ವದ ಸಂದರ್ಭ ಯಾವುದಿರುತ್ತದೆ? 1857 ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ನಮ್ಮ ದೇಶದ ಬುಡಕಟ್ಟು ಯುವರೊಬ್ಬರು ಬ್ರಿಟಿಷರ ವಿರುದ್ಧ ದಿಟ್ಟ ಪ್ರತಿರೋಧ ತೋರಿದ್ದರು. 20-22ನೇ ವಯಸ್ಸಿನಲ್ಲೇ ಅವರು ಬ್ರಿಟೀಷರಿಗೆ ತೀವ್ರ ಸವಾಲು ಹಾಕಿದರು, ಮತ್ತು ಇಂದು, ಅವರನ್ನು ಭಗವಾನ್ ಬಿರ್ಸಾ ಮುಂಡಾ ಎಂದು ಪೂಜಿಸಲಾಗುತ್ತದೆ. ನಾವು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯನ್ನು ಸಮೀಪಿಸುತ್ತಿದ್ದೇವೆ. ಹೀಗಾಗಿ ಅವರ ಪರಂಪರೆಯಿಂದ ಸ್ಫೂರ್ತಿ ಪಡೆಯೋಣ. ವಿನಮ್ರ ಆದಾಯದ ವ್ಯಕ್ತಿಯು ಸಹ ಆಳವಾದ ದೇಶಭಕ್ತಿಯನ್ನು ಹೇಗೆ ಪ್ರದರ್ಶಿಸಬಹುದು ಎಂಬುದಕ್ಕೆ ಭಗವಾನ್ ಬಿರ್ಸಾ ಮುಂಡಾ ಅವರಿಗಿಂತ ದೊಡ್ಡ ಸ್ಫೂರ್ತಿ ಮತ್ತಾರು ಇರಲು ಸಾಧ್ಯ? ನಾವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಸಮಾಜದ ಬಗ್ಗೆ ನಮ್ಮ ಸಂವೇದನೆ ಮತ್ತು ಸಹಾನುಭೂತಿ ಗಾಢವಾಗಿರುವಂತೆ ನೋಡೋಣ. ಬಡವರು, ದಲಿತರು, ಹಿಂದುಳಿದವರು, ಬುಡಕಟ್ಟುಗಳು ಹೀಗೆ ನಮ್ಮ ಸಮುದಾಯದ ಪ್ರತಿಯೊಬ್ಬ ಸದಸ್ಯರನ್ನು ಒಳಗೊಳ್ಳಲು ಮತ್ತು ಸಂಕಲ್ಪದೊಂದಿಗೆ ಒಟ್ಟಾಗಿ ಮುನ್ನಡೆಯಲು ನಾವು ಬದ್ಧರಾಗೋಣ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ದೃಢನಿಶ್ಚಯದಿಂದ ಮುಂದುವರಿಯುತ್ತಿದ್ದೇವೆ ಮತ್ತು ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದೇವೆ. ಆದಾಗ್ಯೂ, ಪ್ರಗತಿಯನ್ನು ಪ್ರಶಂಸಿಸಲು ಸಾಧ್ಯವಾಗದ ಕೆಲವು ವ್ಯಕ್ತಿಗಳು ಇದ್ದಾರೆ ಎಂಬುದು ಸಹ ನಿಜ. ತಮ್ಮ ಸ್ವಂತ ಕಲ್ಯಾಣವನ್ನು ಮೀರಿ ಯೋಚಿಸಲು ಸಾಧ್ಯವಾಗದ ಮತ್ತು ಇತರರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸದವರು ಇದ್ದಾರೆ. ಅಂತಹ ವ್ಯಕ್ತಿಗಳು, ಅವರ ವಿಕೃತ ಮನಸ್ಥಿತಿ ಕಳವಳಕಾರಿ. ಹತಾಶೆಯಲ್ಲಿ ಮುಳುಗಿರುವ ಜನರಿಂದ ದೇಶವು ತಪ್ಪಿಸಬೇಕು. ಅಂತಹ ಬೆರಳೆಣಿಕೆಯಷ್ಟು ವ್ಯಕ್ತಿಗಳು, ತಮ್ಮದೇ ಆದ ನಕಾರಾತ್ಮಕತೆಯಿಂದ ಬೆಳೆಸಿಕೊಂಡು, ಸಮಾಜದಲ್ಲಿ ವಿಷವನ್ನು ಹರಡಿದಾಗ, ಅದು ಅರಾಜಕತೆ, ವಿನಾಶ, ಅವ್ಯವಸ್ಥೆ ಮತ್ತು ತೀವ್ರ ಹಿನ್ನಡೆಗಳಿಗೆ ಕಾರಣವಾಗುತ್ತದೆ, ಅದನ್ನು ಸರಿಪಡಿಸಲು ಅಪಾರ ಪ್ರಯತ್ನಗಳು ಬೇಕಾಗುತ್ತವೆ. ನಿರಾಶಾವಾದಿ ಶಕ್ತಿಗಳು ವಿನಾಶದ ಕನಸನ್ನು ಕಾಣುವ ಮತ್ತು ನಮ್ಮ ಸಾಮೂಹಿಕ ಪ್ರಗತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ನಕಾರಾತ್ಮಕ ಮನಸ್ಥಿತಿಯನ್ನು ಪೋಷಿಸುತ್ತಿವೆ. ದೇಶವು ಅಪಾಯವನ್ನು ಗುರುತಿಸಬೇಕಾಗಿದೆ. ಅದೇನೇ ಆಗಲೀ, ನಮ್ಮ ಉತ್ತಮ ಉದ್ದೇಶಗಳು, ಸಮಗ್ರತೆ ಮತ್ತು ರಾಷ್ಟ್ರಕ್ಕೆ ಸಮರ್ಪಣಾ ಭಾವದೊಂದಿಗೆ, ನಮ್ಮನ್ನು ವಿರೋಧಿಸುವವರನ್ನು ಸಹ ನಾವು ಗೆಲ್ಲಬಲ್ಲೆವು ಎಂದು ನಾನು ನನ್ನ ಸಹ ನಾಗರಿಕರಿಗೆ ಭರವಸೆ ನೀಡಲು ಬಯಸುತ್ತೇನೆ. ನಮ್ಮ ದೇಶವನ್ನು ಮುನ್ನಡೆಸುವ ನಮ್ಮ ಬದ್ಧತೆಯಿಂದ ನಾವು ವಿಚಲಿತರಾಗುವುದಿಲ್ಲ ಮತ್ತು ಸಂಕಲ್ಪವನ್ನು ಎತ್ತಿಹಿಡಿಯುವುದಾಗಿ ನಾನು ಸಂಕಲ್ಪ ಮಾಡುತ್ತೇನೆ.

