ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಭಾರತ ಸರ್ಕಾರವು ಚಂದ್ರಯಾನ-3 ಮಿಷನ್ ನ ಗಮನಾರ್ಹ ಯಶಸ್ಸನ್ನು ಆಚರಿಸಲು ಆಗಸ್ಟ್ 23 ಅನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ" ಎಂದು ಘೋಷಿಸಿದೆ


ಕೇಂದ್ರ ಮೀನುಗಾರಿಕೆ ಇಲಾಖೆಯು ನಾಳೆ ಹೊಸದಿಲ್ಲಿಯ ಕೃಷಿ ಭವನದಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ”ಯನ್ನು ಆಯೋಜಿಸಿದೆ

Posted On: 12 AUG 2024 1:52PM by PIB Bengaluru

ವಿಕ್ರಮ್ ಲ್ಯಾಂಡರ್ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಧಿಸಿದ ಮತ್ತು ಚಂದ್ರ ಗ್ರಹದ ಮೇಲ್ಮೈಯಲ್ಲಿ ದಕ್ಷಿಣ ಧ್ರುವದ ಬಳಿ ಪ್ರಗ್ಯಾನ್ ರೋವರ್ ಅನ್ನು ನಿಯೋಜಿಸಿದ ಚಂದ್ರಯಾನ-3 ಮಿಷನ್ ನ ಗಮನಾರ್ಹ ಯಶಸ್ಸನ್ನು ವಿಶೇಷವಾಗಿ ಆಚರಿಸಲು ಭಾರತ ಸರ್ಕಾರವು ಆಗಸ್ಟ್ 2023 ಅನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ" ಎಂದು ಘೋಷಿಸಿದೆ. ಈ ಐತಿಹಾಸಿಕ ಸಾಧನೆಯು ಭಾರತವನ್ನು ಬಾಹ್ಯಾಕಾಶ ಪ್ರಯಾಣದ ರಾಷ್ಟ್ರಗಳ ಗಣ್ಯ ಗುಂಪಿನಲ್ಲಿ ಸೇರಿಸುತ್ತದೆ, ಭಾರತವು ಚಂದ್ರಗ್ರಹದ ಮೇಲೆ ಇಳಿದ ನಾಲ್ಕನೇ ದೇಶ ಮತ್ತು ಚಂದ್ರಗ್ರಹದ ದಕ್ಷಿಣ ಧ್ರುವದ ಬಳಿ ರೋವರ್ ಅನ್ನು ನಿಯೋಜನೆ ಮಾಡಿದ ಮೊದಲ ದೇಶವಾಗಿದೆ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳುವ ಮತ್ತು ಪ್ರೇರೇಪಿಸುವ ಗುರಿಯೊಂದಿಗೆ ಈ ಸಾಧನೆಯನ್ನು ಜುಲೈ ಮತ್ತು ಆಗಸ್ಟ್ 2024 ರಲ್ಲಿ ದೇಶದಾದ್ಯಂತ ಆಚರಿಸಲಾಗುತ್ತಿದೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅವರು “ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆ” ಕುರಿತು ಆಯೋಜಿಸುವ ವಿಶೇಷ ಕಾರ್ಯಕ್ರಮವನ್ನು ಹೊಸದಿಲ್ಲಿಯ ಕೃಷಿ ಭವನದಲ್ಲಿ ಮೀನುಗಾರಿಕೆ ಇಲಾಖೆಯು ನಾಳೆ(13-07-2024) ಬೆಳಿಗ್ಗೆ 10 ಗಂಟೆಗೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರುಗಳಾದ ಪ್ರೊ. ಎಸ್.ಪಿ.ಸಿಂಗ್ ಬಘೇಲ್ ಮತ್ತು ಶ್ರೀ ಜಾರ್ಜ್ ಕುರಿಯನ್ , ಕೇಂದ್ರ ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಡಾ.ಅಭಿಲಾಷ್ ಲಿಖಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ.

ಚಂದ್ರಯಾನ-3 ಮಿಷನ್ ನ ಗಮನಾರ್ಹ ಯಶಸ್ಸಿನ ಸ್ಮರಣಾರ್ಥವಾಗಿ ಕೇಂದ್ರ ಮೀನುಗಾರಿಕೆ ಇಲಾಖೆಯು ಡಾ. ಅಭಿಲಾಷ್ ಲಿಖಿ ಅವರ ಮಾರ್ಗದರ್ಶನದಲ್ಲಿ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ “ಮೀನುಗಾರಿಕೆ ವಲಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳ ಅಳವಡಿಕೆ” ಕುರಿತು ಸೆಮಿನಾರ್ಗಳು ಮತ್ತು ಪ್ರಾತ್ಯಕ್ಷಿಕೆಗಳ ಸರಣಿಯನ್ನು ಆಯೋಜಿಸುತ್ತಿದೆ. ಮೀನುಗಾರಿಕೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ - ಒಂದು ಅವಲೋಕನ, ಸಾಗರ ಡೊಮೇನ್ಗಾಗಿ ಸಂವಹನ ಮತ್ತು ನ್ಯಾವಿಗೇಷನ್ ಸಿಸ್ಟಮ್, ಬಾಹ್ಯಾಕಾಶ-ಆಧಾರಿತ ವೀಕ್ಷಣೆ ಮತ್ತು ಮೀನುಗಾರಿಕೆ ವಲಯವನ್ನು ಸುಧಾರಿಸುವಲ್ಲಿ ಅದರ ಪ್ರಭಾವದಂತಹ ವಿಷಯಗಳನ್ನು ಒಳಗೊಂಡ ಸೆಮಿನಾರ್ಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು 18 ಸ್ಥಳಗಳಲ್ಲಿ ಆಯೋಜಿಸಲಿದೆ, 

ಬಾಹ್ಯಾಕಾಶ ಇಲಾಖೆ, ಇನ್ಕೋಯಿಸ್, ನ್ಯೂ ಸ್ಫೇಸ್ ಇಂಡಿಯ ಲಿಮಿಟೆಡ್ ಮತ್ತು ಮೀನುಗಾರರು, ಸಾಗರ್ ಮಿತ್ರರು, ಎಫ್.ಎಫ್.ಪಿ.ಒ.ಗಳು, ಮೀನುಗಾರಿಕೆ ಸಹಕಾರಿ ಸಂಘಗಳು, ಐ.ಸಿ.ಎ.ಆರ್., ಮೀನುಗಾರಿಕೆ ಸಂಶೋಧನಾ ಸಂಸ್ಥೆಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮೀನುಗಾರಿಕೆ ಇಲಾಖೆಗಳು, ಮೀನುಗಾರಿಕಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಇತರ ಪಾಲುದಾರರು ಹೈಬ್ರಿಡ್ ಮೋಡ್ ನಲ್ಲಿ ಸೆಮಿನಾರ್ಗಳು ಮತ್ತು ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸಲಿದ್ದಾರೆ.

ಭಾರತೀಯ ಮೀನುಗಾರಿಕೆ ಕ್ಷೇತ್ರವು ರಾಷ್ಟ್ರದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜೀವನಾಂಶ, ಉದ್ಯೋಗ ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತವು ತನ್ನ 8,118 ಕಿಮೀ ವಿಸ್ತಾರವಾದ ಕರಾವಳಿ, 2.02 ಮಿಲಿಯನ್ ಚದರ ಕಿಮೀ ವ್ಯಾಪ್ತಿಯ ವಿಶಾಲವಾದ ವಿಶೇಷ ಆರ್ಥಿಕ ವಲಯ (ಇ.ಇ.ಝೆಡ್) ಮತ್ತು ಹೇರಳವಾದ ಒಳನಾಡಿನ ಜಲ ಸಂಪನ್ಮೂಲಗಳೊಂದಿಗೆ, ಶ್ರೀಮಂತ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮೀನುಗಾರಿಕೆ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಲಿದೆ.

ಬಾಹ್ಯಾಕಾಶ ತಂತ್ರಜ್ಞಾನಗಳು ಭಾರತೀಯ ಸಮುದ್ರ ಮೀನುಗಾರಿಕೆ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಗಣನೀಯವಾಗಿ ಹೆಚ್ಚಿಸಬಹುದು. ಸ್ಯಾಟಲೈಟ್ ರಿಮೋಟ್ ಸೆನ್ಸಿಂಗ್, ಅರ್ಥ್ ಅಬ್ಸರ್ವೇಶನ್ಸ್, ಸ್ಯಾಟಲೈಟ್ ಆಧಾರಿತ ನ್ಯಾವಿಗೇಷನ್ ಸಿಸ್ಟಮ್ ಮತ್ತು ಜಿಐಎಸ್, ಸ್ಯಾಟಲೈಟ್ ಕಮ್ಯುನಿಕೇಶನ್, ಡೇಟಾ ಅನಾಲಿಟಿಕ್ಸ್ ಮತ್ತು ಎಐ ಇತ್ಯಾದಿಗಳಂತಹ ಕೆಲವು ತಂತ್ರಜ್ಞಾನಗಳು ಈ ವಲಯದಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತಂದವು. ಸ್ಯಾಟಲೈಟ್ ರಿಮೋಟ್ ಸೆನ್ಸಿಂಗ್ ಸಾಗರದ ಬಣ್ಣ, ಕ್ಲೋರೊಫಿಲ್ ಅಂಶ ಮತ್ತು ಸಮುದ್ರದ ಮೇಲ್ಮೈ ತಾಪಮಾನವನ್ನು ಮೇಲ್ವಿಚಾರಣೆ ಮಾಡಲು ಓಷನ್-ಸ್ಯಾಟ್ ಮತ್ತು ಇನ್ಸಾಟ್ ನಂತಹ ಉಪಗ್ರಹಗಳನ್ನು ಬಳಸುತ್ತದೆ ಮತ್ತು ಸಂಭಾವ್ಯ ಮೀನುಗಾರಿಕಾ ಮೈದಾನಗಳನ್ನು ಗುರುತಿಸಲು ಮತ್ತು ಸಮುದ್ರದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಫೈಟೊಪ್ಲಾಂಕ್ಟನ್ ಹೂವುಗಳು, ಸೆಡಿಮೆಂಟ್ ಮತ್ತು ಮಾಲಿನ್ಯಕಾರಕಗಳನ್ನು ಪತ್ತೆ ಮಾಡುತ್ತದೆ. ಭೂ ಅವಲೋಕನಗಳು ಸಮುದ್ರದ ಪ್ರವಾಹಗಳು, ಅಲೆಗಳು ಮತ್ತು ವಿಪರೀತ ಹವಾಮಾನ ಅಪಾಯಗಳನ್ನು ಮೇಲ್ವಿಚಾರಣೆ ಮಾಡಲು, ಮೀನುಗಾರಿಕೆ ಕಾರ್ಯಾಚರಣೆಗಳನ್ನು ಉತ್ತಮಗೊಳಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇನ್ಸಾಟ್ , ಓಷನ್ ಸ್ಆಟ್, ಸಾರ್ ಮುಂತಾದ ಉಪಗ್ರಹಗಳನ್ನು ನಿಯಂತ್ರಿಸುತ್ತವೆ. ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಮ್ ಮತ್ತು ಜಿಐಎಸ್ ಭಾರತೀಯ ಸಮೂಹದೊಂದಿಗೆ ನ್ಯಾವಿಗೇಷನ್ (ನಾವ್  ಐಸಿ), ಮೀನುಗಾರಿಕೆ ಹಡಗುಗಳಿಗೆ ಜಿ.ಎನ್.ಎಸ್.ಎಸ್. ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಸಮುದ್ರದ ಆವಾಸಸ್ಥಾನಗಳು, ಮೀನುಗಾರಿಕೆ ಮೈದಾನಗಳು ಮತ್ತು ಸಂರಕ್ಷಿತ ಪ್ರದೇಶಗಳನ್ನು ಗುರುತಿಸಲು ಜಿಸ್ ಮ್ಯಾಪಿಂಗ್ ಅನ್ನು ಬಳಸುತ್ತದೆ. ಉಪಗ್ರಹಗಳೊಂದಿಗೆ ಸಮುದ್ರದಲ್ಲಿ ಉತ್ತಮ ಸಂವಹನ ಸಾಧ್ಯ. ಉಪಗ್ರಹ ಆಧಾರಿತ ಸಂವಹನ ಜಾಲಗಳು ಸಮುದ್ರದ ಡೊಮೇನ್ ಜಾಗೃತಿ, ಸುರಕ್ಷತೆ ಮತ್ತು ಮೀನುಗಾರರ ಜೀವನೋಪಾಯವನ್ನು ಸುಧಾರಿಸಲು ಹಡಗುಗಳು, ತೀರ-ಆಧಾರಿತ ನಿಲ್ದಾಣಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ನೈಜ-ಸಮಯದ ಡೇಟಾ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ. ಡೇಟಾ ಅನಾಲಿಟಿಕ್ಸ್ ಮತ್ತು ಎಐ ಮೀನು ವಿತರಣೆಗಳನ್ನು ಊಹಿಸಬಹುದು, ವೈಪರೀತ್ಯಗಳನ್ನು ಪತ್ತೆಹಚ್ಚಬಹುದು ಮತ್ತು ವಿವಿಧ ಮೂಲಗಳಿಂದ ಡೇಟಾವನ್ನು ಬಳಸಿಕೊಂಡು ಮೀನುಗಾರಿಕೆ ನಿರ್ವಹಣೆಯನ್ನು ಉತ್ತಮಗೊಳಿಸಬಹುದು. ಈ ಸುಧಾರಿತ ವ್ಯವಸ್ಥೆಗಳು ಉಪಗ್ರಹ ಮೇಲ್ವಿಚಾರಣೆಯ ಮೂಲಕ ಸಮುದ್ರದಲ್ಲಿ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತವೆ, ಇದು ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚುತ್ತದೆ, ಆಕ್ವಾ ಮ್ಯಾಪಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ವಿಪತ್ತು ಎಚ್ಚರಿಕೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇಮೇಜ್ ಸೆನ್ಸಿಂಗ್ ಮತ್ತು ಆಕ್ವಾ ಜೋನಿಂಗ್ನಂತಹ ತಂತ್ರಜ್ಞಾನಗಳು ಪರಿಣಾಮಕಾರಿ ಮೀನುಗಾರಿಕೆ ನಿರ್ವಹಣೆಗಾಗಿ ನಿಖರವಾದ ಸಾಧನಗಳನ್ನು ನೀಡುತ್ತವೆ.

ಸಂಭಾವ್ಯ ಮೀನುಗಾರಿಕೆ ವಲಯಗಳು (ಪಿ.ಎಫ್.ಝೆಡ್) ಸಲಹೆಗಳು ಸಮುದ್ರ ಮೀನುಗಾರಿಕೆ ವಲಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿವೆ. ಓಷನ್-ಸ್ಯಾಟ್ ಉಪಗ್ರಹದಿಂದ ಸಾಗರದ ಬಣ್ಣದ ಮಾನಿಟರ್ ಡೇಟಾವನ್ನು ಪಡೆಯುವ ಮೂಲಕ, ಮೀನಿನ ಒಟ್ಟುಗೂಡಿಸುವಿಕೆಯ ಸಂಭಾವ್ಯ ಶೋಲ್ ಗಳನ್ನು ಗುರುತಿಸಲಾಗುತ್ತದೆ ಮತ್ತು ಮೀನುಗಾರರಿಗೆ ಪ್ರಸಾರ ಮಾಡಲಾಗುತ್ತದೆ. ಭಾರತದ ಅಂದಾಜು ಸಮುದ್ರ ಮೀನುಗಾರಿಕೆ ಸಾಮರ್ಥ್ಯವನ್ನು 2014 ರಲ್ಲಿದ್ದ 3.49 ಲಕ್ಷ ಟನ್‌ಗಳಿಂದ 2023 ರ ಅವಧಿಯಲ್ಲಿ 5.31 ಲಕ್ಷ ಟನ್ ಗಳಿಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಸಮುದ್ರ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಮಾದರಿಯಾಗಿದೆ. ಇದು ಮೀನುಗಾರರಿಗೆ ಉತ್ತಮ ಮೀನು ಹಿಡಿಯುವಿಕೆಗೆ, ಪತ್ತೆಹಚ್ಚಲು ಮತ್ತು ಕೊಯ್ಲು ಮಾಡಲು ಅನುವು ಮಾಡಿಕೊಟ್ಟಿದೆ. ಕರ್ತವ್ಯ ನಿಟ್ಟಿನಲ್ಲಿ ಸಮುದ್ರದಲ್ಲಿ ವ್ಯಯಿಸುವ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡುತ್ತದೆ.