ಸ್ನೇಹಿತರೇ,

ನಮ್ಮ ಆಂತರಿಕ ಮತ್ತು ಬಾಹ್ಯ ಸವಾಲುಗಳು ಹೇರಳವಾಗಿವೆ. ನಾವು ಬಲಶಾಲಿಯಾಗಿ ಬೆಳೆದಂತೆಲ್ಲಾ ಮತ್ತು ಹೆಚ್ಚಿನ ಗಮನವನ್ನು ಸೆಳೆಯುತ್ತಿದ್ದಂತೆ, ಸವಾಲುಗಳು ಮತ್ತಷ್ಟು ಅಧಿಕವಾಗುತ್ತವೆ. ನಿರ್ದಿಷ್ಟವಾಗಿ ಬಾಹ್ಯ ಸವಾಲುಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಮತ್ತು ನನಗೆ ಇದರ ಬಗ್ಗೆ ಚೆನ್ನಾಗಿ ಗೊತ್ತಿದೆ. ಆದಾಗ್ಯೂ, ಭಾರತದ ಅಭಿವೃದ್ಧಿ ಎಂದರೆ ಯಾರಿಗೂ ಅಪಾಯವೆಂದಲ್ಲ ಎಂದು ನಾನು ಅಂತಹ ಶಕ್ತಿಗಳಿಗೆ ತಿಳಿಸಲು ಬಯಸುತ್ತೇನೆ. ಹಿಂದೆ, ನಾವು ಸಮೃದ್ಧರಾಗಿದ್ದಾಗಲೂ, ನಾವು ಜಗತ್ತನ್ನು ಯುದ್ಧಗಳಿಗೆ ದೂಡಲಿಲ್ಲ. ನಮ್ಮದು ಬುದ್ಧನ ಭೂಮಿ, ಮತ್ತು ಯುದ್ಧವು ನಮ್ಮ ಮಾರ್ಗವಲ್ಲ. ಆದ್ದರಿಂದ, ಜಗತ್ತು ಚಿಂತಿಸಬೇಕಾಗಿಲ್ಲ. ಭಾರತವು ಪ್ರಗತಿ ಹೊಂದುತ್ತಿದ್ದಂತೆ, ಭಾರತದ ಮೌಲ್ಯಗಳು ಮತ್ತು ಅದರ ಸಾವಿರಾರು ವರ್ಷಗಳ ಇತಿಹಾಸವನ್ನು ಅರ್ಥಮಾಡಿಕೊಳ್ಳುವಂತೆ ನಾನು ಜಾಗತಿಕ ಸಮುದಾಯವನ್ನು ಒತ್ತಾಯಿಸುತ್ತೇನೆ. ನಮ್ಮನ್ನು ಅಪಾಯ ಎಂದು ಗ್ರಹಿಸಬೇಡಿ. ಇಡೀ ಮನುಕುಲದ ಕಲ್ಯಾಣಕ್ಕೆ ಕೊಡುಗೆ ನೀಡಬಲ್ಲ ಸಾಮರ್ಥ್ಯವಿರುವ ಭೂಮಿ ನಮ್ಮದು. ಅಂತಹ ದೇಶಕ್ಕೆ ಕಷ್ಟಕರವಾಗುವಂತಹ ಕಾರ್ಯತಂತ್ರಗಳನ್ನು ರೂಪಿಸಬೇಡಿ. ಆದರೆ ನಾನು ನನ್ನ ಸಹ ನಾಗರಿಕರಿಗೆ ಹೇಳಲು ಬಯಸುವುದೇನೆಂದರೆ, ನಾವು ಎಷ್ಟೇ ಸವಾಲುಗಳನ್ನು ಎದುರಿಸಿದರೂ, ಸವಾಲುಗಳನ್ನು ಎದುರಿಸುವುದು ಭಾರತದ ಸ್ವಭಾವವಾಗಿದೆ. ನಾವು ಅಲುಗಾಡುವುದಿಲ್ಲ, ಆಯಾಸಗೊಳ್ಳುವುದಿಲ್ಲ, ನಿಲ್ಲುವುದಿಲ್ಲ ಅಥವಾ ತಲೆಬಾಗುವುದಿಲ್ಲ. ನಮ್ಮ ಬದ್ಧತೆಗಳನ್ನು ಪೂರೈಸಲು, 140 ಕೋಟಿ ನಾಗರಿಕರ ಹಣೆಬರಹವನ್ನು ಬದಲಾಯಿಸಲು, ಅವರ ಭವಿಷ್ಯವನ್ನು ಭದ್ರಪಡಿಸಲು ಮತ್ತು ರಾಷ್ಟ್ರದ ಕನಸುಗಳನ್ನು ಸಾಕಾರಗೊಳಿಸಲು ನಾವು ನನಗೆ ದೊರೆಯುವ ಯಾವ ಅವಕಾಶವನ್ನೂ ಕೈಚೆಲ್ಲುವುದಿಲ್ಲ. ನಮ್ಮ ಸದುದ್ದೇಶಗಳೊಂದಿಗೆ ನಾವು ಪ್ರತಿಯೊಂದು ದುಷ್ಟ ಉದ್ದೇಶವನ್ನು ಜಯಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಸಾಮಾಜಿಕ ರಚನೆಯಲ್ಲಿನ ಬದಲಾವಣೆಗಳು ಕೆಲವೊಮ್ಮೆ ಗಮನಾರ್ಹ ಸವಾಲುಗಳಿಗೆ ಕಾರಣವಾಗಬಹುದು. ಭ್ರಷ್ಟಾಚಾರದ ಗೆದ್ದಲುಗಳಿಂದ ಪ್ರತಿಯೊಬ್ಬ ನಾಗರಿಕನೂ ತೊಂದರೆಗೀಡಾಗಿದ್ದಾನೆ. ಎಲ್ಲಾ ಹಂತಗಳಲ್ಲಿನ ಭ್ರಷ್ಟಾಚಾರವು ವ್ಯವಸ್ಥೆಯ ಮೇಲಿನ ಸಾಮಾನ್ಯ ಜನರ ನಂಬಿಕೆಯನ್ನು ಛಿದ್ರಗೊಳಿಸಿದೆ. ವ್ಯಕ್ತಿಯೊಬ್ಬರ ಶಕ್ತಿ  ಮತ್ತು ಸಾಮರ್ಥ್ಯಕ್ಕೆ ಅನ್ಯಾಯವಾದರೆ, ಅದರಿಂದ ಉಂಟಾಗುವ ಕೋಪವು ರಾಷ್ಟ್ರದ ಪ್ರಗತಿಗೆ ಹಾನಿ ಮಾಡುತ್ತದೆ. ಅದಕ್ಕಾಗಿಯೇ ನಾನು ಭ್ರಷ್ಟಾಚಾರದ ವಿರುದ್ಧ ದಿಟ್ಟ ಯುದ್ಧವನ್ನು ಪ್ರಾರಂಭಿಸಿದ್ದೇನೆ. ಯುದ್ಧಕ್ಕಾಗಿ ನಾನು  ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ; ಇದಕ್ಕಾಗಿ ನನ್ನ ಖ್ಯಾತಿಯನ್ನು ಬೆಲೆಯಾಗಿ ತೆರಬೇಕಾಗುತ್ತದೆ. ಆದರೆ ಯಾವುದೇ ಖ್ಯಾತಿಯು ರಾಷ್ಟ್ರಕ್ಕಿಂತ ಮುಖ್ಯವಾಗಲು ಸಾಧ್ಯವಿಲ್ಲ, ಮತ್ತು ನನ್ನ ಯಾವುದೇ ಕನಸು ರಾಷ್ಟ್ರದ ಕನಸುಗಳಿಗಿಂತ ದೊಡ್ಡದಾಗಿರಲು ಸಾಧ್ಯವಿಲ್ಲ. ಆದ್ದರಿಂದ, ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟವು ಸಂಪೂರ್ಣ ಪ್ರಾಮಾಣಿಕತೆಯಿಂದ ಮತ್ತು ವೇಗವಾಗಿ ಮುಂದುವರಿಯುತ್ತದೆ. ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯಲಿದೆ. ಭ್ರಷ್ಟರಿಗೆ ಭಯದ ವಾತಾವರಣವನ್ನು ಸೃಷ್ಟಿಸಲು ನಾನು ಬಯಸುತ್ತೇನೆ, ಆದ್ದರಿಂದ ಸಾಮಾನ್ಯ ನಾಗರಿಕರನ್ನು ಲೂಟಿ ಮಾಡುವ ಸಂಪ್ರದಾಯವು ಕೊನೆಗೊಳ್ಳುತ್ತದೆ. ಆದರೆ, ಭ್ರಷ್ಟರೊಂದಿಗೆ ವ್ಯವಹರಿಸುವುದು ಮಾತ್ರ ಈಗ ಅತಿದೊಡ್ಡ ಹೊಸ ಸವಾಲಾಗಿ ಉಳಿದಿಲ್ಲ, ಸಮಾಜದಲ್ಲಿ ಉಂಟಾಗಿರುವ ದೊಡ್ಡ ಮಟ್ಟದ ಸಾಮಾಜಿಕ ಬದಲಾವಣೆಯೂ ಮಹತ್ವದ ಸವಾಲಾಗಿ ಮಾರ್ಪಟ್ಟಿದೆ ಮತ್ತು ಸಮಾಜದ ಪಾಲಿಗೆ ಅದು ಗಂಭೀರ ಕಳವಳವಾಗಿದೆ. ನಮ್ಮದು ಶ್ರೇಷ್ಠ ಸಂವಿಧಾನ. ಆದರೂ ನಮ್ಮದೇ ದೇಶದಲ್ಲಿ ಕೆಲವರು ಭ್ರಷ್ಟಾಚಾರವನ್ನು ವೈಭವೀಕರಿಸುತ್ತಿದ್ದಾರೆ ಎಂದು ಯಾರಾದರೂ ಊಹಿಸಬಲ್ಲಿರಾ? ಅವರು ಬಹಿರಂಗವಾಗಿ ಭ್ರಷ್ಟಾಚಾರವನ್ನು ಆಚರಿಸುತ್ತಿದ್ದಾರೆ. ಸಮಾಜದಲ್ಲಿ ಅಂತಹ ಬೀಜಗಳನ್ನು ಬಿತ್ತುವ ಪ್ರಯತ್ನ, ಭ್ರಷ್ಟಾಚಾರವನ್ನು ವೈಭವೀಕರಿಸುವ ಪ್ರಯತ್ನ ಮತ್ತು ಭ್ರಷ್ಟರ ಸ್ವೀಕಾರವನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳು ಆರೋಗ್ಯಕರ ಸಮಾಜಕ್ಕೆ ಮಹತ್ವದ ಸವಾಲಾಗಿ ಮಾರ್ಪಟ್ಟಿವೆ. ಇದು ಅತ್ಯಂತ ಕಳವಳದ ಕಾಳಜಿಯ ವಿಷಯವಾಗಿದೆ. ಸಮಾಜದಲ್ಲಿನ ಭ್ರಷ್ಟ ವ್ಯಕ್ತಿಗಳಿಂದ ನಮ್ಮನ್ನು ದೂರವಿಡುವ ಮೂಲಕ, ಭ್ರಷ್ಟರು ಮಾರ್ಗವನ್ನು ಅನುಸರಿಸಲು ಹೆದರುವ ವಾತಾವರಣವನ್ನು ನಾವು ಸೃಷ್ಟಿಸಬಹುದು. ಆದಾಗ್ಯೂ, ಭ್ರಷ್ಟಾಚಾರವನ್ನು ವೈಭವೀಕರಿಸಿದರೆ, ಪ್ರಸ್ತುತ ಪ್ರಾಮಾಣಿಕರಾಗಿರುವವರು ಸಹ ಅದನ್ನು ಪ್ರತಿಷ್ಠೆಯ ಸಂಕೇತವಾಗಿ ನೋಡಲು ಪ್ರಾರಂಭಿಸಬಹುದು, ಇದರಿಂದಾಗಿ ಅಂತಹ ನಡವಳಿಕೆಯನ್ನು ಸ್ವೀಕಾರಾರ್ಹ ಎಂದು ಅವರು ನಂಬುತ್ತಾರೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಬಾಂಗ್ಲಾದೇಶದಲ್ಲಿ ಇತ್ತೀಚಿನ ಘಟನೆಗಳ ಬಗ್ಗೆ ಕಳವಳಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ವಿಶೇಷವಾಗಿ ನೆರೆಯ ದೇಶವಾಗಿ ನಮ್ಮ ಸಾಮೀಪ್ಯವನ್ನು ಗಮನಿಸಿದರೆ. ಅಲ್ಲಿನ ಪರಿಸ್ಥಿತಿ ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ 140 ಕೋಟಿ ನಾಗರಿಕರ ಪ್ರಾಥಮಿಕ ಕಾಳಜಿಯೆಂದರೆ ಬಾಂಗ್ಲಾದೇಶದ ಹಿಂದೂಗಳು, ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು. ನಮ್ಮ ನೆರೆಯ ದೇಶಗಳು ಸಂತೃಪ್ತಿ ಮತ್ತು ಶಾಂತಿಯ ಮಾರ್ಗವನ್ನು ಅನುಸರಿಸಬೇಕೆಂದು ಭಾರತ ಸದಾ ಬಯಸುತ್ತದೆ. ಶಾಂತಿಗಾಗಿ ನಮ್ಮ ಬದ್ಧತೆಯು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಮುಂಬರುವ ದಿನಗಳಲ್ಲಿ, ನಮ್ಮ ಸಕಾರಾತ್ಮಕ ಆಲೋಚನೆಗಳು ಬಾಂಗ್ಲಾದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ಮುಂದುವರಿಯುತ್ತವೆ, ಏಕೆಂದರೆ ನಾವು ಮಾನವೀಯತೆಯ ಕಲ್ಯಾಣಕ್ಕೆ ಸಮರ್ಪಿತರಾದ ಜನರು.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ನಮ್ಮ ಸಂವಿಧಾನದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ನಮ್ಮ ರಾಷ್ಟ್ರವನ್ನು ಒಗ್ಗೂಡಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುವುದು ಮುಖ್ಯವಾಗಿದೆ. 75 ವರ್ಷಗಳಲ್ಲಿ, ಸಂವಿಧಾನವು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮತ್ತು ನಮ್ಮ ದಲಿತರು, ತುಳಿತಕ್ಕೊಳಗಾದವರು, ಶೋಷಿತರು ಮತ್ತು ಸಮಾಜದ ವಂಚಿತ ವರ್ಗಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾವು ಭಾರತೀಯ ಸಂವಿಧಾನದ 75 ವರ್ಷಗಳನ್ನು ಆಚರಿಸುತ್ತಿರುವಾಗ, ನಾಗರಿಕರು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಕರ್ತವ್ಯಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಮತ್ತು ನಾನು ಕರ್ತವ್ಯದ ಬಗ್ಗೆ ಮಾತನಾಡುವಾಗ, ನಾನು ನಾಗರಿಕರ ಮೇಲೆ ಹೊರೆ ಹಾಕಲು ಬಯಸುವುದಿಲ್ಲ. ಜವಾಬ್ದಾರಿಯು ನಾಗರಿಕರನ್ನು ಮೀರಿ ಕೇಂದ್ರ ಸರ್ಕಾರ, ಅದರ ನೌಕರರು, ರಾಜ್ಯ ಸರ್ಕಾರಗಳು, ರಾಜ್ಯ ಸರ್ಕಾರಿ ನೌಕರರು ಮತ್ತು ಪಂಚಾಯತ್, ಪುರಸಭೆಗಳು, ಮುನ್ಸಿಪಲ್ ಕಾರ್ಪೊರೇಷನ್ಗಳು, ತಾಲೂಕು ಅಥವಾ ಜಿಲ್ಲೆ ಹೀಗೆ  ಪ್ರತಿಯೊಂದು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗೆ ವಿಸ್ತರಿಸುತ್ತದೆ. ಆದಾಗ್ಯೂ, ಎಲ್ಲಾ 140 ಕೋಟಿ ನಾಗರಿಕರು ತಮ್ಮ ಕರ್ತವ್ಯಗಳನ್ನು ಗುರುತಿಸುವುದು ಸಹ ಅತ್ಯಗತ್ಯ. ನಾವೆಲ್ಲರೂ ಒಟ್ಟಾಗಿ ನಮ್ಮ ಜವಾಬ್ದಾರಿಗಳನ್ನು ಪೂರೈಸಿದಾಗ, ನಾವು ಸ್ವಾಭಾವಿಕವಾಗಿ ಪರಸ್ಪರರ ಹಕ್ಕುಗಳ ರಕ್ಷಕರಾಗುತ್ತೇವೆ. ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ, ಯಾವುದೇ ಹೆಚ್ಚುವರಿ ಪ್ರಯತ್ನದ ಅಗತ್ಯವಿಲ್ಲದೆ ನಾವು ಅಂತರ್ಗತವಾಗಿ ಹಕ್ಕುಗಳನ್ನು ರಕ್ಷಿಸುತ್ತೇವೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವುದಲ್ಲದೆ, ನಮ್ಮ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸುವ, ಹೊಸ ಶಕ್ತಿಯೊಂದಿಗೆ ನಮ್ಮನ್ನು ಮುನ್ನಡೆಸುವ ಮನಸ್ಥಿತಿಯನ್ನು ನಾವು ಅಳವಡಿಸಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ದೇಶದಲ್ಲಿ, ಸರ್ವೋಚ್ಚ ನ್ಯಾಯಾಲಯವು ಏಕರೂಪ ನಾಗರಿಕ ಸಂಹಿತೆಯ ಸಮಸ್ಯೆಯನ್ನು ಪದೇ ಪದೇ ಎತ್ತಿದೆ. ಪ್ರಸ್ತುತ ನಾಗರಿಕ ಸಂಹಿತೆಯು ಕೋಮುವಾದಿ ನಾಗರಿಕ ಸಂಹಿತೆಯನ್ನು ಹೋಲುತ್ತದೆ, ಅದು ತಾರತಮ್ಯದಿಂದ ಕೂಡಿದೆ ಎಂಬ ಹಲವಾರು ಆದೇಶಗಳನ್ನು ನೀಡಿದೆ. ನಮ್ಮ ಬಹುತೇಕ ಜನಸಂಖ್ಯೆಯ ನಂಬಿಕೆಯನ್ನೂ ಸುಪ್ರೀಂ ಕೋರ್ಟ್ ಆದೇಶಗಳು ಪ್ರತಿಬಿಂಬಿಸುತ್ತವೆ. ನಾವು ಸಂವಿಧಾನದ 75 ವರ್ಷಗಳನ್ನು ಆಚರಿಸುತ್ತಿರುವಾಗ, ಸುಪ್ರೀಂ ಕೋರ್ಟ್ ಬದಲಾವಣೆಯನ್ನು ಪ್ರತಿಪಾದಿಸುತ್ತಿರುವುದರಿಂದ ನಾವು ವಿಷಯದ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಬೇಕು. ಮತ್ತು ನಮ್ಮ ಸಂವಿಧಾನದ ರಚನಾಕಾರರ ದೃಷ್ಟಿಕೋನವನ್ನು ಸಾಕಾರಗೊಳಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಾವು ವೈವಿಧ್ಯಮಯ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳನ್ನು ಸ್ವಾಗತಿಸಬೇಕು. ಧರ್ಮದ ಆಧಾರದ ಮೇಲೆ ನಮ್ಮ ರಾಷ್ಟ್ರವನ್ನು ವಿಭಜಿಸುವ ಮತ್ತು ತಾರತಮ್ಯವನ್ನು ಬೆಳೆಸುವ ಕಾನೂನುಗಳಿಗೆ ಆಧುನಿಕ ಸಮಾಜದಲ್ಲಿ ಸ್ಥಾನವಿಲ್ಲ. ಆದ್ದರಿಂದ, ದೇಶವು ಜಾತ್ಯತೀತ ನಾಗರಿಕ ಸಂಹಿತೆಯನ್ನು ಒತ್ತಾಯಿಸುವ ಸಮಯ ಇದು ಎಂದು ನಾನು ಪ್ರತಿಪಾದಿಸುತ್ತೇನೆ. ಕೋಮು ನಾಗರಿಕ ಸಂಹಿತೆಯ 75 ವರ್ಷಗಳ ನಂತರ, ಜಾತ್ಯತೀತ ನಾಗರಿಕ ಸಂಹಿತೆಯತ್ತ ಸಾಗುವುದು ನಿರ್ಣಾಯಕ ಹೆಜ್ಜೆಯಾಗಿದೆ. ಒಮ್ಮೆ ಬದಲಾವಣೆ ಸಂಭವಿಸಿದರೆ, ಇದು ಧಾರ್ಮಿಕ ತಾರತಮ್ಯವನ್ನು ತೊಡೆದುಹಾಕುತ್ತದೆ ಮತ್ತು ಸಾಮಾನ್ಯ ನಾಗರಿಕರು ಅನುಭವಿಸುವ ಅಂತರವನ್ನು ಕಡಿಮೆ ಮಾಡುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ದೇಶದಲ್ಲಿನ ವಂಶಪಾರಂಪರ್ಯ ರಾಜಕೀಯ ಮತ್ತು ಜಾತಿವಾದದ ಬಗ್ಗೆ ನಾನು ಯಾವಾಗ ಮಾತನಾಡಿದರೂ ಅವುಗಳು ಭಾರತದ ಪ್ರಜಾಪ್ರಭುತ್ವಕ್ಕೆ ಗಮನಾರ್ಹ ಹಾನಿಯನ್ನುಂಟು ಮಾಡುತ್ತಿವೆ ಎಂದು ನಾನು ನಂಬುತ್ತೇನೆ. ನಾವು ದೇಶ ಮತ್ತು ರಾಜಕೀಯವನ್ನು ವಂಶಪಾರಂಪರ್ಯ ರಾಜಕೀಯ ಮತ್ತು ಜಾತಿವಾದದಿಂದ ಮುಕ್ತಗೊಳಿಸಬೇಕಾಗಿದೆ. ಇಂದು, ನನ್ನ ಮುಂದೆ ಇರುವ ಯುವಕರು "ಮೈ ಭಾರತ್" ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವುದನ್ನು ನಾನು ನೋಡುತ್ತೇನೆ. ಅದನ್ನು ತುಂಬಾ ಚೆನ್ನಾಗಿ ಬರೆಯಲಾಗಿದೆ. "ಮೈ ಭಾರತ್" ಹಲವಾರು ಕಾರ್ಯಾಚರಣೆಗಳನ್ನು ಹೊಂದಿದೆ. ಸಾಧ್ಯವಾದಷ್ಟು ಬೇಗ ಒಂದು ಲಕ್ಷ ಯುವಕರನ್ನು ಪ್ರತಿನಿಧಿಗಳಾಗಿ ರಾಜಕೀಯ ಜೀವನಕ್ಕೆ ತರುವುದು ಇದರ ಧ್ಯೇಯಗಳಲ್ಲಿ ಒಂದಾಗಿದೆ. ಆರಂಭದಲ್ಲಿ, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ನಾವು ಮುಂದೆ ತರಲು ಬಯಸುತ್ತೇವೆ - ಅವರ ಪೋಷಕರು, ಒಡಹುಟ್ಟಿದವರು, ಚಿಕ್ಕಪ್ಪ, ಚಿಕ್ಕಮ್ಮಂದಿರು ಹೀಗೆ ಯಾವುದೇ ಪೀಳಿಗೆಯವರು ರಾಜಕೀಯದಲ್ಲಿ ಭಾಗಿಯಾಗಿಲ್ಲದಂಥವರು. ಪಂಚಾಯತ್, ಮುನ್ಸಿಪಲ್ ಕಾರ್ಪೊರೇಷನ್, ಜಿಲ್ಲಾ ಮಂಡಳಿಗಳು, ರಾಜ್ಯ ವಿಧಾನಸಭೆಗಳು ಅಥವಾ ಲೋಕಸಭೆಗೆ ಎಲ್ಲಿಗೇ ಆದರೂ , ನಮಗೆ ಹೊಸ ರಕ್ತ ಬೇಕು, ಅಂತಹ ಒಂದು ಲಕ್ಷ ಪ್ರತಿಭಾವಂತ ಯುವಕರು ಬೇಕು. ತಮ್ಮ ಕುಟುಂಬಗಳಲ್ಲಿ ಹಿಂದಿನ ರಾಜಕೀಯ ಇತಿಹಾಸವಿಲ್ಲದ ಹೊಸ ಯುವಕರು ರಾಜಕೀಯಕ್ಕೆ ಪ್ರವೇಶಿಸಬೇಕೆಂದು ನಾವು ಬಯಸುತ್ತೇವೆ, ಇದರಿಂದ ನಾವು ಜಾತಿವಾದ ಮತ್ತು ವಂಶಪಾರಂಪರ್ಯ ರಾಜಕೀಯದಿಂದ ಮುಕ್ತರಾಗಬಹುದು ಮತ್ತು ಮೂಲಕ ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸಬಹುದು. ಅವರು ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರುವ ಅಗತ್ಯವಿಲ್ಲ; ಅವರು ಬಯಸುವ ಯಾವುದೇ ಪಕ್ಷಕ್ಕೆ ಸೇರಿ ಜನಪ್ರತಿನಿಧಿಗಳಾಗಬೇಕು. ರಾಜಕೀಯದಿಂದ ದೂರವಿರುವ ಇಂತಹ ಒಂದು ಲಕ್ಷ ಯುವಕರು ಮುಂದಿನ ದಿನಗಳಲ್ಲಿ ವ್ಯವಸ್ಥೆಗೆ ಪ್ರವೇಶಿಸಿದರೆ, ಅದು ಹೊಸ ಚಿಂತನೆ ಮತ್ತು ಹೊಸ ಸಾಮರ್ಥ್ಯಗಳಿಗೆ ಕಾರಣವಾಗುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸುತ್ತದೆ ಎಂದು ದೇಶ ನಿರ್ಧರಿಸಬೇಕು. ಆದ್ದರಿಂದ, ನಾವು ದಿಕ್ಕಿನಲ್ಲಿ ಸಾಗಬೇಕಾಗಿದೆ. ಆಗಾಗ್ಗೆ ಚುನಾವಣೆಗಳು ದೇಶದ ಪ್ರಗತಿಗೆ ಅಡ್ಡಿಯಾಗುತ್ತಿವೆ, ಅಡೆತಡೆಗಳನ್ನು