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಂ.ಎಸ್.ವೈ) ಅಡಿಯಲ್ಲಿ ಮಾನಿಟರಿಂಗ್, ನಿಯಂತ್ರಣ ಮತ್ತು ಕಣ್ಗಾವಲು (ಎಂ.ಸಿ.ಎಸ್.) ಮೂಲಕ ತಾಂತ್ರಿಕ ಪ್ರಗತಿಯನ್ನು ಬೆಂಬಲಿಸುತ್ತದೆ. ಈ ವ್ಯವಸ್ಥೆಯ ಬೆಂಬಲವು ಉತ್ತಮ ಸಂವಹನ ಮತ್ತು ಟ್ರ್ಯಾಕಿಂಗ್ ಸಾಧನಗಳ ನಿಬಂಧನೆಯನ್ನು ಒಳಗೊಂಡಿದೆ

ಉದಾಹರಣೆಗೆ ವೆರಿ ಹೈ ಫ್ರೀಕ್ವೆನ್ಸಿ (ವಿ.ಹೆಚ್.ಎಫ್.) ರೇಡಿಯೋಗಳು, ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್‌ಮಿಟರ್‌ಗಳು (ಡಾಟ್ ಗಳು), ಮತ್ತು ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್‌ಸ್ಟೆಲೇಷನ್ (ನಾವ್  ಐಸಿ) ನಂತಹ ಸೇವೆಗಳೊಂದಿಗೆ ಮೀನುಗಾರಿಕೆ ಹಡಗುಗಳಿಗೆ ಟ್ರಾನ್ಸ್‌ಪಾಂಡರ್‌ಗಳು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿ.ಎನ್.ಎಸ್.ಎಸ್.), ಸ್ವಯಂಚಾಲಿತ ಗುರುತಿನ ವ್ಯವಸ್ಥೆ (ಎ.ಐ.ಎಸ್), ಮತ್ತು ಸಂಭಾವ್ಯ ಮೀನುಗಾರಿಕೆ ವಲಯಗಳು (ಪಿ.ಎಫ್.ಝೆಡ್) ಇಂತಹ ಅಮೂಲ್ಯ ಮಾಹಿತಿಗಳು ಒಳಗೊಂಡಿವೆ.

ಇದಲ್ಲದೆ, ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಂ.ಎಸ್.ವೈ) ಅಡಿಯಲ್ಲಿ, ಮೇಲ್ವಿಚಾರಣೆ, ನಿಯಂತ್ರಣ ಮತ್ತು ಕಣ್ಗಾವಲುಗಾಗಿ ಸಮುದ್ರ ಮೀನುಗಾರಿಕೆ ಹಡಗುಗಳಲ್ಲಿ ಹಡಗು ಸಂವಹನ ಮತ್ತು ಬೆಂಬಲ ವ್ಯವಸ್ಥೆಗಾಗಿ ರಾಷ್ಟ್ರೀಯ ರೋಲ್ ಔಟ್ ಯೋಜನೆಗೆ ಅನುಮೋದನೆ ನೀಡಿದೆ. ರಾಷ್ಟ್ರೀಯ ರೋಲ್ ಔಟ್ ಯೋಜನೆಯು 9 ಕರಾವಳಿ ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಯಾಂತ್ರೀಕೃತ ಮತ್ತು ಯಾಂತ್ರಿಕೃತ ಹಡಗುಗಳು ಸೇರಿದಂತೆ ಸಮುದ್ರ ಮೀನುಗಾರಿಕಾ ಹಡಗುಗಳಲ್ಲಿ 1,00,000 ಟ್ರಾನ್ಸ್ ಪಾಂಡರ್ ಗಳನ್ನು ರೂ.364 ಕೋಟಿ ವೆಚ್ಚದಲ್ಲಿ ಅಳವಡಿಸಲು ಯೋಜಿಸಿದೆ.
 

*****



(Release ID: 2044743) Visitor Counter : 25