ಸೃಷ್ಟಿಸುತ್ತಿವೆ ಎಂದು ನಾನು ಹೇಳಲು ಬಯಸುತ್ತೇನೆ. ಇಂದು, ಯಾವುದೇ ಯೋಜನೆಯನ್ನು ಚುನಾವಣೆಗಳೊಂದಿಗೆ ನಂಟು  ಮಾಡುವುದು ಬಹಳ ಸುಲಭವಾಗಿದೆ, ಏಕೆಂದರೆ ದೇಶದಲ್ಲಿ ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಚುನಾವಣೆಗಳು ನಡೆಯುತ್ತಿವೆ. ನೀವು ಯಾವುದೇ ಯೋಜನೆಯನ್ನು ಘೋಷಿಸಿದಾಗಲೆಲ್ಲಾ, ಅದು ಚುನಾವಣೆಗೆ ಸಂಬಂಧಿಸಿದೆ ಎಂದು ನೀವು ಮಾಧ್ಯಮಗಳಲ್ಲಿ ನೋಡುತ್ತೀರಿ. ಪ್ರತಿಯೊಂದು ಯೋಜನೆಗೂ ಚುನಾವಣೆಯ ಬಣ್ಣ ಬಳಿಯಲಾಗುತ್ತದೆ. ಆದ್ದರಿಂದ, ದೇಶದಲ್ಲಿ ಒಂದು ಬದಲಾವಣೆಯ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ಒಂದು ಸಮಿತಿಯು ಉತ್ತಮ ವರದಿಯನ್ನು ಸಿದ್ಧಪಡಿಸಿದೆ. ಅದೇ "ಒಂದು ರಾಷ್ಟ್ರ, ಒಂದು ಚುನಾವಣೆ".  ಪದ್ಧತಿಯನ್ನು ಅಳವಡಿಸಿಕೊಳ್ಳಲು ದೇಶವು ಮುಂದೆ ಬರಬೇಕಾಗಿದೆ. ಭಾರತದ ಪ್ರಗತಿಗಾಗಿ ಮತ್ತು ಸಾಮಾನ್ಯ ಜನರಿಗೋಸ್ಕರ ದೇಶದ ಸಂಪನ್ಮೂಲಗಳ ಗರಿಷ್ಠ ಬಳಕೆಗಾಗಿ "ಒಂದು ರಾಷ್ಟ್ರ, ಒಂದು ಚುನಾವಣೆ" ಕನಸನ್ನು ನನಸಾಗಿಸಲು ರಾಜಕೀಯ ಪಕ್ಷಗಳು ಮತ್ತು ದೇಶದ ಸಂವಿಧಾನವನ್ನು ಅರ್ಥಮಾಡಿಕೊಳ್ಳುವವರು ಮುಂದೆ ಬರಬೇಕೆಂದು ನಾನು ತ್ರಿವರ್ಣ ಧ್ವಜವನ್ನು ಸಾಕ್ಷಿಯಾಗಿ ಹೊಂದಿರುವ ಕೆಂಪು ಕೋಟೆಯ ಕೊತ್ತಲಗಳಿಂದ ಮೂಲಕ ಒತ್ತಾಯಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇದು ಭಾರತದ ಸುವರ್ಣ ಯುಗ. ʻವಿಕಸಿತ ಭಾರತ-2047ʼ ನಮಗಾಗಿ ಕಾಯುತ್ತಿದೆ. ದೇಶವು ಅಡ್ಡಿ-ಆತಂಕಗಳು, ಅಡಚಣೆಗಳು ಮತ್ತು ಸವಾಲುಗಳನ್ನು ನಿವಾರಿಸುವ ಮೂಲಕ ದೃಢ ಸಂಕಲ್ಪದೊಂದಿಗೆ ಮುಂದುವರಿಯಲು ಬದ್ಧವಾಗಿದೆ. ಸ್ನೇಹಿತರೇ, ನನ್ನ ಆಲೋಚನೆಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂಬುದು ಸುಸ್ಪಷ್ಟ. ನನ್ನ ಕನಸುಗಳ ಮುಂದೆ ಯಾವುದೇ ಪರದೆ ಇಲ್ಲ. ನಮ್ಮ ಪೂರ್ವಜರ ರಕ್ತವು 140 ಕೋಟಿ ಜನರ ರಕ್ತನಾಳಗಳಲ್ಲಿರುವುದನ್ನು ನಾನು ಸ್ಪಷ್ಟವಾಗಿ ನೋಡಬಲ್ಲೆ. 40 ಕೋಟಿ ಜನರು ಸ್ವಾತಂತ್ರ್ಯದ ಕನಸುಗಳನ್ನು ನನಸು ಮಾಡಲು ಸಾಧ್ಯವಾದರೆ, 140 ಕೋಟಿ ನಾಗರಿಕರು ಸಮೃದ್ಧ ಭಾರತದ ಕನಸನ್ನು ನನಸಾಗಿಸಬಹುದು. 140 ಕೋಟಿ ನಾಗರಿಕರು ʻವಿಕಸಿತ ಭಾರತʼ ಕನಸನ್ನು ನನಸು ಮಾಡಬಹುದು. ನಾನು ಮೊದಲೇ ಹೇಳಿದಂತೆ, ನನ್ನ ಮೂರನೇ ಅವಧಿಯಲ್ಲಿ ದೇಶವು ವಿಶ್ವದ್ಲಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ನಾನು ಮೂರು ಪಟ್ಟು ಕಠಿಣವಾಗಿ, ಮೂರು ಪಟ್ಟು ವೇಗದಲ್ಲಿ ಮತ್ತು ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತೇನೆ, ಇದರಿಂದ ರಾಷ್ಟ್ರದ ಬಗ್ಗೆ ನಾವು ಹೊಂದಿರುವ ಕನಸುಗಳು ಬೇಗನೆ ನನಸಾಗುತ್ತವೆ. ನನ್ನ ಪ್ರತಿಯೊಂದು ಕ್ಷಣವೂ ರಾಷ್ಟ್ರಕ್ಕಾಗಿ; ಪ್ರತಿ ಸೆಕೆಂಡನ್ನು ದೇಶಕ್ಕೆ ಸಮರ್ಪಿಸಿದ್ದೇನೆ; ನನ್ನ ಅಸ್ತಿತ್ವದ ಪ್ರತಿಯೊಂದು ಅಂಶವೂ ತಾಯಿ ಭಾರತಿಗಾಗಿ ಮಾತ್ರ. ಆದ್ದರಿಂದ, 24×7 ಕೆಲಸ ಮಾಡುವ ಬದ್ಧತೆಯೊಂದಿಗೆ ಮತ್ತು 2047 ವೇಳೆಗೆ ʻವಿಕಸಿತ ಭಾರತʼ ದೃಷ್ಟಿಕೋನದೊಂದಿಗೆ, ನಾನು ನನ್ನ ಸಹ ನಾಗರಿಕರಿಗೆ ಕರೆ ನೀಡುತ್ತೇನೆ: ನಮ್ಮ ಪೂರ್ವಜರ ಕನಸುಗಳನ್ನು ಸಂಕಲ್ಪವನ್ನಾಗಿ ಮಾಡೋಣ, ನಮ್ಮ ಕನಸುಗಳನ್ನು ಅವುಗಳೊಂದಿಗೆ ಜೋಡಿಸೋಣ ಮತ್ತು ಅವುಗಳಿಗೆ ನಮ್ಮ ಪ್ರಯತ್ನಗಳನ್ನು ಸೇರಿಸೋಣ. ಭಾರತದ ಶತಮಾನವಾಗಲಿರುವ 21ನೇ ಶತಮಾನವು 'ಸ್ವರ್ಣಿಮ್ ಭಾರತ್' (ಸುವರ್ಣ ಭಾರತ) ಆಗುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಕಾಂಕ್ಷೆಗಳು ಮತ್ತು ನಮ್ಮ ಪ್ರಯತ್ನಗಳನ್ನು ಜೋಡಿಸೋಣ ಮತ್ತು ಶತಮಾನದಲ್ಲಿ 'ವಿಕಸಿತ ಭಾರತ'ವನ್ನು ನಿರ್ಮಿಸೋಣ ಮತ್ತು ಕನಸುಗಳನ್ನು ಈಡೇರಿಸುವತ್ತ ಮುನ್ನಡೆಯೋಣ. ಸ್ವತಂತ್ರ ಭಾರತವು ತನ್ನ 75 ವರ್ಷಗಳ ಪ್ರಯಾಣದ ನಂತರ ಹೊಸ ಮೈಲುಗಲ್ಲುಗಳನ್ನು ತಲುಪುತ್ತಿರುವ ಸಮಯದಲ್ಲಿ, ನಾವು ಯಾವುದೇ ಪ್ರಯತ್ನವನ್ನು ಬಿಡಬಾರದು. ಮತ್ತು ನೀವು ನನಗೆ ವಹಿಸಿರುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ನಾನು ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಎಂದಿಗೂ ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದಿಲ್ಲ. ನಾನು ಎಂದಿಗೂ ಧೈರ್ಯ ಕುಂದುವುದಿಲ್ಲ; ಸವಾಲುಗಳನ್ನು ಎದುರಿಸಲು ನಾನು ಎಂದಿಗೂ ಹೆದರುವುದಿಲ್ಲ. ಏಕೆ ಹೇಳಿ? ಏಕೆಂದರೆ ನಾನು ನಿಮಗಾಗಿ ಬದುಕುತ್ತೇನೆ, ನಿಮ್ಮ ಭವಿಷ್ಯಕ್ಕಾಗಿ ಬದುಕುತ್ತೇನೆ, ನಾನು ಭಾರತ ಮಾತೆಯ ಉಜ್ವಲ ಭವಿಷ್ಯಕ್ಕಾಗಿ ಬದುಕುತ್ತೇನೆ. ಕನಸುಗಳನ್ನು ನನಸಾಗಿಸಲು ರಾಷ್ಟ್ರಧ್ವಜದ ನೆರಳಿನಲ್ಲಿ, ತ್ರಿವರ್ಣ ಧ್ವಜದ ನೆರಳಿನಲ್ಲಿ ದೃಢ ಸಂಕಲ್ಪದೊಂದಿಗೆ ಮುನ್ನಡೆಯೋಣ. ನನ್ನೊಂದಿಗೆ ಹೇಳಿರಿ:

ಭಾರತ್ಮಾತಾ ಕಿ ಜೈ!

ಭಾರತ್ಮಾತಾ ಕಿ ಜೈ!

ಭಾರತ್ಮಾತಾ ಕಿ ಜೈ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ಜೈ ಹಿಂದ್!

ಜೈ ಹಿಂದ್!

ಜೈ ಹಿಂದ್!

 

*****

 



(Release ID: 2046305) Visitor Counter : 10